ವಿಷಯಕ್ಕೆ ಹೋಗು

ಕಾಡು ಕಬ್ಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಡು ಕಬ್ಬು (ಕಾಶ) ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಹುಲ್ಲು. ಇದು ಬಹುವಾರ್ಷಿಕ ಹುಲ್ಲಾಗಿದ್ದು, ಮೂರು ಮೀಟರ್ ಎತ್ತರಕ್ಕೆ ಬೆಳಯಬಲ್ಲದು ಮತ್ತು ಹರಡುವ ಬೇರುಕಾಂಡದಂಥ ಬೇರುಗಳನ್ನು ಹೊಂದಿರುತ್ತದೆ.[೧] ಕಾಶದ ಹುಲ್ಲುಗಾವಲು ಘೇಂಡಾಮೃಗದ ಪ್ರಮುಖ ಆವಾಸಸ್ಥಾನವಾಗಿದೆ. ನೇಪಾಳದಲ್ಲಿ ಛಾವಣಿಗಳಿಗೆ ಹಾಕಲು ಅಥವಾ ತರಕಾರಿ ತೋಟಗಳಿಗೆ ಬೇಲಿಯಾಗಿ ಕಾಶ ಹುಲ್ಲನ್ನು ಕೊಯ್ಲು ಮಾಡಲಾಗುತ್ತದೆ. ಎಲೆಗಳು ಒರಟು ಮತ್ತು ರೇಖೀಯವಾಗಿರುತ್ತವೆ, ೦.೫ ಇಂದ ೧ ಮೀಟರ್ ಉದ್ದವಿರುತ್ತವೆ. ಹೂಗೊಂಚಲುಗಳು ಬಿಳಿ ಮತ್ತು ನೆಟ್ಟಗಿರುವ ಗರಿಯಂಥ ಪುಷ್ಪಗುಚ್ಛಗಳಾಗಿರುತ್ತವೆ, ಉದ್ದ ೧೫-೩೦ ಸೆ.ಮಿ. ಶಾಖೆಗಳು ತೆಳ್ಳಗೆ ಮತ್ತು ಸುರುಳಿಯಾಕಾರದ್ದಾಗಿರುತ್ತವೆ. ಸಂಧಿಗಳು ಮೃದು ಬಿಳಿ ರೋಮಗಳಿಂದ ಆವರಿಸಲ್ಪಟ್ಟಿರುತ್ತವೆ. ಜೊಂಡುಗಳನ್ನು ಚಾಪೆಗಳು ಮತ್ತು ಪರದೆಗಳಾಗಿ ತಯಾರಿಸಲಾಗುತ್ತದೆ.[೨]

ರೋಗ ನಿರೋಧಕ ಕಬ್ಬಿನ ತಳಿಗಳನ್ನು ಉತ್ಪತ್ತಿಮಾಡಲು ಈ ಜಾತಿಯನ್ನು ಆರ್ಥಿಕವಾಗಿ ಮುಖ್ಯವಾದ ಸಂಬಂಧಿ ಸಸ್ಯವಾದ ಕಬ್ಬಿನೊಂದಿಗೆ ಮಿಶ್ರತಳಿ ಮಾಡಲಾಗುತ್ತದೆ. ಎಳೆಯ ಎಲೆಗಳನ್ನು ಭಾರತದಲ್ಲಿ ಎಮ್ಮೆಗಳು ಮತ್ತು ದನಗಳಿಗೆ ಮೇವಾಗಿ ಬಳಸಲಾಗುತ್ತದೆ, ಮತ್ತು ಇತರ ಪ್ರದೇಶಗಳಲ್ಲಿ ಆನೆಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಎಳೆಯ ಎಲೆಗಳನ್ನು ಒಣಹುಲ್ಲಾಗಿಯೂ ಮಾಡಲಾಗುತ್ತದೆ. ಎಳೆಯ ಚಿಗುರುಗಳನ್ನು ತರಕಾರಿಯಾಗಿ ಇಂಡೊನೇಷ್ಯಾದಲ್ಲಿ ಬೇಯಿಸಲಾಗುತ್ತದೆ. ಬೀಜ ಧಾನ್ಯಗಳನ್ನು ಉಗಾಂಡಾದಲ್ಲಿ ತಿನ್ನಲಾಗುತ್ತದೆ. ಆಯುರ್ವೇದಿಕ ಔಷಧಿಯಲ್ಲಿ ಇದರ ಬೇರುಗಳನ್ನು ಸಿಹಿ, ಸಂಕೋಚಕ ಮತ್ತು ಮೂತ್ರವರ್ಧಕವೆಂದು ಪರಿಗಣಿಸಲಾಗುತ್ತದೆ. ಇದನ್ನು ಉಸಿರಾಟದ ಸಮಸ್ಯೆಗಳು, ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಎಲೆಗಳನ್ನು ಪೊರಕೆಯನ್ನು ತಯಾರಿಸಲು ಬಳಸಲಾಗುತ್ತದೆ. ಕಾಂಡಗಳನ್ನು ಬಾಣದ ಹಿಡಿಕೆಗಳು, ಮೀನಿನ ಬಲೆಗಳು ಮತ್ತು ಹಾಸಿಗೆಗಳನ್ನು ತಯಾರಿಸಲು ಬಳಸಲಾಗುತ್ತದೆ ಅಥವಾ ಕಾಗದವನ್ನು ತಯಾರಿಸಲು ತಿಳ್ಳಾಗಿ ಸಂಸ್ಕರಿಸಲಾಗುತ್ತದೆ. ಈ ಸಸ್ಯಜಾತಿಯು ಬ್ರಾಹ್ಮಣರನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗಿದೆ. ಎಲೆಗಳನ್ನು ಬ್ರಹ್ಮ ದೇವರ ಧಾರ್ಮಿಕ ಪೂಜೆಯಲ್ಲಿ ಬಳಸಲಾಗುತ್ತದೆ. [೩]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು" (PDF). Archived from the original (PDF) on 2013-12-03. Retrieved 2018-12-30.
  2. http://www.flowersofindia.net/catalog/slides/Kans%20Grass.html
  3. https://florafaunaweb.nparks.gov.sg/Special-Pages/plant-detail.aspx?id=3340[ಶಾಶ್ವತವಾಗಿ ಮಡಿದ ಕೊಂಡಿ]