ಕಾಫಿ ವ್ಯಾಪಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವ ಮಾರುಕಟ್ಟೆಗಳಲ್ಲಿ ಕಾಫಿಯ ವ್ಯಾಪಾರದ ಮೊತ್ತ ಮತ್ತು ದಿಕ್ಕುಗಳು ಅದರ ಉತ್ಪಾದನೆಯಲ್ಲಿ ವಿಶೇಷವಾಗಿ ಅವಲಂಬಿಸಿದೆ. ನೆಲದ ಗುಣ, ವಾಯುಗುಣ ಕಾಫಿ ಗಿಡದ ಜಾತಿ. ಬಗೆ ಮತ್ತು ವಯಸ್ಸು ಕೃಷಿ ವಿಧಾನ. ಕಾಫಿ ಬೀಜವನ್ನು ಮಾರಾಟಕ್ಕೆ ಸಿದ್ಧಗೊಳಿಸುವ ಕ್ರಮ, ಕಾರ್ಮಿಕರ ಸರಬರಾಯಿ-ಇವು ಕಾಫಿಯ ಉತ್ಪಾದನೆಯನ್ನು ನಿಷ್ಕರ್ಷಿಸುವ ಅಂಶಗಳು. ಕಾಫಿಗಿಡಕ್ಕೆ ಅಂಟುವ ರೋಗಗಳೊ ಹಲವಾರು. ಈ ಕಾರಣಗಳಿಂದಾಗಿ ಕಾಫಿಯ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಬಲು ತೀವ್ರವಾಗಿ ವ್ಯತ್ಯಾಸಗೊಳ್ಳುತ್ತದೆ. ಆದರೆ ಸರಬರಾಯಿಗೆ ಅನುಗುಣವಾಗಿ ಬೇಡಿಕೆಯೂ ಏರಿಳಿಯುವುದಿಲ್ಲವಾದ್ದರಿಂದ ಕಾಫಿಯ ಬೆಲೆಗಳು ಅಸ್ತವ್ಯಸ್ತವಾಗುವ ಸಂಭವವೇ ಹೆಚ್ಚು. ಹೀಗಾಗದಂತೆ ತಡೆಗಟ್ಟಲು ಮಾರುಕಟ್ಟೆಯಲ್ಲಿ ಕಾಫಿಯ ಸರಬರಾಯಿಯನ್ನು ನಿಯಂತ್ರಣಗೊಳಿಸುವ ಅನೇಕ ಕ್ರಮಗಳು ಜಾರಿಗೆ ಬಂದಿವೆ.[೧]

ಕಾಫಿಯ ಉತ್ಪಾದನೆ[ಬದಲಾಯಿಸಿ]

ಕಾಫಿಯ ಉತ್ಪಾದನೆ ಉಷ್ಣವಲಯ ಪ್ರದೇಶಗಳಿಗೆ ಸೀಮಿತವಾಗಿರುವುದರಿಂದ ಕಾಫಿ ನಿರ್ಯಾತ ಮಾಡುವ ದೇಶಗಳೆಲ್ಲ ಈ ವಲಯಕ್ಕೆ ಸೇರಿದವು. ಬ್ರಜಿóಲ್, ಮಧ್ಯ ಅಮೆರಿಕ, ವೆನಿಜ್ವೇಲ, ಕೊಲಂಬಿಯ, ಭಾರತ, ಸಿಂಹಳ, ಇಂಡೊನೇಷ್ಯ, ಈಚೆಗೆ ಆಫ್ರಿಕದ ರಾಷ್ಟ್ರಗಳು ಇತರ ರಾಷ್ಟ್ರಗಳೊಂದಿಗೆ ಕಾಫಿ ವ್ಯಾಪಾರದಲ್ಲಿ ತೀವ್ರವಾಗಿ ಸ್ಪರ್ಧಿಸುತ್ತಿವೆ. ಆಂಗೋಲ, ಐವರಿ ಕೋಸ್ಟ್, ಉಗಾಂಡ ಇವು ಕಾಫಿ ಉತ್ಪಾದಿಸುವ ಮುಖ್ಯ ಆಫ್ರಿಕನ್ ದೇಶಗಳು, ಕ್ಯಾಮರೂನ್, ಕಾಂಗೋ (ಕೀನ್ಷಾಸ), ಇಥಿಯೋಪಿಯ, ಮಲಗಾಸಿ, ಕೀನ್ಯ, ಅರೇಬಿಯ ಟಾಂಜಾóನಿಂಯಿ- ಇವು ಇತರ ಆಫ್ರಿಕನ್ ದೇಶಗಳು.ಉತ್ಪಾದನೆಯ ಪರಿಮಾಣ, ಮೌಲ್ಯ- ಈ ಎರಡು ದೃಷ್ಟಿಗಳಿಂದಲೂ ಕಾಫಿ ವಿಶ್ವದ ಪ್ರಮುಖ ಬೆಳೆಗಳಲ್ಲೊಂದೇನೂ ಅಲ್ಲ. ಆದರೆ ಇತರ ಅನೇಕ ಕೃಷಿ ಉತ್ಪನ್ನಗಳಿಗಿಂತ ಕಾಫಿಯ ಒಟ್ಟು ಉತ್ಪನ್ನದ ಹೆಚ್ಚು ಪ್ರಮಾಣ ಅಂತರರಾಷ್ಟ್ರೀಯ ವ್ಯಾಪಾರವನ್ನು ಪ್ರವೇಶಿಸುವುದರಿಂದ ವಿಶ್ವದ ಅರ್ಥಿಕತೆಯಲ್ಲಿ ಕಾಫಿಗೆ ವಿಶೇಷ ಮರ್ಯಾದೆಯುಂಟು. ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳ ರಫ್ತು ವ್ಯಾಪಾರದಲ್ಲಿ ಕಾಫಿಯ ಸ್ಥಾನ ಮುಖ್ಯವಾದ್ದು: ಅವಕ್ಕೆ ವಿದೇಶಿ ವಿನಿಯಮವನ್ನು ತಂದು ಕೊಡತಕ್ಕಂಥದು. ಒಟ್ಟು ಕಾಫಿ ಉತ್ಪನ್ನದಲ್ಲಿ ಸೇ. 70ರಷ್ಟು ರಫ್ತಾಗುತ್ತಿದೆ. ಇದರಲ್ಲಿ ಸುಮಾರು ಅರ್ಧ ಭಾಗ ಬ್ರಜಿóಲಿನದು. ಕೊಲಂಬಿಯ ಮತ್ತು ಆಫ್ರಿಕಗಳ ಪಾಲು ತಲಾ ಸೇ. 20. ಅನೇಕ ಲ್ಯಾಟಿನ್ ಅಮೆರಿಕನ್ ದೇಶಗಳ ನಿರ್ಯಾತದಲ್ಲಿ ಕಾಫಿಯ ಪ್ರಮಾಣ ಸೇ. 44. ಕೊಲಂಬಿಯದ ಒಟ್ಟು ನಿರ್ಯಾತದಲ್ಲಿ ಸೇ. 62; ಕಾಸ್ಟ ರೀಕ, ಸೇ. 41; ಎಲ್ ಸಾಲ್ವಡಾರ್, ಸೇ. 50, ಗ್ವಾಟೆಮಾಲ, ಸೇ. 46, ಹೈಟಿ, ಸೇ. 58; ನಿಕರಾಗ್ಯ, ಸೇ. 18; ಅಂಗೋಲ, ಸೇ. 34, ಎಕ್ವಡಾರ್, ಸೇ. 20; ಉಗಾಂಡ, ಸೇ. 48; ಈ ಎಲ್ಲ ದೇಶಗಳ ಆರ್ಥಿಕ ಪ್ರಗತಿಗೆ ಕಾಫಿಯ ನಿರ್ಯಾತವೇ ಆಧಾರ, 1967ರಲ್ಲಿ ವಿಶ್ವದ ಕಾಫಿ ಬೆಳೆಯುವ ದೇಶಗಳು ಮಾಡಿದ ನಿರ್ಯಾತ 30.6 ಲಕ್ಷ ಮೆಟ್ರಿಕ್‍ಟನ್, ಇದರಲ್ಲಿ ಬ್ರಜಿóಲ್ ನಿರ್ಯಾತ ಮಾಡಿದ್ದು 10.1 ಲಕ್ಷ ಮೆಟ್ರಕ್‍ಟನ್. [೨]

ಕಾಫಿ ಆಮದು ದೇಶಗಳು[ಬದಲಾಯಿಸಿ]

ಕಾಫಿಯನ್ನು ಆಮದು ಮಾಡಿಕೊಳ್ಳುವ ಮುಖ್ಯ ದೇಶಗಳು ಅಮೆರಿಕ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಸ್ವೀಡನ್, ಬೆಲ್ಜಿಯಂ, ಇಟಲಿ, ಬ್ರಿಟನ್ ಮತ್ತು ಕೆನಡ, ವಿಶ್ವದ ಕಾಫಿಯ ಸೇ. 55ರಷ್ಟನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಆಮದು ಮಾಡಿಕೊಳ್ಳುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ ಬ್ರಿಟನ್ನಿನ ವಸಾಹತಾಗಿದ್ದ ಕಾಲದಲ್ಲಿ ಚಹವನ್ನೇ ಹೆಚ್ಚಾಗಿ ಸೇವಿಸುತ್ತಿತ್ತು. ಬ್ರಿಟಷ್ ಸರ್ಕಾರ ಚಹದ ಮೇಲೆ ಅತಿಯಾದ ಸುಂಕ ಹೇರಿದ್ದರಿಂದ ಕೋಪಗೊಂಡ ಅಮೆರಿಕನರು ಸ್ವಾತಂತ್ಯ್ರ ಸಾರಿಕೊಂಡರು. ಸ್ವತಂತ್ರ ಅಮೆರಿಕನ್ ಗಣರಾಜ್ಯದ ಜನ ಚಹದ ಬದಲು ಕಾಫಿಯನ್ನು ಹೆಚ್ಚಾಗಿ ಕುಡಿಯಲಾರಂಭಿಸಿದರು.ಕಾಫಿಯನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಎರಡನೆಯದು ಜರ್ಮನಿ (9%). ಮೂರನೆಯದು ಫ್ರಾನ್ಸ್ (8%). ಕಾಫಿಯ ತಲಾ ವಾರ್ಷಿಕ ಸೇವನೆ ಅತ್ಯಧಿಕವಾಗಿರುವುದು ಸ್ವೀಡನಿನಲ್ಲಿ (24 ಪೌಂ.). ಈ ವಿಚಾರದಲ್ಲಿ ಡೆನ್‍ಮಾರ್ಕ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಎರಡು ಮೂರನೆಯಸ್ಥಾನ ಪಡೆಯುತ್ತವೆ. (ತಲಾ ವಾರ್ಷಿಕ ಸೇವನೆ ಅನುಕ್ರಮವಾಗಿ 21 ಪೌಂ. ಮತ್ತು 17 ಪೌಂ.)


ಕಾಫಿಯ ಬೇಡಿಕೆ[ಬದಲಾಯಿಸಿ]

ಕಾಫಿಯ ಬೇಡಿಕೆಗಿಂತ ಅದರ ಉತ್ಪಾದನೆ ಮತ್ತು ಸರಬರಾಯಿ ಸಾಮಾನ್ಯವಾಗಿ ಅಧಿಕವಾಗಿರುವುದೇ ಈ ವ್ಯಾಪಾರದ ಮುಖ್ಯ ಸಮಸ್ಯೆ 1965-68ರ ಅವಧಿಯಲ್ಲಿ ವಿಶ್ವದಲ್ಲಿ ಕಾಫಿಯ ಉತ್ಪನ್ನ, ನಿರ್ಯಾತಕ್ಕೆ ಒದಗಿಬಂದ ಪರಿಮಾಣ, ವಾಸ್ತವವಾಗಿ ನಿರ್ಯಾತವಾದ ಪರಿಮಾಣ ಮತ್ತು ನಿವ್ವಳ ಆಯಾತ ಇವನ್ನು ಕೆಳಗೆ ತೋರಿಸಲಾಗಿದೆ: ಉತ್ಪನ್ನ, ಪರಿವiಣ, ಆಂiiv

(ಕ್ಷಮೆಟಿP ಟನ್‍ಗಳಲ್ಲಿ)

1965

1967

1968

ವಿಶ್ವದ ಕಾಫಿ ಉತ್ಪನ್ನ

46.6

42.6

37.೦೦

37.0

30.8

28.0

ಂiiರ್Áತದ ಪರಿಮಾಣ

26.0

22.9

 

ನಿವ್ವಳ ಅಂiÀiv

11.7

12.8

13.8

 

ಕಾಫಿ ವ್ಯಾಪಾರ[ಬದಲಾಯಿಸಿ]

ಕಾಫಿ ವ್ಯಾಪಾರದ ಈ ಪರಿಸ್ಥಿತಿಯನ್ನು ನಿವಾರಿಸುವ ಉದ್ದೇಶದಿಂದ 1963ರಲ್ಲಿ ಕಾಫಿ ಬೆಳೆಯುವ ಮತ್ತು ಕೊಳ್ಳುವ ರಾಷ್ಟ್ರಗಳು ಅಂತರರಾಷ್ಟ್ರೀಯ ಒಪ್ಪಂದವೊಂದನ್ನು ಮಾಡಿಕೊಂಡುವು. ಅಂತರ ರಾಷ್ಟ್ರೀಯ ಕಾಫಿ ಮಂಡಲಿಯ ಸ್ಥಾಪನೆಯಾಯಿತು. ವಿವಿಧ ರಾಷ್ಟ್ರಗಳ ಕಾಫಿ ರಫ್ತುಹಸಿಗೆಗಳನ್ನು (ಎಕ್ಸ್‍ಪೋರ್ಟ್ ಕೋಟಾಸ್) ಈ ಮಂಡಲಿಯಲ್ಲಿ ನಿಷ್ಕರ್ಷಿಸಲಾಗುತ್ತದೆ. ವಿಶ್ವದಲ್ಲಿ ಕಾಫಿ ಸೇವನೆಗೆ ಪ್ರೋತ್ಸಾಹ. ಉತ್ಪಾದನೆಯ ನಿಯಂತ್ರಣ-ಇವಕ್ಕೂ ಈ ಒಪ್ಪಂದದ ಪ್ರಕಾರ ಕ್ರಮ ಕೈಕೊಳ್ಳಲಾಗಿದೆ. 1966ರಲ್ಲಿ ಕಾಫಿ ಉತ್ಪಾದನೆ ಅತ್ಯಧಿಕವಾಗಿದ್ದಾಗಲೂ ಈ ಒಪ್ಪಂದದ ಅನ್ವಯದಿಂದ ಹಿತಕಾರಿ ಪ್ರವೃತ್ತಿಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಯಿತು.ದೀರ್ಘಕಾಲದಲ್ಲಿ ಅಂತರರಾಷ್ಟ್ರೀಯ ಕಾಫಿ ವ್ಯಾಪಾರವನ್ನು ಅಭಿವೃದ್ಧಿಗೊಳಿಸಲು ಎರಡು ಮುಖ್ಯ ಆತಂಕಗಳುಂಟು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿರುವ ಲಕ್ಷಾಂತರ ಮಂದಿಯ ಜೀವನ ಮಟ್ಟ ಬಲು ಕಡಿಮೆಯಾಗಿರುವುದರಿಂದ ಈ ಜನಕ್ಕೆ ಕಾಫಿಯನ್ನು ಕೊಳ್ಳುವ ಶಕ್ತಿಯಿಲ್ಲ. ಕಾಫಿಯನ್ನು ಕೊಂಡು ಸೇವಿಸುವ ಅನೇಕ ಮುಂದುವರಿದ ದೇಶಗಳು ಇದರ ಆಮದಿನ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿವೆ.

ಉತ್ಪಾದಕರು ಮತ್ತು ಅನುಭೋಗಿಗಳು[ಬದಲಾಯಿಸಿ]

ಈ ಎರಡೂ ಪಕ್ಷಗಳ ಹಿತಗಳಲ್ಲಿ ಹೊಂದಾವಣೆ ಏರ್ಪಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಕಾಫಿ ಮಂಡಳಿ ಆಗಿಂದಾಗ್ಗೆ ಸಭೆ ಸೇರಿ ಬೆಲೆಗಳನ್ನೂ ರಫ್ತು ಹಸಿಗೆಗಳನ್ನೂ ನಿಷ್ಕರ್ಷಿಸುತ್ತದೆ. ಆದರೆ ಹಸಿಗೆಗಳ ನಿಷ್ಕರ್ಷೆಯ ವಿಚಾರದಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳಿಗೂ ತೃಪ್ತಿಯಿಲ್ಲ. ಈ ವಿಚಾರದಲ್ಲಿ ಕೆಲವು ರಾಷ್ಟ್ರಗಳಿಗೆ ಹೆಚ್ಚಿನ ಪಕ್ಷಪಾತ ತೋರಿಸಲಾಗಿದೆಯೆಂಬುದು ಒಂದು ಟೀಕೆ. ಒಟ್ಟು ರಫ್ತಿನಲ್ಲಿ ಬ್ರಜಿóಲಿನದು ಮೂರನೆಯ ಒಂದು ಪಾಲು. ಇದರಲ್ಲಿ ಒಂದು ಅಂಶವನ್ನು ಆಫ್ರಿಕನ್ ದೇಶಗಳಿಗೆ ಬಿಟ್ಟುಕೊಡಬೇಕೆಂಬುದು ಕೆಲವು ಸದಸ್ಯ ರಾಷ್ಟ್ರಗಳ ವಾದವಾಗಿದೆ. ನಿರ್ಯಾತ ಮಾಡಬೇಕಾದ ಕಾಫಿಯ ಗುಣ ಜಾತಿಗಳನ್ನು ನಿರ್ಧರಿಸಲಾಗದಿರುವುದು ಹಸಿಗೆ ವ್ಯವಸ್ಥೆಯ ಒಂದು ದೊಡ್ಡ ದೋಷ. 1967 ರಿಂದೀಚೆಗೆ ಈ ವಿಚಾರಕ್ಕೆ ಹೆಚ್ಚಿನ ಗಮನ ಕೊಡಲಾಗಿದೆ.

ಭಾರತದ ಕಾಫಿ ವ್ಯಾಪಾರ[ಬದಲಾಯಿಸಿ]

ಭಾರತದ ಕಾಫಿ ಫಸಲಿನಲ್ಲಿ ಸುಮಾರು ಅರ್ಧ ಭಾಗವನ್ನು ದೇಶದ ಜನರೇ ಉಪಯೋಗಿಸುತ್ತಾರೆ. ಚಹವನ್ನೇ ಹೆಚ್ಚಾಗಿ ಕುಡಿಯುವ ಜನರಿರುವ ಸ್ಥಳಗಳಲ್ಲಿ ಕೂಡ ಕಾಫಿ ಪ್ರಿಯವಾಗುತ್ತಿದೆ. ಬ್ರಿಟನ್, ಫ್ರಾನ್ಸ್, ಜರ್ಮನಿ. ನೆದರ್ಲೆಂಡ್ಸ್, ಬೆಲ್ಜಿಯಂ, ಆಸ್ಟ್ರೇಲಿಯ, ಇರಾಕ್- ಈ ದೇಶಗಳಿಗೆ ಭಾರತದಿಂದ ಕಾಫಿಯ ರಫ್ತಾಗುತ್ತದೆ. ನಿರ್ಯಾತವಾಗುವ ಒಟ್ಟು ಕಾಫಿಯಲ್ಲಿ ಮೂರನೆಯ ಒಂದು ಭಾಗ ಹೋಗುವುದು ಬ್ರಿಟನ್ನಿಗೆ. ಅದೇ ಭಾರತದ ಕಾಫಿಯ ಅತಿಮುಖ್ಯ ಗ್ರಾಹಕ ರಾಷ್ಟ್ರ. 1967-68ರಲ್ಲಿ ಉತ್ಪತ್ತಿಯಾದ 57,331 ಟನ್ನುಗಳಲ್ಲಿ 33,966 ಟನ್ನುಗಳನ್ನು ಭಾರತ ರಪ್ತು ಮಾಡಿತು. ಇದರಿಂದ ಸಂಪಾದನೆಯಾದ ವಿದೇಶಿ ವಿನಿಮಯ ರೂ. 18.18 ಲಕ್ಷ.

ಭಾರತದ ಕಾಫಿಗೆ ಆಂತರಿಕ ಬೇಡಿಕೆ[ಬದಲಾಯಿಸಿ]

ಭಾರತದ ಕಾಫಿಗೆ ಆಂತರಿಕ ಬೇಡಿಕೆಯೂ ತ್ವರೆಯಾಗಿ ಅಧಿಕವಾಗುತ್ತಿದೆ. 1957ರ ಕಾಫಿ ಮಾರುಕಟ್ಟೆ ವಿಸ್ತರಣ ಕಾಯಿದೆಯ ಪ್ರಕಾರ ಭಾರತೀಯ ಕಾಫಿ ಬೋರ್ಡಿನ ಸ್ಥಾಪನೆಯಾಯಿತು. ಕಾಫಿಯ ಮಾರಾಟ ಮತ್ತು ನಿರ್ಯಾತಗಳನ್ನು ನಿಯಂತ್ರಿಸುವುದು ಈ ಸಂಸ್ಥೆಯ ಹೊಣೆ. ದೇಶದಲ್ಲಿ ಬೆಳೆದ ಕಾಫಿಯನ್ನೆಲ್ಲ ಕಾಫಿ ಬೋರ್ಡು ಏರ್ಪಡಿಸಿರುವ ಒಟ್ಟಿಲಿಗೆ (ಪೂಲ್) ಸಲ್ಲಿಸಬೇಕು. ಬಹಿರಂಗ ಹರಾಜಿನ ಮೂಲಕವೂ ಸಹಕಾರ ಸಂಘಗಳ ಮೂಲಕವೂ ಕಾಫಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಾಫಿಯ ರಫ್ತಿಗೆ ಬೋರ್ಡು ಲೈಸೆನ್ಸ್‍ಗಳನ್ನು ನೀಡುತ್ತದೆ. ಪ್ರಚಾರ, ಸಂಶೋಧನೆ, ಕಾಫಿ ತೋಟಗಳ ಅಭಿವೃದ್ಧಿಗೆ ನೆರವಿನ ನೀಡಿಕೆ-ಇವೂ ಕಾಫಿ ಬೋರ್ಡಿನ ಕರ್ತವ್ಯಗಳು. ಕಾಫಿಯ ಆಂತರಿಕ ಮಾರಾಟ ಮತ್ತು ನಿರ್ಯಾತಗಳ ಮೇಲೆ ವಿಧಿಸಲಾಗುವ ಸುಂಕದಿಂದ ಬೋರ್ಡಿನ ಪ್ರಚಾರದ ವೆಚ್ಚವನ್ನು ತುಂಬಲಾಗುತ್ತದೆ.ಅಂತರರಾಷ್ಟ್ರೀಯ ಕಾಫಿ ಒಪ್ಪಂದದಲ್ಲಿ ಭಾರತವೂ ಸೇರಿಕೊಂಡಿದೆ. ಒಪ್ಪಂದದ ರಾಷ್ಟ್ರಗಳಿಗೆ 1966-67ರಲ್ಲಿ ಭಾರತ ನಿರ್ಯಾತ ಮಾಡಬಹುದಾಗಿದ್ದ ಹಸಿಗೆಯ ಪರಿಮಾಣ 23,788 ಟನ್. ಭಾರತದ ದೃಷ್ಟಿಯಿಂದ ಇದು ಬಹಳ ಕಡಿಮೆಯೆಂಬ ಭಾವನೆಯಿದೆ.

ಉಲ್ಲೇಖಗಳು[ಬದಲಾಯಿಸಿ]