ವಿಷಯಕ್ಕೆ ಹೋಗು

ಕುಂಟಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂಟಲ/ಕುಂಟು ನೇರಳೆ
ಕುಂಟಲದ ಎಲೆಗಳು, ಹೂಗಳು ಹಾಗೂ ಕಾಯಿ
Conservation status
Scientific classification e
Unrecognized taxon (fix): Syzygium
ಪ್ರಜಾತಿ:
S. caryophyllatum
Binomial name
Syzygium caryophyllatum
(L.) Alston

ಕುಂಟಲ ಎಂಬುದು ಮಿರ್ಟೇಸಿಯೆ ಕುಟುಂಬಕ್ಕೆ ಸೇರಿದ ಒಂದು ಮರ. ಕರ್ನಾಟಕದ ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ಮರ ಬೆಳೆಯುತ್ತದೆ. ಉಳಿದಂತೆ ಶ್ರೀ ಲಂಕಾ, ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಬೆಳೆಯುತ್ತದೆ. ಇದನ್ನು ಕುಂಟು ನೇರಳೆ ಎಂಬುದಾಗಿ ಕೂಡಾ ಕರೆಯುತ್ತಾರೆ[೨].

ಗುಣ ಲಕ್ಷಣ[ಬದಲಾಯಿಸಿ]

ಮರವು ಸುಮಾರು ೬ ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಸರಳವಾಗಿದ್ದು ವಿರುದ್ಧ ದಿಕ್ಕಿನಲ್ಲಿರುತ್ತವೆ. ತೊಗಟೆಯು ಸುಮಾರಾಗಿ ದಪ್ಪವಿದ್ದು ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ. ಹೂಗಳು ಸಣ್ಣವು, ಬಿಳಿಯ ಬಣ್ಣದಲ್ಲಿದ್ದು ಗಂಡು, ಹೆಣ್ಣು ಎರಡೂ ಭಾಗಗಳನ್ನು ಹೊಂದಿರುತ್ತವೆ. ಇದರ ಹಣ್ಣುಗಳು ಕಡು ನೇರಳೆ/ನೀಲಿ ಬಣ್ಣವನ್ನು ಹೊಂದಿದ್ದು, ಸಿಹಿ, ಒಗರು ಹಾಗೂ ಹುಳಿ ಮಿಶ್ರಿತ ರುಚಿಯನ್ನು ಹೊಂದಿರುತ್ತವೆ. ಗಾತ್ರದಲ್ಲಿ ಹಣ್ಣುಗಳು ಸುಮಾರು ೫ ಮಿ.ಮೀ ನಿಂದ ೧ ಸೆಂ.ಮೀ ವರೆಗೂ ಇರುತ್ತವೆ.

ಚಿತ್ರ ಸಂಪುಟ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. World Conservation Monitoring Centre 1998. Syzygium caryophyllatum. 2006 IUCN Red List of Threatened Species. Downloaded on 23 August 2007.
  2. "ಆರ್ಕೈವ್ ನಕಲು". Archived from the original on 2019-10-11. Retrieved 2019-10-11.
"https://kn.wikipedia.org/w/index.php?title=ಕುಂಟಲ&oldid=1223133" ಇಂದ ಪಡೆಯಲ್ಪಟ್ಟಿದೆ