ಕುಂಡಲಿನಿ ಯೋಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕುಂಡಲಿನಿ ಯೋಗವು ಒಂದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಿಸ್ತು, ಇದು ರಾಜಯೋಗ, ಶಕ್ತಿ ಯೋಗ, ಭಕ್ತಿ ಯೋಗ, ತಂತ್ರ, ಕ್ರಿಯಾ ಯೋಗ, ಲಯ ಯೋಗ, ನಾದ ಯೋಗ ಮತ್ತು ಯೋಗದ ಬೆನ್ನೆಲುಬಾದ ಪತಂಜಲಿ ಯೋಗ ಸೂತ್ರದ ಶ್ರೇಷ್ಠವಾದ ಶಾರೀರಿಕ ಮತ್ತು ಧ್ಯಾನದ ತಂತ್ರಗಳ ಒಕ್ಕೂಟವಿದೆ.[೧][೨] ಕುಂಡಲಿನಿ ಯೋಗವನ್ನು ಜ್ಞಾನದ ಯೋಗ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ನೇರವಾಗಿ ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯ ಮೇಲೆ ಪ್ರಭಾವ ಬೀರುತ್ತದೆ, ಒಳ ದೃಷ್ಟಿಯನ್ನು ಬೆಳೆಸುತ್ತದೆ, ಆತ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿ ಹುದುಗಿರುವ ಅಗಾಧವಾದ ಸೃಜನಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಲು ಅನುವಾಗುತ್ತದೆ.[೩][೪][೫]

ಕುಂಡಲಿನಿ ಯೋಗವು ವಿಶೇಷವಾಗಿ ಅಭಿವೃದ್ಧಿ ಹೊಂದಿದ ಆಧ್ಯಾತ್ಮ ವಿಜ್ಞಾನ, ಇದು ಅಸ್ಪಷ್ಟವಾದ ಮತ್ತು ಬಹುಸಂಸ್ಕೃತಿಯ ಇತಿಹಾಸವನ್ನು ಹೊಂದಿದೆ, ಹಿಂದು ಸಂಪ್ರದಾಯದ ಪ್ರಕಾರ ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದಲ್ಲಿ ಮೋಕ್ಷವನ್ನು ಪಡೆಯಲು ನಂಬುವ ತಂತ್ರವಾದ ಶಕ್ತಿಪಥ ಇದಾಗಿದೆ.[೬] ಮುಖ್ಯವಾಹಿನಿಯ ಪದ್ಧತಿಗಳು ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಬಹುದು ಎಂಬುದನ್ನು ತೋರಿಸಿವೆ ಅಲ್ಲದೆ ಮೋಕ್ಷವನ್ನು ಯೋಗ್ಯ ಗುರುವಿನ ಮಾರ್ಗದಶನವನ್ನು ಅನುಸರಿಸುವ ಮೂಲಕ ಮತ್ತು ಯೋಗದ ತಂತ್ರಗಳನ್ನು ಅಭ್ಯಸಿಸುವ ಮೂಲಕ ಹೊಂದಬಹುದು-ಇದರೊಂದಿಗೆ ಮಂತ್ರ, ಪ್ರಾಣ ಮತ್ತು ಉಸಿರಾಟದ ವಿಧಾನಗಳು, ಸಾಧನೆ, ಆಸನ ಅಭ್ಯಾಸ, ಧ್ಯಾನ ಅಥವಾ ಬರಿಯ ಭಕ್ತಿ ಮತ್ತು ಪ್ರಾರ್ಥನೆಯ ಮೂಲಕವೂ ಮೋಕ್ಷವನ್ನು ಹೊಂದಬಹುದು.[೭]

ಮೂಲಭೂತ ಸಿದ್ಧಾಂತ[ಬದಲಾಯಿಸಿ]

ಯೋಗ ಸಿದ್ಧಾಂತದ ಪ್ರಕಾರ ಕುಂಡಲಿನಿಯು ಒಂದು ಆಧ್ಯಾತ್ಮಕ ಶಕ್ತಿ ಅಥವಾ ಕಶೇರು ಮಣಿಗಳ ಮೂಲದಲ್ಲಿ ಗುರುತಿಸಲ್ಪಡುವ ಜೀವ ಶಕ್ತಿ. 'ಇದನ್ನು ಸುರುಳಿ ಸುತ್ತಿರುವ ಸರ್ಪ ಎಂದು ಕಲ್ಪಿಸಿಕೊಳ್ಳಬಹುದು (ಅಕ್ಷರಶಃ, ಕುಂಡಲಿನಿ ಎಂದರೆ ಸಂಸ್ಕೃತದಲ್ಲಿ ’ಸುರುಳಿ ಸುತ್ತಿರುವ’ ಸಂಸ್ಕೃತದ ಕುಂಡ್, "ಸುಡಲು": ಕುಂಡ ಎಂದರೆ "ಸುತ್ತುವುದು ಅಥವಾ ಸುರುಳಿ")

ಕಾಶ್ಮೀರದ ಶಾಸ್ತ್ರೀಯ ಸಾಹಿತ್ಯದಲ್ಲಿ ಶೈವ ಕುಂಡಲಿನಿಯನ್ನು ಮೂರು ವಿವಿಧ ಪ್ರಮಾಣಗಳಲ್ಲಿ ವಿವರಿಸಲಾಗಿದೆ. ಮೊದಲನೆಯದಾಗಿ ಇದನ್ನು ಸಾರ್ವತ್ರಿಕ ಶಕ್ತಿ ಅಥವಾ ಕುಂಡಲಿನಿಯ ಹೋಲಿಕೆ ಎನ್ನಲಾಗಿದೆ. ಎರಡನೆಯದಾಗಿ ಶರೀರ-ಮನಸ್ಸು ಎರಡಕ್ಕೂ ಸಮಷ್ಟಿಯಾಗಿ ಸಹಕರಿಸುವ ಶಕ್ತಿ ಅಥವಾ ಪ್ರಾಣ ಕುಂಡಲಿನಿ ಮೂರನೆಯದಾಗಿ ಆತ್ಮ ಸಾಕ್ಷಿ ಅಥವಾ ಶಕ್ತಿ ಕುಂಡಲಿನಿ, ಇದು ಮೇಲಿನೆರಡನ್ನೂ ಒಂದೇಕಾಲದಲ್ಲಿ ಒಂದು ನಿಯಮಕ್ಕೆ ಒಳಪಡಿಸುತ್ತದೆ ಮತ್ತು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕೊನೆಯದಾಗಿ ಈ ಮೂರೂ ಬಗೆಗಳೂ ಒಂದೇ ಆಗಿವೆ ಆದರೆ ಈ ಮೂರೂ ವಿವಿಧ ಬಗೆಗಳನ್ನು ತಿಳಿಸುಕೊಂದರೆ ಅದು ಕುಂ?ಡಲಿನಿಯ ವಿವಿಧ ಪ್ರಕಾರಗಳನ್ನು ತಿಳಿಯಲು ಸಹಾಯವಾಗುತ್ತದೆ.[೮]

ಕುಂಡಲಿನಿಯ ಮಾರ್ಗವು ಬೆನ್ನು ಮೂಳೆಯ ಕೆಳ ಭಾಗದ ಮೂಲಾಧಾರ ಚಕ್ರದಿಂದ ಶಿರದ ಮೇಲಿನ ಸಹಸಾರ ಚಕ್ರದವರೆಗೆ ಮುಂದುವರೆಯುತ್ತದೆ. ಇದನ್ನು ಜಾಗೃತಗೊಳಿಸುವುದು ಭೌತಿಕ ಸಂಭವಿಸುವಿಕೆ ಎಂದು ತಿಳಿಯುವಂತಿಲ್ಲ; ಇದು ಸಂಪೂರ್ಣವಾಗಿ ಆತ್ಮಜ್ಞಾನದ ವಿಕಾಸವಾಗಿದೆ. ಕೆಲವು ಮೂಲಗಳ ಪ್ರಕಾರ ಕುಂಡಲಿನಿಯ ಜಾಗೃತಿಯು ನಿರ್ಮಲವಾದ ಆನಂದ, ಪವಿತ್ರವಾದ ಜ್ಞಾನ ಮತ್ತು ನಿಷ್ಕಳಂಕ ಪ್ರೀತಿಯನ್ನು ತರುತ್ತದೆ.[೪] [೯]

ಕುಂಡಲಿನಿ ಪದವನ್ನು ಸಂಸ್ಕೃತದ ’ಕುಂಡಲ’ ಅಂದರೆ ’ಸುರುಳಿಯಾದ’ ಜಾಡಿನಲ್ಲಿ ಪಡೆಯಬಹುದು. ಆದ್ದರಿಂದ ಕುಂಡಲಿನಿಯನ್ನು ಮನುಷ್ಯನ ಶರೀರದಲ್ಲಿ ನಮ್ಮ ಅಂತಃದೃಷ್ಟಿ, ಶಕ್ತಿ ಮತ್ತು ಪರಮಸುಖವನ್ನು ಗಳಿಸಲು ಪಡುವ ನಿರಂತರ ಪ್ರಯತ್ನದ ಸುಪ್ತ ಶಕ್ತಿಯೆಂದು ಪರಿಗಣಿಸಲಾಗುತ್ತದೆ. [೧೦]ಒಂದು ಮೂಲದ ಪ್ರಕಾರ, ಕುಂಡಲಿನಿಯ ಅಕ್ಷರಶಃ ಅರ್ಥ "ಪ್ರಿಯತಮ/ಮೆಯ ಮುಂಗುರುಳು"[೧೧][೧೨] ಇದೊಂದು ರೂಪಕಾಲಂಕಾರ, ಶಕ್ತಿಯ ಹರಿವನ್ನು ಕಾವ್ಯಮಯಾಗಿ ವರ್ಣಿಸುವ ವಿಧಾನವಾಗಿದೆ ಮತ್ತು ಮೊದಲೇ ಹೇಳಿದಂತೆ ಆತ್ಮ ಸಾಕ್ಷಿಯು ಪ್ರತಿಯೊಬ್ಬ ವ್ಯಕ್ತಿಯ ಅಂತರ್ಗತವಾಗಿರುತ್ತದೆ. ಇದರ ಅಭ್ಯಾಸವು, ವ್ಯಕ್ತಿಯನ್ನು ವಿಶ್ವದೊಂದಿಗೆ ವಿಲೀನಗೊಳಿಸಲು ಅಥವಾ ನೊಗಕೊಡಲು(ಬದುಕನ್ನು ಎಳೆಯಲು?) ಸಹಾಯಮಾಡುತ್ತದೆ ಎಂದು ಹೇಳಲಾಗಿದೆ. ವ್ಯಕ್ತಿಯ ಆತ್ಮಸಾಕ್ಷಿಯ ಜೊತೆಗೆ ಸಾರ್ವತ್ರಿಕ ಜ್ಞಾನದ ಈ ವಿಲೀನಗೊಳಿಸುವಿಕೆಯು "ಯೋಗ" ಎನ್ನುವ ಒಂದು "ದೈವಿಕ ಸಂಯೋಗ"ವನ್ನು ಸೃಷ್ಟಿಸುತ್ತದೆ ಎನ್ನಲಾಗಿದೆ.[೧೩]

ವಿಕಾಸದ ದೃಷ್ಟಿಯಲ್ಲಿ[ಬದಲಾಯಿಸಿ]

ಕುಂಡಲಿನಿಯನ್ನು ವೈಯಕ್ತಿಕ ಆಧ್ಯಾತ್ಮದ ಬೆಳವಣಿಗೆಗೆ ಅಲ್ಲದೆ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯವನು ಉತ್ತಮಗೊಳಿಸಲು ಸಾಕಷ್ಟು ಅನುಕೂಲಗಳನ್ನು ಒದಗಿಸುವ ವ್ಯಾಯಾಮದ ಪದ್ಧತಿ ಮತ್ತು ಧ್ಯಾನ ಎಂದು ದಾಖಲಿಸಲಾಗಿದೆ. ಶಾರೀರಿಕ ಲಾಭಗಳು ಎಂದರೆ ಗುಣಪಡಿಸಲಾಗದ ರೋಗಗಳಾದ ಅಲ್ಜೀಮರ್ ಗುಣಪಡಿಸುವ ಚಿಕಿತ್ಸೆಗಳು[೧೪] (ಬುದ್ಧಿ ಮಾಂದ್ಯತೆ), ಉಬ್ಬಸ, ಸಕ್ಕರೆ ಕಾಯಿಲೆ, ನೋವು, ಒತ್ತಡಕ್ಕೆ ಸಂಬಂಧಿಸಿದ ಕಾಯಿಲೆ, ಚಟಕ್ಕೆ ಬಿದ್ದವರ ಪುನರ್ವಸತಿ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಚಿಕಿತ್ಸೆಗೊಳಪಡಿಸುವುದು ಇವೆಲ್ಲ ಸೇರುತ್ತವೆ.[೧೫][೧೬][೧೭]

ಕೆಲವು ಸಂಪ್ರದಾಯದ ಪ್ರಕಾರ ಕುಂಡಲಿನಿ ಕಾರ್ಯವಿಧಾನವು, ಗುರುಗಳಿಂದ ತಮ್ಮ ಶಿಷ್ಯರಿಗೆ, ಅದೂ ಶಿಷ್ಯನ ಮೇಲೆ ಸಂಪೂರ್ಣ ಭರವಸೆ ಬಂದ ಮೇಲೆ ತಿಳಿಸುವಂತಹ ವಿದ್ಯೆ.[೪] Iಈ ನಿದರ್ಶನಗಳಲ್ಲಿ, ಯೋಗದ ಗುರುಗಳ ನಂಬಿಕೆಯೆಂದರೆ, ಶ್ಲೋಕಗಳ ಜೋಡಣೆಯ ಬಗೆಗಿನ ಅಜ್ಞಾನ ಅಥವಾ ಗುರುಗಳ ಆಜ್ಞೆಯನ್ನು ನಿರಾಕರಿಸುವ ಗುಣವು ಅಪಾಯಕಾರಿ ಪರಿಣಾಮವನ್ನು ಉಂಟು ಮಾಡುತ್ತದೆ.[೪] ಆದರೂ, ಕೆಲವು ಸನ್ನಿವೇಶಗಳಲ್ಲಿ ಭಾರತದ ಕೆಲವು ಗುರುಗಳು ಈ ಜ್ಞಾನವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಹರಡಲು ಪ್ರೋತ್ಸಾಹಿಸಿದರು, ಅಲ್ಲಿಂದ ಈ ವಾದದ ಅಸ್ತಿತ್ವದ ಮೇಲೆ ಪ್ರಶ್ನೆಯೆದ್ದಿದೆ.[೧೮]

ಯೋಗ ಪಂಡಿತ, ಟ್ರಾನ್ಸ್‌ಪರ್ಸನಲ್ ಮನಶ್ಶಾಸ್ತ್ರಕ್ಕೆ ಸಂಬಂಧಿಸಿದವನಾಗಿದ್ದ ಸೊವಾಟ್ಸ್ಕಿ[೧೯]ಯು, ಕುಂಡಲಿನಿ ಯೋಗದ ಬಗ್ಗೆ ಅಭಿವೃದ್ಧಿ ಮತ್ತು ವಿಕಾಸವಾದದ ಒಳದೃಷ್ಟಿಯನ್ನು ಹೊಂದಿದ್ದ. ಅಂದರೆ, ಅವನ ಅಭಿಪ್ರಾಯದಂತೆ ಕುಂಡಲಿನಿ ಯೋಗವು ಮನಸ್ಸಿನ-ಆಧ್ಯಾತ್ಮಿಕ ಬೆಳವಣಿಗೆ ಮತ್ತು ದೇಹದ ಪಕ್ವತೆ ಒಂದು ವೇಗವರ್ಧಕದಂತೆ ಕೆಲಸ ಮಾಡುತ್ತದೆ. ಯೋಗದ ಈ ವ್ಯಾಖ್ಯಾನದಂತೆ, ಶರೀರವು ಚೆನ್ನಾಗಿ ಪಕ್ವಗೊಂಡು ತನ್ನಷ್ಟಕ್ಕೆ ತಾನೆ ಬಗ್ಗುತ್ತದೆ [...], ಇವುಗಳಲ್ಲಿ ಯಾವುದನ್ನೂ ಬರಿಯ ಹಿಗ್ಗಿಸುವ ವ್ಯಾಯಾಮವೆಂದು ಪರಿಗಣಿಸಬಾರದು .[೨೦]

ಜಾಗರೂಕತೆಯ ಅವಲೋಕನ[ಬದಲಾಯಿಸಿ]

ಏಷ್ಯಾದ ಸಂಪ್ರದಾಯಕ್ಕೆ ಸಂಬಂಧಿಸಿದ ಎಲ್ಲ ತೀವ್ರತರವಾದ ರೂಢಿಗಳು ನಿರಂತರ ಅಭ್ಯಾಸಗಳನ್ನು ನಿರೀಕ್ಷಿಸುತ್ತವೆ. ಮನಶ್ಶಾಸ್ತ್ರದ ಸಾಹಿತ್ಯವು [೨೧]ತಿಳಿಸುತ್ತದೆ" ಪೌರಾತ್ಯ ಆಧ್ಯಾತ್ಮಿಕ ಆಚರಣೆಗಳ ಒಳಹರಿವು ಮತ್ತು 1960ರಲ್ಲಿ ಪ್ರಾರಂಭವಾಗಿ ಹೆಚ್ಚುತ್ತಿರುವ ಧ್ಯಾನದ ಪ್ರಸಿದ್ಧಿಯಿಂದ, ಅನೇಕ ಜನರು ತೀವ್ರತರವಾದ ಆಧ್ಯಾತ್ಮಿಕ ಆಚರಣೆಗಳಲ್ಲಿ ತೊಡಗಿರುವಾಗ ಅಥವಾ ಸಹಜ ಪ್ರವೃತ್ತಿಯಿಂದ ವಿಚಿತ್ರ ರೀತಿಯ ಮಾನಸಿಕ ತೊಂದರೆಗಳನ್ನು ಅನುಭವಿಸಿದ್ದಾರೆ, {೦/) ಗಾಢವಾದ ಆಧ್ಯಾತ್ಮಿಕ ಅಭ್ಯಾಸದ ಜೊತೆಗೆ ಸಂಬಂಧಿಸಿರುವ ಮಾನಸಿಕ ಬಿಕ್ಕಟ್ಟುಗಳಲ್ಲಿ "ಕುಂಡಲಿನಿ ಜಾಗೃತಿ" ಸೇರಿದೆ, "ಯೋಗ ಸಂಪ್ರದಾಯದಲ್ಲಿ ವಿವರಿಸಲಾದ ಒಂದು ಸಂಕೀರ್ಣ ದೈಹಿಕ-ಮಾನಸಿಕವಾದ ಆಧ್ಯಾತ್ಮಿಕ ಪರಿವರ್ತಕ ಕ್ರಿಯೆ".[47] ಕುಂಡಲಿನಿಯು ಕಲ್ಪನೆಯಲ್ಲಿ ಇಂದ್ರಿಯಗಳ, ಯಂತ್ರ, ಮಾನಸಿಕತೆಯ ಸಂಕೀರ್ಣ ರೋಗ ಚಿಹ್ನೆಗಳಿಗೆ ಸಂಬಂಧಿಸಿದ್ದಾಗಿದ್ದು ಇದನ್ನು ಕುಂಡಲಿನಿ ಸಿಂಡ್ರೋಂ ಎಂದು ಕರೆಯುವರು ಇದನ್ನು ಟ್ರಾನ್ಸ್‌ಪರ್ಸನಲ್ ಮನಶಾಸ್ತ್ರ[೨೨] ಕ್ಷೇತ್ರದ ಲೇಖಕರು ಮತ್ತು ಸಾವಿನ-ಸಮೀಪದ ಅಧ್ಯಯನಗಳು[೨೩][೨೪] ವಿವರಣೆ ನೀಡಿವೆ. ಸರಿಯಾದ ನಿರ್ದೇಶನವಿಲ್ಲದೆ ಅಥವಾ ಸಲಹೆಗಳಿಲ್ಲದೆ ಇದನ್ನು ಮಾಡಿದವರಿಗೆ ಮಾತ್ರ ನಕಾರಾತ್ಮಕ ಅನುಭವಗಳಾಗುತ್ತವೆ ಎಂಬುದನ್ನು ಅಧ್ಯಯನಗಳಲ್ಲಿ ಕಂಡುಕೊಂಡಿದ್ದಾರೆ.[೨೫]

ವೈದ್ಯಕೀಯ ಸಂಶೋಧನೆ[ಬದಲಾಯಿಸಿ]

 • ವೆಂಕಟೇಶ್ et al.[೨೬] ಇವರು ಇಂದ್ರಿಯ ಶಕ್ತಿಯ ವಿವರಗಳ ಫಿನಾಮಿನಾಲಜಿಯನ್ನು ಬಳಸಿಕೊಂಡು ಹನ್ನೆರಡು ಕುಂಡಲಿನಿ (ಚಕ್ರ) ಧ್ಯಾನಿಗಳ ಬಗ್ಗೆ ಅಧ್ಯಯನ ನಡೆಸಿದರು. ಅವರು ಧ್ಯಾನವನ್ನು ನಿತ್ಯ ಮಾಡುವುದರಿಂದ "ಇಂದ್ರಿಯ ಪ್ರಜ್ಞೆಯ ಅದ್ಭುತ ಅನುಭವಗಳ ತೀವ್ರತೆಯ ಜೊತೆಗೆ ರಾಚನಿಕ ಬದಲಾವಣೆಯನ್ನು ತರುತ್ತದೆ" ಎಂಬುದನ್ನು ಕಂಡುಕೊಂಡರು.
 • ನೆನಪಿನ ಶಕ್ತಿಯನ್ನು ಪಡೆಯಲು ಮತ್ತು ಯೋಚಿಸುವ ಕ್ರಿಯೆಯನ್ನು ಪ್ರೋತ್ಸಾಹಿಸುವಂತಹ ಯೋಗಿ ಭಜನ್ ಅವರು ಕಲಿಸಿದಂತಹ ಕುಂಡಲಿನೀ ಯೋಗದ ಪರಿಣಾಮಗಳ ಆರಂಭಿಕ ಸಂಶೋಧನೆ. ಈ ಸೀಮಿತ ಸಂಶೋಧನೆ ಮುಂದಿನ ವಿವರವಾದ ಅವಲೋಕನ ಹಾಗೂ ಅಧ್ಯಯನಕ್ಕೆ ನಾಂದಿಯಾಯಿತು. [೨೭]
 • ಮನೋಚಾ et al.[೨೮] ಕುಂಡಲಿನಿ ಧ್ಯಾನದ ಸಹಜ ಯೋಗ ತಂತ್ರದಲ್ಲಿ ಹಸ್ತಗಳ ಉಷ್ಣಾಂಶವು ಕಡಿಮೆಯಾಗುವುದನ್ನು ಮಾಡಿ ನೋಡಿದರು.

ಟಿಪ್ಪಣಿಗಳು[ಬದಲಾಯಿಸಿ]

 1. ಗುರು ಫಥಾ ಸಿಂಗ್ ಖಲ್ಸಾ, ದಿ ಎಸೆನ್ಷಿಯಲ್ ಗುರುಸಿಖ್ ಯೋಗಿ: ದಿ ಯೋಗ ಅಂಡ್ ಯೋಗಿಸ್ ಇನ್ ದಿ ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್ ಆಫ್ ಸಿಖ್ ಧರ್ಮ, ಟೊರೊಂಟೊ,ಮಂಕಿ ಮೈಂಡ್ಸ್ ಪ್ರೆಸ್, 2008, 188-89, 210-12, 222-39.
 2. ಸ್ವಾಮಿ ಶಿವಾನಂದ ರಾಧಾ, ಕುಂಡಲಿನಿ ಯೋಗ ಫಾರ್ ದಿ ವೆಸ್ಟ್, ಟೈಮ್ಲೆಸ್, 2004, ಪೇಜಸ್ 14, 29, 43
 3. ಸ್ಯಾಟ್ ಬಚನ್ ಕೌರ್ ಕರ್ಲಾ ಬೆಕರ್, 2004
 4. ೪.೦ ೪.೧ ೪.೨ ೪.೩ [6] ^ ಪರಮಹಂಸ ಸ್ವಾಮಿ ಮಹೇಶ್ವರಾನಂದ, ದ ಹಿಡನ್ ಪವರ್ಸ್ ಇನ್ ಹ್ಯೂಮನ್ಸ್, ಐಬೆರಾ ವೆರ್ಲಾಗ್ , ಪುಟಗಳು 155. ಐಎಸ್‌ಬಿಎನ್ 0-297-84142-4.
 5. ಸ್ವಾಮಿ ಶಿವಾನಂದ ರಾಧಾ, ಕುಂಡಲಿನಿ ಯೋಗ ಫಾರ್ ದಿ ವೆಸ್ಟ್, ಟೈಮ್ಲೆಸ್, 2004, ಪುಟಗಳು 13, 15
 6. "Kundalini Yogas FAQ - So how do I awaken kundalini?". Eecs.berkeley.edu. ತೆರೆದುನೋಡಿದ್ದು 2010-02-13. 
 7. "Kundalini Yogas FAQ - So how do I awaken kundalini?". Eecs.berkeley.edu. ತೆರೆದುನೋಡಿದ್ದು 2010-02-13. 
 8. "Kundalini Yogas FAQ". Eecs.berkeley.edu. ತೆರೆದುನೋಡಿದ್ದು 2010-02-04. 
 9. ಸ್ವಾಮಿ ಶಿವಾನಂದ ರಾಧಾ, ಕುಂಡಲಿನಿ ಯೋಗ ಫಾರ್ ದಿ ವೆಸ್ಟ್, ಟೈಮ್ಲೆಸ್, 2004, ಪುಟಗಳು 13, 15
 10. http://www.heartcenteredtherapies.org/go/docs/Kundalini%20Meditation%20-%20Article%20by%20John%20Selby.pdf
 11. ಸತ್ಯ ಜುಲೈ 99: ಕುಂಡಲಿನಿ ಯೋಗ ಬೈ ಡೆಬೊರಾಹ್ ಕ್ಲ್ಯಾಪ್ಪ್[dead link]
 12. "Yogi Bhajan". Store.goldenbridgeyoga.com. 1969-01-05. ತೆರೆದುನೋಡಿದ್ದು 2010-02-04. 
 13. design@lancasters.co.uk. "What is Kundalini yoga?". Kundaliniyoga.org.uk. ತೆರೆದುನೋಡಿದ್ದು 2010-02-04. 
 14. ವೆಬ್‌ಎಮ್‌ಡಿ ಆಲ್‌ಝೆಮಿರ್ಸ್ ಡಿಸೀಸ್ ಹೆಲ್ತ್ ಸೆಂಟರ್: 'ಕ್ಯಾನ್ ಮೆಡಿಟೇಶನ್ ರಿವರ್ಸ್ ಮೆಮೊರಿ ಲಾಸ್?' ಜರ್ನಲ್ ಆಫ್ ಅಲ್‌ಝೆಮಿರ್ಸ್ ಡಿಸೀಸ್
 15. ಕಾಂಗ್ರೆಶನಲ್ ಹಾನರರಿ ರಿಸೊಲ್ಯೂಶನ್ 521 ಯುಎಸ್ ಲೈಬ್ರರಿ ಆಫ್ ಕಾಂಗ್ರೆಸ್
 16. ಡೇವಿಡ್ ಶಾನಾಹಫ್-ಖಲ್ಸ, ಕುಂಡಲಿನಿ ಯೋಗ ಮೆಡಿಟೇಶನ್ ಫಾರ್ ಕಾಂಪ್ಲೆಕ್ಸ್ ಸೈಕಿಯಾಟ್ರಿಕ್ ಡಿಸಾರ್ಡರ್ಸ್: ಟೆಕ್ನಿಕ್ಸ್ ಸ್ಪೆಸಿಫಿಕ್ ಫಾರ್ ಟ್ರೀಟಿಂಗ್ ದಿ ಸೈಕೋಸಿಸ್, ಪರ್ಸನಾಲಿಟಿ, ಮತ್ತು ಪರ್ವೇಸಿವ್ ಡೆವಲಂಪ್ಮೆಂಟ್ ಡಿಸಾರ್ಡರ್ಸ್, 2010
 17. ಡೇವಿಡ್ ಶಾನಾಹಫ್, ಕುಂಡಲಿನಿ ಯೋಗ ಮೆಡಿಟೇಶನ್: ಟೆಕ್ನಿಕ್ಸ್ ಸ್ಪೆಸಿಫಿಕ್ ಫಾರ್ ಸೈಕಿಯಾಟ್ರಿಕ್ ಡಿಸಾರ್ಡರ್ಸ್, ಕಪಲ್ಸ್ ಥೆರಪಿ, ಮತ್ತು ಪರ್ಸನಲ್ ಗ್ರೋತ್, 2007
 18. ಸ್ವಾಮಿ ಶಿವಾನಂದ ರಾಧಾ, ಕುಂಡಲಿನಿ ಯೋಗ ಫಾರ್ ದಿ ವೆಸ್ಟ್, ಟೈಮ್‌ಲೆಸ್, 2004, ಪುಟಗಳು 13, 23
 19. ಸೊವಾಟ್‌ಸ್ಕಿ, 1998: ಪು. 6, 82, 142
 20. ಸೊವಾಟ್‌ಸ್ಕಿ, 1998: ಪು. 142
 21. ಟರ್ನರ್ et al.,ಪುಟ. 440
 22. ಸ್ಕಾಟನ್, 1996
 23. ಕೇಸನ್, 2000
 24. ಗ್ರೇಸನ್, 2000
 25. ಪರಮಹಂಸ ಸ್ವಾಮಿ ವಿವೇಕಾನಂದ, ದಿ ಹಿಡನ್ ಪವರ್ ಇನ್ ಹ್ಯೂಮನ್ಸ್, ಐಬೆರಾ ವರ್ಲಾಗ್, ಪುಟಗಳು 47, 48, 49.
 26. ವೆಂಕಟೇಶ್ et al., 1997
 27. Newberg, AB; Wintering, N; Khalsa, DS; Roggenkamp, H; Waldman, MR (2010). "Meditation effects on cognitive function and cerebral blood flow in subjects with memory loss: a preliminary study". Journal of Alzheimer's Disease 20 (2): 517–26. doi:10.3233/JAD-2010-1391. PMID 20164557.  (ಪ್ರಾಥಮಿಕ ಮೂಲ)
 28. ಮನೋಚ ಆರ್, ಬ್ಲ್ಯಾಕ್ ಡಿ, ರ್ಯಾನ್ ಜೆ, ಸ್ಟೌಗ್ ಸಿ, ಸ್ಪೈರೊ ಡಿ, [೧] " 10 ನಿಮಿಷಗಳ ಸಹಜ ಯೋಗ ಧ್ಯಾನದಿಂದ ಮಾನಸಿಕ ನೆಮ್ಮದಿ ಉಂಟಾಗಿ ಹಸ್ತಗಳ ಚರ್ಮದ ಉಷ್ಟಾಂಶವು ಕಡಿಮೆಯಾಗುವುದೆಂದು ಈ ಅಧ್ಯಯನವು ತಿಳಿಸುತ್ತದೆ." [ಧ್ಯಾನದ ವ್ಯಾಖ್ಯಾನವನ್ನು ಬದಲಾಯಿಸುವುದು: ಸೈಕಲಾಜಿಕಲ್ ಕರೊಲೊರರಿ, ಜರ್ನಲ್ ಆಫ್ ದಿ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಲೈಫ್ ಸೈನ್ಸಸ್, ಸಂಪುಟ 28 (1), ಮಾರ್ಚ್ 2010]

ಉಲ್ಲೇಖಗಳು[ಬದಲಾಯಿಸಿ]

 • ಅರಾಂಬುಲಾ ಪಿ, ಪೆಪೆರ್ ಇ, ಕವಾಕಮಿ ಎಮ್, ಗಿಬ್ನೇ ಕೆ‌ಎಚ್. (2001) ದಿ ಸೈಕಲಾಜಿಕಲ್ ಕೊರ್ರಿಲೇಟ್ಸ್ ಆಫ್ ಕುಂಡಲಿನೀ ಯೋಗ ಮೆಡಿಟೇಶನ್: ಎ ಸ್ಟಡಿ ಆಫ್ ಎ ಯೋಗ ಮಾಸ್ಟರ್ , ಸೈಕಲಾಜಿಕಲ್ ಬಯೋಫೀಡ್‌ಬ್ಯಾಕ್, ಜೂನ್ 2001; 26(2): 147 - 53, ಪಬ್‌ಮೆಡ್ ಅಬ್‌ಸ್ಟ್ರ್ಯಾಕ್ಟ್ ಪಿಎಮ್‌ಐಡಿ 11480165.
 • ಕ್ರೋಮೀ, ವಿಲಿಯಂ ಜೆ. (2002) ರೀಸರ್ಚ್: ಮೆಡಿಟೇಶನ್ ಚೇಂಜಸ್ ಟೆಂಪರೇಚರ್ಸ್: ಮೈಂಡ್ ಕಂಟ್ರೋಲ್ಸ್ ಬಾಡಿ ಇನ್ ಎಕ್ಸ್‌ಟ್ರೀಮ್ ಎಕ್ಸ್‌ಪೆರಿಮೆಂಟ್ಸ್ . ಹಾರ್ವರ್ಡ್ ಯೂನಿವರ್ಸಿಟಿ ಗೆಝೆಟ್, ಏಪ್ರಿಲ್ 18, 2002
 • ಗ್ರೇಸನ್, ಬ್ರೂಸ್ (2000) ಸಂ ನ್ಯೂರೊಸೈಕಲಾಜಿಕಲ್ ಕೊರ್ರೆಲೇಟ್ಸ್ ಆಫ್ ದಿ ಫಿಸಿಯೊ-ಕುಂಡಲಿನಿ ಸಿಂಡ್ರೋಂ . ದಿ ಜರ್ನಲ್ ಆಫ್ ಟ್ರಾನ್ಸ್‌ಪರ್ಸನಲ್ ಸೈಕಾಲಜಿ, ಸಂಪುಟ.32, ಸಂಖ್ಯೆ. 2
 • ಲಾ, ಥೋರ್ಸ್ಟನ್: ಕುಂಡಲಿನಿ ಯೋಗ, ಯೋಗಿ ಟೇ ಅಂಡ್ ದಾಸ್ ವಸ್ಸರ್‌ಮ್ಯಾನಝೆಟಾಲ್ಟರ್. ಬಿಬ್ಲಿಯೋಗ್ರಾಫಿಶ್ಚ್ ಈನ್‌ಬ್ಲಿಕ್ ಇನ್ ಡೈ ಹೆಲ್ತಿ, ಹ್ಯಾಪಿ, ಹೋಲಿ ಆರ್ಗನೈಸೇಶನ್ (3ಎಚ್‍ಒ) ದೇಸ್ ಯೋಗಿ ಭಜನ್. ತುಬಿಂಜೆನ್: 2008. ಆನ್‌ಲೈನ್ ಅಬ್ರುಫ್ಬರ್ ಅಂಟರ್: http://tobias-lib.ub.uni-tuebingen.de/volltexte/2008/3596/ [ಜರ್ಮನ್‌ನಲ್ಲಿ]
 • ಲಾ, ಥೋರ್ಸ್ಟನ್: ಕುಂಡಲಿನಿ ಯೋಗ, ಯೋಗಿ ಟೀ ಅಂಡ್ ದಾಸ್ Wassermannzeitalter. ರಿಲಿಜನ್‌ಸ್ವಿಸೆನ್ಚಫ್ಟ್‌ಲಿಚ್ ಈನ್‌ಬ್ಲಿಕ್ ಇನ್ ಡೈ ಹೆಲ್ತಿ, ಹ್ಯಾಪಿ, ಹೋಲಿ ಆರ್ಗನೈಸೇಶನ್ (3ಎಚ್‌ಒ) ದೆಸ್ ಯೋಗಿ ಭಜನ್ , ಮುಸ್ಟರ್: ಎಲ್‌ಐಟಿ, 2007, ಐಎಸ್‌ಬಿಎನ್ 3825801403
 • ಕಾಸನ್, ಯ್ವೊನ್ನೆ (2000) ಫಾರ್ದರ್ ಶೋರ್ಸ್: ಎಕ್ಸ್‌ಪ್ಲೋರಿಂಗ್ ಹೌ ನಿಯರ್-ಡೆತ್, ಕುಂಡಲಿನಿ ಅಂಡ್ ಮಿಸ್ಟಿಕಲ್ ಎಕ್ಸ್‌ಪೀರಿಯನ್ಸ್ ಕ್ಯಾನ್ ಟ್ರಾನ್ಸ್‌ಫಾರ್ಮ್ ಆರ್ಡಿನರಿ ಲೈವ್ಸ್ . ಟೊರೊಂಟೊ: ಹಾರ್ಪರ್ ಕಾಲಿನ್ಸ್ ಪಬ್ಲಿಷರ್ಸ್, ಪರಿಶೀಲಿಸಿದ ಆವೃತ್ತಿ, ಐ‌ಎಸ್‌ಬಿಎನ್ 0-00-638624-5
 • ಲಾಝರ್, ಸಾರಾ ಡಬ್ಲು.; ಬುಶ್, ಜಾರ್ಜ್; ಗೊಲ್ಲಬ್, ರ್ಯಾಂಡಿ ಎಲ್.; ಫ್ರಿಛಿಯೊನೆ, ಗ್ರೆಗರಿ ಎಲ್.; ಖಾಲ್ಸಾ, ಗುರುಚರಣ್; ಬೆನ್ಸನ್, ಹರ್ಬರ್ಟ್ (2000) ಫಂಕ್ಷನಲ್ ಬ್ರೈನ್ ಮ್ಯಾಪಿಂಗ್ ಆಫ್ ದಿ ರಿಲ್ಯಾಕ್ಷೇಷನ್ ರೆಸ್ಪಾನ್ಸ್ ಅಂಡ್ ಮೆಡಿಟೇಶನ್ , [ಆಟೊಮ್ಯಾಟಿಕ್ ನರ್ವಸ್ ಸಿಸ್ಟಂ] ನ್ಯೂರೊರಿಪೋರ್ಟ್, ಸಂಪುಟ. 11(7) ಮೇ 15, 2000, ಪು 1581 - 1585, ಪಬ್‌ಮೆಡ್ ಅಬ್‌ಸ್ಟ್ರ್ಯಾಕ್ಟ್ ಪಿಎಮ್‌ಐಡಿ 10841380
 • ನಾರಾಯಣ್ ಆರ್, ಕಾಮತ್ ಎ, ಖಾನೋಲ್ಕರ್ ಎಮ್, ಕಾಮತ್ ಎಸ್, ದೇಸಾಯ್ ಎಸ್‌ಆರ್, ದುಮ್ ಆರ್‌ಎ. (1990) ಕ್ವಾಂಟಿಟೇಟೀವ್ ಎವ್ಯಾಲುಯೇಶನ್ ಆಫ್ ಮಸಲ್ ರಿಲ್ಯಾಕ್ಷೇಷನ್ ಇಂಡ್ಯೂಸ್ಡ್ ಬೈ ಕುಂಡಲಿನಿ ಯೋಗ ವಿತ್ ಥೆ ಹೆಲ್ಪ್ ಆಫ್ ಇ‌ಎಮ್‌ಜಿ ಇಂಟಿಗ್ರೇಟರ್ . ಇಂಡಿಯನ್ ಜೆ ಫಿಸಿಯೊಲ್ ಫಾರ್ಮಕೊಲ್. ಅಕ್ಟೋಬರ್ 1990; 34(4): 279 - 81, ಪಬ್‌ಮೆಡ್ ಅಬ್‌ಸ್ಟ್ರ್ಯಾಕ್ಟ್ ಪಿಎಮ್‌ಐಡಿ 2100290.
 • ಪೆಂಗ್ ಸಿಕೆ, ಮಿಯೆಟಸ್ ಜೆಇ, ಲಿಯು ವೈ, ಖಲ್ಸಾ ಜಿ, ಡಗ್ಲಾಸ್ ಪಿಎಸ್, ಬೆನ್ಸನ್ ಎಚ್, ಗೋಲ್ಡ್‌ಬರ್ಗರ್ ಎ‌ಎಲ್. (1999) ಎಕ್ಸಾಗರೇಟೆಡ್ ಹಾರ್ಟ್ ರೇಟ್ ಆಸಿಲೇಶನ್ಸ್ ಡ್ಯೂರಿಂಗ್ ಟು ಮೆಡಿಟೇಶನ್ ಟೆಕ್ನಿಕ್ಸ್ . ಇಂಟ್ ಜೆ ಕಾರಿಡಿಯೊಲ್, ಜುಲೈ 31, 1999; 70(2): 101 - 7, ಪಬ್‌ಮೆಡ್ ಅಬ್‌ಸ್ಟ್ರ್ಯಾಕ್ಟ್ ಪಿಎಮ್‌ಐಡಿ 10454297.
 • ಸ್ಕಾಟನ್, ಬ್ರೂಸ್ (1996) ದಿ ಫಿನೊಮೆನಾಲಜಿ ಅಂಡ್ ಟ್ರೀಟ್ಮೆಂಟ್ ಆಫ್ ಕುಂಡಲಿನಿ , ಇನ್ ಚಿನೆನ್, ಸ್ಕಾಟನ್ ಅಂಡ್ ಬಟಿಸ್ಟಾ (ಸಂಪಾದಕರು) (1996) ಟೆಕ್ಸ್ಟ್‌ಬುಕ್ ಆಫ್ ಟ್ರಾನ್ಸ್‌ಪರ್ಸನಲ್ ಸೈಕಿಯಾಟ್ರಿ ಅಂಡ್ ಸೈಕಾಲಜಿ. (ಪು. 261–270). ನ್ಯೂಯಾರ್ಕ್: ಬೇಸಿಕ್ ಬುಕ್ಸ್, ಇಂಕ್
 • ಸೊವಾಟ್‌ಸ್ಕಿ, ಸ್ಟುವರ್ಟ್ (1998) ವರ್ಡ್ಸ್ ಫ್ರಂ ದಿ ಸೋಲ್: ಟೈಮ್, ಈಸ್ಟ್/ವೆಸ್ಟ್ ಸ್ಪಿರಿಚುಯಾಲಿಟಿ, ಅಂಡ್ ಸೈಕೊಥೆರಪಿಟಿಕ್ ನೆರೇಟೀವ್ , ಸನಿ ಸೀರೀಸ್ ಇನ್ ಟ್ರಾನ್ಸ್‌ಪರ್ಸನಲ್ ಅಂಡ್ ಹ್ಯೂಮನಿಸ್ಟಿಕ್ ಸೈಕಾಲಜಿ, ನ್ಯೂಯಾರ್ಕ್: ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಪ್ರೆಸ್
 • ಟರ್ನರ್, ರಾಬರ್ಟ್ ಪಿ.; ಲುಕೊಫ್, ಡೇವಿಡ್; ಬಾರ್ನ್‌ಹೌಸ್, ರುತ್ ಟಿಫನಿ & ಲು, ಫ್ರಾನ್ಸಿಸ್ ಜಿ. (1995) ರಿಲಿಜಿಯಸ್ ಆರ್ ಸ್ಪಿರಿಚುಯಲ್ ಪ್ರಾಬ್ಲಂ. ಎ ಕಲ್ಚರಲಿ ಸೆನ್ಸಿಟಿವ್ ಡಯಾಗ್ನೋಸ್ಟಿಕ್ ಕೆಟಗೈ ಇನ್ ದಿ ಡಿಎಸ್‌ಎಂ-IV. ಜರ್ನಲ್ ಆಫ್ ನರ್ವಸ್ ಅಂಡ್ ಮೆಂಟಸ್ ಡಿಸೀಸ್, ಸಂಪುಟ.183, ಸಂಖ್ಯೆ. 7 435-444
 • ವೆಂಕಟೇಶ್ ಎಸ್, ರಾಜು ಟಿಆರ್, ಶಿವಾನಿ ವೈ, ಟಾಂಪ್ಕಿನ್ಸ್ ಜಿ, ಮೇಟಿ ಬಿಎಲ್. (1997) ಎ ಸ್ಟಡಿ ಆಫ್ ಸ್ಟ್ರಕ್ಚರ್ ಆಫ್ ಫಿನೊಮಿನಾಲಜಿ ಆಫ್ ಕಾನ್ಷಿಯಸ್‌ನೆಸ್ ಇನ್ ಮೆಡಿಟೇಟಿವ್ ಅಂಡ್ ನಾನ್-ಮೆಡಿಟೇಟಿವ್ ಸ್ಟೇಟ್ಸ್ . ಇಂಡಿಯನ್ ಜೆ ಫಿಸಿಯೊಲ್ ಫಾರ್ಮಕಾಲ್, ಏಪ್ರಿಲ್ 1997; 41(2): 149 - 53. ಪಬ್‌ಮೆಡ್ ಅಬ್‌ಸ್ಟ್ರ್ಯಾಕ್ಟ್ ಪಿಎಮ್‌ಐಡಿ 9142560.

ಬಾಹ್ಯ ಕೊಂಡಿಗಳು[ಬದಲಾಯಿಸಿ]