ವಿಷಯಕ್ಕೆ ಹೋಗು

ಕುಲದೇವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಲದೇವರು (ಮನೆದೇವರು) ಎಂದರೆ ಹಿಂದೂ ಧರ್ಮದಲ್ಲಿ ಒಂದು ಕುಟುಂಬ ಅಥವಾ ಮನೆತನದ ದೇವರು, ಅಥವಾ ಮಾತೃ ದೇವಿ. ಇದು ವ್ಯಕ್ತಿಗತ ಇಷ್ಟದೇವತೆಗಳು ಮತ್ತು ಗ್ರಾಮದೇವತೆಗಳಿಂದ ಭಿನ್ನವಾಗಿದೆ.

ಆಚರಣೆಯಲ್ಲಿ

[ಬದಲಾಯಿಸಿ]

ಕುಲದೇವರು ಶಬ್ದವು ಎರಡು ಶಬ್ದಗಳಿಂದ ವ್ಯುತ್ಪನ್ನವಾಗಿದೆ: ಕುಲ ಅಂದರೆ ಮನೆತನ ಮತ್ತು ದೇವರು. ಹಾಗಾಗಿ ಕುಲದೇವತೆಗಳು ಎಂದರೆ ನಿರ್ದಿಷ್ಟ ಕುಲಗಳು ಅಥವಾ ಮನೆತನಗಳಿಂದ ಪೂಜಿಸಲ್ಪಡುವ ದೇವರುಗಳು ಎಂದು ಹೇಳಬಹುದು. ದೇವರು ಸ್ತೀ, ಪುರುಷ, ಪ್ರಾಣಿ ಅಥವಾ ಪವಿತ್ರ ಶಿಲೆಯಂತಹ ಒಂದು ವಸ್ತು ಕೂಡ ಆಗಿರಬಹುದು. ಹಿಂದೂ ಕುಟುಂಬಗಳು ಮದುವೆಯಂತಹ ಒಂದು ಮಂಗಳಕರ ಸಂದರ್ಭದ ನಂತರ ದೇವರ ಅನುಗ್ರಹವನ್ನು ಪಡೆಯುವ ಸಲುವಾಗಿ ಕುಲದೇವರು ಅಥವಾ ಕುಲದೇವತೆಯ ದೇಗುಲಗಳಿಗೆ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಾರೆ. ಹಿಂದೂ ಧರ್ಮ ಮತ್ತು ಜೈನ ಧರ್ಮದ ಹಲವಾರು ಪಂಥಗಳಲ್ಲಿ ಕುಲದೇವರುಗಳನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರ ರಾಜ್ಯದಲ್ಲಿ, ಕುಲದೇವರುಗಳು ಮುಖ್ಯವಾಗಿ ಶಿವ ಅಥವಾ ಶಕ್ತಿಯ ಅಭಿವ್ಯಕ್ತಿಗಳಾಗಿರುತ್ತಾರೆ, ಉದಾಹರಣೆಗೆ ಅನುಕ್ರಮವಾಗಿ ಖಂಡೋಬಾ ಅಥವಾ ಭವಾನಿ. ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ, ಈ ದೇವತೆಗಳು ಸಾಮಾನ್ಯವಾಗಿ ಶಿವನ ಪತ್ನಿಯಾದ ಪಾರ್ವತಿಯ ವಿವಿಧ ಅಭಿವ್ಯಕ್ತಿಗಳಾಗಿರುತ್ತಾರೆ.