ಕಾಕಮಾಚಿ-ಕಾಗೆ ಗಿಡ
| ಕಾಕಮಾಚಿ-ಕಾಗೆ ಗಿಡ | |
|---|---|
| Scientific classification | |
| ಸಾಮ್ರಾಜ್ಯ: | |
| (ಶ್ರೇಣಿಯಿಲ್ಲದ್ದು): | |
| (ಶ್ರೇಣಿಯಿಲ್ಲದ್ದು): | Eudicots
|
| (ಶ್ರೇಣಿಯಿಲ್ಲದ್ದು): | |
| ಗಣ: | |
| ಕುಟುಂಬ: | |
| ಕುಲ: | |
| ಪ್ರಜಾತಿ: | S. nigrum
|
| Binomial name | |
| Solanum nigrum | |
| Subspecies | |
|
S. nigrum subsp. nigrum | |
- ಔಷಧೀಯ ಸಸ್ಯಗಳು - ಕಾಕಿ ಗಿಡ
ಇದು ಮಲೆನಾಡಿನಲ್ಲಿ ಬೆಳೆಯುವ ಕಳೆ ಗಿಡ, ಕೆಲವು ಕಡೆ ಔಷಧಿಗಾಗಿ ಸಾಗುವಳಿ ಮಾಡಿ ಬೆಳೆಯುವ ಪದ್ದತಿಯೂ ಇದೆ. ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲಿಯೂ ಬೆಳೆಯುವುದು. ಸೊಲನೇಸೀ ಕುಟುಂಬಕ್ಕೆ ಸೇರಿದ ಸೊಲೇನಮ್ ನೈಗ್ರಮ್ ಎಂಬ ವೈಜ್ಞಾನಿಕ ಹೆಸರಿನ ಏಕವಾರ್ಷಿಕ ಮೂಲಿಕೆ ಸಸ್ಯ. ಇದಕ್ಕೆ ಕರಿ ಕಾಚಿ ಗಿಡ, ಕಾಕಮುಂಜಿ ಎಂಬ ಹೆಸರುಗಳೂ ಇವೆ. ಸ್ವಾಭಾವಿಕವಾಗಿ ಇದು ಹೊಲ ಮತ್ತು ತೋಟಗಳಲ್ಲಿ ಕಳೆಸಸ್ಯವಾಗಿ ಬೆಳೆಯುತ್ತದೆ.
ಸಸ್ಯ ಲಕ್ಷಣಗಳು
[ಬದಲಾಯಿಸಿ]ಕಾಚಿಹಣ್ಣಿನ ಗಿಡ ಸುಮಾರು 3' ಎತ್ತರಕ್ಕೆ ಬೆಳೆಯುತ್ತದೆ. ಇದರ ಕಾಂಡ ಬಹುಕವಲೊಡೆದು ಹರಡಿರುತ್ತದೆ. ಎಲೆಗಳು ಸರಳ; ಪರ್ಯಾಯವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ ಅಂಚು ನಯವಾಗಿದೆ. ಹೂಗೊಂಚಲು ಮಧ್ಯಾರಂಭಿ (ಸೈಮೋಸ್) ಮಾದರಿಯದು. ಇದು ಎಲೆಗೆ ಅಭಿಮುಖವಾಗಿ ಹುಟ್ಟುತ್ತದೆ. ಹೂಗಳು ದ್ವಿಲಿಂಗಿಗಳು. ಒಂದೊಂದು ಹೂವಿನಲ್ಲೂ 5 ಸಂಯುಕ್ತ ಮಾದರಿಯ ಪುಷ್ಪಪತ್ರಗಳೂ ಒಂದರೊಡನೊಂದು ಕೂಡಿಕೊಂಡ 5 ದಳಗಳೂ 5 ಕೇಸರಿಗಳೂ ಎರಡು ಕಾರ್ಪೆಲುಗಳಿಂದಾದ ಉಚ್ಚಸ್ಥಾನದ ಅಂಡಾಶಯವೂ ಇವೆ. ಪುಷ್ಪಪತ್ರಗಳು ಕಾಯಲ್ಲೂ ಉಳಿದಿರುತ್ತವೆ. ದಳಗಳ ಬಣ್ಣ ಬಿಳಿ. ಕೇಸರಗಳು ದಳಗಳ ಬುಡಕ್ಕೆ ಅಂಟಿಕೊಂಡಿವೆ. ಫಲ ಬೆರಿ ಮಾದರಿಯದು. ಅದರ ಬಣ್ಣ ಕಪ್ಪು.
ಔಷಧೀಯ ಗುಣಗಳು
[ಬದಲಾಯಿಸಿ]ಕಾಕಮಾಚಿ ಎಂಟು ರಸಗಳಿವೆ. ಮಕ್ಕಳಆರೋಗ್ಯ ಕಾಪಾಡಲು ಇದನ್ನು ಬಳಸುವರು. ಇದು ಕಫ ನಾಶಕ. ಹೃದ್ರೋಗ ಸಮಸ್ಯೆಗೂ, ಕೆಮ್ಮು ಉಪಶಮನಕ್ಕೂ ಉತ್ತಮ ಔಷಧಿ ಎಂದು ಹೇಳಲಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಇದರ ಚಿಗುರಿನ ಕುಡಿಯ ತಂಬಳಿ ಉಪಕಾರಿ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲಿ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚದರೆ ಕಜ್ಜಿ,ತುರಿ ಬಾಧೆ ಬರುವುದಿಲ್ಲ, ಬಂದರೆ ವಾಸಿಯಾಗುವುದು. ಸಾಮಾನ್ಯವಾಗಿ ೧೫ ದಿನಕ್ಕೊಮ್ಮೆ ಇದರ ಸೊಪ್ಪಿನ ಮತ್ತು ಕೊಬ್ಬರಿ ಎಣ್ನೆಯ ಮಿಶ್ರಣವನ್ನು ಚಿಕ್ಕ ಶಿಶುಗಳ ಮೈಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿಸುವುದು ಮಲೆನಾಡಿನಲ್ಲಿ ರೂಢಿಯಲ್ಲಿದೆ.
- ಇದು ಮಲಬದ್ದತೆ ನಿವಾರಿಸಲು ಬಹಳ ಉಪಕಾರಿ. ಇದರ ತಂಬಳಿ ಮಾಡಿ ಉಪಯೋಗಿಸಬಹದು. ಇದರ ಔಷಧೀಯ ಗುಣಕ್ಕಾಗಿ ಈ ಗಿಡದ ಸೊಪ್ಪನ್ನು ಕೆಲವರು ಸಾರು ಹುಳಿ ಪಲ್ಯಗಳಲ್ಲಿಯೂ ಬಳಸುವರು.
- ಮಲೆನಾಡಿನಲ್ಲಿ ಇದರ ತಂಬಳಿ ಮಾಡುವರು. ಮಲಬದ್ದತೆ ಇದ್ದಾಗ ಇದರ ಕುಡಿಗಳ ಪಲ್ಯ ಮಾಡಿ ಸೇವಿಸುವರು. ಕಾಕ ಮಾಚಿ ಗಿಡವನ್ನು ಅರೆದು ಕುದಿಸಿ ಮಾಡಿದ ಕಷಾಯ ಮೂಲವ್ಯಾಧಿ, ಚರ್ಮ ರೋಗಕ್ಕೆ, ಪಿತ್ತಕೋಶದ ಸಮಸ್ಯೆಗಳಿಗೆ ಔಷಧವಾಗಿದೆ.
- ಇದರಲ್ಲಿ ಹಳದಿ ಬಣ್ಣದ ಸ್ವಲ್ಪ ದೊಡ್ಡ ತಳಿಯೂ ಇದೆ.
ಇದರ ಎಲ್ಲ ಭಾಗಗಳನ್ನು ಆಯುರ್ವೇದ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಇದರ ಕಾಯಿ, ಎಲೆ ಮತ್ತು ಎಳೆಯ ಕಾಂಡಗಳನ್ನು ಮೂತ್ರೋತ್ತೇಜಕ, ಕಫ ಕತ್ತರಿಸುವ, ದೇಹದ ಪೋಷಣ ವ್ಯಾಪಾರಗಳನ್ನು ಬದಲಾಯಿಸಿ ಅವನ್ನು ಆರೋಗ್ಯಸ್ಥಿತಿಗೆ ತರುವಂಥ, ಶಾಮಕ ಔಷಧಿಗಳಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ಸಂಧಿವಾತ ರೋಗಕ್ಕೂ ಕೆಲವು ಚರ್ಮ ರೋಗಗಳಲ್ಲಿ ಬೆಚ್ಚಾರವಾಗೂ ಬಳಸುವುದುಂಟು. ಇದರ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ವಿಷವಾಗಿ ಪರಿಣಮಿಸುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಸಸ್ಯದ ಎಳೆಯ ಎಲೆಗಳನ್ನು ಸೊಪ್ಪಿನ ತರಕಾರಿಯಾಗಿ ಉಪಯೋಗಿಸುತ್ತಾರೆ. [೧][೨]
ಆಧಾರ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ (BLACK%20NIGHTSHADE)elated to Kakamachi (BLACK NIGHTSHADE)
- ↑ ಸುಧಾ X 19-6=2014-ಚಿಂಚನಾ ಎಸ್.ಎನ್.
