ಕಾಣ್ವ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಣ್ವ ರಾಜವಂಶ ಅಥವಾ ಕಾಣ್ವಾಯನ ಮಗಧದಲ್ಲಿ ಶುಂಗ ರಾಜವಂಶದ ಬದಲಿಗೆ ಅಧಿಕಾರಕ್ಕೆ ಬಂದ ಒಂದು ಬ್ರಾಹ್ಮಣ ರಾಜವಂಶವಾಗಿತ್ತು[೧] ಮತ್ತು ಭಾರತದ ಪೂರ್ವ ಭಾಗವನ್ನು ಕ್ರಿ.ಪೂ. ೭೫ ರಿಂದ ಕ್ರಿ.ಪೂ. ೩೦ ರ ವರೆಗೆ ಆಳ್ವಿಕೆ ನಡೆಸಿತು.[೨]

ಶುಂಗ ರಾಜವಂಶದ ಕೊನೆಯ ಅರಸ ದೇವಭೂತಿಯನ್ನು ಕಾಣ್ವ ರಾಜವಂಶದ ವಾಸುದೇವ ಕಾಣ್ವನು ಕ್ರಿ.ಪೂ. ೭೫ರಲ್ಲಿ ಪದಚ್ಯುತಗೊಳಿಸಿದನು. ಕಾಣ್ವ ದೊರೆಯು ಶುಂಗ ರಾಜವಂಶದ ರಾಜರಿಗೆ ತಮ್ಮ ಹಿಂದಿನ ಪ್ರಾಂತ್ಯಗಳ ಒಂದು ಮೂಲೆಯಲ್ಲಿ ಅಜ್ಞಾತವಾಗಿ ಆಳ್ವಿಕೆ ಮುಂದುವರಿಸಲು ಅನುಮತಿ ನೀಡಿದನು. ಮಗಧ ನಾಲ್ಕು ಕಾಣ್ವ ರಾಜರಿಂದ ಆಳಲ್ಪಟ್ಟಿತು. ಪುರಾಣಗಳ ಪ್ರಕಾರ, ಶಾತವಾಹನರು ಇವರ ರಾಜವಂಶವನ್ನು ಅಂತ್ಯಗೊಳಿಸಿದರು.

ರಾಜರು[ಬದಲಾಯಿಸಿ]

ವಾಸುದೇವನು ಕಾಣ್ವ ರಾಜವಂಶದ ಮೊದಲ ರಾಜ. ಇವನ ಮಗ ಭೂಮಿಮಿತ್ರನು ಇವನ ಉತ್ತರಾಧಿಕಾರಿಯಾದನು. ಭೂಮಿಮಿತ್ರ ಆಲೇಖವನ್ನು ಹೊಂದಿರುವ ನಾಣ್ಯಗಳು ಪಾಂಚಾಲ ರಾಜ್ಯದಿಂದ ಸಿಕ್ಕಿವೆ. ಭೂಮಿಮಿತ್ರನು ಹದಿನಾಲ್ಕು ವರ್ಷ ರಾಜ್ಯಭಾರ ಮಾಡಿದನು ಮತ್ತು ಇವನ ನಂತರ ಇವನ ಮಗ ನಾರಾಯಣನು ರಾಜನಾದನು. ನಾರಾಯಣನು ಹನ್ನೆರಡು ವರ್ಷ ರಾಜ್ಯವನ್ನು ಆಳಿದನು. ಇವನ ನಂತರ ಇವನ ಮಗ ಸುಶರ್ಮನ್ ಉತ್ತರಾಧಿಕಾರಿಯಾದನು. ಇವನೇ ಕಾಣ್ವ ರಾಜವಂಶದ ಕೊನೆಯ ರಾಜ.

  • ವಾಸುದೇವ (ಸು. ಕ್ರಿ.ಪೂ. 75 – ಸು. 66)
  • ಭೂಮಿಮಿತ್ರ (ಸು. ಕ್ರಿ.ಪೂ. 66 – ಸು. 52)
  • ನಾರಾಯಣ (ಸು. ಕ್ರಿ.ಪೂ. 52 – ಸು. 40)
  • ಸುಶರ್ಮನ್ (ಸು. ಕ್ರಿ.ಪೂ. 40 – ಸು. 30)

ಉಲ್ಲೇಖಗಳು[ಬದಲಾಯಿಸಿ]