ಕಿರಣ್ ದೇಸಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Kiran Desai
Kiran Desai, 2007
ಜನನ (1971-09-03) ಸಪ್ಟೆಂಬರ್ ೩, ೧೯೭೧(ವಯಸ್ಸು ೪೫)
New Delhi, India
ವೃತ್ತಿ Novelist
ರಾಷ್ಟ್ರೀಯತೆ Indian
ಕಾಲ 1998 to present
ಪ್ರಮುಖ ಕೆಲಸ(ಗಳು) The Inheritance of Loss

ಕಿರಣ್ ದೇಸಾಯಿ (3 ಸೆಪ್ಟೆಂಬರ್ 1971ರಂದು ಜನಿಸಿದ್ದು)[೧] ಕಿರಣ್ ದೇಸಾಯಿ ಭಾರತೀಯ ಲೇಖಕಿ, ಭಾರತದ ಪೌರರಾದರೂ ಅವರು ಯುನೈಟೆಡ್ ಸ್ಟೇಟ್ಸ್ ನ ಖಾಯಂ ನಿವಾಸಿ. ದಿ ಇನ್‌ಹರಿಟೆನ್ಸ್ ಆಫ್ ಲಾಸ್ ಎನ್ನುವ ಅವರ ಕಾದಂಬರಿ 2006ಮ್ಯಾನ್ ಬೂಕರ್ ಪ್ರೈಜ್[೧] ಮತ್ತು ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ನ ಫಿಕ್ಷನ್ ಅವಾರ್ಡ್ ಅನ್ನು ಗೆದ್ದುಕೊಂಡಿತು. ಇವರು ಪ್ರಖ್ಯಾತ ಲೇಖಕಿ ಅನಿತಾ ದೇಸಾಯಿ ಅವರ ಪುತ್ರಿ.

ಜೀವನ ಚರಿತ್ರೆ[ಬದಲಾಯಿಸಿ]

ಕಿರಣ್ ದೇಸಾಯಿ ಜನಿಸಿದ್ದು ಭಾರತನ್ಯೂ ಡೆಲ್ಲಿ ಯಲ್ಲಿ, ಮತ್ತು ಅವರು ತಮ್ಮ 14 ವಯಸಿನವರಿಗೂ ಅಲ್ಲಿ ವಾಸವಿದ್ದರು. ಇಂಗ್ಲೆಂಡ್ ನಲ್ಲಿ ಒಂದು ವರ್ಷ ಬಾಳುವೆ ಮಾಡಿದ ತಾಯಿ ಮಗಳು ಆನಂತರ ಯುನೈಟೆಡ್ ಸ್ಟೇಟ್ಸ್ ಗೆ ಅಂತಿಮವಾಗಿ ತೆರಳಿದರು ಮತ್ತು ಅಲ್ಲಿ ಕಿರಣ್ ದೇಸಾಯಿ ಹಾಲಿನ್ಸ್ ಯುನಿವರ್ಸಿಟಿಬೆನ್ನಿಂಗ್ಟನ್ ಕಾಲೇಜ್ ನಲ್ಲಿ ಹಾಗೂ ಕೊಲ್ಲಂಬಿಯಾ ಯುನಿವರ್ಸಿಟಿಯಲ್ಲಿ ಸೃಜನಾತ್ಮಕ ಬರವಣಿಗೆಯನ್ನು ಅಧ್ಯಯನ ಮಾಡಿದರು.[೨]

ಜನವರಿ 2010ರಲ್ಲಿ, ನೋಬೆಲ್ ಪುರಸ್ಕೃತ ಓರ್ಹಾನ್ ಪಾಮುಕ್ ತಾನು ಕಿರಣ್ ದೇಸಾಯಿ ಅವರೊಂದಿಗೆ ಸಂಬಂದ್ಧವನ್ನು ಹೊಂದಿರುವುದಾಗಿ ಘೋಷಿಸಿದರು.[೩]

ಕೃತಿಗಳು[ಬದಲಾಯಿಸಿ]

1998ರಲ್ಲಿ ಪ್ರಕಟಗೊಂಡ ತನ್ನ ಮೊದಲ ಕಾದಂಬರಿ ಹುಲ್ಲಾಬಲೂ ಇನ್ ದಿ ಗೋವಾ ಆರ್ಕಾರ್ಡ್ ಗೆ ಸಲ್ಮಾನ್ ರಷ್ದೀಯಂಥ ಪ್ರಖ್ಯಾತರಿಂದ ಪ್ರಶಸ್ತಿ ದಾನವಿಧಿ ಯನ್ನು ಪಡೆದರು.[೪] ಇದೇ ಕಾದಂಬರಿಗೆ, 35 ವರ್ಷದವನೊಳಗಿನ ಕಾಮನ್‌ವೆಲ್ಥ್ ರಾಷ್ತ್ರಗಳ ಪೌರರಿಗೆ ಸಲ್ಲುವ, ಶ್ರ‍ೇಷ್ಟ ಕಾದಂಬರಿಗಳಿಗೆ ಸೊಸೈಟಿ ಆಫ್ ಆಥರ್ಸ್ ನವರು ಕೊಡಮಾಡುವ ಬೆಟ್ಟಿ ಟ್ರಾಸ್ಕ್ ಅವಾರ್ಡ್[೫] ಅನ್ನು ಗೆದ್ದುಕೊಂಡರು.[೬]

ಕಿರಣ್ ದೇಸಾಯಿ ಅವರ ಎರಡನೆಯ ಪುಸ್ತಕ, ದಿ ಇನ್‌ಹರಿಟೆನ್ಸ್ ಆಫ್ ಲಾಸ್, (2006), ಏಷಿಯಾ, ಯೂರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ವಿಮರ್ಶಕರು ಗಳಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು ಮತ್ತು 2006ರ ಮ್ಯಾನ್ ಬೂಕರ್ ಪ್ರೈಜ್[೧] ಹಾಗೂ 2006ರ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ನ ಫಿಕ್ಷನ್ ಅವಾರ್ಡ್ ಅನ್ನು ಸಹಿತ ಪಡೆದುಕೊಂಡಿತು.[೭]ಸೆಪ್ಟೆಂಬರ್ 2007ರಲ್ಲಿ BBC ರೇಡಿಯೋ 3ರಲ್ಲಿ ಮೈಖೇಲ್ ಬರ್ಕ್ಲೀ ನಡೆಸಿಕೊಟ್ಟ ಸಂಗೀತದ ಜೀವಿತಕಥೆಯ ಬಗೆಗಿನ ಚರ್ಚೆ ಪ್ರೈವೇಟ್ ಪ್ಯಾಷನ್ಸ್ ನಲ್ಲಿ ಅತಿಥಿಯಾಗಿ ಕಿರಣ್ ದೇಸಾಯಿ ಭಾಗವಹಿಸಿದ್ದರು.[೮] ಮೇ 2007ರಲ್ಲಿ ನಡೆದ ಏಷಿಯಾ ಹೌಸ್ ಆಫ್ ಫೆಸ್ಟೀವಲ್ ಆಫ್ ಏಷಿಯನ್ ಲಿಟರೇಚರ್ ನ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯ ಲೇಖಕಿಯಾಗಿದ್ದರು.

ಗ್ರಂಥಸೂಚಿ[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ೧.೦ ೧.೧ ೧.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  3. 'ಪಮುಖ: ಇಟ್ಸ್ ನೋ ಸೀಕ್ರೆಟ್, ಕಿರಣ್ ಇಸ್ ಮೈ ಗರ್ಲ್‌ಫ್ರೆಂಡ್', ಟೈಮ್ಸ್ ಆಫ್ ಇಂಡಿಯಾ , 1 ಫೆಬ್ರವರಿ 2010.
  4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  8. BBC - ರೇಡಿಯೋ 3 - ಪ್ರೈವೇಟ್ ಪ್ಯಾಷನ್ಸ್

ಬಾಹ್ಯ ಕೊಂಡಿಗಳು[ಬದಲಾಯಿಸಿ]