ವಿಷಯಕ್ಕೆ ಹೋಗು

ಕಿನ್ನರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಿನ್ನರಿ ಇಂದ ಪುನರ್ನಿರ್ದೇಶಿತ)
ಕಿನ್ನರನ ಪ್ರತಿಮೆ

ಹಿಂದೂ ಪುರಾಣದಲ್ಲಿ, ಕಿನ್ನರನು ದೃಷ್ಟಾಂತಿಕ ಪ್ರೇಮಿ, ಸ್ವರ್ಗದ ಸಂಗೀತಗಾರ, ಅರ್ಧ ಮನುಷ್ಯ ಮತ್ತು ಅರ್ಧ ಅಶ್ವ. ಆಗ್ನೇಯ ಏಷ್ಯಾದಲ್ಲಿ, ಎರಡು ಅತ್ಯಂತ ಅಚ್ಚುಮೆಚ್ಚಿನ ಪೌರಾಣಿಕ ಪಾತ್ರಗಳೆಂದರೆ ಕಿನ್ನರ ಮತ್ತು ಕಿನ್ನರಿ ಎಂದು ಕರೆಯಲ್ಪಡುವ ಪರೋಪಕಾರಿ ಅರ್ಧ ಮನುಷ್ಯ, ಅರ್ಧ ಪಕ್ಷಿಯಾದ ಜೀವಿಗಳು. ಇವರು ಹಿಮಾಲಯದಿಂದ ಬಂದು ಹಲವುವೇಳೆ ತೊಂದರೆ ಅಥವಾ ಅಪಾಯದ ಸಮಯದಲ್ಲಿ ಮಾನವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ಅವರ ಲಕ್ಷಣವನ್ನು ಮಹಾಭಾರತದ ಆದಿಪರ್ವದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಹೀಗೆ ಹೇಳಲಾಗಿದೆ:

ನಾವು ಶಾಶ್ವತ ಪ್ರೇಮಿ ಮತ್ತು ಪ್ರೀತಿಪಾತ್ರರು. ನಾವು ಎಂದೂ ಬೇರೆಯಾಗುವುದಿಲ್ಲ. ನಾವು ಚಿರಕಾಲವೂ ಪತಿ ಮತ್ತು ಪತ್ನಿಯರು; ಎಂದೂ ನಾವು ತಾಯಿ ಮತ್ತು ತಂದೆ ಆಗುವುದಿಲ್ಲ. ನಮ್ಮ ಮಡಿಲಲ್ಲಿ ಯಾವ ಸಂತತಿಯೂ ಕಾಣಿಸುವುದಿಲ್ಲ. ನಾವು ಎಂದೆಂದಿಗೂ ಅಪ್ಪಿಕೊಂಡಿರುವ ಪ್ರೇಮಿ ಮತ್ತು ಪ್ರೀತಿಪಾತ್ರರು. ನಮ್ಮ ನಡುವೆ ಅಕ್ಕರೆಯನ್ನು ಬೇಡುವ ಯಾವುದೇ ಮೂರನೇ ಜೀವಿಗೆ ಅವಕಾಶವಿಲ್ಲ. ನಮ್ಮ ಜೀವನವು ಶಾಶ್ವತ ಸಂತೋಷದ ಜೀವನ.[]

ಸಂಸ್ಕೃತ ಭಾಷೆಯಲ್ಲಿ, ಕಿನ್ನರ ಎಂಬ ಹೆಸರು ಪ್ರಶ್ನಚಿಹ್ನೆಯನ್ನು ಹೊಂದಿರುತ್ತದೆ (ಕಿನ್ನರ?) ಅಂದರೆ ಇದು ಮನುಷ್ಯವೇ? ಹಿಂದೂ ಪುರಾಣದಲ್ಲಿ, ಕಿನ್ನರನನ್ನು ಅರ್ಧ ಮನುಷ್ಯ, ಅರ್ಧ ಅಶ್ವ, ಮತ್ತು ಅರ್ಧ ಪಕ್ಷಿ ಎಂದು ವರ್ಣಿಸಲಾಗಿದೆ. ವಿಷ್ಣುಧರ್ಮೋತ್ತರವು ಕಿನ್ನರನನ್ನು ಅರ್ಧ ಮನುಷ್ಯ ಮತ್ತು ಅರ್ಧ ಅಶ್ವವೆಂದು ವರ್ಣಿಸಿದೆ, ಆದರೆ ಬೌದ್ಧರು ತಿಳಿದುಕೊಂಡಂತೆ ಕಿನ್ನರನ ಸರಿಯಾದ ಸ್ವರೂಪವೆಂದರೆ ಅರ್ಧ ಮನುಷ್ಯ ಮತ್ತು ಅರ್ಧ ಪಕ್ಷಿ. ಆದರೆ, ಬೋಧ್ ಗಯಾದ ಶಿಲ್ಪಗಳಲ್ಲಿ ಚಿತ್ರಿತವಾದ ಕುದುರೆಯ ಮುಖವಿರುವ ಯಕ್ಷನ ಆಕೃತಿಯು ಕಿನ್ನರಿಯದು ಏಕೆಂದರೆ ಅದನ್ನು ವಿವರಿಸುವ ಜಾತಕವು ಅವಳನ್ನು ಅರ್ಧದೇವತೆ ಎಂದು ಪರಿಗಣಿಸುತ್ತದೆ. ಜಾತಕಗಳ ಪ್ರಕಾರ, ಕಿನ್ನರಿಯರು ಯಕ್ಷಿಣಿಯರು ಮತ್ತು ಇವರನ್ನು ಜೋಡಿಯಾಗಿ ಹೋಗುತ್ತಿರುವಂತೆ ತೋರಿಸಲಾಗುತ್ತದೆ. ಇವರನ್ನು ಪರಸ್ಪರ ಪ್ರೀತಿ ಮತ್ತು ಭಕ್ತಿಗಾಗಿ ಗುರುತಿಸಲಾಗಿದೆ. ಚಂದ ಕಿನ್ನರ ಜಾತಕದಲ್ಲಿ ತನ್ನ ಗಾಯಗೊಂಡ ಕಿನ್ನರ ಪತಿಯ ಪ್ರತಿ ಕಿನ್ನರಿಯ ಪ್ರೀತಿಯು ಆ ಕಿನ್ನರನ ಗಾಯವನ್ನು ಗುಣಮಾಡಲು ಘಟನೆಯ ಸ್ಥಳಕ್ಕೆ ಇಂದ್ರನನ್ನು ಕರೆತರುತ್ತದೆ. ಕಿನ್ನರರನ್ನು ಅವರ ದೀರ್ಘ ಜೀವಿತಾವಧಿಗಾಗಿ ಗುರುತಿಸಲಾಗಿದೆ. ಕಿನ್ನರರು ಮುಗ್ಧರು ಮತ್ತು ನಿರುಪದ್ರವಿಗಳು, ಪಕ್ಷಿಗಳಂತೆ ಕುಪ್ಪಳಿಸುವವರು, ಸಂಗೀತ ಮತ್ತು ಗಾಯನವನ್ನು ಇಷ್ಟಪಡುವವರು, ಮತ್ತು ಹೆಣ್ಣು ಡೋಲನ್ನು ಬಾರಿಸುತ್ತಿದ್ದರೆ ಗಂಡು ಲೂಟ್ ವಾದ್ಯವನ್ನು ನುಡಿಸುತ್ತದೆ ಎಂದು ಜಾತಕಗಳು ವರ್ಣಿಸುತ್ತವೆ. ಅಂತಹ ನಿರುಪದ್ರವಿ ಜೀವಿಗಳನ್ನು ಸೆರೆಹಿಡಿದು, ಪಂಜರಗಳಲ್ಲಿ ಹಾಕಿ, ಹಾಗೆಯೇ ರಾಜರಿಗೆ ಅವರ ಸಂತೋಷಕ್ಕಾಗಿ ಉಡುಗೊರೆ ನೀಡಲಾಯಿತು ಎಂದು ಜಾತಕ ಸಂ. ೪೮೧ರಲ್ಲಿ ವರ್ಣಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Ghosh, Subodh (2005). Love stories from the Mahabharata, transl. Pradip Bhattacharya. New Delhi: Indialog. p. 71


"https://kn.wikipedia.org/w/index.php?title=ಕಿನ್ನರ&oldid=888343" ಇಂದ ಪಡೆಯಲ್ಪಟ್ಟಿದೆ