ಕಾಗೆ ಮಾಂಬಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಗೆ ಮಾಂಬಳ್ಳಿ
Indian berry (Anamirta cocculus)
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
ಗಣ:
ಕುಟುಂಬ:
ಕುಲ:
ಪ್ರಜಾತಿ:
A. cocculus
Binomial name
Anamirta cocculus
(L.) Wight & Arn., 1834

ಕಾಗೆ ಮಾಂಬಳ್ಳಿ(Indian Berry,Fish berry) ಭಾರತ,ಬರ್ಮಾ ಮತ್ತು ಮಲಯಗಳ ಅರಣ್ಯಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಒಂದು ಬಳ್ಳಿ ಸಸ್ಯ.

ಸಸ್ಯ ಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದೆ.ಅನಾಮಿರ್ಟ ಕಾಕ್ಯುಲಸ್ ಎಂಬುದು ವೈಜ್ಞಾನಿಕ ಹೆಸರು.ಚಿಪ್ಪುಳ ಕೋಲು ಕನ್ನಡದ ಸಾಮಾನ್ಯ ಹೆಸರು.ಕಾಕಮಾರಿ ಎಂಬುದು ಸಂಸ್ಕ್ರತ ಭಾಷೆಯ ಹೆಸರು.

ಲಕ್ಷಣಗಳು[ಬದಲಾಯಿಸಿ]

ಗಾಢ ಹಸಿರಿನ ಅಗಲವಾದ ಎಲೆ. ಸುಮಾರು ೧೦ ಸೆಂಟಿಮೀಟರ್ ದಪ್ಪದಷ್ಟು ಬೆಳೆಯುವ ಗಟ್ಟಿಯಾದ ಬಳ್ಳಿ.ಹಳದಿ ಮಿಶ್ರಿತ ಬಿಳಿ ಬಣ್ಣದ ಸಣ್ಣ ಹೂಗಳು.ನವಿರು ಸುವಾಸನೆ ಇದೆ.

ಔಷಧೀಯ ಗುಣಗಳು[ಬದಲಾಯಿಸಿ]

ಒಣ ಬೀಜಗಳು
ಒಣ ಬೀಜಗಳ ಒಳನೋಟ

ಇದರ ಕಾಯಿ ವಿಷಪೂರಿತವಾಗಿದೆ.ಸಾಂಪ್ರದಾಯಿಕ ಕ್ರಿಮಿನಾಶಕವಾಗಿ ಉಪಯೋಗದಲ್ಲಿದೆ.ಮೀನು ಹಿಡಿಯಲು ಇದರ ಬೀಜವನ್ನು ಉಪಯೋಗಿಸುವರು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಚರ್ಮ ರೋಗಗಳಿಗೆ ಮತ್ತು ಕಫ ದೋಷಗಳಿಗೆ ಬೇಕಾದ ಔಷಧ ತಯಾರಿಯಲ್ಲಿ ಬಳಸುವರು.