ವಿಷಯಕ್ಕೆ ಹೋಗು

ಕುಂದಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಂದಣವು ರತ್ನವನ್ನು ಚಿನ್ನದಲ್ಲಿ ಕೂಡಿಸುವ ಸಾಂಪ್ರದಾಯಿಕ ವಿಧಾನ. ಇದು ರತ್ನಗಳು ಮತ್ತು ಚಿನ್ನದ ನಡುವೆ ಚಿನ್ನದ ತೆಳುಹಾಳೆಯನ್ನು ಕೂಡಿಸುವುದನ್ನು ಒಳಗೊಳ್ಳುತ್ತದೆ. ಈ ವಿಧಾನವು ರಾಜಸ್ಥಾನ ಮತ್ತು ಗುಜರಾತಿನ ಆಸ್ಥಾನಗಳಲ್ಲಿ ಹುಟ್ಟಿಕೊಂಡಿತು ಎಂದು ನಂಬಲಾಗಿದೆ. ಕಳೆದ ಕೆಲವು ವರ್ಷಗಳಿಂದ, ಆಸ್ಥಾನಗಳ ಈ ವಿಧಾನವನ್ನು ರಾಜಸ್ಥಾನ, ಬಿಹಾರ್ ಮತ್ತು ಪಂಜಾಬ್‍ನಲ್ಲಿ ಯಶಸ್ವಿಯಾಗಿ ಬೆಳ್ಳಿಗೆ ನಕಲುಮಾಡಲಾಯಿತು ಮತ್ತು ಶ್ರೀಸಾಮಾನ್ಯರಲ್ಲಿ ಜನಪ್ರಿಯವಾಯಿತು.[೧] ಎಚ್ಚರಿಕೆಯಿಂದ ಆಕಾರಕೊಟ್ಟ, ಕತ್ತರಿಸದ ವಜ್ರಗಳು ಮತ್ತು ನಯಗೊಳಿಸಿದ ಬಹುಬಣ್ಣಗಳ ರತ್ನಗಳನ್ನು ಪರಿಶುದ್ಧ ಚಿನ್ನ ಅಥವಾ ಕೃತಕ ಲೋಹದ ಆಧಾರದಲ್ಲಿ ಕೂಡಿಸಿ ಆಭರಣಗಳನ್ನು ತಯಾರಿಸಲಾಗುತ್ತದೆ. ವಿಸ್ತಾರವಾದ ಪ್ರಕ್ರಿಯೆಯು ಘಾಟ್ ಎಂದು ಕರೆಯಲ್ಪಡುವ ಅಪೂರ್ಣ ಚೌಕಟ್ಟಿನೊಂದಿಗೆ ಆರಂಭಗೊಳ್ಳುತ್ತದೆ, ನಂತರದ ಪಾಢ್ ಪ್ರಕ್ರಿಯೆಯಲ್ಲಿ ಚೌಕಟ್ಟಿನಲ್ಲಿ ಮೇಣವನ್ನು ಸುರಿದು ವಿನ್ಯಾಸದ ಪ್ರಕಾರ ಅಚ್ಚು ಮಾಡಲಾಗುತ್ತದೆ. ಇದರ ನಂತರ ಖುದಾಯಿ ಪ್ರಕ್ರಿಯೆಯಿಂದ ರತ್ನಗಳನ್ನು ಚೌಕಟ್ಟಿನಲ್ಲಿ ಕೂಡಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Indian folk arts and crafts - the land and the people, by Jasleen Dhamija. National Book Trust, India. 1970. p. 73
"https://kn.wikipedia.org/w/index.php?title=ಕುಂದಣ&oldid=889195" ಇಂದ ಪಡೆಯಲ್ಪಟ್ಟಿದೆ