ಕುಂಚಟಿಗರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಂಚಟಿಗರು[ಬದಲಾಯಿಸಿ]

ಕುಂಚಟಿಗರು ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು, ಚಾಮರಾಜನಗರ, ಮೈಸೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಇದ್ದಾರೆ. ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಿರಳವಾಗಿ ಕಂಡುಬರುತ್ತಾರೆ. ಇದಲ್ಲದೆ ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ತಮಿಳುನಾಡಿನ ಕೊಯಮತ್ತೂರು, ಮಧುರೈ, ನೀಲಗಿರಿ ಮುಂತಾದ ಜಿಲ್ಲೆಗಳಲ್ಲಿ ಕುಂಚಟಿಗರಿದ್ದಾರೆ. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಉಪ ಪಂಗಡ ಹಾಗೂ ವಿವಾಹ ಪದ್ಧತಿ[ಬದಲಾಯಿಸಿ]

ಹನ್ನೆರಡನೇ ಶತಮಾನದಲ್ಲಿ ವೀರಶೈವ ಅನುಯಾಯಿಗಳಾಗಿ ಲಿಂಗಯುತ ಉಪ ಪಂಗಡಗಳಾಗಿ ರೂಪುಗೊಂಡಿರುವುದು ತಿಳಿಯುತ್ತದೆ. ಕುಂಚಟಿಗರು ತಮ್ಮ ಪೂರ್ವಜರ ಹೆಸರಿನಲ್ಲಿ ನಲವತ್ತೆಂಟು ಬೆಡಗುಗಳಾಗಿ ವಿಂಗಡನೆಗೊಂಡಿದ್ದಾರೆ. ಅವುಗಳೆಂದರೆ ಜಾನಕಲ್ಲೋರು, ಉಂಡೇನವರು, ಅರಸನವರು, ಜಲ್ಲೆನವರು, ಹಾವಿನವರು, ರಾಗೇನವರು, ಒಳಕಲ್ಲಿನವರು, ಕರಡೇನವರು, ಗರಿಕೆಯವರು, ಸಾರಂಗದವರು, ಮಾಯೋರರು, ರೊದ್ದದವರು, ಎಲೆಯವರು, ಕಂಬಳಿಯವರು, ಮನನವರು, ಮ್ಯಾಣಿನವರು, ಅಂಡೆನವರು, ಕಾಗೇನವರು, ಬೆಳ್ಳೆನವರು, ಕಠಾರಿಯವರು, ಚೀರಿಗೆಯವರು, ಕೊಗ್ಗೆನವರು, ದಾಸಲೆನವರು, ಕಕ್ಕೇನವರು, ಅಟ್ಟೆನವರು, ಸಾವಂತದವರು, ಮಿಸಲೇನವರು, ಉಳ್ಳೇನವರು, ಜರಿಯವರು, ಗೌಳಿಯವರು, ಬಡನವರು, ರಾಹುತದವರು, ಹುತ್ತದವರು, ಗೋಚಿನವರು, ಎರಡುಕೆರೆಯವರು, ಹಾಲೇನವರು, ಸೋರೇನವರು, ಗುಡಿನವರು, ಬಸಲೇನವರು, ಎಮ್ಮೆನವರು, ಹುಳಿಯರುನವರು, ಯಕ್ರೀನವರು, ಶೆಟ್ಟಿನವರು, ಗೋಣಿನವರು, ಅಲ್ಬೆನವರು ಇತ್ಯಾದಿ. ಮೇಲ್ಕಂಡ ಬೆಡಗುಗಳು ಅಥವಾ ಕುಲಗಳನ್ನು ವಿಶೇಷವಾಗಿ ವಿವಾಹದ ಸಂದರ್ಭದಲ್ಲಿ ಅವಶ್ಯಕವಾಗಿ ಎಲ್ಲರೂ ನೋಡುತ್ತಾರೆ.ಇವುಗಳಲ್ಲಿ ಕೆಲವು ಗುಂಪುಗಳನ್ನು ಅಣ್ಣ, ತಮ್ಮಂದಿರಂತೇ ಪರಿಗಣಿಸುತ್ತಾರೆ. ಹೀಗೆ ಪರಿಗಣಿಸಿದ ಗುಂಪಿನ ಬೆಡಗುಗಳಲ್ಲಿ ವಿವಾಹವಾಗುವುದು ಹಾಗೂ ಒಂದೇ ಬೆಡಗಿನಲ್ಲಿ ವಿವಾಹವಾಗುವುದು ನಿಷಿದ್ಧ. ಈ ಬೆಡಗುಗಳ ಸಹೋದರತ್ವವನ್ನು ವಧುವರರ ತಂದೆಯ ಬೆಡಗುಗಳಿಂದ ನೋಡುವುದಲ್ಲದೆ, ಅವರ ತಾಯಂದಿರ ಬೆಡಗುಗಳಿಗೂ ನೋಡುತ್ತಾರೆ. ವಿಚ್ಛೇದನ ಅಪರೂಪವಾಗಿದ್ದು ವಿಧವಾ ವಿವಾಹವಾಗಬಹುದು.

ಆರಾಧನಾ ದೇವರು[ಬದಲಾಯಿಸಿ]

ಮಾರಿ, ಮುದ್ದಮ್ಮ, ಕರಿಯಮ್ಮ, ಚೌಡಮ್ಮ, ಮುನೇಶ್ವರಿ, ವಿಷ್ಣು ಮತ್ತು ಶಿವನನ್ನು ಪೂಜಿಸುತ್ತಾರೆ.

ಆಸಕ್ತ ವಲಯಗಳು[ಬದಲಾಯಿಸಿ]

ಈ ಸಮುದಾಯವು ವ್ಯಾಪಾರಿಗಳು, ಆಡಳಿತಗಾರರು, ವೈದ್ಯರು ಹಾಗೂ ರಾಜ್ಯ ಮಟ್ಟದ ರಾಜಕೀಯ ನಾಯಕರನ್ನು ಹೊಂದಿದೆ. ಆಧುನಿಕ ಶಿಕ್ಷಣ, ವೈದ್ಯಕೀಯ, ಕೃಷಿ, ಇತ್ಯಾದಿ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಈ ಸಮುದಾಯದ ಜನರು ಹೊಂದಿ, ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಭೂಮಾಲೀಕರ ಸಮುದಾಯವಾದ ಕುಂಚಟಿಗರು ವ್ಯವಸಾಯದಲ್ಲಿ ನಿರತರಾಗಿದ್ದಾರೆ. ವ್ಯವಸಾಯದೊಡನೆ ಇವರು ವ್ಯಾಪಾರ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಪ್ರಾಣಿಸಾಕಾಣಿಕೆ, ಸ್ವಯಂ- ಉದ್ಯೋಗ, ಇತ್ಯಾದಿ ವೃತ್ತಿಗಳಲ್ಲಿ ನಿರತರಾಗಿದ್ದಾರೆ.

ನೊಣಬ[ಬದಲಾಯಿಸಿ]

ನೊಣಬ ಎಂಬ ಹೆಸರು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಆವೃತವಾಗಿ ನೊಳಂಬವಾಡಿಯೆಂಬ ಪ್ರಾಚೀನ ಸಾಮ್ರಾಜ್ಯದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಈ ಸಮುದಾಯದ ಜನರು ಹೆಚ್ಚಾಗಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರಲ್ಲಿ ಹೊರಬಾಂಧವ್ಯ ವಿವಾಹ ಬೆಡಗುಗಳಿವೆ. ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ತಂದೆಯ ನಂತರ ಹಿರಿಯ ಮಗನು ಕುಟುಂಬ ಉತ್ತರಾಧಿಕಾರದ ಹಕ್ಕು ಪಡೆಯುತ್ತಾನೆ. ಸ್ತ್ರೀಯರ ಸಾಂಪ್ರದಾಯಿಕ, ಆರ್ಥಿಕ, ಸಾಮಾಜಿಕ ಹಾಗೂ ಗೃಹಕೃತ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಕುಟುಂಬದ ಆದಾಯಕ್ಕೆ ನೆರವಾಗುವುದಲ್ಲದೆ, ಆರ್ಥಿಕ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಸ್ತ್ರೀಯರು ಹೊಂದಿದ್ದಾರೆ. ನೊಣಬ ಒಕ್ಕಲಿಗರು ಕುರುಬ ಮತ್ತಿತ್ತರ ಒಕ್ಕಲಿಗ ಉಪ ಪಂಗಡಗಳ ಜೊತೆ, ಸಾಮಾಜಿಕ ಸಂಪರ್ಕ ಹೊಂದಿದ್ದಾರೆ. ಆಧುನಿಕ ಶಿಕ್ಷಣ ಬಗ್ಗೆ ಆಸಕ್ತಿ ಮತ್ತು ಒಲವು ಹೆಚ್ಚಾಗಿದೆ. ಈ ಸಮುದಾಯದ ಜನರು ಸಾಮಾಜಿಕ ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಸುಬು[ಬದಲಾಯಿಸಿ]

ನೊಣಬ ಒಕ್ಕಲಿಗರಿಗೆ ಕೃಷಿ ಪ್ರಮುಖ ಆದಾಯದ ಮೂಲವಾಗಿದೆ. ಇವರಲ್ಲಿ ಕೆಲವರು ಬೇರೆಯವರ ಭೂಮಿಯನ್ನು ಗೇಣಿ ಮಾಡುತ್ತಾರೆ. ಹೆಚ್ಚಿನ ಜನ ಕೃಷಿ ಕಾರ್ಮಿಕರಿದ್ದಾರೆ.

ಮನೆ ದೇವತೆಗಳು[ಬದಲಾಯಿಸಿ]

ರಂಗನಾಥಸ್ವಾಮಿ, ತಿಮ್ಮಪ್ಪ, ಮಾರಮ್ಮ, ಶಿವ, ಲಕ್ಮೀ, ನಾರಾಯಣ ಇತ್ಯಾದಿ. ಬ್ರಾಹ್ಮಣ ಹಾಗೂ ದಾಸಪ್ಪಗಳು ಇವರ ಧಾರ್ಮಿಕ ವಿಶೇಷಜ್ಞರಾಗಿದ್ದಾರೆ.k

ಉಲ್ಲೇಖ[ಬದಲಾಯಿಸಿ]

http://kanaja.in/?p=118021[ಶಾಶ್ವತವಾಗಿ ಮಡಿದ ಕೊಂಡಿ]