ವಿಷಯಕ್ಕೆ ಹೋಗು

ಕಿಶೋರಿ ಲಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿಶೋರಿ ಲಾಲ್ ರವರು (೧೯೧೨ - ೧೧ ಜುಲೈ ೧೯೯೦) ನಮ್ಮ ಭವ್ಯ ಭಾರತ ದೇಶದ ಸ್ವಾತಂತ್ರ ಹೋರಾಟಗಾರರು. ಇವರು ನಮ್ಮ ಪಂಜಾಬ್ ರಾಜ್ಯದವರು. ಇವರು ಭಗತ್ ಸಿಂಗ್ ಮತ್ತು ಹಿಂದುಸ್ತಾನ್ ಸೋಶಿಯಲಿಸ್ಟಿಕ್ ಅಸೋಸಿಯೇಶನ್ (ಎಚ್.ಎಸ್.ಆರ್.ಎ.) ಗಳ ಜೊತೆ ಸೇರಿ ಮಹತ್ತರವಾದ ಕಾರ್ಯಗಳನ್ನು ಮಾಡಿದಾರೆ.. []


ಆರಂಭಿಕ ಜೀವನ

[ಬದಲಾಯಿಸಿ]

ಇವರು ಪಂಜಾಬ್ ರಾಜ್ಯದ ಹೋಶಿಯಾರ್ ಪುರ್ ಜಿಲ್ಲೆಯ ದಸೂಯ ತಾಲ್ಲೂಕಿನ ಧರಮ್ ಪುರ್ ಗ್ರಾಮದಲ್ಲಿ ಜನಿಸಿದರು. ಈ ಗ್ರಾಮವು ನೈಋತ್ಯಕ್ಕಿರುವ ಇಳಿಜಾರಿನ್ನಲ್ಲಿ ಸೋಲಾ ಸಿಂಘಿ ಶ್ರೇಣಿ ಬಳಿ ಇದ್ದು, ಇದು ಉ ೩೧.೮೮೦೭೬೧⁰ ದಿಂದ ೭೫.೯೧೪೫೮೦⁰ ಪ ಗಳ ರೇಖಾಂಶಗಳಲ್ಲಿ ಸಂಧಿಸುತ್ತದೆ. ಇವರ ಪ್ರಾಥಮಿಕ ಶಿಕ್ಷಣವು ಧರಮ್ ಪುರದಲ್ಲಿ ನಡೆದು ನಂತರ ಇವರ ತಂದೆಯವರಿಗೆ ಸಂಸ್ಕೃತ ಶಿಕ್ಷಕರಾಗಿ ನೇಮಕಗೊಂಡ ಕಾರಣ ಕ್ವೆಟ್ಟಾಗೆ (ಈಗ ಇದು ಪಾಕಿಸ್ತಾನದಲ್ಲಿದೆ) ತೆರಳಬೇಕಾಗುತ್ತದೆ. ಕ್ವೆಟ್ಟಾದಲ್ಲಿ ಇವರ ಮೆಟ್ರಿಕ್ಯುಲೇಷನ್ ವ್ಯಾಸಂಗ ಮುಗಿದ ನಂತರ ಇವರ ಉನ್ನತ ವ್ಯಾಸಂಗವು ಲಾಹೋರ್ ನ ಡಿಎವಿ ಕಾಲೇಜಿನ್ನಲ್ಲಿ ನಡೆಯುತ್ತದೆ.

ರಾಜಕೀಯ ಜೀವನ

[ಬದಲಾಯಿಸಿ]

ಇವರ ತಂದೆ ಮತ್ತು ತಮ್ಮ ಮೂವರು ಹಿರಿಯ ಸಹೋದರರಲ್ಲಿ ಭಾರತೀಯ ರಾಷ್ಟ್ರೀಯತೆ ಉತ್ಸಾಹ ತುಂಬಿ ತುಳುಕುತ್ತಿರುತ್ತದೆ. ಕಿಶೋರಿ ಲಾಲ್ ರವರು ೧೯೨೮ ರ ಆರಂಭದಲ್ಲಿ ನೌಜವಾನ್ ಭಾರತ ಸಭಾ ಎಂಬ ಸಂಸ್ಥೆಗೆ ಸೇರುತ್ತಾರೆ. ಆಗ ಇವರಿಗೆ ಈ ಸಂಸ್ಥೆಯ ಸ್ಥಾಪಕರಾದ ಭಗತ್ ಸಿಂಗ್ ರವರ ನೇರ ಮತ್ತು ನಿಕಟ ಸಂಪರ್ಕ ದೊರಕುತ್ತದೆ. [] ಈ ಸಂಸ್ಥೆಯ ಪ್ರಮುಖವಾದ ಉದ್ದೇಶವೇನೆಂದರೆ, ಯುವಕರ ಮನಸ್ಸಿನಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ತುಂಬುವುದು. ಹಾಗೆಯೇ ಅವರನ್ನು ಭಾರತೀಯ ಸ್ವಾತಂತ್ರ ಹೋರಾಟಕ್ಕೆ ಅಣಿಗೊಳಿಸುವುದಾಗಿರುತ್ತದೆ.

೧೫ನೇ ಎಪ್ರೀಲ್ ೧೯೨೯ ರಂದು ಲಾಹೋರ್‌ನ ೬೯ನೇಯ ಕಾಶ್ಮೀರಿ ಕಟ್ಟಡದಲ್ಲಿರುವ ಎಚ್‌ಎಸ್‌ಆರ್‌ಎ ಬಾಂಬ್ ತಯಾರಿಕಾ ಘಟಕದೊಳಗೆ ಇವರು ಭಾಗಿಯಾದ ಸಂದರ್ಭದಲ್ಲಿ ಇವರನ್ನು, ಸುಖದೇವ್ ಥಾಪರ್ ರವರ ಜೊತೆಯಲ್ಲಿ ಬಂಧಿಸಲಾಗುತ್ತದೆ. [] ಆಗ ಕಿಶೋರಿ ಲಾಲ್ ರವರು ವಿಚಾರಣಾಧೀನ ಕೈದಿಯಾಗಿದ್ದು ಕಾರಗೃಹಲ್ಲಿದ್ದಾಗ, ಎಚ್.ಎಸ್.ಆರ್.ಎ. ನ ಸದಸ್ಯರ ಜೊತೆ ಐತಿಹಾಸಿಕ ಉಪವಾಸ ಸತ್ಯಾಗ್ರಹದಲ್ಲಿಯೂ ಭಾಗವಹಿಸುತ್ತಾರೆ. ೧೯೨೯ ರ ಲಾಹೋರ್ ಪ್ರಕರಣದ ವಿಚಾರಣೆಯ ಅಂತಿಮ ತೀರ್ಪಿನಲ್ಲಿ ನ್ಯಾಯಾಧೀಶರು ಭಗತ್ ಸಿಂಗ್, ರಾಜಗುರು[ಶಾಶ್ವತವಾಗಿ ಮಡಿದ ಕೊಂಡಿ] ಮತ್ತು ಸುಖದೇವ್ ರವರಿಗೆ ಗಲ್ಲು ಶಿಕ್ಷೆಯನ್ನು ಘೋಷಿಸುತ್ತಾರೆ. ಹಾಗೆ ಕಿಶೋರಿ ಲಾಲ್‌ರವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುತ್ತಾರ. [] ಇವರು ೧೮ ವರ್ಷಗಳ ಕಾಲ ಲಾಹೋರ್, ಮುಲ್ತಾನ್ ಮತ್ತು ಮಾಂಟ್‌ಗೊಮೆರಿ ಕಾರಗೃಹಗಳಲ್ಲಿ ಶಿಕ್ಷೆಯನ್ನು [] ಅನುಭವಿಸುತ್ತಾರೆ. ನಂತರ ಇವರ ವಿದ್ರೋಹಿ ಸ್ವಭಾವದಿಂದ ಇವರು ಪುನಃ ೫ ವರ್ಷಗಳ ಕಾಲ ಏಕಾಂಗಿ ಕಾರಗೃಹವಾಸದ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರುತ್ತದೆ.

ಇವರು ಕಾರಾಗೃಹದಲ್ಲಿದ್ದಾಗ ಇವರ ಸಂಪರ್ಕಕ್ಕೆ ಹಲವಾರು ಜನ ಕಮ್ಯೂನಿಸ್ಟ್ ಖೈದಿಗಳು ಸಿಗುತ್ತಾರೆ. ಹಾಗೆಯೆ ಇವರು ಮಾರ್ಕಿಸ್ಟ್ ನ ಸಾಹಿತ್ಯವನ್ನು ಓದಲು ಪ್ರಾರಂಭ ಮಾಡುತ್ತಾರೆ. ಇದರ ಪ್ರಭಾವದಿಂದ, ಇವರ ಹೊರಜಗತ್ತಿನ ನೋಟದಲ್ಲಿ ಬದಲಾವಣೆ ಆರಂಭವಾಗುತ್ತದೆ. ಇವರು ೧೯೩೬ ರಲ್ಲಿ ಪಕ್ಷದ ಸದಸ್ಯತ್ವ ಪಡೆಯಲು ಜೈಲಿನಿಂದಲೇ ಅರ್ಜಿ ಸಲ್ಲಿಸುತ್ತಾರೆ. ಇವರು ೧೯೪೨[]ರಲ್ಲಿ ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿ ನೊಂದಾಯಿಸಿಕೊಳ್ಳುತ್ತಾರೆ.


ಇವರು ೧೯೪೬ರಲ್ಲಿ ಕಾರಗೃಹದಿಂದ ಬಿಡುಗಡೆಯಾದ ನಂತರ ತಮಗೆ ಕಾರ್ಮಿಕ ಸಂಘ ಒಕ್ಕೂಟದಲ್ಲಿ ಕಾರ್ಯಭಾರ ನಿಭಾಯಿಸುವ ಹೊಣೆಯನ್ನು ನೀಡಿರೆಂದು ಪಕ್ಷಕ್ಕೆ ಕೇಳುತ್ತಾರೆ. ನಂತರ ಇವರು ಬಹು ನಿಷ್ಟೆ ವಿಶಿಷ್ಟತೆಯ ಉತ್ಸಾಹದಿಂದ ತಮ್ಮ ಈ ಕಾರ್ಯವನ್ನು ನಿಭಾಯಿಸುತ್ತಾರೆ. ೧೯೪೮ರಲ್ಲಿ ಇವರು ಅಖಿಲ ಭಾರತ ಕಾರ್ಮಿಕ ಒಕ್ಕೂಟ ಕಾಂಗ್ರೆಸ್ (ಎಐಟಿಯುಸಿ)ನ ಪಂಜಾಬ್ ಘಟಕದ ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ.

೧೯೪೮ರ ಜನವರಿ ತಿಂಗಳಿನಲ್ಲಿ, ಕಿಶೋರಿಲಾಲ್ ರವರು ಸೇರಿದಂತೆ ಸುಮಾರು ೧೫೦೦ ಜನ ಸದಸ್ಯರು ಪಂಜಾಬ್ ಘಟಕದ ಭಾರತೀಯ ಕಮ್ಯೂನಿಸ್ಟ್ ಪಕ್ಷದಿಂದ ಬೇರ್ಪಟ್ಟು, ಲಾಲ್ ಕಮ್ಯೂನಿಸ್ಟ್ ಪಾರ್ಟಿ ಹಿಂದ್ ಯೂನಿಯನ್ ನನ್ನು ಸ್ಥಾಪಿಸಿಕೊಳ್ಳುತ್ತಾರೆ. ಇವರ ಪಕ್ಷವು ಪಂಜಾಬಿನ ಪೆಪ್ಸು ಪ್ರಾಂತದಲ್ಲಿ ಆಕ್ರಮಣಕಾರಿ ಕೃಷಿಕ ಹೋರಾಟಗಳನ್ನು ಹತ್ತಿಕ್ಕುತ್ತದೆ. ಸರಿ ಸುಮಾರು ೪ ವರ್ಷಗಳ ನಂತರ, ಇವರ ಲಾಲ್ ಕಮ್ಯೂನಿಸ್ಟ್ ಪಕ್ಷವು ೧೯೫೨[] ರ ಜುಲೈ ತಿಂಗಳಿನಲ್ಲಿ ತನ್ನ ಮಾತೃ ಪಕ್ಷಕ್ಕೆ ಪುನರ್ಮಿಲನವಾಗುತ್ತದೆ.

೧೯೫೨ರ ಪ್ರಾರಂಭದಲ್ಲಿ ಕಿಶೋರಿ ಲಾಲ್ ರವರು ಪೋರ್ಚುಗೀಸರ ಹಿಡಿತದಲ್ಲಿದ್ದ[] ಗೋವಾದ ವಿಮೋಚನೆ ಚಳುವಳಿಯಲ್ಲಿ ಭಾಗವಹಿಸುತ್ತಾರೆ. ಇವರು ಹಲವು ವರ್ಷ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕಿಸ್ಟ್)ದಲ್ಲಿ ಪಂಜಾಬ್ ರಾಜ್ಯ ಮಟ್ಟದ ಸಮಿತಿಯ ಸದಸ್ಯರಾಗಿರುತ್ತಾರೆ. ಇವರು ನಂತರದ ವರ್ಷಗಳಲ್ಲಿ ಜಲಂದರ್ [] ನ ಪಂಜಾಬ್ ಬುಕ್ ಸೆಂಟರಿನ ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಇವರು ಜಲಂಧರ್ ನಲ್ಲಿರುವ ದೇಶ್ ಭಗತ್ ಯಾದ್ಗಾರ್ ಸಮಿತಿಯಲ್ಲೂ ಸಕ್ರಿಯರಾಗಿರುತ್ತಾರೆ.

ಇವರು ೧೧ನೇ ಜುಲೈ ೧೯೯೦ ರಂದು ರಸ್ತೆ ಅಪಘಾತವೊಂದರಲ್ಲಿ ಜಲಂಧರ್ ನ ಆಸ್ಪತ್ರೆಯಲ್ಲಿ ನಿಧನರಾಗುತ್ತಾರೆ. []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Waraich, Malwinderjit Singh; Sidhu, Gurdev Singh (2005). The hanging of Bhagat Singh : complete judgement and other documents v.1-4. Chandigarh: Unistar.
  2. ೨.೦ ೨.೧ ೨.೨ ೨.೩ Charan Singh Virdi (2005). Memoirs: 25 Communist Freedom Fighters. Delhi: People's Democracy Press. pp. 55–58.
  3. Waraich, Malwinderjit Singh; Sidhu, Gurdev Singh, eds. (2005). The Hanging of Bhagat Singh: Complete Judgement and Other Documents v. 1-4. Chandigarh: Unistar.
  4. Charan Singh Virdi (2005). Memoirs: 25 Communist Freedom Fighters. Delhi: People's Democracy. pp. 55–58.
  5. ೫.೦ ೫.೧ Sidhu, Ajmer (2013). Baba Bujha Singh: An Untold Story. Barnala: Tarkbharti Prakashan.