ಕಾಮನ್ವೆಲ್ತಿನ ಆರ್ಥಿಕತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಮನ್ವೆಲ್ತಿನ ಆರ್ಥಿಕತೆ ಎಂಬ ಪರಿಕಲ್ಪನೆ, ಕಾಮನ್‌ವೆಲ್ತ್‌_ರಾಷ್ಟ್ರಗಳು ಜೊತೆಗೂಡಿದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವುದು ಸುಲಭ ಎಂಬ ದೃಷ್ಟಿಯಿಂದ ಆರಂಭವಾಯಿತು.[೧]ಐರೋಪ್ಯ_ಆರ್ಥಿಕ_ಸಮುದಾಯ, ಸಾರ್ಕ್, ಸ್ಕೋ, ಜಿ-೭, ಜಿ-೭ ಮತ್ತು ಜಿ-೮೦ ಇವೆಲ್ಲವೂ ಕಾಮನ್‌ವೆಲ್ತ್‌_ರಾಷ್ಟ್ರಗಳ ಯಶಸ್ಸಿನಿಂದ ಉತ್ತೇಜನ ಪಡೆದು ಆರಂಭಗೊಂಡ ಸಮುದಾಯಗಳು.

ಸಂರಚನೆ[ಬದಲಾಯಿಸಿ]

ಈ ರಾಷ್ಟ್ರಸಮುದಾಯವು ವಿಶ್ವದ ಕಾಲು ಭಾಗದಷ್ಟು ವಿಸ್ತೀರ್ಣ ಹಾಗೂ ಜನಸಂಖ್ಯೆಯುಳ್ಳದ್ದಾದರೂ ಆರ್ಥಿಕ ದೃಷ್ಟಿಯಿಂದ ವಿಶ್ವದಲ್ಲಿ ಈ ಕ್ಷೇತ್ರದ ಪಾತ್ರ ಅಷ್ಟು ಗಮನಾರ್ಹವಾದ್ದಲ್ಲ. ಬ್ರಿಟನ್, ಕೆನಡ, ಆಸ್ಟ್ರೇಲಿಯ ಮತ್ತು ನ್ಯೂಜ಼ಿಲ್ಯಾಂಡ್ ಬಿಟ್ಟರೆ ಏಷ್ಯ ಮತ್ತು ಆಫ್ರಿಕದಲ್ಲಿರುವ ಕಾಮನ್‍ವೆಲ್ತ್ ಸದಸ್ಯ ರಾಷ್ಟ್ರಗಳೆಲ್ಲವೂ ಆರ್ಥಿಕ ದೃಷ್ಟಿಯಿಂದ ದಾಪುಗಾಲು ಹಾಕುತ್ತಿರುವ ರಾಷ್ಟ್ರಗಳು. ಈ ಅಂಶ ಅವುಗಳ ತಲಾದಾಯದ ಮಟ್ಟ ಹಾಗೂ ಉತ್ಪಾದನೆಯ ಮಾದರಿಯಿಂದ ವಿದಿತವಾಗುತ್ತದೆ. ಭಾರತದ ತಲಾವಾರು ಆದಾಯ ವಾರ್ಷಿಕ ೧೯೦೦ ಅಮೇರಿಕನ್ ಡಾಲರ್ ಆಗಿದೆ[೨] ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ 500 ಡಾಲರುಗಳಿಗಿಂತ ಕಡಿಮೆ ತಲಾದಾಯವಿರುವ ರಾಷ್ಟ್ರಗಳೆಲ್ಲವನ್ನೂ ಆರ್ಥಿಕ ದೃಷ್ಟಿಯಿಂದ ಹಿಂದುಳಿದ ರಾಷ್ಟ್ರಗಳೆಂದು ಪರಿಗಣಿಸಲಾಗುವುದು. ಈ ರಾಷ್ಟ್ರಗಳಲ್ಲಿ ಸೇವಾ ವಲಯ, ಕೈಗಾರಿಕೆ ಮತ್ತು ಕೃಷಿ ಮುಖ್ಯ ಕಸುಬುಗಳು. ಇವುಗಳ ರಾಷ್ಟ್ರೀಯ ವರಮಾನದ ಸೇ. ೩೦ ರಷ್ಟು ಕೃಷಿಯಿಂದಲೇ ಬರುತ್ತದೆ. ಕೃಷಿಯ ಉತ್ಪಾದನ ಸಾಮರ್ಥ್ಯ ಕೈಗಾರಿಕೆಯದಕ್ಕಿಂತ ಬಹಳ ಕಡಿಮೆ.

ಉತ್ಪಾದನೆ[ಬದಲಾಯಿಸಿ]

ಈ ರಾಷ್ಟ್ರಸಮುದಾಯದ ಬಹುಪಾಲಿನ ರಾಷ್ಟ್ರಗಳ ಆರ್ಥಿಕತೆಯಲ್ಲಿ ಕೃಷಿ ಉದ್ಯಮ ಪ್ರಮುಖವಾದ ಕಾರಣ. ಕೈಗಾರಿಕೋತ್ಪನ್ನದ ಪ್ರಮಾಣ ಸ್ವಾಭಾವಿಕವಾಗಿಯೇ ಕಡಿಮೆ. ಉದಾಹರಣೆಗೆ, ಇಲ್ಲಿಯ ಒಟ್ಟು ಜನಸಂಖ್ಯೆ ಕಮ್ಯುನಿಸ್ಟ್ ರಾಷ್ಟ್ರಗಳನ್ನುಳಿದ ವಿಶ್ವದ ಮೂರನೆಯ ಒಂದರಷ್ಟಾದರೂ ಇವುಗಳ ಕೈಗಾರಿಕೋತ್ಪನ್ನದ ಪ್ರಮಾಣ ಅದರ ಆರನೆಯ ಒಂದಕ್ಕಿಂತಲೂ ಕಡಿಮೆ. ಈ ಸಮುದಾಯದಲ್ಲಿಯ ಕೈಗಾರಿಕೆಗಳೆಲ್ಲವೂ ೧೯೯೦ರವರೆಗೆ ಬ್ರಿಟನಿನಲ್ಲಿಯೇ ಹೆಚ್ಚಾಗಿ ಕೇಂದೀಕೃತವಾಗಿದ್ದವು. ೧೯೯೦ರಿಂದ ಮಲೇಷಿಯಾ, ಭಾರತ ಮತ್ತು ಕೆನಡಾ ಜಂಟಿಯಾಗಿ ಬ್ರಿಟನ್ ಅನ್ನು ಹಿಂದೆ ಹಾಕಿ ಮುನ್ನಡೆ ಪಡೆದಿವೆ. ಇದರ ಜೊತೆಗೆ ಕೆನಡ, ಆಸ್ಟ್ರೇಲಿಯ, ನ್ಯೂಜೀóಲೆಂಡ್ ಮತ್ತು ದಕ್ಷಿಣ ಆಫ್ರಿಕಗಳನ್ನೂ ಸೇರಿಸಿಕೊಂಡರೆ ಇವೆಲ್ಲ ರಾಷ್ಟ್ರಗಳೂ ಸೇರಿ ಕಾಮನ್‍ವೆಲ್ತಿನ ಮುಕ್ಕಾಲು ಭಾಗಕ್ಕೂ ಮೀರಿದ ಕೈಗಾರಿಕೋತ್ಪನ್ನಕ್ಕೆ ಕಾರಣವಾಗುತ್ತವೆ.

ಖನಿಜ ಉತ್ಪನ್ನ[ಬದಲಾಯಿಸಿ]

ಕೈಗಾರಿಕೋತ್ಪನ್ನದ ಜೊತೆಗೆ ವಿಶ್ವದಲ್ಲಿ ಖನಿಜೋತ್ಪನ್ನದ ರಂಗದಲ್ಲಿ ಕಾಮನ್‍ವೆಲ್ತ್ ರಾಷ್ಟ್ರಗಳು ಒಳ್ಳೆಯ ಸ್ಥಾನ ಪಡೆದಿವೆ. ಆಫ್ರಿಕಾ ಖಂಡ ಖನಿಜಗಳ ಆಗರವೇ ಆಗಿದೆ. ಕೆನಡ ಮತ್ತು ದಕ್ಷಿಣ ಆಫ್ರಿಕ- ವಿಶ್ವದ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಿನ್ನವನ್ನೂ ಮಲಯ ಮತ್ತು ನೈಜೀರಿಯಗಳು ಅರ್ಧದಷ್ಟು ತವರನ್ನೂ ಕೆನಡ ಮೂರನೆಯ ಎರಡರಷ್ಟು ನಿಕಲನ್ನೂ ಉತ್ಪಾದಿಸುತ್ತವೆ. ಹಾಗೂ ಈ ಸಮುದಾಯ ವಿಶ್ವದ ಮೂರನೆಯ ಒಂದರಷ್ಟು ಕಲ್ಲಿದ್ದಲು, ತಾಮ್ರ ಮತ್ತು ಸೀಸಗಳನ್ನು ಉತ್ಪಾದಿಸುತ್ತದೆ.

ಈ ರಾಷ್ಟ್ರಸಮುದಾಯದಲ್ಲಿ ಕೃಷಿ ಉದ್ಯಮ ಪ್ರಮುಖವಾದುದರಿಂದ ವಿಶ್ವದ ಉತ್ಪನ್ನದ ಬಹುಪಾಲು ಕೃಷಿ ಉತ್ಪನ್ನ ಇಲ್ಲಿಂದಲೇ ಬರುತ್ತದೆ. ಆಸ್ಟ್ರೇಲಿಯ, ನ್ಯೂಜೀóಲೆಂಡ್ ಮತ್ತು ದಕ್ಷಿಣ ಆಫ್ರಿಕಗಳು ಅರ್ಧಕ್ಕೂ ಮೀರಿದ ಉಣ್ಣೆಯನ್ನು. ಭಾರತ ಮತ್ತು ಸಿಂಹಳ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಹವನ್ನು, ಘಾನ ಮತ್ತು ನೈಜೀರಿಯ ಅರ್ಧಕ್ಕೂ ಮೀರಿದಷ್ಟು ಕೋಕೋವನ್ನು,[೩] ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮುಕ್ಕಾಲು ಭಾಗಕ್ಕೂ ಹೆಚ್ಚು ಸೆಣಬನ್ನು[೪], ಮಲಯ ಮತ್ತು ಸಿಂಹಳ ಅರ್ಧದಷ್ಟು ರಬ್ಬರನ್ನು ಸರಬರಾಜು ಮಾಡುತ್ತವೆ. ಈ ರಾಷ್ಟ್ರಸಮುದಾಯ ಗೋದಿಯ ಬಗ್ಗೆ ವಿಶ್ವದ ಸರಾಸರಿ ಮಟ್ಟವನ್ನು ಮುಟ್ಟದಿದ್ದರೂ ಭತ್ತದ ವಿಷಯದಲ್ಲಿ ವಿಶ್ವದ ಸರಾಸರಿ ಮಟ್ಟವನ್ನು ಮೀರುತ್ತದೆ.

ಆರ್ಥಿಕ ಸಹಾಕಾರ: ಕಾಮನ್‍ವೆಲ್ತಿನ ಅನೇಕ ರಾಷ್ಟ್ರಗಳು ಬ್ರಿಟನ್ನಿನ ವಸಾಹತು ಮತ್ತು ಆಶ್ರಿತರಾಷ್ಟ್ರಗಳಾಗಿದ್ದುವು. ಅವು ಸ್ವಾಭಾವಿಕವಾಗಿಯೇ ಬ್ರಿಟನಿನ ನೇತೃತ್ವದಲ್ಲಿ ಒಟ್ಟುಗೂಡಿದುವು. ಈ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದು ರಾಜಕೀಯ ಅಂಶ. ಆದರೆ ಎರಡನೆಯ ಮಹಾಯುದ್ಧಾನಂತರ ಅನೇಕ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಸಿಕ್ಕಿತು. ಆದರೂ ಇವು ಸಾಮಾನ್ಯವಾಗಿ ಬ್ರಿಟನಿನ ನೇತೃತ್ವದಲ್ಲಿ ಕಾಮನ್‍ವೆಲ್ತ್ ಸಮುದಾಯದಲ್ಲಿ ಉಳಿದುಕೊಂಡಿರುವುದಕ್ಕೆ ಮುಖ್ಯವಾಗಿ ಆರ್ಥಿಕ ಅಂಶ ಕಾರಣವಾಗಿದೆ. ಈ ರಾಷ್ಟ್ರಸಮುದಾಯದಲ್ಲಿ ಪ್ರಾರಂಭದಿಂದಲೂ ಉಳಿದುಕೊಂಡು ಬಂದಿರುವ ಪರಸ್ಪರ ಸಹಕಾರ ಆರ್ಥಿಕ ಸ್ವರೂಪದ್ದು. ಪರಸ್ಪರ ಸಹಕಾರದ ಕ್ಷೇತ್ರಗಳೆಂದರೆ ಸ್ಟರ್ಲಿಂಗ್ ವಲಯ, ಅಂತರರಾಷ್ಟ್ರೀಯ ವ್ಯಾಪಾರ, ಹಣದ ವಿನಿಯೋಜನೆ ಹಾಗೂ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮ ಮತ್ತು ಸಾರಿಕೆ ಸಂಪರ್ಕ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-06-01. Retrieved 2020-01-08.
  2. https://www.news18.com/news/india/indias-per-capita-income-rises-6-8-to-rs-11254-a-month-during-2019-20-2450053.html
  3. http://www.fao.org/3/y5143e/y5143e0x.htm
  4. https://www.indiaagristat.com/table/agriculture-data/2/global-comparison-with-india-of-jute/330931/898811/data.aspx[ಶಾಶ್ವತವಾಗಿ ಮಡಿದ ಕೊಂಡಿ]