ವಿಷಯಕ್ಕೆ ಹೋಗು

ಕಾಡು ಇಪ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಡು ಇಪ್ಪೆಯು ಗಿಡ್ಡ ಕಾಂಡದ, ಹರಡಿದ ರೆಂಬೆಗಳ, ದೊಡ್ಡ ದುಂಡನೆಯ ಹಂದರದ, ಅಸ್ಥಿರ ಪರ್ಣವೃಕ್ಷ (ಬಾಸ್ಸಿಯ ಲ್ಯಾಟಿಫೊಲಿಯ). ತೊಗಟೆ ಬಣ್ಣ ಬೂದು. ಇದು ಉದ್ದುದ್ದನೆಯ ಸೀಳುಗಳಿಂದ ಕೂಡಿದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರದ ಕೆಲವು ಭಾಗಗಳಲ್ಲೂ ಒರಿಸ್ಸ, ಉತ್ತರ ಪ್ರದೇಶ, ಹಿಮಾಲಯ ತಪ್ಪಲಿನ ಕೆಲವು ಭಾಗಗಳಲ್ಲೂ ಇದರ ವ್ಯಾಪ್ತಿ ಇದೆ, ಮೈಸೂರು ದೇಶದಲ್ಲಿ ಬಲು ವಿರಳ.

ಇದರ ಹೂಗಳು ಮಾರ್ಚ-ಏಪ್ರಿಲ್‍ನಲ್ಲಿ ಅರಳುತ್ತವೆ. ಹೂಗಳ ತಿರುಳು ಮೆತು, ರುಚಿ ಸಿಹಿ. ಇವು ಅರಳುತ್ತಿದ್ದಂತೆಯೇ ಉದುರುವುವು. ಇವನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಮಾಡಿ ಹಿಟ್ಟಿನೊಂದಿಗೆ ರೊಟ್ಟಿಗೆ ಉಪಯೋಗಿಸುತ್ತಾರೆ. ಕ್ಷಾಮ ಕಾಲದಲ್ಲಿ ಜನರಿಗೆ ಇದರ ನೆರವು ಹೆಚ್ಚಿನದು. ಹೂಗಳಿಂದ ಮಧ್ಯಸಾರವನ್ನು ತಯಾರು ಮಾಡಬಹುದು. ಆಗಸ್ಟ್‍ನಲ್ಲಿ ಕಾಯಿ ಮಾಗುವುದು. ಬೀಜದಿಂದ ದೊರೆಯುವ ಮಂದವಾದ ಎಣ್ಣೆ ಕೃತಕ ಬೆಣ್ಣೆ (ಮಾರ್ಗರೈನ್), ಗ್ಲಿಸರಿನ್, ಸೋಪುಗಳ ತಯಾರಿಕೆಗಳಿಗೆ ಉಪಯುಕ್ತ. ಚೌಬೀನೆ ಉಪಯುಕ್ತವಾದರೂ ಹೂ, ಬೀಜಗಳ ಉಪಯುಕ್ತತೆ ಹೆಚ್ಚಿನದಾಗಿರುವುದರಿಂದ ಅದಕ್ಕಾಗಿ ಮರವನ್ನು ಉರುಳಿಸುವುದಿಲ್ಲ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • "Madhuca longifolia (J. Konig) J. F. Macbr". Integrated Taxonomic Information System.
  • Alternative edible oil from mahua seeds Archived 2007-10-01 ವೇಬ್ಯಾಕ್ ಮೆಷಿನ್ ನಲ್ಲಿ., The Hindu
  • Mowrah Butter, OilsByNature.com
  • Famine Foods
  • Use of Mahua Oil (Madhuca indica) as a Diesel Fuel Extender
  • WWF India Mahua[ಶಾಶ್ವತವಾಗಿ ಮಡಿದ ಕೊಂಡಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: