ವಿಷಯಕ್ಕೆ ಹೋಗು

ಕಾವೂರು ಮಹಾವಿಷ್ಣು ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವೂರು ಮಹಾವಿಷ್ಣು ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದೆ. ಈ ಕ್ಷೇತ್ರದಲ್ಲಿ ಮಹಾವಿಷ್ಣು ದೇವರನ್ನು ಆರಾಧಿಸುತ್ತಾರೆ.

ಪುರಾಣ

[ಬದಲಾಯಿಸಿ]

ಈ ಸ್ಥಳವನ್ನು ಕಾವವನ ಊರು ಕಾವೂರು ಎಂದು ಕರೆಯುತ್ತಾರೆ. ಈಗ ಶ್ರೀ ಮಹಾವಿಷ್ಣು ದೇವಸ್ಥಾನವಿರುವ ಸ್ಥಳದ ಆಸುಪಾಸು ಹಿಂದೆ ಕೊಟ್ಟಡ್ಕಮೂಲೆಯಿಂದ ಕಾವೇರಿಗದ್ದೆ ಹೊಳೆಬದಿಯವರೆಗೆ ಕಾವೇರಿ ಎಂಬವಳಿಗೆ ಅಕ್ಕು ಬಳ್ಳಾಳ್ತಿಯರ ಹಿರಿಯರು ಉಂಬಳಿಕೊಟ್ಟ ಸ್ಥಳವಾಗಿದೆ. ಹಿಂದೆ ಶ್ರೀ ದೇವಳವು ಈಗಿರುವ ಸ್ಥಳದಿಂದ ಪಶ್ಚಿಮದ ಶಾಂತಿರ್ಪಣೆ ಗುಡ್ಡೆಯಲ್ಲಿತ್ತೆಂದು ಹೇಳಲಾಗುತ್ತದೆ. ಕಾವೂರು ಎಂಬುದು ದೇವಸ್ಥಾನಕ್ಕಷ್ಟೇ ಸೀಮಿತವಾಗಿದೆ. ಈ ಸ್ಥಳಕ್ಕೆ ಗೂಡಂಬೆ ಎಂಬ ಹೆಸರು ಕೂಡ ಇದೆ.[]

ಇತಿಹಾಸ

[ಬದಲಾಯಿಸಿ]

ಕಾವೂರು ಶ್ರೀ ಮಹಾವಿಷ್ಣು ದೇವಾಲಯವು ಬಯಲು ಪ್ರದೇಶದಲ್ಲಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಜೀರ್ಣಾವಸ್ಥೆಯಲ್ಲಿದ್ದ ಕಾಲದಲ್ಲಿ ಎರಡು ಪ್ರಕಾರಗಳನ್ನು ಹೊಂದಿದ್ದ ಕುರುಹುಗಳಿದ್ದವು. ೧೯೩೪ ರಲ್ಲಿ ಜೀರ್ಣೋದ್ಧಾರಗೊಂಡಾಗ ಗರ್ಭಗುಡಿ ಮಾತ್ರವಿದ್ದುದ್ದರಿಂದ ತೀರ್ಥಮಂಟಪವನ್ನು ನಿರ್ಮಿಸಲಾಗಿದೆ.ಆದರೆ ಬಲಿಪೀಠ ಮತ್ತು ಧ್ವಜಸ್ತಂಭ ದಂಬೆ ಕಲ್ಲುಗಳಿದ್ದುದ್ದರಿಂದ ಇಲ್ಲಿ ಮುಂದೆ ರಥೋತ್ಸವ ನಡೆಯುತ್ತಿದ್ದಿರಬಹುದೆಂದು ನಂಬಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಹತ್ತಿರದಲ್ಲಿ ತೇರ್ತೆಮಜಲು ಎಂಬ ಸ್ಥಳವಿದೆ.ಈ ದೇವಸ್ಥಾನದ ಗರ್ಭಗುಡಿಗೆ ಹಿಂದೆ ಎಡನಾಳಿ ಇರಲಿಲ್ಲ. ತೀರ್ಥಸ್ಥಳದಲ್ಲಿ ತೀರ್ಥಜಲಕ್ಕೆ ಬಾವಿ ಇದೆ.[]

ಉತ್ಸವ

[ಬದಲಾಯಿಸಿ]

ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವವು ಮೀನಮಾಸ ೧೮ ರಿಂದ ೨೯ ರ ತನಕ ಜರುಗುತ್ತದೆ. ಜಾತ್ರೆ ಸಮಯದಲ್ಲಿ ಮಿನುಂಗೂರರು ಶ್ರೀ ದುರ್ಗಾಪರಮೇಶ್ವರಿ,ಶ್ರೀ ರೆಂಜಾಳ ಸದಾಶಿವ ಮಹಾಗಣಪತಿ, ತೋಟಚಾವಡಿ ಉಳ್ಳಾಕುಲು- ನಾಯರ್ ದೈವಗಳು, ಮುಂಡೋಡಿಯ ಶಿರಾಡಿ(ರಾಜನ್) ದೈವ - ಶ್ರೀ ಕಾವೂರು ಮಹಾವಿಷ್ಣು ದೇವರೊಂದಿಗೆ ಸೇರುವ ಸಂಪ್ರದಾಯವಿದೆ. ಹಾಗಾಗಿ ಕಾವೂರು ಪಂಚಸ್ಥಾಪನೆಯ ಕೇಂದ್ರವೆಂದು ಕರೆಯುತ್ತಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. `ಕೌಸ್ತುಭ'- ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಸಂಚಿಕೆ
  2. ವಿನುಂಗೂರು ರೆಂಜಾಳ ಕ್ಷೇತ್ರ ಪರಿಚಯ, ಲೇಖಕರು-ಕೆ.ಜೆ. ರೈ
  3. ಕೆಲವು ಸ್ಥಳ ನಾಮಗಳ ವಿಶೇಷತೆಗಳು, ಲೇಖಕರು-ಜಗನ್ಮೋಹನ ರೈ ರೆಂಜಾಳ