ಕಾಗದದ ಮರುಬಳಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.


ಪರಿಚಯ[ಬದಲಾಯಿಸಿ]

ಕಾಗದದ ಮರುಬಳಿಕೆ ಎಂದರೇ, ಹಳೇಯ ಉಪಯೋಗಿಸಿರುವ ಕಾಗದಗಳನ್ನು, ಪುನರ್ಬಳಿಕೆಗಾಗಿ ಹೊಸ ವಸ್ತುಗಳನ್ನಾಗಿ ಪರಿವರ್ತಿಸುವುದು. ಈ ಪ್ರಕ್ರಿಯೆಯು ಸುಮಾರು ೧೯ನೇ ಶತಮಾನದಿಂದ ನಡೆಯುತ್ತಾ ಬರುತ್ತಿದೆ. ದಿನಾಲು ಟನ್ನು ಗಟ್ಟಲೆ ಕಸವನ್ನು ಜನ ಪರಿಸರಕ್ಕೆ ಎಸೆಯುತ್ತಾರೆ. ಅದರಿಂದ ಪರಿಸರ ಮಲಿನಗೊಂಡು ನಮ್ಮ ಜೀವನ ಕಷ್ತವಾಗುತ್ತದೆ. ಆದರಿಂದ ಆದಷ್ಟು ಕಸವನ್ನು ಮತ್ತೆ ಬಳಸಲು ಪ್ರಯತ್ನಿಸಬೇಕು.


ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾಗದದ ಮರುಬಳಿಕೆ[ಬದಲಾಯಿಸಿ]

ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ "ಸಿ. ಎಸ್. ಎ" ಎಂಬ ಸೊಘವು ಈ ಯೋಜನೆಯನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾರಂಭಿಸಿದರು.


ಮೊದಲನೇಯ ಹಂತ[ಬದಲಾಯಿಸಿ]

ಕ್ರೈಸ್ಟ್ ವಿಶ್ವವಿದ್ಯಾಲಯದ ಆವರಣದಲ್ಲಿ ಹಲವಾರು ಸ್ಥಳಗಳಲ್ಲಿ ಎರಡು ಬೇರೆ ಬೇರೆ ವರ್ಣಗಳ ಕಸದ ಬುಟ್ಟಿಗಲನ್ನು ಇಡಲಗಿದೆ. ಅವುಗಳಲ್ಲಿ, ಒಂದು ಹಸಿ ಕಸವನ್ನು ಹಾಕಲು ಇಡಲಾಗಿದೆ, ಮತ್ತೊಂದು ಒಣಗಿರುವ ಕಸವನ್ನು ಹಾಕಲು ಇಡಲಾಗಿದೆ. ಬುಟ್ಟಿಗಳ ಮೇಲೆ ಬರೆದ ನಿಯಮಕ್ಕೆ ಅನುಸಾರವಾಗಿ ಜನರೆಲ್ಲ ಸಹ ಕಸವನ್ನು ಆಯಾಯ ಬುಟ್ಟಿಗಳಲ್ಲೇ ಹಾಕುತ್ತಾರೆ. ಈ ರೀತಿ ಕಸವನ್ನು ಬೇರ್ಪಡಿಸುವುದು ಈ ಮರುಬಳಿಕೆ ಪ್ರಕ್ರಿಯೆಯ ಮೊದಲನೆಯ ಹಂತ.

ಎರಡನೇಯ ಹಂತ[ಬದಲಾಯಿಸಿ]

ನಂತರ ಈ ಪ್ರಕ್ರಿಯೆಗಾಗಿ ನೇಮಿಸಿರುವ ಮಹಿಳೆಯರು ತಳ್ಳುವ ಗಾಡಿಗಳ ಸಹಾಯದಿಂದ, ಶೇಖರಗೊಂಡಿರುವ ಕಸವನ್ನು ಪ್ರಕ್ರಿಯೆ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಹೊಗುತ್ತಾರೆ. ಇಲ್ಲಿ ಸಿಕ್ಕಿರುವ ಒಣ ಕಸವನ್ನು ಮತ್ತೊಮ್ಮೆ ಹಲವಾರು ಬಗೆಗೆ ಬೇರ್ಪಡಿಸಲಾಗುತ್ತದೆ. ಇದು ಮರುಬಳಿಕೆಯ ಎರಡನೇ ಹಂತ. ಸುಮಾರು ಹನ್ನೆರದಡು ಬಗೆಗೆ ಬೇರ್ಪಡಿಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದ ಬಗೆಗಳು:-

 • ಕಾಗದಗಳು
 • ಪ್ಲಾಸ್ಟಿಕ್ (ಬಾಟಲ್ ಹಾಗು ಚೀಲಗಳು).

ಮುಂದಿನ ಹಂತಕ್ಕೆ ಕೇವಲ ಕಾಗದಗಳನ್ನು ತೆಗೆದುಕೊಳ್ಳಲಾಗುತ್ತದೆ.


ಮೂರನೇಯ ಹಂತ[ಬದಲಾಯಿಸಿ]

ಮೂರನೇಯ ಹಂತ ಬಹು ಪ್ರಮುಖವಾದದ್ದು. ಬಿಸಾಡಲಾಗಿರುವ ಕಾಗದಗಳನ್ನು ಈ ಹಂತದಲ್ಲಿಯೇ ಪುನರ್ಬಳಿಕೆಗಾಗಿ ಹೊಸದಂತೆ ತಯಾರಿಸಲಾಗುವುದು. ಉಪಯೋಗಿಸಿ, ಬಿಸಾಡಲಾಗಿರುವ ಕಾಗದವನ್ನು ಮೊದಲು "ಬೀಟರ್" (ಈ ಯಂತ್ರವು, ಹಾಕಿದ ವಸ್ತುಗಳನ್ನು ಮಿಕ್ಸರ್-ಗ್ರೈಂಡರ್ ನ ಹಾಗೆ ಒರ್ಬುತ್ತದೆ) ಎಂಬ ಯಂತ್ರದೊಳಗೆ ಹಾಕಲಾಗುತ್ತದೆ. ಈ ಯಂತ್ರವನ್ನು ಮೊದಲೇ ಅರ್ಧದಷ್ಟು ನೀರಿನಿಂದ ತುಂಬಿರಬೆಕಾಗುತ್ತದೆ. ಅದರ ನಂತರ ಸಮ ಕ್ರಮವಾಗಿ ಕಾಗದ ಹಾಗು ಹತ್ತಿಯನ್ನು ಅಥವಾ ಬಟ್ಟೆಗಳನ್ನು ತಯಾರು ಮಾಡುವಾಗ ಉಳಿಯುವ ಭಾಗವನ್ನು ಸೇರಿಸಿ ಈ ಯಂತ್ರದೊಳಗೆ ಹಾಕಲಾಗುತ್ತದೆ. ಇದನ್ನು ತಮಿಳು ನಾಡಿನ ಈರೋಡ್ ಎಂಬ ಸ್ಥಳದಿಂದ ಖರೀದಿಸಲಾಗುತ್ತದೆ. ಕಾಗದವನ್ನು ಗಟ್ಟಿ ಮಾಡಲು ಹಾಕಲಾಗುತ್ತದೆ. ಎರಡು ಕೇ.ಜಿ. ಕಾಗದ ಹಾಗು ಎರಡು ಕೇ.ಜಿ. ಹತ್ತಿಯನ್ನು ನೀರಿನೊಂದಿಗೆ ಸೇರಿಸಿ ಆ ಯಂತ್ರವನ್ನು ಸುಮಾರು ೩೦ ನಿಮಿಷಗಳ ಕಾಲ ಓಡಿಸಿದ ನಂತರ ತೆಳುವಾದ ನುಣ್ಣ ಮಿಶ್ರಣ ತಯಾರಾಗುತ್ತದೆ. ಈ ಮಿಶ್ರಣವನ್ನು "ಪಲ್ಪ್" (pulp) ಎಂದು ಹೆಸರು.

ಬೀಟರ್ ಯಂತ್ರ
ಪಲ್ಪ್

ಇದಾದ ನಂತರ "ಯುನಿವಿಟ್" (univit) ಎಂಬ ಯಂತ್ರವನ್ನು ಈ ಪಲ್ಪ್ ಗೆ ಒಂದು ಧೃಡವಾದ ರೂಪಾಕಾರ ಕೊಡಲು ಉಪಯೋಗಿಸಲಾಗುತ್ತದೆ. ಈ ಯಂತ್ರವು ಒಂದು ದೊಡ ಪೆಟ್ಟಿಗೆಯಹಾಗಿದ್ದು , ಇದರ ಮುಕ್ಕಾಲು ಭಾಗದಷ್ತು ನೀರು ತುಂಬಿಸಬೇಕು. ಇದರಲ್ಲಿ ಒಂದು ಅಲುಮೀನಿಯಮ್ ಹಾಳೆ (aluminium plate) ಇರುತ್ತದೆ. ಇದರ ಮೇಲೆ ಬೇಕಾದ ದಪ್ಪಕ್ಕೆ ಅನುಸಾರವಾಗಿ ಪಲ್ಪನ್ನು ಹಾಕಬೇಕು. ಒಂದು ಪ್ಲಾಸ್ಟಿಕ್ಕಿನ ಚೋಂಬಿನಷ್ಟು ಹಾಕಿದರೆ, ೩೦೦ gsmನಷ್ಟು ದಪ್ಪದ ಹೊಸ ಕಾಗದದ ಹಾಳೆ ಮಾಡಬಹುದು. ಅರ್ಧ ಚೊಂಬಿನಷ್ಟು ಹಾಕಿದರೆ, ೨೦೦ gsmನಷ್ಟು ದಪ್ಪದ ಹಾಳೆ ತಯಾರು ಮಾಡಬಹುದು. ಪಲ್ಪನ್ನು ನೀರಿನೊಳಗಿರುವ ಅಲುಮೀನಿಯಮ್ ಹಾಳೇಯ ಮೇಲೆ ಹಾಕಿದ ಒಂದು ನಿಮಿಷದ ನಂತರ, ಪಲ್ಪ್ ಹೊಂದಿರುವ ಅಲುಮೀನಿಯಮ್ ಹಾಳೆ ಮಾತ್ರ ಮೇಲಕ್ಕೆ ಬರುತ್ತದೆ. ನಂತರ ಒಂದು ಮೇಜಿನ ಮೇಲೆ ಬಟ್ಟೆಯನ್ನು ಆರಿಸಿ, ಅದರ ಮೇಲೆ ಆಕಾರ ಪಡೆದಿರುವ ಪಲ್ಪನ್ನು ಹಾಕಿ, ಮೇಲೆ ಮತ್ತೋಂದು ಬಟ್ಟೆಯಿಂದ ಮುಚ್ಚಲಾಗುತ್ತದೆ. ಆಗ ಈ ಪಲ್ಪ್ ಬಟ್ಟೆಗೆ ಅಂಟಿಜಕೊಳ್ಳುತ್ತದೆ. ಒಂದರ ಮೇಲೊಂದಾಗಿ, ಸುಮಾರು ೨೦ ಅಥವಾ ೩೦ ಹಾಳೆಗಳಾಗುವಷ್ಟು ಜೋಡಿಸಿರುತ್ತಾರೆ.

ಆಕಾರ ಪಡೆದಿರುವ ಪಲ್ಪ್


ನಾಲ್ಕನೇಯ ಹಂತ[ಬದಲಾಯಿಸಿ]

ಇದರಿಂದ ನೀರಿನ ಅಂಶವನ್ನು ತೆಗೆದುಹಾಕುವುದಕ್ಕಾಗಿ ಮತ್ತೊಂದು ಯಂತ್ರವನ್ನು ಉಪಯೋಗಿಸಲಾಗುತ್ತದೆ. ಈ ಯಂತ್ರಕ್ಕೆ "ಸ್ಕ್ರೂ ಪ್ರೆಸ್ಸ್" ಎಂದು ಹೆಸರು. ಜೋಡಿಸಲಾಗಿರುವ, ಹಾಳೆಯಾಕಾರ ತೆಗೆದುಕೊಂಡಿರುವ ಪಲ್ಪನ್ನು ಬಟ್ಟೆಯ ಸಮೇತವಾಗಿ ಈ ಯಂತ್ರದಡಿ ಇಟ್ಟು ಒತ್ತಲಾಗುತ್ತದೆ. ಆಗ, ಅದರಿಂದ ೮೦ ಪ್ರತಿಷತ ನೀರಿನ ಅಂಶವನ್ನು ತೆಗೆದುಹಾಕಲಾಗುತ್ತದೆ.

ಸ್ಕ್ರೂ ಪ್ರೆಸ್ಸ್ ಯಂತ್ರ

ಇದೆಲ್ಲ ಆದ ನಂತರ ಹೊರಗಿನ ಬಿಸಿಲಿನಲ್ಲಿ ಒಣಗಲು ಹಾಕಲಾಗುತ್ತದೆ. ಸ್ವಲ್ಪ ಒಣಗಿದ ನಂತರ ಅದನ್ನು ಬಟ್ಟೆಯಿಂದ ಬೇರ್ಪಡಿಸಿ ಒಣಗಿಸಲಾಗುತ್ತದೆ. ಸಂಪೂರ್ಣವಾಗಿ ಒಣಗಿದ ನಂತರ, ಅದನ್ನು ನೆಟ್ಟಗೆ ನುಣ್ಣಗೆ ಮಾಡಲು, ಮತ್ತೊಂದು ಯಂತ್ರವನ್ನು ಉಪಯೋಗಿಸುತ್ತಾರೆ. ಇದರಲ್ಲಿ ಎರಡು ಅಲುಮೀನಿಯಮ್ ಹಾಳೆಗಳ ಮಧ್ಯೆ ಕಾಗದದ ಹಾಳೆಯನ್ನಿಟ್ಟು ಸ್ವಲ್ಪ ಬಿಸಿ ಮಾಡಿ ಒತ್ತಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಾಗದದ ಹಾಳೆ ಉಪಯೋಗಿಸಲು ತಯಾರಾಗುತ್ತದೆ.

ಬಿಸಿಲಲ್ಲಿ


ಹೆಚ್ಚುವರಿ ಕೆಲಸ[ಬದಲಾಯಿಸಿ]

ಕೇವಲ ಬಿಳಿ ಹಾಳೆ ಮಾತ್ರವಲ್ಲದೆ, ಈ ಹಾಳೆಗಳಿಗೆ ಬಣ್ಣವನ್ನು ಸಹ ಕಟ್ಟಿ ಉಪಯೋಗಿಸಬಹುದು.ಇದಕ್ಕೆ ಬಣ್ಣದ ಪುಡಿಯನ್ನು ಮಾರುಕಟ್ಟೆಯಿಂದ ಖರೀದಿಸಲಾಗುತ್ತದೆ. ಮೊದಲು ಮೈದ ಅಥವಾ ಗಂಜಿಯ ಪುಡಿಯನ್ನು ಬೇಯಿಸಿಕೊಂಡು, ಅದಕ್ಕೆ ಬಣ್ಣವನ್ನು ಸೇರಿಸಿ, ತೆಳುವಾದ ಮಿಶ್ರಣ ತಯಾರಿಸಬೇಕು. ನಂತರ ಬಿಳಿ ಹಾಳೆಗೆ ಬ್ರಷ್(brush)ನಿಂದ ಬಳಿಯಲಾಗುತ್ತದೆ. ಅದರ ಮೇಲೆ ಬೆರಳಿನಿಂದ, ಹತ್ತಿಯ ಉಂಡೆಯಿಂದ, ಬಾಚಣಿಕೆಯಿಂದ ವಿವಿಧಾಕಾರದ ಅಲಂಕಾರವನ್ನು ಮಾಡಿ ಸಹ ಉಪಯೋಗಿಸಬಹುದು.


ಮರುಬಳಿಕೆಗಾಗಿ ತಯಾರು ಮಾಡುವ ವಸ್ತುಗಳು[ಬದಲಾಯಿಸಿ]

ಈ ಹಾಳೆಗಳಿಂದ ಬಹಳಷ್ಟು ಉಪಯೋಗಕಾರಿ ವಸ್ತುಗಳನ್ನು ತಯಾರಿಸಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ಸ್ಪರ್ದೆಗಳನ್ನು ನಡೆಸಿದಾಗ, ಸಮಾರಂಭಗಳನ್ನು ನಡೆಸಿದಾಗ, ಉಡುಗೊರೆಗೆ ಕೈ-ಚೀಲ, ಪ್ರಮಾಣ ಪತ್ರಗಳಿಡಲು ಕಾಗದದ ಚೀಲಗಳು ಇತ್ಯಾದಿಗಳನ್ನು ತಯಾರಿಸಿ ಕೊಡಲಾಗುತ್ತದೆ. ಇದರ ಜೊತೆಗೆ ಉಡುಗೊರೆಯ ಡಬ್ಬಿಗಳು, ಪುಸ್ತಕಗಳು, ಚಿತ್ರಪಟಗಳು, ಹೆಂಗಸರ ಕೈ-ಚೀಲ (hand bag) ಇತ್ಯಾದಿಗಳನ್ನು ಸಹ ತಯಾರಿಸಿ, ವಿಶ್ವವಿದ್ಯಾಲಯದ ಆವರಣದಲ್ಲಿ ಹಾಗು ಹೊರಗೂ ಮಾರಲಾಗುತ್ತದೆ.


ಪರಿವರ್ತನ ಸಂಘ[ಬದಲಾಯಿಸಿ]

ಮರುಬಳಿಕೆಯ ಪ್ರಕ್ರಿಯೆಯನ್ನು ನೆರವೇರಿಸಲು ಒಟ್ಟು ಹತ್ತು ಜನ ಮಹಿಳೆಯರಿದ್ದಾರೆ. ಈ ಹತ್ತು ಮಹೆಳೆಯರಲ್ಲಿ, ಆರು ಜನ ಒಟ್ಟಾಗಿ ಸಿಕ್ಕಿರುವ ಒಣಕಸವನ್ನು ವಿವಿಧ ಬಗೆಯ ಕಸವನ್ನಾಗಿ ಬೇರ್ಪಡಿಸಿತ್ತಾರೆ, ಹಾಗು ಉಳಿದ ನಾಲ್ಕು ಜನ ಮಹಿಳೆಯರು ಆ ಆರು ಜನ ಬೇರ್ಪಡಿಸಿರುವ ಕಸದಿಂದ, ಕಾಗದದ ರೂಪದಲ್ಲಿರುವ ಕಸವನ್ನು ತಂದು ಅದನ್ನು ಮರುಬಳಿಕೆಗಾಗಿ ಉಪಯೋಗಿಸುತ್ತಾರೆ. ಈ ಮಹಿಳೆಯರ ಜೊತೆಗೆ, ಹಸಿ ಕಸವನ್ನು ಸಹ ಮರುಬಳಿಕೆಗಾಗಿ ತಯಾರುಮಾದುವ ಮಹಿಳೆಯರನ್ನೂ ಸೇರಿಸಿ "ಪರಿವರ್ತನ ಸಂಘ" ಎಂಬ ಒಂದು ಗುಂಪು ಕಟ್ಟಲಾಗಿದೆ. ಈ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಮಹಿಳೆಯರು, ಬೆಂಗಳೂರಿನ ರಾಜೇಂದ್ರ ನಗರ ಹಾಗು ಲಕ್ಷ್ಮಣ್ ರಾವ್ ನಗರದ ಜನರು. ಇವರು ಈ ಕೆಲಸ ಮಾಡಿ, ಸಂಪಾದಿಸಿ ತಮ್ಮ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ನೋಡುತ್ತಾರೆ. ಮರುಬಳಿಕೆಗಾಗಿ ತಯಾರು ಮಾಡಿರುವ ವಸ್ತುಗಳ ಮಾರಾಟದಿಂದ ಒಂದು ತಿಂಗಳಿಗೆ ಸುಮಾರು ೧,೨೫,೦೦೦ ರುಪಾಯಿಗಳ ಸಂಪಾದನೆ ಆಗುತ್ತದೆ. ಇಡೀ ಸಂಪಾದನೆಯನ್ನು ಪರಿವರ್ತನ ಸಂಘ್ದಲ್ಲಿಯೇ ಹಾಕಲಾಗುತ್ತದೆ. ಈ ಹಣದಿಂದಲೇ, ಈಲ್ಲಿಕೆಲಸ ಮಾದುವ ಮಹಿಳೆಯರಿಗೂ ಸಂಬಳ ಕೊಡಲಾಗುವುದು. ಸಂಬಳ ಕೊಟ್ಟ ನಂತರ ಉಳಿದ ಹಣವನ್ನು ಸಂಘದಲ್ಲಿಯೇ ಇರಿಸೊಲಾಗುತ್ತದೆ. ಇವರಿಗೆ ಸಾಲ ಬೇಕಾದ ಸಂದರ್ಭದಲ್ಲಿ, ಈ ಹಣದಿಂದ ಕಡಿಮೆ ಬಡ್ಡಿಗೆ ಸಾಲ ನೀಡಲಾಗುತ್ತದೆ.


ಕಾಗದದ ಮರುಬಳಿಕೆಯಿಂದ ಆಗುವ ಸಮಸ್ಯೆಗಳು[ಬದಲಾಯಿಸಿ]

 • ಈ ಪ್ರಕ್ರಿಯೆಯನ್ನು ಮಾಡುವ ಕಾರ್ಖಾನೆಗಳ ಸುತ್ತ-ಮುತ್ತಲಿನ ಮನೆಗಳಿಗೆ ಮಾಲಿನ್ಯದ ತೊಂದರೆ ಉಂಟಾಗಬಹುದು.
 • ಮರುಬಳಿಕೆಯ ವೆಛ ಹೊಸದಾಗಿ ಕಾಗದ ತಯಾರು ಮಾಡುವ ಪ್ರಕ್ರಿಯೆಗಿಂತಲು ಹೆಚ್ಚು. ಈ ವೆಛ್ಛ ಪರಿಣಾಮಕಾರಿ ಅಲ್ಲ.

ಇದು ವಾರ್ಷಿಕವಾಗಿ ನಿವ್ವಳ ನಷ್ಟವನ್ನುಂಟು ಮಾಡುತ್ತದೆ.

 • ಕಾಗದದ ಮರುಬಳಿಕೆಗಾಗಿಯೇ, ಪ್ರತ್ಯೇಕವಾದ ಕಾರ್ಖಾನೆಗಳನ್ನು ಸ್ಥಾಪಿಸಬೇಕು.
 • ಉದ್ಯೋಗಿಗಳಿಗೆ, ಕಾರ್ಖಾನೆಗಳಲ್ಲಿ ಜೀವಾಣು ವ್ಯವಹರಿಸುವಾಗ ಅವರಿಗೆ ತೊಂದರೆ ಉಂಟಾಗುತ್ತದೆ.


ಕಾಗದದ ಮರುಬಳಿಕೆಯಿಂದ ಆಗುವ ಲಾಭ[ಬದಲಾಯಿಸಿ]

 • ಪ್ರತಿ ಟನ್ ಕಾಗದವನ್ನು ಮರುಬಳಿಸುವುದರಿಂದ ೭ ಮರಗಳು ಉಳಿಯುತ್ತವೆ. ಬೇಡಿಕೆಯನ್ನು ಕಡಿಮೆ ಮಾಡುತ್ತದೆ.

ಕಾಡುಗಳ ಸಂರಕ್ಷಣೆಗಾಗಿ ಹೆಚ್ಚಿನ ಸಹಾಯ ಮಾಡುತ್ತದೆ.

 • ೧ ಟನ್ ಕಾಗದದ ಮರುಬಳಿಕೆಯಿಂದ, ೭೦೦೦ ಗ್ಯಾಲನ್ ಅಷ್ಟು ನೀರನ್ನು ಉಳಿಸಬಹುದು.
 • ಸುಮಾರು ೩೮೦ ಗ್ಯಾಲನ್ ಅಷ್ಟು ತೈಲವನ್ನು ಉಳಿಸಬಹುದು.
 • ಕಾಗದದ ಮರುಬಳಿಕೆಯಿಂದಾಗಿ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಒಂದು ಮೆಟ್ರಿಕ್ ಟನ್ ಅಷ್ಟು ಇಂಗಾಲದ ಸಮಾನವನ್ನು

ಕಡಿಮೆ ಮಾಡಬಹುದು

 • ಈ ಕಾರ್ಯವನ್ನು ನೆರವೇರಿಸುವ ಕಾರ್ಖಾನೆಗಳನ್ನು ಸ್ಥಾಪಿಸುವುದರಿಂದ, ನಿರುದ್ಯೋಗಿ ಜನರಿಗೆ, ಉದ್ಯೋಗ ದೊರೆಯುತ್ತದೆ.
 • ಕಾಗದದ ಮರುಬಳಿಕೆಯಿಂದ, ಸರಾಸರಿ ಆರು ತಿಂಗಳಳಿಗಾಗುವಷ್ಟು ವಿದ್ಯುತ್ತನ್ನು ಉಳಿಸಬಹುದು.
 • ನೆಲಭರ್ತಿಯಲ್ಲಿನ ಜಾಗವನ್ನು ೩.೩ ಕ್ಯೂಬಿಕ್ ಯಾರ್ಡಷ್ಟು ಉಳಿಸಬಹುದು.
 • ಕಾಗದದ ಮರುಬಳಿಕೆಯಿಂದ ಸೊಗಸಾದ ಉಡುಗೆಗಳನ್ನು ತಯಾರಿಸಬಹುದು.
 • ಜನರಲ್ಲಿ ಪರಿಸರದ ಬಗ್ಗೆ ಅರಿವನ್ನು ಮೂಡಿಸುತ್ತದೆ.
 • ಮರುಬಳಿಕೆಯ ಕಾಗದದಿಂದ ಮಾಡಿದ ಉತ್ಪನ್ನಗಳ ಸಂಖ್ಯೆ ವೇಗವಾಗಿ ಹಬ್ಬಿದೆ.

ಟಾಯ್ಲೆಟ್ ಪೇಪರ್ (toilet paper) ಇಂದ ಶುಭಾಶಯ ಪತ್ರಗಳವರೆಗು ಹಲವಾರು ರೀತಿಯ ಕಾಗದಗಳನ್ನು ತಯಾರಿಸಬಹುದು.

 • ಮರುಬಳಿಕೆ ಮತ್ತು ಜೈವಿಕ ವಸ್ತುಗಳಿಂದ ವೈಜ್ಞಾನಿಕ ಪ್ರಗತಿಗಳು ಉತ್ತೇಜಿಸುತ್ತವೆ.
 • ಸರಕಾರ ಮತ್ತು ಉದ್ದಿಮೆಗಳು ಪರಿಸರವನ್ನು ಸಂರಕ್ಷಿಸುವ ಮತ್ತು ಗೌರವಿಸುವ ಸಂಸ್ಥೆಗಳಾನ್ನು ಪರಗಣಿಸು ನೀತಿಗಳನ್ನು ಅರ್ಜಿ ಮಾಡುತ್ತದೆ.
 • ಕಾಗದದ ಮರುಬಳಿಕೆಯಿಂದ ಹೆಚ್ಚಿನ ಮನೆಯ ಸರಕುಗಳು ಹಾಗು ಪೇಪರ್ ಟವಲ್ ನಿರ್ಮಾಣವಾಗುತ್ತದೆ.

ಕೊನೇಯದಾಗಿ, ಸಾರ್ವಜನಿಕ ಮರುಬಳಿಕೆ ಅಧಿಕಾರಿಗಳು, ಕಾಗದವನ್ನು ಮರುಬಳಿಸುವುದರಿಂದ ಪರಿಸರದ ಸಂಪನ್ನೂಲಗಳನ್ನು ಸಂರಕ್ಷಿಸಬಹುದು ಎಂದು ಹೇಳಿದ್ದಾರೆ. ಹೊಸ ಕಾಗದಗಳನ್ನು ತಯಾರಿಸುವುದರಿಂದ, ಮರಗಳನ್ನು ಕದಿಯಬೇಕಾಗುತ್ತದೆ, ಹಾನಿಕಾರಿ ರಾಸಾಯ್ನಿಕ ದ್ರವಗಳ ಉಪಯೋಗವಾಗುತ್ತದೆ. ಇದನ್ನು ಕೆರೆ ಹಾಗು ನದಿಗಳಿಗೆ ಬಿಟ್ಟಾಗ ಅವೂ ಮಲಿನಗೊಳ್ಳುತ್ತವೆ. ಈಗ ನೀವು ಸಹ ಈ ಪ್ರಕ್ರಿಯೆಯ ಮಹತ್ವವನ್ನು ಅರ್ಥ ಮದಿಕೊಂಡಿದ್ದೇರೆ ಎಂದು ನಂಬಿಕೆ. ನೀವೂ ಎನ್ನು ಮೇಲೆ ಕಾಗದದ ಮರುಬಳಿಕೆಯ ಜೊತೆ ಕೈ ಜೋಡಿಸಿ. ಇದರಿಂದ ಕಾದನ್ನು ಹಾಗು ನಾಡನ್ನು ಉಳಿಸಿ.