ವಿಷಯಕ್ಕೆ ಹೋಗು

ಕುದ್ಮಲ್ ರಂಗರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕುದ್ಮುಲ್ ರಂಗರಾವ್ ಇಂದ ಪುನರ್ನಿರ್ದೇಶಿತ)
ಕುದ್ಮಲ್ ರಂಗರಾವ್
ಜನನಜೂನ್ ೨೯, ೧೮೫೯
ಮರಣಜನವರಿ ೩೦, ೧೯೨೮
OrganizationDepressed Class Mission
ಚಳುವಳಿಹಿಂದುಳಿದ ವರ್ಗದ ಸಬಲೀಕರಣ

ಕುದ್ಮಲ್ ರಂಗರಾವ್ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವಕ.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ಕಾಸರಗೋಡಿನ ಕುದ್ಮಲ್ ಎಂಬ ಸಣ್ಣ ಗ್ರಾಮದಲ್ಲಿ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ೧೮೫೯ ಜೂನ್ ೨೬ರಂದು ದೇವಪ್ಪಯ್ಯ ಮತ್ತು ಶ್ರೀಮತಿ ಗೌರಿ ದಂಪತಿಗಳ ಮಗನಾಗಿ ರಂಗರಾವ್ ಜನಿಸಿದರು. ಬಹು ಕಷ್ಟದಿಂದಲೇ ಬಾಲ್ಯ ಶಿಕ್ಷಣವನ್ನು ಕಾಸರಗೋಡಿನಲ್ಲಿಯೇ ಮುಗಿಸಿ ಉದ್ಯೋಗಕ್ಕಾಗಿ ಮಂಗಳೂರಿಗೆ ಬರಬೇಕಾಯಿತು. ವಿದ್ಯಾಭ್ಯಾಸ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿದರು.

ರಂಗರಾವ್ ರ ಪತ್ನಿ ರುಕ್ಮಿಣಿ ದೇವಿ. ಇವರಿಗೆ ೩ ಮಂದಿ ಗಂಡು ಮಕ್ಕಳು ಮತ್ತು ೩ ಮಂದಿ ಹೆಣ್ಣು ಮಕ್ಕಳು.

ಅದು ಬ್ರಿಟೀಷರ ಆಡಳಿತದ ಕಾಲ. ಒಂದು ಕಡೆ ಬ್ರಿಟೀಷರು, ಮತ್ತೊಂದೆಡೆ ಮೇಲ್ಜಾತಿಯವರ ಹಿಡಿತದ ಈ ಹಿನ್ನಲೆಯಲ್ಲಿ ಶೋಷಣೆಗೊಳಗಾದವರು, ಈ ಕಡೆ ಯಾರ ಗಮನವೂ, ಕಾಳಜಿಯೂ ಇಲ್ಲದ ಅದೊಂದು ಸಂಧಿಗ್ದ ಕಾಲ. ಯಾವುದೋ ನಿರೀಕ್ಷೆ, ಆಸೆ ತಲೆಎತ್ತಿ ನಡೆಯಬೇಕು, ಬದುಕಬೇಕು ಎನ್ನುವ ಕಲ್ಪನೆಯು ಸುಳಿಯದ, ‍ಸುಳಿಯಲು ಅವಕಾಶವನ್ನು ನೀಡದ ಆ ಒಂದು ಸಾಮಾಜಿಕ ವ್ಯವಸ್ಥೆಯೊಳಗೆ ನುಗ್ಗಿ ಬಂದ ಆಶಾಕಿರಣದ ಒಂದು ಬೆಳಕೇ ಶ್ರೀ ಕುದ್ಮುಲ್ ರಂಗರಾವ್.

ಸಮಾಜ ಸೇವೆ

[ಬದಲಾಯಿಸಿ]

'ಪ್ರಗತಿಗೆ ವಿದ್ದ್ಯೆಯೇ ಮೂಲ' ಎಂದು ನಂಬಿದ್ದ ಅವರು ಶೋ‍‍‍‍ಶಿತ ವರ್ಗದ ಸಮುದಾಯದ ಮಕ್ಕಳಿಗೆ ‍‍‌‍‍ವಿಧ್ಯೆ ನೀಡುವ ಕುರಿತು ಚಿಂತಿಸಿದರು.

ರಂಗರಾವ್ ಅವರು ಡಿ.ಸಿ.ಎಂ. ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರಿನ ಕಂಕನಾಡಿ, ಮೂಲ್ಕಿ ,ಬೋಳೂರು, ಉಡುಪಿ, ಬನ್ನಂಜೆ, ನೇಜಾರು,ಅತ್ತಾವರ,ಬಾಬುಗುಡ್ಡೆ, ದಡ್ಡಲ್ ಕಾಡುಗಳಲ್ಲಿ ಉಚಿತ ಶಾಲೆಗಳನ್ನು ತೆರೆದರು. ಆ ಶಾಲೆಗಳನ್ನು 'ಪಂಚಮ ಶಾಲೆ'ಗಳೆಂದು ಕರೆಯುತಿದ್ದರು.

ದಲಿತರಿಗೆ ವೃತ್ತಿಪರ ಶಿಕ್ಶಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆ ಪ್ರಾರಂಭಿಸಿದರು. ತಾವು ಸ್ಥಾಪಿಸಿದ ಡಿ.ಸಿ.ಎಂ. ಮಿಶನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ, ಕಸೂತಿ, ರೇಶ್ಮೆ ಹುಳು ಸಾಕಾಣಿಕೆ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿಯನ್ನು ದಲಿತರಿಗೆ ಕೊಡಿಸಿದರು; ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದರು. ಅನ್ಯರ ಅನ್ನಕ್ಕಿಂತ ಆತ್ಮಗೌರವದ ಗಂಜಿ ಊಟವೇ ದೊಡ್ಡದೆಂದು ತೋರಿಸಿಕೊಟ್ಟರು.

ಕೊರಗ ಜನಾಂಗದವರಿಗೆ ಕೋರ್ಟುಗುಡ್ಡೆ ಬಳಿ ಸಾಲು ಮನೆಗಳನ್ನು ಕಟ್ಟಿಸಿದರು. ಕುಲಕಸುಬಿನಲ್ಲಿ, ಗುಡಿ ಕೈಗಾರಿಕೆಗಳಲ್ಲಿ ತೊಡಗಲು ನೆರವಾದರು. ದಲಿತರ ಆರ್ಥಿಕ ಅಭಿವೃಧ್ಧಿಗಾಗಿ, ಸಹಕಾರ ಬೆಳವಣಿಗೆಗಾಗಿ ಕೋರ್ಟ್ ಹಿಲ್ಸ್ ನಲ್ಲಿ 'ಆದಿ ದ್ರಾವಿಡ ಸಹಕಾರ ಸ್ಂಘ' ಸ್ಥಾಪಿಸಿದರು.

ಕುದ್ಮಲ್ ರಂಗರಾವ್ ಅವರ ನಿಸ್ವಾರ್ಥ ಸೇವೆ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆಯಿತು. ಸಮಾಜ ಸುಧಾರಣೆಯ ಕಾರ್ಯವನ್ನು ಮೆಚ್ಚಿ , ಅಮೇರಿಕಾದ ಖ್ಯಾತ ಉದ್ಯಮಿ ಹೆನ್ರಿ ಫೋರ್ಡ್, ಜಸ್ಟಿಸ್ ವಿಲ್ಬರ್ಟ್, ಡಾ. ಕಾರ್ನಾಟ್ ಹೀಗೆ ಹತ್ತಾರು ಪ್ರಮುಖರು ಡಿ.ಸಿ.ಎಂ. ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಗುರುದೇವ ರವೀಂದ್ರನಾಥ್ ಟಾಗೋರ್, ದೀನಬಂಧು ಸಿ. ಎಸ್. ಆಂಡ್ರೂಸ್, ಡಾ.ಆನಿಬೆಸೆಂಟ್ ಮತ್ತು ಜಿ.ಕೆ.ದೇವಧರ್ ಮುಂತಾದವರು ಈ ಸಂಸ್ಥೆಗೆ ಭೇಟಿ ನೀಡಿ ಇವರ ಮಾನವೀಯ ಸೇವೆಗಳನ್ನು ಕಣ್ಣಾರೆ ಕಂಡು ಅಭಿನಂದಿಸಿದರು.

ಸನ್ಯಾಸ ದೀಕ್ಷೆ ಸ್ವೀಕಾರ:

ಕುದ್ಮುಲ್ ರಂಗರಾವ್ ರವರು ೧೯೨೪ ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರ ಶಿಷ್ಯ ಶೃದಾನಂದ ಸ್ವಾಮೀಜಿಯವರು ಮಂಗಳೂರಿಗೆ ೨ನೇ ಸಲ ಆಗಮಿಸುವ ಸಮಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರಕ್ಕೆ ಸಂಕಲ್ಪ ಮಾಡಿದ್ದರು. ಆದರೆ ದಿಲ್ಲಿಯಲ್ಲಿ ಶೃದಾನಂದರ ಕೊಲೆಯಾಯಿತು.ಈ ಹಿನ್ನಲೆಯಲ್ಲಿ ಕುದ್ಮುಲ್ ರಂಗರಾವ್ ಅವರು ಶೃದಾನಂದ ಸ್ವಾಮೀಜಿಯವರ ಶಿಷ್ಯರಾದ ಸುವಿಚಾನಂದ ಸ್ವಾಮೀಜಿಯವರಿಂದ ೧೯೨೭ ರಲ್ಲಿ ಸನ್ಯಾಸ ದೀಕ್ಷೆ ಪಡೆದರು.ಪಂಡಿತ ವಿದ್ಯಾವಾಚಸ್ಫತಿಯವರು ಕುದ್ಮುಲ್ ರಂಗರಾವ್ ಗೆ ಈಶ್ವರಾನಂದ ಸನ್ಯಾಸಿ ಎಂದು ನಾಮಕರಣ ಮಾಡಿದರು.

ತಮ್ಮ ಅನಾರೋಗ್ಯ ಹಾಗೂ ಇಳಿವಯಸ್ಸಿನಲ್ಲೂ ದಲಿತರ ಸೇವೆಯಲ್ಲಿ ಬದುಕನ್ನು ಸವೆಸಿದ ಇವರು ಹೃದಯ ಬೇನೆಯ ಖಾಯಿಲೆಗೆ ತುತ್ತಾಗಿ ೧೯೨೮ ಜೂನ್ ೩ಂರಂದು ನಿಧನರಾದರು.