ವಿಷಯಕ್ಕೆ ಹೋಗು

ಕಾನ್‍ಸ್ಟೆಬಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾನ್‍ಸ್ಟೆಬಲ್ ಎಂದರೆ ಒಂದು ನಿರ್ದಿಷ್ಟ ಹುದ್ದೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ, ಅತ್ಯಂತ ಸಾಮಾನ್ಯವಾಗಿ ಅಪರಾಧಿಕ ಕಾನೂನು ಜಾರಿಗೊಳಿಸುವಿಕೆಯಲ್ಲಿ. ಕಾನ್‍ಸ್ಟೆಬಲ್‍ನ ಹುದ್ದೆಯು ವಿಭಿನ್ನ ಕಾನೂನುವ್ಯಾಪ್ತಿಗಳಲ್ಲಿ ಬಹಳ ಗಣನೀಯವಾಗಿ ಬದಲಾಗಬಹುದು. ಸಾಮಾನ್ಯವಾಗಿ ಪೋಲಿಸ್ ಇಲಾಖೆಯಲ್ಲಿ ಕಾನ್‍ಸ್ಟೆಬಲ್ (ಪೋಲಿಸ್ ಪೇದೆ) ಒಬ್ಬ ಅಧಿಕಾರಿಯ ದರ್ಜೆಯಾಗಿರುತ್ತದೆ. ಇತರರಿಗೆ ಕಾನ್‍ಸ್ಟೆಬಲ್‍ನ ಅಧಿಕಾರಗಳನ್ನು ಈ ಪದವಿಯನ್ನು ಹೊಂದಿಲ್ಲದಿದ್ದರೂ ನೀಡಿರಬಹುದು.

ಆಧುನಿಕ ನ್ಯಾಯವ್ಯಾಪ್ತಿಗಳಲ್ಲಿ ಬಹುತೇಕ ಕಾನ್‍ಸ್ಟೆಬಲ್‍ಗಳು ಕಾನೂನು ಜಾರಿಮಾಡುವ ಅಧಿಕಾರಿಗಳಾಗಿರುತ್ತಾರೆ; ಯುನೈಟಡ್ ಕಿಂಗ್ಡಮ್, ಕಾಮನ್‌ವೆಲ್ತ್‌ ರಾಷ್ಟ್ರಗಳು ಮತ್ತು ಕೆಲವು ಐರೋಪ್ಯ ಮುಖ್ಯಭೂಭಾಗ ದೇಶಗಳಲ್ಲಿ, ಕಾನ್‍ಸ್ಟೆಬಲ್ ಪೋಲಿಸ್ ಅಧಿಕಾರಿಯ ಅತ್ಯಂತ ಕೆಳಗಿನ ದರ್ಜೆಯಾಗಿರುತ್ತದೆ.

ಭಾರತದಲ್ಲಿ[ಬದಲಾಯಿಸಿ]

ಭಾರತದಲ್ಲಿ, ಪೋಲಿಸ್ ಪೇದೆಯು (ಸಂಕ್ಷಿಪ್ತವಾಗಿ ಪಿಸಿ) ಅತ್ಯಂತ ಕೆಳಗಿನ ಪೋಲಿಸ್ ದರ್ಜೆಯಾಗಿರುತ್ತದೆ, ಹೆಡ್ ಕಾನ್‍ಸ್ಟೆಬಲ್ ಇದರ ಮುಂದಿನ ದರ್ಜೆಯಾಗಿರುತ್ತದೆ. ಭಾರತದಲ್ಲಿ ಸಾಮಾನ್ಯ ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯದ ವಿಷಯವಾಗಿರುವುದರಿಂದ, ಪ್ರತಿ ರಾಜ್ಯ ಸರ್ಕಾರವು ಪೋಲಿಸ್ ಪೇದೆಗಳನ್ನು ನೇಮಕಮಾಡಿಕೊಳ್ಳುತ್ತದೆ. ಪೋಲಿಸ್ ಪೇದೆಯು ಯಾವುದೇ ಭುಜಬಿರುದುಗಳನ್ನು ಹೊಂದಿರುವುದಿಲ್ಲ. ಎಲ್ಲ ಹಿರಿಯ ಅಧಿಕಾರಿಗಳು ನಾಗರಿಕ ಸೇವಾ ಪರೀಕ್ಷೆಯ ಮೂಲಕ ನೇಮಕಗೊಂಡ ಭಾರತೀಯ ಪೋಲಿಸ್ ಸೇವೆಯ ಅಧಿಕಾರಿಗಳಾಗಿರುತ್ತಾರೆ.[೧]

ಉಲ್ಲೇಖಗಳು[ಬದಲಾಯಿಸಿ]

  1. "Onestopias.com". Onestopias.com. Archived from the original on 2021-11-18. Retrieved 2011-03-06.