ವಿಷಯಕ್ಕೆ ಹೋಗು

ಕಾಲಿಬಂಗಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದುರ್ಗ ಎಂದು ಕರೆಯಲ್ಪಡುವ ಕಾಲಿಬಂಗಾದ ಪಶ್ಚಿಮ ದಿಬ್ಬ

ಕಾಲಿಬಂಗಾ ರಾಜಸ್ಥಾನದಲ್ಲಿ ಘಗ್ಗರ್ ನದಿಯ ಎಡ ಅಥವಾ ದಕ್ಷಿಣ ತಟದಲ್ಲಿ ಸ್ಥಿತವಾಗಿರುವ ಒಂದು ಪಟ್ಟಣ. ಕಾಲಿಬಂಗಾ ಸಿಂಧೂತಟದ ನಾಗರೀಕತೆಯ ಒಂದು ಪ್ರಮುಖ ಪ್ರಾಂತೀಯ ರಾಜಧಾನಿಯಾಗಿತ್ತು. ಕಾಲಿಬಂಗಾ ಅದರ ಅನನ್ಯ ಅಗ್ನಿ ಬಲಿಪೀಠಗಳು ಮತ್ತು ವಿಶ್ವದ ಅತ್ಯಂತ ಮುಂಚಿನ ದೃಢೀಕರಿಸಲಾದ ಉತ್ತ ಹೊಲ ಹೊಂದಿರುವುದರಿಂದ ಭಿನ್ನವಾಗಿದೆ.[೧] ಎರಡು ಪ್ರಾಚೀನ ದಿಬ್ಬಗಳನ್ನು ಉತ್ಖನನ ಮಾಡಲಾಯಿತು, ಮತ್ತು ಅರ್ಧ ಕಿ.ಮಿ. ಗಿಂತ ಹೆಚ್ಚು ಸ್ಥಳದಲ್ಲಿ ಹರಡಿದ್ದವು. ಪಶ್ಚಿಮ ಬದಿಯಲ್ಲಿ ೯ ಮೀಟರ್ ಎತ್ತರದ ಸಣ್ಣ ದಿಬ್ಬವಿದೆ ಮತ್ತು ದುರ್ಗ ಎಂದು ಕರೆಯಲ್ಪಡುತ್ತದೆ. ಪೂರ್ವ ದಿಬ್ಬ ಹೆಚ್ಚು ಎತ್ತರ ಮತ್ತು ದೊಡ್ಡದಿದೆ, ಮತ್ತು ಕೆಳ ನಗರವೆಂದು ಕರೆಯಲ್ಪಡುತ್ತದೆ. ಉತ್ಖನನವು ಅನಿರೀಕ್ಷಿತವಾಗಿ ಸಂಸ್ಕೃತಿಗಳ ದುಪ್ಪಟ್ಟು ಅನುಕ್ರಮವನ್ನು ಬೆಳಕಿಗೆ ತಂದಿತು. ಇವುಗಳಲ್ಲಿ ಮೇಲಿನದು ಮಹಾನಗರದ ವಿಶಿಷ್ಟ ಜಾಲರಿ ವಿನ್ಯಾಸವನ್ನು ತೋರಿಸುತ್ತದೆ, ಹಾಗಾಗಿ ಹರಪ್ಪನ್ ಕಾಲಕ್ಕೆ ಸೇರಿದೆ. ಕೆಳಗಿನದನ್ನು ಪೂರ್ವ ಹರಪ್ಪನ್ ಕಾಲದ್ದು ಎಂದು ಕರೆಯಲಾಗಿದೆ.

ಈ ಘಟ್ಟದಲ್ಲಿ, ಸ್ವಾಮ್ಯದ ಆರಂಭದಿಂದ ಸ್ಥಳವು ಒಣಗಿಸಿದ ಮಣ್ಣಿನ ಇಟ್ಟಿಗೆಗಳ ಬಳಕೆಯಿಂದ ರಕ್ಷಿತವಾಗಿತ್ತು. ಈ ಕೋಟೆಯನ್ನು ಭಿನ್ನ ಕಾಲಗಳಲ್ಲಿ ಎರಡು ಸಲ ಕಟ್ಟಲಾಗಿತ್ತು. ಮುಂಚೆ, ಕೋಟೆಯ ಗೋಡೆ ೧.೯ ಮೀಟರ್ ದಪ್ಪವಾಗಿತ್ತು, ಇದನ್ನು ಈ ಘಟ್ಟದಲ್ಲಿನ ಪುನರ್ನಿರ್ಮಾಣದಲ್ಲಿ ೩.೭-೪.೧ ಮೀಟರ್‍ಗೆ ಏರಿಸಲಾಗಿತ್ತು. ಇಟ್ಟಿಗೆಯ ಗಾತ್ರ ಎರಡೂ ನಿರ್ಮಾಣ ಹಂತಗಳಲ್ಲಿ 20 × 20 × 10 ಸೆ.ಮಿ. ಆಗಿತ್ತು. ದುರ್ಗದ ದಿಬ್ಬ ಒಂದು ಸಮಾಂತರ ಚತುರ್ಭುಜವಾಗಿದೆ, ಪೂರ್ವ ಪಶ್ಚಿಮ ಅಕ್ಷದಲ್ಲಿ ಸುಮಾರು ೧೩೦ ಮೀಟರ್‍ನಷ್ಟು ಮತ್ತು ಉತ್ತರ-ದಕ್ಷಿಣದಲ್ಲಿ ೨೬೦ ಮೀಟರ್‍ನಷ್ಟು. ಪಟ್ಟಣದ ಯೋಜನೆ ಮೋಹನ್‍ಜೋದಡೊ ಅಥವಾ ಹರಪ್ಪದಂತೇಯೇ ಇತ್ತು. ಮನೆಗಳ ದಿಕ್ಕು ಮತ್ತು ಇಟ್ಟಿಗೆಯ ಗಾತ್ರಗಳು ಹರಪ್ಪನ್ ಘಟ್ಟದಲ್ಲಿ ಬಳಸಲಾದದ್ದಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿದೆ. ಗೋಡೆಯಿಂದ ಆವೃತವಾದ ಪ್ರದೇಶದಲ್ಲಿ, ಮನೆಗಳನ್ನೂ ಕೋಟೆಯ ಗೋಡೆಯಲ್ಲಿ ಬಳಸಲಾದದ್ದಷ್ಟೇ ಸಮಾನ ಗಾತ್ರದ ಮಣ್ಣಿನ ಇಟ್ಟಿಗೆಗಳಿಂದ ಕಟ್ಟಲಾಗಿತ್ತು; ಸುಟ್ಟ ಇಟ್ಟಿಗೆಗಳ ಬಳಕೆಯು ಮನೆಗಳಲ್ಲಿ ಚರಂಡಿ, ಸುಣ್ಣದ ಗಿಲಾವಿನಿಂದ ಒಳಪದರ ಕೊಟ್ಟ ಒಲೆಗಳು ಮತ್ತು ಸಿಲಿಂಡರಾಕಾರದ ಹೊಂಡಗಳ ಅವಶೇಷಗಳಿಂದ ದೃಢಪಟ್ಟಿದೆ. ಕೆಲವು ಸುಟ್ಟ ಬೆಣೆ ಆಕಾರದ ಇಟ್ಟಿಗೆಗಳೂ ಸಿಕ್ಕಿವೆ.

ಕಾಲಿಬಂಗಾದಲ್ಲಿ ಉತ್ಖನನದಿಂದ ಬಹಿರಂಗಗೊಂಡ ಅತ್ಯಂತ ಮುಂಚಿನ ಉತ್ತ ಕೃಷಿ ಭೂಮಿ ಇದ್ದ ಸಾಕ್ಷ್ಯಾಧಾರವಿದೆ. ಇದು ಪೂರ್ವ ಹರಪ್ಪನ್ ಸ್ಥಳದ ಆಗ್ನೇಯದಲ್ಲಿ ಸಿಕ್ಕಿದೆ, ಕೋಟೆಯ ಹೊರಗೆ. ಇದು ಉಕ್ಕೆಸಾಲುಗಳ ಜಾಲರಿ ಮಾದರಿಯನ್ನು ತೋರಿಸುತ್ತದೆ. ಇವು ಸುಮಾರು ೩೦ ಸೆ.ಮಿ. ದೂರ ಸ್ಥಾಪಿತವಾಗಿವೆ. ಈ ಮಾದರಿ ಈಗಲೂ ಅನುಸರಿಸಲಾಗುವುದನ್ನು ಗಣನೀಯವಾಗಿ ಹೋಲುತ್ತದೆ. ಇಂದೂ ಕೂಡ, ಈ ಪ್ರದೇಶದಲ್ಲಿ ಹೋಲುವ ಉಳುಮೆಯನ್ನು ಎರಡು ಏಕಕಾಲದ ಬೆಳೆಗಳಿಗೆ ಬಳಸಲಾಗುತ್ತದೆ, ವಿಶೇಷವಾಗಿ ಸಾಸಿವೆ ಹಾಗೂ ಬೇಳೆಕಾಳುಗಳು. ಸಂರಕ್ಷಣೆಗಾಗಿ, ಈ ಉತ್ಖನನ ಮಾಡಿದ ಉತ್ತ ಹೊಲದ ಪ್ರದೇಶವನ್ನು ಪುನಃ ತುಂಬಿ, ಪ್ರದೇಶವನ್ನು ಕಾನ್‍ಕ್ರೀಟ್ ಕಂಬಗಳಿಂದ ಗುರುತು ಮಾಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Lal, BB (2003). Excavations at Kalibangan, the Early Harappans, 1960-1969. Archaeological Survey of India. pp. 17, 98.