ಕುಪ್ಪಳು
ಕುಪ್ಪಾಳು ತಿಪಟೂರು ತಾಲೂಕಿನ ತುಮಕೂರು ಜಿಲ್ಲೆಯ ಒಂದು ಸಣ್ಣ ಹಳ್ಳಿ.ಈ ಹಳ್ಳಿಯಲ್ಲಿ ಕರಡಿ ಹೆಸರಿನ ರೈಲು ನಿಲ್ದಾಣವಿದೆ.ಕುಪ್ಪಾಳು ರಾಷ್ಟ್ರಿಯ ಹೆಧ್ಧಾರಿ ಸಂಖ್ಯೆ ೨೦೬ ರಿಂದ ೩ ಕಿಲೊಮೇಟರು ದೂರದಲ್ಲಿದೆ. ನಮ್ಮ ಊರು- ನಮ್ಮ ಕುಪ್ಪಾಳು 🌄🏝🛤🏥🕌🗻
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಗೆ ಸೇರಿದ ಒಂದು ಗ್ರಾಮ. ಕಿಬ್ಬನಹಳ್ಳಿಯಿಂದ ತಿಪಟೂರಿಗೆ ಹೋಗುವ ಮಾರ್ಗದಲ್ಲಿ ಹೆದ್ದಾರಿ ೨೦೬ ಇಂದ ಸುಮಾರು ೪ ಕಿಮೀ ದೂರದಲ್ಲಿದೆ.ತಿಪಟೂರಿನಿಂದ ಸುಮಾರು ೧೫ ಕಿಮೀ ದೂರದಲ್ಲಿದೆ. ಗ್ರಾಮದಲ್ಲಿ 141 ಮನೆಗಳಿದ್ದು 628 ಜನಸಂಖ್ಯೆ ಹೊಂದಿದೆ (2011 ಜನಗಣತಿ ಪ್ರಕಾರ). ಶೇಕಡ 63.54% ಸಾಕ್ಷರತೆಯ ಪ್ರಮಾಣ ಹೊಂದಿದೆ. ಗ್ರಾಮ ದೇವತೆ ಶ್ರೀ ಕೆಂಪಮ್ಮ ಕೃಪೆಯಿಂದ ಇಂದು ಕುಪ್ಪಾಳು ಸುಸಜ್ಜಿತ ಗ್ರಾಮವಾಗಿದೆ. ಇಲ್ಲಿನ ಸೌಲಭ್ಯಗಳು
೧- ಶಿಕ್ಷಣ ವ್ಯವಸ್ಥೆ📚📚 ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು (ಕಲಾ ವಿಭಾಗ) ಶಿಕ್ಷಣದವರೆಗೊ ಇಲ್ಲಿ ಸೌಲಭ್ಯ ಇದೆ. ಪ್ರಾಥಮಿಕ ಶಾಲೆಯು ಸರ್ಕಾರಿ ಶಾಲೆಯಾಗಿದ್ದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಹಾಗೂ ಪ್ರೌಢಶಾಲೆಯು ಖಾಸಗಿ ಸಂಸ್ಥೆಯ ಮೂಲಕ ನಡೆಯುತ್ತಿದ್ದು ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಅನೇಕ ಸಾಧನೆ ಮಾಡಿದೆ.
೨- ರೈಲ್ವೆ ನಿಲ್ದಾಣ🚞🚈🚈 ಬೆಂಗಳೂರು ಮತ್ತು ಹುಬ್ಬಳ್ಳಿ ರೈಲ್ವೆ ಮಾರ್ಗದ ಒಂದು ಸುಸಜ್ಜಿತ ರೈಲ್ವೆ ನಿಲ್ದಾಣ ಇದಾಗಿದ್ದು "ಕರಡಿ" ಎಂಬ ಹೆಸರು ಹೊಂದಿದೆ.
೩- ಗ್ರಾಮ ಪಂಚಾಯತಿ🏦🏦 ಸುಮಾರು ಹಳ್ಳಿಗಳನ್ನು ಒಳಗೊಂಡ ಗ್ರಾಮ ಪಂಚಾಯತಿ ಇದೆ. ಕುಪ್ಪಾಳು, ಬಳ್ಳೆಕಟ್ಟೆ, ಕೊಂಡ್ಲಿಘಟ್ಟ, ಶಿವಪುರ, ಕರಡಾಳು, ಕೋಟ್ಟಿಗೆಹಳ್ಳಿ, ಕಾಡಶೇಟ್ಟಿಹಳ್ಳಿ ಹಾಗೂ ಇನ್ನೂ ಕೆಲವು ಗ್ರಾಮಗಳನ್ನು ತನ್ನ ವ್ಯಾಪ್ತಿಗೆ ಹೊಂದಿದೆ.
೪- ಕೃಷಿ ಪ್ರಾಥಮಿಕ ಬ್ಯಾಂಕ್ ಮತ್ತು ನ್ಯಾಯಬೆಲೆ ಅಂಗಡಿ🏪🏪🏪 ರೈತರು ಮತ್ತು ಸ್ತ್ರೀ ಶಕ್ತಿ ಸಂಘಗಳು ಹಾಗೂ ಸಾಮಾನ್ಯ ಜನರು ನಗರಕ್ಕೆ ಹೋಗದೆ ತಮ್ಮ ಸಣ್ಣ ಪುಟ್ಟ ಹಣಕಾಸು ವ್ಯವಹಾರ ಮಾಡಲು ಸಹಕಾರಿಯಾಗಿದೆ. ಇಲ್ಲಿಯ ನ್ಯಾಯ ಬೆಲೆ ಅಂಗಡಿಗೆ ಸುತ್ತ ಮುತ್ತ ಇರುವ ಕೆಲವು ಹಳ್ಳಿಯ ಜನರು ಬರುತ್ತಾರೆ.
೫ -ಹಾಲು ಉತ್ಪಾದಕ ಸಹಕಾರಿ ಸಂಘ.🏢 ಶೆಟ್ಟಿ ಹಳ್ಳಿ ಹಾಲು ಉತ್ಪಾದಕ ಸಹಕಾರಿ ಸಂಘದ ಒಂದು ಶಾಖೆಯು ಇಲ್ಲಿದ್ದು ರೈತರಿಗೆ ವರದಾನವಾಗಿದೆ.
೬- ಅನೇಕ ದೇವಾಲಯಗಳು🏫🕌🕋 ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯವನ್ನು ಒಳಗೊಂಡಂತೆ ಇನ್ನೂ ಅನೇಕ ದೇವಾಲಯಗಳು ಇಲ್ಲಿವೆ. ಶ್ರೀ ಕಲ್ಲೇಶ್ವರ ಮತ್ತು ಬ್ರಹ್ಮ ದೇವರ ಪುರಾತನ ದೇವಾಲಯಗಳಿವೆ. ಊರಿನ ಆಚೆಗೆ ಶ್ರೀ ಕೆಂಪಮ್ಮ ಮತ್ತು ಮಹತಂಗ್ಯಮ್ಮ ದೇವಾಲಯಗಳಿದ್ದು ವರ್ಷಕ್ಕೆ ಒಮ್ಮೆ ಶ್ರೀ ಕೆಂಪಮ್ಮ ದೇವರ ಅದ್ದೂರಿ ಜಾತ್ರೆ ನಡೆಯುತ್ತದೆ. ಅಲ್ಲದೆ ದೇವಾಲಯದ ಪಕ್ಕದಲ್ಲಿ ಹುತ್ತದ ಮೇಲೆ ಅಂಕೋಲಾ ಗಿಡವಿದ್ದು ಅನೇಕ ದೋಷ ಮುಕ್ತಿ ಪೂಜೆ ನಡೆಯುತ್ತದೆ.
೭- ಗ್ರಾಮದ ಕೆರೆ🏝 ಗ್ರಾಮದ ಹೊರಗೆ ಒಂದು ಮಧ್ಯಮ ಗಾತ್ರದ ಕೆರೆ ಇದ್ದು ಮಳೆಗಾಲದಲ್ಲಿ ಕೆರೆ ತುಂಬಿ ಗ್ರಾಮದ ಸೌಂದರ್ಯ ಹೆಚ್ಚಿಸಿದೆ
೮- ಆಸ್ಪತ್ರೆ🏥🏥 ಸರ್ಕಾರಿ ಪ್ರಾಥಮಿಕ ಆರೋಗ್ಯ ಘಟಕ ಮತ್ತು ಪಶು ಆಸ್ಪತ್ರೆ ಸೌಲಭ್ಯ ಇಲ್ಲಿದೆ.
೯- ಅಂಚೆ ಕಚೇರಿ📮📮 ಗ್ರಾಮದ ಕೇಂದ್ರ ಬಿಂದುವಾದ ಸ್ಟೇಷನ್ ಸರ್ಕಲ್ ಹತ್ತಿರ ಅಂಚೆ ಕಚೇರಿ ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.572114 ಫಿನ್ ಕೋಡ್ ಇಂದ ಗುರುತಿಸಲ್ಪಡುತ್ತದೆ.
೧೦- ಸಾರ್ವಜನಿಕ ಗ್ರಂಥಾಲಯ📚📘📚 ಸುಮಾರು ವರ್ಷಗಳಿಂದ ಇಲ್ಲಿ ಸಾರ್ವಜನಿಕ ಗ್ರಂಥಾಲಯವು ಕಾರ್ಯ ನಿರ್ವಹಿಸುತ್ತಿದ್ದು ಓದುಗರಿಗೆ ಅನುಕೂಲವಾಗಿದೆ
೧೧- ತಾಜಾ ತೆಂಗಿನಕಾಯಿ ಎಣ್ಣೆ ಘಟಕ🏝 ಸಾವಯವ ತೆಂಗಿನಕಾಯಿ ಎಣ್ಣೆ ಉತ್ಪಾದನಾ ಘಟಕವಾಗಿದ್ದು ಉತ್ತಮ ಗುಣಮಟ್ಟದ ತೆಂಗಿನಕಾಯಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಬಹಳ ಪ್ರಸಿದ್ದಿಯಾಗಿದೆ.
ಹೀಗೆ ನಮ್ಮ ಊರು ಅನೇಕ ಸೌಲಭ್ಯಗಳಾದ ರೈಲ್ವೆ ನಿಲ್ದಾಣ, ಶಿಕ್ಷಣ ಸಂಸ್ಥೆ, ಸಹಕಾರಿ ಬ್ಯಾಂಕ್, ನ್ಯಾಯ ಬೆಲೆ ಅಂಗಡಿ, ದೇವಾಲಯ, ಕೆರೆ, ಗ್ರಾಮ ಪಂಚಾಯತಿ, ಆಸ್ಪತ್ರೆ, ಪ್ರಾವಿಜ಼ನ್ ಸ್ಟೋರ್, ಅಂಚೆ ಕಚೇರಿ ಮುಂತಾದ ಸೌಕರ್ಯಗಳೊಂದಿಗೆ ಉತ್ತಮ ಪರಿಸರ ಹೊಂದಿರುವ ನೆಮ್ಮದಿ ಗ್ರಾಮ ನಮ್ಮ ಊರು...
ಇದು ನಾ ಕಂಡ ನಮ್ಮ ಊರು... ನಮ್ಮ "ಕುಪ್ಪಾಳು" ಏನ್ ಎನೊ ಕಂಡ ನಮಗೆ ನಮ್ಮೂರೆ ನಮಗೆ ಮೇಲು..
- ಮಧುಸೂದನ್ ಕುಪ್ಪಾಳು
Madhusudhan Kuppalu.