ಕುಂಜರಾನಿ ದೇವಿ
ವೇಟ್ ಲಿಪ್ಟಿಂಗ್ ನಲ್ಲಿ ಹೆಚ್ಚು ಅಲಂಕರಿಸಲ್ಪಟ್ಟ ಭಾರತೀಯ ಕ್ರೀಡಾಪಟು. ನೇಮಿ ರಾಕ್ಟಮ್ ಕುಂಜರಾನಿ ಜನನ 1 ಮಾರ್ಚ್ 1968 ರಂದು ಮಣಿಪುರದ ಇಂಫಾಲನ್ ಕೈರಾಂಕ್ ಮಾಯೈ ಲಿಕೈನಲ್ಲಿ ಜನಿಸಿದ ಕುಂಜರಾನಿ ದೇವಿ 1978ರಲ್ಲಿ ಇಂಫಾಲ್ ನ ಸಿಂಡಮ್ ಸಿನ್ ಶಾಂಗ್ ರೆಸಿಡೆಂಟ್ ಹೈಸ್ಕೂಲಿನಲ್ಲಿದ್ದಾಗ ಕ್ರೀಢೆಯಲ್ಲಿ ಆಸಕ್ತಿ ವಹಿಸಲು ಪ್ರಾರಂಭಿಸಿದರು. ಇಂಫಾಲನ್ ಮಹರಾಜ ಭೋದಚಂದ್ರ ಕಾಲೇಜಿನಿಂದ ಪದವಿ ಮುಗಿಸುವ ಹೊತ್ತಿಗೆ ವೇಟ್ ಲಿಪ್ಟಿಂಗ್ ಅವರ ಮೊದಲ ಆಯ್ಕೆಯಾಗಿತ್ತು. ನಂತರ ಅವರು ಕೇಂದ್ರ ಮೀಸಲು ಪೋಲೀಸ್ ಪಡೆಗೆ ಸೇರಿದರು. ನಂತರ ಪೋಲೀಸ್ ಚಾಂಪಿಯನ್ ಶಿಪ್ ನಲ್ಲಿ ತನ್ನದೇ ಆದ ಅಲೆಗಳನ್ನು ಸೃಷ್ಟಿಸಿದರು ಮತ್ತು 1996 ರಿಂದ 1998ರ ವರೆಗೆ ಭಾರತೀಯ ಪೋಲಿಸ್ ತಂಡದ ನಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ..[೧]
ಕ್ರೀಡಾ ಇತಿಹಾಸ
[ಬದಲಾಯಿಸಿ]1985 ರಿಂದ ರಾಷ್ಟ್ರೀಯ ವೇಟ್ ಲಿಫ್ಟಂಗ್ ಚಾಂಪಿಯನ್ ಶಿಪ್ ನಲ್ಲಿ 44,46,48ಕಿಲೋಗ್ರಾಂವರೆಗೆ ಪದಕ ಗೆಲ್ಲಲು ಪ್ರಾರಂಭಿಸಿದರು.1987 ರಲ್ಲಿ ತಿರುವನಂತಪುರದಲ್ಲಿ ಹೊಸ ರಾಷ್ಟ್ರೀಯ ಹೊಸ ದಾಖಲೆಗಳನ್ನು ರಚಿಸಿದರು. ತನ್ನ ತೊಕ ವಿಭಾಗವನ್ನು 46 ಕಿಲೋಗ್ರಾಂಗೆ ಹೆಚ್ಚಿಸಿಕೊಂಡ ಅವರು 1994 ರಲ್ಲಿ ಪುಣೆಯಲ್ಲಿ ಚಿನ್ನ ಗೆದ್ದರು. ಆದರೆ 4 ವರ್ಷಗಳ ನಂತರ ಮಣಿಪುರದಲ್ಲಿ 48 ಕಿಲೋಗ್ರಾಂ ವಿಭಾಗದಲ್ಲಿ ಬೆಳ್ಳಿಗೆ ಕೆಳಗಿಳಿಯಲ್ಪಟ್ಟರು.[೨] ಅವರ ಮೊದಲ ವಿಶ್ವ ಮಹಿಳಾ ವೇಟ್ ಲಿಪ್ಟಿಂಗ್ ಚಂಪಿಯನ್ ಶಿಪ್1989 ರಲ್ಲಿ ಮ್ಯಾಂಚೆಸ್ಟರ್ ಆವೃತ್ತಿಯಾಗಿದೆ. ಮತ್ತು 3 ಬೆಳ್ಳಿ ಪದಕಗಳ ಬಹುಮಾನವು ಅವರ ಉತ್ಸಾಹವನ್ನು ಗಣನೀಯವಾಗಿ ಹೆಚ್ಚಿಸಿತು.ಅಂದಿನಿಂದ ಅವರು ಸತತ ಏಳು ವಿಶ್ವ ಚಾಂಪಿಯನ್ ಶಿಪ್ಗಳಲ್ಲಿ ಭಾಗವಹಿಸಿದ್ದಾರೆ ಮತ್ತು 1993 ರಲ್ಲಿ ಮೆಲ್ಬೋರ್ನ್ ಆವೃತ್ತಿಯಲ್ಲಿ ಹೊರತುಡಿಸಿ, ಎಲ್ಲಾ ಸ್ಪರ್ದೆಗಳಲ್ಲಿ ಗೆದ್ದಿದ್ದಾರೆ.ಹೇಗಾದರೂ, ಅವರು ಯಾವಾಗಲು ಬೆಳ್ಳಿ ಪದಕಗಳೊಂದಿಗೆ ಸಂತೃಪ್ತರಾಗಿರುವುದರಿಂದ ಅಗ್ರ ಸ್ಥಾನಕ್ಕೆ ಬರಲು ಸಾಧ್ಯವಾಗಲಿಲ್ಲ. 1990 ರಲ್ಲಿ ಬೀಜಿಂಗ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಮತ್ತು 1994 ರಲ್ಲಿ ಹಿರೋಶಿಮದಲ್ಲಿ ಅವರು ಕಂಚಿನ ಪದಕವನ್ನು ಹೆಚ್ಚು ನಿರ್ವಹಿಸುತ್ತಿದ್ದರು ಮತ್ತು ಬ್ಯಾಂಕಾಕ್ ನಲ್ಲಿ ನಡೆದ 1998ರ ಕ್ರೀಡಾಕೂಟದಲ್ಲಿ ಯಾವುದೇ ಪದಕ ಪಡೆಯಲು ಅವರು ವಿಫಲರಾದರು. ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕುಂಜರಾನಿ ನಿಯಮಿತ ಸಂದರ್ಶಕರಾಗಿದ್ದಾರೆ. 1989ರ ಶಾಂಗೈ ಆವೃತ್ತಿಯಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಪ್ರಾರಂಭಿಸಿದ ಅವರು 1991ರ ಇಂಡೋನೇಷಿಯಾ ಆವೃತ್ತಿಯಲ್ಲಿ 44 ಕಿಲೋಗ್ರಾಂ ಗಳ ವಿಭಾಗದಲ್ಲಿ ಮೂರು ಬೆಳ್ಳಿ ಪದಕಗಳನ್ನು ಗಳಿಸಿದರು. 1992 ಥೈಲ್ಯಾಂಡ್ ಮತ್ತು 1993 ರಲ್ಲಿ ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡರು 1995 ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ತೋರಿದರು.
ಪ್ರಶಸ್ತಿಗಳು
[ಬದಲಾಯಿಸಿ]- 1990 ಅರ್ಜುನ ಪ್ರಶಸ್ತಿ
- ಕೆಕೆ ಬಿರ್ಲಾ ಪ್ರಶಸ್ತಿ
- 2011 ಪದ್ಮಶ್ರೀ ಪ್ರಶಸ್ತಿ[೩]
ಕುಂಜರಾನಿ ಸ್ಪರ್ಧಿಸಿದ ಸ್ಥಳಗಳು
[ಬದಲಾಯಿಸಿ]ವರ್ಷ | ಸ್ಥಳ | ತೂಕ |
1989 | ಮ್ಯಾಂಚೆಸ್ಟರ್ | 44 ಕೆಜಿ |
1991 | ಡೋನೌ ಸ್ಟಿಂಗನ್ | 44 ಕೆಜಿ |
1992 | ವರ್ಣ | 44 ಕೆಜಿ |
1994 | ಇಸ್ತಾಂಬುಲ್ | 46 ಕೆಜಿ |
1995 | ವಾರ್ಸಾ | ೪೬ಕೆಜಿ |
1996 | ಗುವಾಂಗ್ ಹೌ | 46 ಕೆಜಿ |
1997 | ಚಿಯಾಂಗ್ ಮಾಯ್ | 46 ಕೆಜಿ |
ಪ್ರಸ್ತುತ ಸ್ಥಿತಿ
[ಬದಲಾಯಿಸಿ]ಕುಂಜರಾನಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯಲ್ಲಿ ಕಮಾಂಡೆಂಟ್ ಹುದ್ದೆಯನ್ನು ಅಲಂಕರಿಸಿದ್ದಾರೆ 2014 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿ ಗಳಿಗೆ ಶಿಫಾರಸು ಮಾಡಬೇಕಾದ ಸಮಿತಿಯ ಸದಸ್ಯರಾಗಿದ್ದರು. ಗ್ಲಾಸ್ಗೊದಲ್ಲಿ ನಡೆದ 2014 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ವೇಟ್ ಲಿಫ್ಟಿಂಗ್ ತಂಡದ ತರಬೇತುದಾರ ರಾಗಿದ್ದರು.