ಕುನಲ್ ಭಾಲ್
ಕುನಲ್ ಭಾಲ್ | |
---|---|
ಜನನ | ಕುನಲ್ ಭಾಲ್ ೧೯೮೩ ನವದೆಹಲಿ |
ರಾಷ್ಟ್ರೀಯತೆ | ಇಂಡಿಯನ್ |
ಇತರೆ ಹೆಸರು | ಕುನಲ್ |
ವೃತ್ತಿ | ಉದ್ಯಮಿ |
ಜನನ
[ಬದಲಾಯಿಸಿ]ಕುನಲ್ ಭಾಲ್ ರವರು ೧೯೮೩ರಂದು ನವದೆಹಲಿಯಲ್ಲಿ ಜನಿಸಿದರು. ಇವರ ಜನ್ಮದಿನದ ಬಗ್ಗೆ ಯಾವುದೇ ನಿಖರವಾದ ಮಾಹಿತಿಯಿಲ್ಲ. ಇವರು ಯು.ಪಿ ಉದ್ಯಮಿಯ ಮಗ.
ಜೀವನ
[ಬದಲಾಯಿಸಿ]ಇವರು ಭಾರತದ ಪ್ರತಿಷ್ಠಿತ ಉದ್ಯಮಿ.ನವದೆಹಲಿಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿ , ಬಿ.ಟೆಕ್, ಎಮ್.ಬಿ.ಎ ಪದವಿಯನ್ನು ಪಡೆದಿದ್ದಾರೆ.ಇವರು ಶಾಲೆಯ ಚಟುವಟಿಗಳಲ್ಲಿ ತಮ್ಮ ಮ್ಯಾಗ್ನೆಟ್ ಆಟಗಳನ್ನು ಬಳಸುತ್ತಾ ಅಂದಿನಿಂದಲೆ ಉದ್ಯಮಶೀಲತೆಯನ್ನು ಪಡೆದಿದ್ದರು. ನಂತರ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ "ಜೆರೋಂ ಫಿಷರ್ ಪ್ರೋಗ್ರಾಂ"ನಲ್ಲಿ ಪದವಿಯನ್ನು ಪಡೆದಿದ್ದಾರೆ.ಇವರಿಗೆ ವಾರ್ಟನ್ ಸ್ಕೂಲ್ ನಿಂದ ಒಂದು "ವ್ಯಾವಹಾರಿಕ ಪದವಿ" ದೊರಕಿದೆ ಮತ್ತು ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಿಂದ " ಕಾರ್ಯನಿರ್ವಾಹಕ ಮಾರಾಟವನ್ನು" ಮಾಡಿದ್ದಾರೆ. ಕುನಲ್ ಭಾಲ್ ರವರು ಚಾರ್ಟರ್ಡ ಅಕಾಂಟೆನ್ಸಿ ಸಂಸ್ಥೆಗಳಲ್ಲಿ,ಡಿಯೋಲಾಯ್ಟ್ ಕನ್ಸಲಿಂಗ್ ಮತ್ತು ಮೈಕ್ರೋಸಾಫ಼್ಟ್ ನಲ್ಲಿ ಕೆಲಸವನ್ನು ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ಅಮೇರಿಕಾದಲ್ಲಿ ಓದುವಾಗ ಮಾರ್ಜಕಗಳ ಕಂಪನಿ ಒಂದನ್ನು ಪ್ರಾರಂಬಿಸಿದರು.ಅದು ಯಶಸ್ವಿ ಅಗುವವರೆಗೆ ಅದರಲ್ಲೆ ದುಡಿದರು.ನಂತರ ಕೆಲವು ದಿನಗಳವರೆಗೆ "ಮೈಕ್ರೋಸಾಪ್ಟ್" ಎನ್ನುವ ಸಾಪ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಆ ಸಂದರ್ಭದಲ್ಲಿ ಅವರ ವೀಸಾದಲ್ಲಿ ಕೆಲವು ಸಮಸ್ಯ ಉಂಟಾಗಿ ೨೦೦೮ರಲ್ಲಿ ಭಾರತಕ್ಕೆ ಮರಳಿ ಬಂದರು.
ಸ್ನಾಫ್ಡೀಲ್
[ಬದಲಾಯಿಸಿ]ಕುನಲ್ ರವರು ೧೧ನೇ ತರಗತಿಯಲ್ಲಿ ವಿಜ್ಞಾನ ಅಧ್ಯಯನ ಮಾಡುತ್ತಿರುವಾಗ ಮೊದಲಬಾರಿಗೆ ಬನ್ಸಾಲ್ ರವನನ್ನು ಭೇಟಿ ಮಾಡಿದ್ದರು,ನಂತರ ಅವರೇ ಬಿಸಿನೆಸ್ ಪಾರ್ಟ್ನರ್ ಆದರು. ಕೆಲವು ದಿನಗಳ ನಂತರ ಕುನಲ್ ಭಾಲ್ ರವರು ತಮ್ಮ ಬಾಲ್ಯ ಸ್ನೇಹಿತರಾದ "ರೋಹಿತ್ ಬನ್ಸಾಲ್"ರವರ ಜೊತೆಗೂಡಿ ವ್ಯಾಪಾರವನ್ನು ಆರಂಭಿಸಿದರು.ಇಬ್ಬರು ಸೇರಿ ೨೦೦೭-೦೮ರಲ್ಲಿ "ಆಫ್ಲೈನ್ ಕೂಪ್ನಿಂಗ್ ಬಿಸಿನಸ್" ನನ್ನು ಬಿಡುಗಡೆ ಮಾಡಿದರು.ನಂತರ ಫೆಬ್ರವರಿ ೪,೨೦೧೦ ರಂದು "ಸ್ನಾಪ್ಡಿಲ್" ಎನ್ನುವ ದೊಡ್ದ ಅನ್ಲೈನ್ ಮಾರುಕಟ್ಟೆಯನ್ನು ಸ್ಥಾಪಿಸಿದರು. ಕುನಲ್ ರವರು ಸ್ನಾಫ್ಡೀಲ್ನ ಸಂಸ್ಥಾಪಕರು ಹಾಗು ಸಿ ಇ ಒ. ಸ್ನಾಪ್ಡೀಲ್ ಭಾರತದ ದೊಡ್ಡ ಆನ್ಲೈನ್ ಮಾರುಕಟ್ಟೆ. ಸ್ನಾಫ್ಡೀಲ್ ,ಗ್ರಾಹಕ ಗಮನ, ಮಾರಾಟಗಾರರಿಗೆ ಮತ್ತು ಖರೀದಿದಾರರಿಗೆ ವೇದಿಕೆಯನ್ನು ಒದಗಿಸುವ ತಂತ್ರಜ್ಞಾನ ಕಂಪನಿ. ಕುನಲ್ ರವರು ಮಾರಾಟವನ್ನು ಮಾಡುವುದರಲ್ಲಿ ಉತ್ತಮರಾಗಿದ್ದರಿಂದ ಎಲ್ಲಾ ಸಾಮಗ್ರಿಯನ್ನು ಅಂಗಡಿಯಲ್ಲಿ ಸುಲಭವಾಗಿ ಮಾರಾಟ ಮಾಡುತ್ತಿದ್ದರು.ಕುನಲ್ ಭಾಲ್ ರವರು ಸ್ನಾಪ್ದೀಲ್ ನಲ್ಲಿ ಕೇವಲ ಉತ್ಪನ್ನಗಳನ್ನು ಮಾರಾಟಮಾಡದೆ ಅದರೊಂದಿಗೆ ಉತ್ತಮ ಸೇವೆಗಳನ್ನು ಒದಗಿಸುವ ಮೂಲಕ ತಮ್ಮ "ಸ್ನಾಫ್ಡೀಲ್" ಆನ್ಲೈನ್ ಮಾರುಕಟ್ಟೆಯನ್ನು ವಿಸ್ತರಿಸಿದರು. ಕುನಲ್ ಭಾಲ್ ಹಾಗು ಅವರ ಸ್ನೇಹಿತರಾದ ರೋಹಿತ್ ಬಾನ್ಸಲ್ ರವರು ಬಹಳ ಕಷ್ಟವನ್ನು ಕಂಡಿದ್ದಾರೆ. ಹಿಂದೆ ಸ್ನಾಫ್ಡೀಲ್ ಎಂಬ ಆನ್ಲೈನ್ ಮಾರುಕಟ್ಟೆಯನ್ನು ಹಣ ರಕ್ಷಕ (ಮನಿ ಸೇವರ್) ಎಂದು ಕರೆಯುತ್ತಿದ್ದರು ಹಾಗು ರಿಯಾಯಿತಿ ಕೂಪನ್ಗಳನ್ನು ಮಾರಾಟ ಮಾಡುತ್ತಿದ್ದರು. ೨೦೦೯ ಜುಲೈನಲ್ಲಿ "ಮನಿ ಸೇವರ್" ತನ್ನ ಮಾಸಿಕ ವೇತನಕ್ಕೆ ಬರುತ್ತಿದ್ದ ಬಿಲ್ ೫ ಲಕ್ಷ ರೂ ಇದ್ದ ಸಂದರ್ಭದಲ್ಲಿ ಸ್ನಾಫ್ಡೀಲ್ ಕೇವಲ ೫೩೦೦೦ ರೂ ಆದಾಯ ಸಮತೋಲನವನ್ನು ಹೊಂದಿತ್ತು, ಇಂತಹ ಸಂದರ್ಭದಲ್ಲಿ ಕುನಲ್ ಭಾಲ್ ಮತ್ತು ರೋಹಿತ್ ಬನ್ಸಾಲ್ ರವರು ಕಂಪನಿಯನ್ನು ಮುಂದುವರಿಸುವುದಕ್ಕೆ ತಮ್ಮ ವೈಯಕ್ತಿಕ ಉಳಿತಾಯವ್ನನೆಲ್ಲ ಅದರ ಮೇಲೆ ಸುರಿದರು.ವೇತನಗಳನ್ನು ನೀಡಿದ ನಂತರ, ಅವರ ಬಳಿ ಕೇವಲ ೨೧೦೦೦ ರೂ ಬಾಕಿ ಇರುತಿತ್ತು, ಒಂದು ವರ್ಷದ ನಂತರ, ಸ್ನಾಫ್ಡೀಲ್ ಕೇವಲ ೧೦೦೦ ಮಾರಾಟಗಾರರನ್ನು ಹೊಂದಿತ್ತು.[೧]
ಪ್ರಶಸ್ತಿಗಳು
[ಬದಲಾಯಿಸಿ]ಆನ್ಲೈನ್ ಮಾರುಕಟ್ಟೆಯ ವ್ಯವಹಾರದಲ್ಲಿ ಮಹತ್ತರ ಸಾಧನೆ ಮಾಡಿದ ಇವರು ವ್ಯಾಪಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ.ಕಳೆದ ೨೦೧೫ ರಲ್ಲಿ "ಇಂಡಿಯನ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ೨೦೧೫" ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಮತ್ತು ಇವರಿಗೆ ವರ್ಷದ ವಾಣಿಜ್ಯೋದ್ಯಮಿ ಪ್ರಶಸ್ತಿ ಲಭಿಸಿದೆ. ೨೦೧೪ನೇ ವರ್ಷದಲ್ಲಿ "ಬಿ.ಎಮ್.ಎ ವಾಣಿಜ್ಯೋದ್ಯಮಿ,ಹಾಗು ಇ.ಐ ವಾಣಿಜ್ಯೋದ್ಯಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ." ಫಾರ್ಚುನ್ ೪೦ ಅತ್ಯಂತ ಪ್ರಭಾವಿ ಬ್ಯುಸಿನೆಸ್ ಲೀಡರ್ಸ್" ಎಂಬ ಪಟ್ಟಿಯಲ್ಲಿ ಇವರಿಗೆ ೨೫ನೇ ಸ್ಥಾನ ದೊರಕಿತು,ಮತ್ತು ಇವರು "ನಾಸ್ಕಾಮ್ ಮುಂದಿನ ಪೀಳಿಗೆಯ ವಾಣಿಜ್ಯೋದ್ಯಮಿ ೨೦೧೪" ಪ್ರಶಸ್ತಿಯನ್ನು ಗೆದ್ದುಕೊಂಡರು.[೨]
ಕುಟುಂಬ
[ಬದಲಾಯಿಸಿ]ಇಂದಿನ ಆನ್ಲೈನ್ ಮಾರ್ಕೆಟಿಂಗ್ ಉದ್ದಿಮೆಯಲ್ಲಿ ಕುನಲ್ ಭಾಲ್ ತಮ್ಮದೇ ರೀತಿಯಲ್ಲಿ ಮುನ್ನಡೆಯುತ್ತಿದ್ದಾರೆ. ಕುನಲ್ ಭಾಲ್ ಯಶ್ನಾ ಭಾಲ್ ರನ್ನು ಪ್ರೇಮಿಸಿ ೧೬ ಡಿಸೆಂಬರ್ ೨೦೧೦ರಲ್ಲಿ ವಿವಾಹವಾದರು. ಯಶ್ನಾ ಭಾಲ್ ರವರು ಒಂದು ಮಿಠಾಯಿ ವ್ಯಾಪಾರವನ್ನು ಮಾಡುತ್ತಿದ್ದರು.ಅಂಗಡಿಯ ಮೂಲಕವೇ ಇವರಿಬ್ಬರ ಭೇಟಿಯಾಯಿತು.ಇಬ್ಬರು ಕೂಡ ರುಚಿ ಪ್ರಿಯರು.ಹೊಸ ರುಚಿ-ಹೊಸ ಹೊಸ ತಿನಿಸುಗಳ, ಭಕ್ಷ್ಯಗಳ,ಹುಡುಕಾಟದಲ್ಲಿ ಭಾರತ ಸೇರಿ ವಿಶ್ವದಾದ್ಯಂತ ಪ್ರವಾಸ ಮತ್ತು ಸಂಚಾರವನ್ನು ನಡೆಸಿದ್ದಾರೆ.ಸದಾ ರುಚಿಯ ದಾಹವನ್ನು ನೀಗಿಸಲು ಕುನಲ್ ಭಾಲ್ ಒಬ್ಬ ಮಿಠಾಯಿ ಉದ್ಯಮಿದಾರರನ್ನೇ ವಿವಾಹವಾಗಿದ್ದಾರೆ. ಮತ್ತು ಅವರ ತಿನ್ನುವ ಬಯಕೆಯನ್ನು ತೀರಿಸಿಕೊಳ್ಳಲು ಉತ್ತಮ ದರ್ಜೆಯಲ್ಲಿರುವ ಆಹಾರವನ್ನೆ ಸೇವಿಸುತ್ತಿದ್ದರು. ಅವರು ರುಚಿ ಪ್ರೇಮಿ ಹಾಗು ರುಚಿ ಪ್ರಿಯರಾಗಿದರಿಂದ, ಕುನಲ್ ಭಾಲ್ ರು ತಮ್ಮದೆ ಒಂದು ವ್ಯಾಪಾರವನ್ನು ಆರಂಭಿಸಲು ಸಾಧ್ಯವಾಯಿತು. ಅದಕ್ಕೆ ಅವರು ಸಭೆಯನ್ನು ಕೂಡ ಕರೆದರು. ಈ ಸಂಗತಿಯನ್ನು ಕುನಲ್ ಭಾಲ್ ರವರು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಕುನಲ್ ಭಾಲ್ ರವರು ಒಂದು ದಿನ ಹೋಟೆಲಿನಲ್ಲಿ ಶೆ.೫೦ ರಿಯಾಯಿತಿ ಕೂಪನ್ಗಳನ್ನು ಎನ್ಟೆರ್ಟೈನ್ಮೆನ್ಟ್ ಜಾಹಿರಾತು ಮೂಲಕ ನೀಡಿದ್ದಾರೆ. ಇವರಿಗೆ ರಾಜಕೀಯದಲ್ಲಿ ಬಹಳ ಆಸಕ್ತಿಯಿದೆ. ಕುನಲ್ ಭಾಲ್ ರವರು, ಪ್ರಧಾನಿ ನರೇಂದ್ರ ಮೋದಿಯ "ಆರಂಭಿಕ ಭಾರತ ಉಪಕ್ರಮ" ಆಕಾರದ ನಿಮಿತ್ತನಾಗಿದ್ದರು. ಕುನಲ್ ಭಾಲ್ ರವರು ಯುವ ಪೀಳಿಗೆಗಳಿಗೆ ಸ್ಪೂರ್ತಿಯ ಮೂಲವಾಗಿದಾರೆ. ಕುನಲ್ ಭಾಲ್ ರವರಿಗೆ ತಮ್ಮ ತಾಯಿಯು ನೀಡಿದ " ಇಂದು ಮಾಡಲಾಗದ ಕಾರ್ಯ-ಕೆಲಸವನ್ನು ಮುಂದೆಂದೂ ಮಾಡಲಾಗುವುದಿಲ್ಲ" ಎಂಬ ಸಲಹೆಯನ್ನು ಇಂದಿಗೂ ಪಾಲಿಸುತ್ತಿದ್ದಾರೆ. ಕುನಲ್ ಭಾಲ್ ರವರು ಇತ್ತೀಚಿಗೆ,ಫ಼್ರೀ ಚಾರ್ಜ್ ವ್ಯವಾಹರವನ್ನು ನಡೆಸುತ್ತಿದ್ದಾರೆಂಬ ಸುದ್ದಿಯಿದೆ.
ಉಲ್ಲೇಖನ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2015-04-02. Retrieved 2016-09-15.
- ↑ http://www.hindustantimes.com/mumbai/mumbai-36th-bma-awards-to-be-held-on-february-16/story-2ONrPFrtmSdDxHemYTz2YL.html