ಕಾರ್ಲ್ ಅಲೆಕ್ಸ್ ಮುಲ್ಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಅಲೆಕ್ಸ್ ಮುಲ್ಲರ್
ಜನನ
ಕಾರ್ಲ್ ಅಲೆಕ್ಸ್ ಮುಲ್ಲರ್

೧೯೨೭ ಏಪ್ರಿಲ್ ೨೦
ಬಾಸೆಲ್‌

ಸ್ವಿಟ್ಝರ್‌ಲೆಂಡಿನ ಭೌತವಿಜ್ಞಾನಿಯಾಗಿದ್ದ ಕಾರ್ಲ್ ಆಲೆಕ್ಸ್ ಮುಲ್ಲರ್‌ರವರು ೧೯೨೭ರ ಏಪ್ರಿಲ್ ೨೦ರಂದು ಬಾಸೆಲ್‌ನಲ್ಲಿ ಜನಿಸಿದರು. ಮುಲ್ಲರ್‌ರವರು ಝೂರಿಚ್‌ನಲ್ಲಿದ್ದ ಐ.ಬಿ.ಎಮ್. ಕಂಪೆನಿಯ ಸಂಶೋಧಕರಾಗಿದ್ದರು. ಅಲ್ಲಿ ಅವರು ಅಲ್ಲಿ ಅವರು ಸಿರ್ಯಾಮಿಕ್‌ಗಳ ವಿದ್ಯುತ್ ಸ್ವಭಾವಗಳ ಅಧ್ಯಯನ ನಡೆಸಿದರು. ನಂತರ ೧೯೮೬ರ ಏಪ್ರಿಲ್ ತಿಂಗಳಲ್ಲಿ ಯೋಹಾನ್ನೆಸ್ ಗಿಯೋರ್ಗ್ ಬೆಡ್‌ನೋರ್ಝ್‌ರವರು (೧೯೫೦-) ಜೊತೆ ಲಾಂಥನಮ್ ಬೇರಿಯಂ ಕಾಪರ್ ಆಕ್ಸೈಡಿನಲ್ಲಿ (LaBaCuO) ಅಧಿವಾಹಕತೆಯ (superconductivity) ಸ್ವಭಾವವನ್ನು ಒಳಗೂಡಿಸುವುದರಲ್ಲಿ ಯಶಸ್ವಿಯಾದರು. ಆ ಪದಾರ್ಥ ೧೦೦ಕೆಲ್ವಿನ್ ಉಷ್ಣತೆಗಿಂತ (-೧೭೩ ಡಿಗ್ರಿ ಸೆಂ. ಅಥವಾ -೨೭೯ ಡಿಗ್ರಿ ಫ್ಯಾ.) ಹೆಚ್ಚಿನ ಉಷ್ಣತೆಯಲ್ಲಿ ಅಧಿವಾಹಕತೆಯನ್ನು ಪ್ರದರ್ಶಿಸಿತು. ಆ ಸಂಶೋಧನೆಗೆ ಪೂರಕವಾಗಿ ಅವರಿಬ್ಬರಿಗೂ ಜಂಟಿಯಾಗಿ ೧೯೮೭ರ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೧]

ಉಲ್ಲೇಖಗಳು[ಬದಲಾಯಿಸಿ]