ವಿಷಯಕ್ಕೆ ಹೋಗು

ಕುಲಕರಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಲಕರಣಿ (ಶಾನುಭೋಗ, ಕುಲಕರ್ಣಿ) ಒಂದು ಶಿರೋನಾಮೆ ಹಾಗೂ ಹೆಸರಾಗಿದೆ. ಕುಲಕರಣಿ ಪದವು ಎರಡು ಶಬ್ದಗಳ (ಕುಲ ಮತ್ತು ಕರಣಿ) ಸಂಯೋಜನೆ ಎಂದು ನಂಬಲಾಗಿದೆ. ಕುಲ ಎಂದರೆ ಕುಟುಂಬದ ಮೂಲ, ಮತ್ತು ಕರಣಿಕ ಎಂದರೆ ದಾಖಲೆಗಳು ಮತ್ತು ಲೆಕ್ಕಗಳನ್ನು ಇಡುವವನು. ಸಾಂಪ್ರದಾಯಿಕವಾಗಿ, ಕುಲಕರಣಿ ಪದವು ಗ್ರಾಮಗಳ ಲೆಕ್ಕಗಳು ಮತ್ತು ದಾಖಲೆಗಳನ್ನು ನಿರ್ವಹಿಸುತ್ತಿದ್ದ ಮತ್ತು ತೆರಿಗೆಗಳನ್ನು ಸಂಗ್ರಹಿಸುತ್ತಿದ್ದ ಜನರಿಗೆ ಬಳಸಲಾದ ಶಿರೋನಾಮೆಯಾಗಿತ್ತು. ನಂತರ, ಕುಲಕರಣಿ ಶಿರೋನಾಮೆಯ ಬದಲು ತಲಾಠಿ ಎಂಬ ಹೆಸರು ಬಂದಿತು. ಪರ್ಗನಾ ಮತ್ತು ಕುಲಕರಣಿ ವತನ್‍ಗಳನ್ನು (ಜಮೀನಿನ ಹಕ್ಕುಗಳು) ೧೯೫೦ರಲ್ಲಿ ರದ್ದುಗೊಳಿಸಲಾಯಿತು.[] ಕುಲಕರಣಿ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಪರ್ಗನಾ ಮಟ್ಟದಲ್ಲಿ ಅವನನ್ನು "ದೇಶಕುಲಕರಣಿ", ದೇಶಪಾಂಡೆ ಅಥವಾ ನಾಡಕರ್ಣಿ ಎಂದು ಕರೆಯಲಾಗುತ್ತಿತ್ತು. ಕುಲಕರ್ಣಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕಕ್ಕೆ ಸ್ಥಳೀಯವಾದ ಒಂದು ಕೌಟುಂಬಿಕ ನಾಮವೂ ಆಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "The Bombay Paragana and Kulkarni Watans' (Abolition) Act 1950" (PDF). Bombay High Court. Archived from the original (PDF) on 15 ಮಾರ್ಚ್ 2016. Retrieved 13 November 2014.


"https://kn.wikipedia.org/w/index.php?title=ಕುಲಕರಣಿ&oldid=1063332" ಇಂದ ಪಡೆಯಲ್ಪಟ್ಟಿದೆ