ಕುತರ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುತರ್ಕವು ಒಂದು ವಾದ ವಿಧಾನ. ಇದರ ಉದ್ದೇಶ ಸತ್ಯವನ್ನು ಸ್ಥಾಪಿಸುವುದಲ್ಲ; ಸತ್ಯವನ್ನು ಮರೆ ಮಾಡುವುದು; ಸತ್ಯವಲ್ಲದ್ದನ್ನು ಸತ್ಯದಂತೆ ತೋರಿಸುವುದು. ಕುತರ್ಕದಲ್ಲಿ ವಾದದ ಸೋಗಿರುತ್ತದೆ. ಆದರೆ ಈ ವಾದ ಸರಿಯಲ್ಲವೆಂಬುದು ಸುಲಭವಾಗಿ ಕಾಣುವುದಿಲ್ಲ. ಇಂಥ ವಾದವನ್ನು ಭಾರತೀಯ ತಾರ್ಕಿಕರು ಜಲ್ಪ, ವಿತಂಡ ಮತ್ತು ಆಭಾಸಗಳೆಂದು ಕರೆದಿರುತ್ತಾರೆ. ತರ್ಕಬದ್ಧವಲ್ಲದ ವಾದವು ಅದು ನಿಜವಾಗಿ ಇರುವುದಕ್ಕಿಂತ ಉತ್ತಮವೆಂದು ಕಾಣುವ ಮೂಲಕ ಮೋಸಗೊಳಿಸಬಹುದು. ಕೆಲವು ಕುತರ್ಕಗಳನ್ನು ವಂಚನೆಯಿಂದ ದುರುಪಯೋಗಪಡಿಸಿಕೊಳ್ಳಲು ಅಥವಾ ಮನವೊಲಿಸಲು ಉದ್ದೇಶಪೂರ್ವಕವಾಗಿ ಮಾಡಲಾದರೆ, ಇತರ ಕುತರ್ಕಗಳನ್ನು ನಿರ್ಲಕ್ಷ್ಯತನ ಅಥವಾ ಅಜ್ಞಾನದ ಕಾರಣ ಅನುದ್ದೇಶಿತವಾಗಿ ಮಾಡಲಾಗುತ್ತದೆ. ಕಾನೂನಿನ ವಾದಗಳ ತರ್ಕಬದ್ಧತೆಯು ವಾದಗಳನ್ನು ಮಾಡಲಾಗುವ ಸಂದರ್ಭವನ್ನು ಅವಲಂಬಿಸಿರುತ್ತದೆ.[೧] ಪ್ರಾಚೀನ ಗ್ರೀಸಿನಲ್ಲಿ ಇಂಥ ವಾದ ವಿಧಾನವನ್ನೇ ಒಂದು ಜೀವನ ವೃತ್ತಿಯಾಗಿ ಇಟ್ಟುಕೊಂಡಿದ್ದವರನ್ನು ಸಾಫಿಸ್ಟರೆಂದು ಕರೆಯುತ್ತಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. Bustamente, Thomas; Dahlman, Christian, eds. (2015). Argument types and fallacies in legal argumentation. Heidelberg: Springer International Publishing. p. x. ISBN 978-3-319-16147-1.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕುತರ್ಕ&oldid=889521" ಇಂದ ಪಡೆಯಲ್ಪಟ್ಟಿದೆ