ವಿಷಯಕ್ಕೆ ಹೋಗು

ಕುಫ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಫ್ರಿ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿನ ಒಂದು ಸಣ್ಣ ಗಿರಿಧಾಮವಾಗಿದೆ.

ಶಿಮ್ಲಾ ಜಿಲ್ಲೆಯ ಕುಫ್ರಿ, ರಾ.ಹೆ. -22 ರೊಂದಿಗೆ.

ಸ್ಥಳೀಯ ಭಾಷೆಯಲ್ಲಿ "ಸರೋವರ" ಎಂಬ ಅರ್ಥವಿರುವ ಕುಫ್ರ್ ಪದದಿಂದ ಕುಫ್ರಿ ಎಂಬ ಹೆಸರು ಬಂದಿದೆ.

ಕುಫ್ರಿ ಮೃಗಾಲಯದಲ್ಲಿ ಕರಡಿ

ಸುತ್ತಮುತ್ತಲಿನ ಪ್ರದೇಶದಲ್ಲಿ ಅತ್ಯುನ್ನತ ಬಿಂದುವಾದ[] ಕುಫ್ರಿ ಹಿಮಾಲಯನ್ ವನ್ಯಜೀವಿ ಮೃಗಾಲಯವನ್ನು ಹೊಂದಿದೆ. ಇಲ್ಲಿ ಅಪರೂಪದ ಹುಲ್ಲೆಗಳು, ಬೆಕ್ಕುಗಳು ಮತ್ತು ಹಿಮಾಲಯನ್ ಮೋನಲ್ ಸೇರಿದಂತೆ ಪಕ್ಷಿಗಳಿವೆ. ಮೋನಲ್ 2007 ರವರೆಗೆ ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿತ್ತು. ಚಳಿಗಾಲದಲ್ಲಿ ಆಲೂಗೆಡ್ಡೆ ತೋಟಗಳ ಮೂಲಕ ಹಾದುಹೋಗುವ ವಿಹರಿಸುವ ಮಾರ್ಗವು ಜನಪ್ರಿಯ ಸ್ಕೀ ಟ್ರ್ಯಾಕ್ ಆಗಿ ಪರಿವರ್ತನೆಯಾಗುತ್ತದೆ.

ಕುಫ್ರಿಯಿಂದ ಹಿಮಾಲಯ.
ಗಂಡು ಮೊನಾಲ್

ಆಸಕ್ತಿಯ ಸ್ಥಳಗಳು

[ಬದಲಾಯಿಸಿ]

ಕುಫ್ರಿ ಮೋಜು ಕ್ಯಾಂಪಸ್: ಇದು ಒಂದು ಮನೋರಂಜನಾ ಉದ್ಯಾನವನವಾಗಿದೆ.

ಕುಫ್ರಿಯಲ್ಲಿ ಚಮರೀಮೃಗ

ಇಂದಿರಾ ಪ್ರವಾಸಿ ಉದ್ಯಾನ

[ಬದಲಾಯಿಸಿ]

ಇದು ಹಿಮಾಲಯನ್ ಪ್ರಕೃತಿ ಉದ್ಯಾನವನದ ಬಳಿ ಇದೆ ಮತ್ತು ಸುತ್ತಮುತ್ತಲಿನ ಸ್ಥಳಗಳ ವಿಸ್ತೃತ ನೋಟವನ್ನು ನೀಡುತ್ತದೆ.

ಚೀನಿ ಬಂಗಲೆ

[ಬದಲಾಯಿಸಿ]

ಕುಫ್ರಿ ಬಂಗಲೆಯು ತನ್ನ ಪ್ರತಿಮೆಗಳು ಮತ್ತು ವಾಸ್ತುಕಲೆಗೆ ಬಹಳ ಪ್ರಸಿದ್ಧವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Kufri, Places to visit in Kufri, Tourist Places in Kufri Tourism". NomadLine.com, A traveller's Chronicle (in ಅಮೆರಿಕನ್ ಇಂಗ್ಲಿಷ್). NomadLine. Retrieved 6 April 2016.


"https://kn.wikipedia.org/w/index.php?title=ಕುಫ್ರಿ&oldid=1023841" ಇಂದ ಪಡೆಯಲ್ಪಟ್ಟಿದೆ