ವಿಷಯಕ್ಕೆ ಹೋಗು

ಕುಬ್ಜತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಬ್ಜತೆಯಿರುವ ಪುರುಷ

ಒಂದು ಜೀವಿಯು ವಿಪರೀತವಾಗಿ ಚಿಕ್ಕದಾಗಿರುವಾಗ ಕುಬ್ಜತೆಯು ಉಂಟಾಗುತ್ತದೆ. ಕುಬ್ಜತೆಯಿರುವ ವ್ಯಕ್ತಿಗಳನ್ನು ಕುಬ್ಜ, ಗಿಡ್ಡ, ಕುಳ್ಳ ಮುಂತಾದ ಪದಗಳಿಂದ ಸಂಬೋಧಿಸಲಾಗುತ್ತದೆ. ಮಾನವರಲ್ಲಿ, ಇದನ್ನು ಲಿಂಗವನ್ನು ಲೆಕ್ಕಿಸದೆ, ಕೆಲವೊಮ್ಮೆ ೧೪೭ ಸೆಂಟಿಮೀಟರ್‌ಗಳಿಗಿಂತ (೪ ಅಡಿ ೧೦ ಅಂಗುಲ) ಕಡಿಮೆಯಿರುವ ವಯಸ್ಕ ಎತ್ತರ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಕುಬ್ಜತೆಯಿರುವ ಕೆಲವು ವ್ಯಕ್ತಿಗಳು ಸ್ವಲ್ಪ ಎತ್ತರವಿರುತ್ತಾರೆ.[೧] ಗಿಡ್ಡ ಕೈಕಾಲುಗಳು ಅಥವಾ ಗಿಡ್ಡ ಮುಂಡವು ಅಸಮ ಕುಬ್ಜತೆಯ ಲಕ್ಷಣವಾಗಿರುತ್ತದೆ. ಪ್ರಮಾಣಾನುಗತ ಕುಬ್ಜತೆಯ ಪ್ರಕರಣಗಳಲ್ಲಿ, ಕೈಕಾಲುಗಳು ಮತ್ತು ಮುಂಡ ಎರಡೂ ಅಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ. ಸಾಧಾರಣ ಬುದ್ಧಿಶಕ್ತಿ ಮತ್ತು ಜೀವಿತಾವಧಿಯು ಸಾಮಾನ್ಯವಾಗಿರುತ್ತವೆ. ಚಿಕಿತ್ಸೆಯು ಆಧಾರವಾಗಿರುವ ಕಾರಣವನ್ನು ಅವಲಂಬಿಸಿರುತ್ತದೆ. ಮೂಳೆ ಬೆಳವಣಿಗೆ ಅಸ್ವಸ್ಥತೆಗಳಿರುವವರಿಗೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅಥವಾ ಭೌತಿಕ ಚಿಕಿತ್ಸೆಯಿಂದ ಇಲಾಜು ಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "MedlinePlus: Dwarfism". MedlinePlus. National Institute of Health. 2008-08-04. Retrieved 2008-10-03.
"https://kn.wikipedia.org/w/index.php?title=ಕುಬ್ಜತೆ&oldid=889810" ಇಂದ ಪಡೆಯಲ್ಪಟ್ಟಿದೆ