ಕುಮಾರನ್ ಆಶಾನ್

ವಿಕಿಪೀಡಿಯ ಇಂದ
Jump to navigation Jump to search
ಕುಮಾರನ್ ಆಶಾನ್
ಚಿತ್ರ:Kumaran asan.jpg
ಜನನ 12 ಏಪ್ರಿಲ್ 1873
Kaayikkara, Thiruvananthapuram, British India
ಮರಣ 16 ಜನವರಿ 1924(1924-01-16)
Pallana, British India
ವೃತ್ತಿ Poet, philosopher
ಪ್ರಮುಖ ಕೆಲಸ(ಗಳು) Veena poovu

ಕುಮಾರನ್ ಆಶಾನ್-(1873-1924)ಮಲಯಾಳಂ ಭಾಷೆಯ ಮಹಾನ್ ಕವಿ. ಅವರು ತತ್ವಜ್ಞಾನಿ ಮತ್ತು ಸಾಮಾಜಿಕ ಸುಧಾರಕ.ಅವರು ಮಹಾನ್ ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರುಗಳ ಅನುಯಾಯಿಯಾಗಿದ್ದ.

ಜೀವನಚರಿತ್ರೆ[ಬದಲಾಯಿಸಿ]

Kumaran Asan (standing left) with Narayana Guru (seated middle).

ಅವರು ಏಪ್ರಿಲ್ 12 1873 ರಂದು ತಿರುವನಂತಪುರಮ್ ಜಿಲ್ಲೆಯ ಕಯಿಕ್ಕರ ಹಳ್ಳಿಯಲ್ಲಿ ಜನಿಸಿದ. ಚಿತ್ರಾಪೌರ್ಣಿಮೆಯಂದು ನಾರಾಯಣನ್ ಎಂಬವರ ಮಗನಾಗಿ ಕಾಯಿಕ್ಕರ ಎಂಬ ಸ್ಥಳದಲ್ಲಿ ಆಶಾನ್ ಹುಟ್ಟಿದ. ಹದಿನೆಂಟನೆಯ ವಯಸ್ಸಿನಲ್ಲಿ ನಾರಾಯಣ ಗುರುವನ್ನು ಭೇಟಿಮಾಡಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಬಂದು (1895) ಆಶಾನ್ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಗುರು ಇವನನ್ನು ಪ್ರೀತಿಯಿಂದ ಕುಮಾರು ಎಂದು ಕರೆಯುತಿದ್ದರು. 1898 ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ ಮಾಡಿ ಅಲ್ಲಿ ಆಶಾನ್ ವಿದ್ಯಾಭ್ಯಾಸ ಪಡೆದ.

ಸಾಹಿತ್ಯ ಕೃಷಿ[ಬದಲಾಯಿಸಿ]

ಸೌಂದರ್ಯಲಹರಿ (1901), ಶಿವಸ್ತೋತ್ರ ಮಾಲ (1902), ಮೇಘಸಂದೇಶ (1902), ವಿಚಿತ್ರವಿಜಯ (1902), ಪ್ರಬೋಧ ಚಂದ್ರೋದಯ, ಮೊದಲಾದವು ಆಶಾನ್ ಕವಿಯ ಅನುವಾದ ಕೃತಿಗಳು. 1908 ರಲ್ಲಿ ವೀಣ ಪೂ ಪ್ರಕಟವಾದೊಡನೆ ಈತನ ಹೆಸರು ಮಲಯಾಳ ಕವಿಗಳ ಅಗ್ರಪಂಕ್ತ್ತಿ ಸೇರಿತು. ತರುವಾಯದಲ್ಲಿ ನಳಿನಿ (1910), ಲೀಲ (1913) ಶ್ರೀಬುದ್ಧಚರಿತಂ (1914), ಬಾಲರಾಮಾಯಣಂ-ಮೂರು ಭಾಗಗಳು (1915), ಗ್ರಾಮವೃಕ್ಷತ್ತಿಲೆ ಕುಯಿಲ್ (1918), ಪ್ರರೋಧನ (1918), ಚಿಂತಾವಿಷ್ಟೆಯಾಯಿ ಸೀತಾ (1919) ಪುಷ್ಪವಾಟಿ(1919), ದುರವಸ್ಥ (1922), ಚಂಡಾಲ ಭಿಕ್ಷುಕಿ (1923), Pರುಣ (1923)- ಮೊದಲಾz ಅತ್ಯುತ್ತಮ ಕೃತಿಗಳನ್ನು gಚಿ ರಮ್ಯ ಕವಿಗಳ ಸಾಲಿನಲ್ಲಿ ಆಶಾನ್ ಶಾಶ್ವತ ಸ್ಥಾನ ಪಡೆದಿದ್ದಾನೆ.

ನಿಧನ[ಬದಲಾಯಿಸಿ]

ಅವರು ಜನವರಿ 16, 1924 ರಂದು ಒಂದು ಅಪಘಾತದಲ್ಲಿ ನಿಧನ.

ವೈಶಿಷ್ಟ್ಯತೆಗಳು[ಬದಲಾಯಿಸಿ]

Handwriting of Kumaran Asan : From the notebooks of Asan kept at Thonnakkal Asan museum

ಆಶಾನ್ ಕವಿಯ ಕೃತಿಗಳನ್ನು ಓದದೆ ಮಲೆಯಾಳ ಕಾವ್ಯವನ್ನು ಓದಿದಂತಾಗುವುದಿಲ್ಲ. ಈತನ ಸ್ನೇಹಸಂದೇಶವನ್ನೂ ವಿಶ್ವವಿಶಾಲವಾದ ಮನೋಧರ್ಮವನ್ನೂ ಮೃದುಮಧುರ ಭಾವಗಳನ್ನೂ ತಿಳಿದುಕೊಳ್ಳುವ ಸಲುವಾಗಿಯಾದರೂ ಮಲಯಾಳ ಕವಿತೆಯನ್ನು ಅಧ್ಯಯನ ಮಾಡಲೇಬೇಕು. ಈತನ ಕವಿತಾಪ್ರತಿಭೆಯನ್ನು ಕಂಡು 1922 ರಲ್ಲಿ ಪ್ರಿನ್ಸ್ ಆಫ್ ವೇಲ್ಸ್ ರೇಷ್ಮೆ ಶಾಲನ್ನೂ ಚಿನ್ನದ ಕಡಗವನ್ನೂ ಕೊಟ್ಟು ಸನ್ಮಾನಿಸಿದ. 1923 ರಲ್ಲಿ ಆಶಾನ್ ರವೀಂದ್ರನಾಥ ಠಾಕೂರರನ್ನು ಭೇಟಿಯಾಗಿದ್ದ. ಐವತ್ತೊಂದು ವರ್ಷಗಳ ತುಂಬು ಜೀವನವನ್ನು ಬಾಳಿದ ಆಶಾನ್ ಮಲಯಾಳದ ಅತ್ಯಂತ ಜನಪ್ರಿಯ ಕವಿಯಾಗಿದ್ದಾನೆ. ಮಲಯಾಳ ಭಾಷೆಯ ರಮ್ಯ ಕಾವ್ಯ ಸತ್ವವನ್ನು ಪಾಕವಿಳಿಸುವುದರಲ್ಲಿ ಈತನ ಶ್ರಮ ಅನನ್ಯವಾದುದು.

ಪುಸ್ತಕಗಳು[ಬದಲಾಯಿಸಿ]

ವೀಣ ಪೂವ್

ನಳಿನಿ

ಲೀಲ

ಶ್ರೀಬುದ್ಧ ಚರಿತಂ

ಪ್ರರೋದನಂ

ಚಿಂತಾವಿಶ್ತ್ ಯಾಯ ಸೀತಾ

ದೂರವಸ್ತ

ಚಂಡಾಲ ಭಿಕ್ಷುಕಿ

ವನಮಾಲ

ಮಣಿಮಾಲ

ಪುಷ್ಪವಾಡಿ

ಗ್ರಾಮವ್ರಿಕ್ಷಥ್ಥಿಲೆ ಕುಯಿಲ್