ಕಾಂಗರೂ ಇಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂಗರೂ ಇಲಿಉತ್ತರ ಅಮೇರಿಕ ಪ್ರದೇಶದಲ್ಲಿ ಕಂಡು ಬರುವ ಕಾಂಗರೂವಿನಂತೆ ವರ್ತಿಸುವ ಒಂದು ಜಾತಿಯ ಇಲಿ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಇದು ಹೆಟರೋಮೈಯಿಡೀ ಕುಟುಂಬಕ್ಕೆ ಸೇರಿದ ಡೈಪೋಡೋಮಿಸ್ ಜಾತಿಗೆ ಸೇರಿದೆ. ಇದರಲ್ಲಿ ಸುಮಾರು ೨೦ ಪ್ರಭೇದಗಳನ್ನು ಗುರುತಿಸಲಾಗಿದೆ.

ಶಾರೀರಿಕ ಲಕ್ಷಣಗಳು[ಬದಲಾಯಿಸಿ]

ಉದ್ದವಾದ ಹಿಂಗಾಲು,ಸಣ್ನ ಮುಂಗಾಲು ಮತ್ತು ತುಲನಾತ್ಮಕವಾಗಿ ದೊಡ್ಡ ತಲೆಯನ್ನು ಹೊಂದಿರುತ್ತವೆ. ದೊಡ್ಡ ಕಣ್ಣುಗಳು, ದೇಹಕ್ಕಿಂತ ಉದ್ದವಾದ ಕುಚ್ಚುಳ್ಳ ಬಾಲ ಇದರ ಇತರ ವೈಶಿಷ್ಟ್ಯಗಳು. ಕೆನ್ನೆಯ ಎರಡೂ ಕಡೆ ಆಹಾರವನ್ನು ಕೂಡಿಡಲು ಅನುಕೂಲವಾಗುವಂತೆ ಚೀಲಗಳಿ ರುತ್ತವೆ[೧].ಗಂಡು ಹೆಣ್ಣಿಗಿಂತ ದೊಡ್ಡದಿರುತ್ತದೆ.

ಚಲನೆ[ಬದಲಾಯಿಸಿ]

ಕಾಂಗರೂ ಇಲಿಗಳು ಎರಡು ಕಾಲಿನಲ್ಲಿ ಚಲಿಸುತ್ತವೆ. ಸಾಮನ್ಯವಾಗಿ ೬ ಆಡಿಗಳ ಅಂತರಕ್ಕೆ ಕೆಲವೊಮ್ಮ ೯ ಆಡಿಯವರೇಗೂ ಜಿಗಿಯಬಲ್ಲವು[೨] and reportedly up to 9 feet (2.75 m)[೩].ಇದರ ವೇಗ ಸೆಕೆಂಡಿಗೆ ೧೦ ಆಡಿಗಳಿರುತ್ತದೆ[೪] . ಜಿಗಿತದ ನಡುವೆ ಚುರುಕಾಗಿ ದಿಕ್ಕನ್ನು ಬದಲಿಸಬಲ್ಲುದು[೪].ಇದರ ಈ ಗುಣ ಮತ್ತು ಕೆಲವೊಮ್ಮೆ ನಿಸ್ತೇಜ ಸ್ಥಿತಿಯಲ್ಲಿ ಉಳಿಯುವ ಗುಣ ಇದನ್ನು ತನ್ನ ವೈರಿಗಳಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ[೫] .

ವಾಸ[ಬದಲಾಯಿಸಿ]

ಕಾಂಗರೂ ಇಲಿಗಳು ಬಿಲ ತೋಡಲು ಅನುಕೂಲವಾಗುವ ಜೌಗು ಅಥವಾ ಅರೆಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ[೧] .ಕೆಲವು ಪ್ರಭೇದಗಳು ಹುಲ್ಲುಗಾವಲು ಮತ್ತು ಪೊದೆಕಾಡುಗಳಲ್ಲಿ ಬದುಕುತ್ತವೆ.ಇವುಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಬಿಲಗಳಲ್ಲಿ ವಾಸಿಸು ತ್ತವೆ[೧].ಬಿಲದ ಒಳಗೆ ಹಲವಾರು ಕೋಣೆಗಳನ್ನು ಮಾಡಿಕೊಳ್ಳುತ್ತವೆ[೧].ಕೆಲವೊಮ್ಮೆ ನೂರಾರು ಬಿಲಗಳ ವಸಾಹತುಗಳೂ ಕಂಡು ಬರುತ್ತದೆ..[೬].

ಆಹಾರ[ಬದಲಾಯಿಸಿ]

ಸಾಮಾನ್ಯವಾಗಿ ಕಾಳುಗಳು[೭] . ಕೆಲವೊಮ್ಮೆ ಚಿಗುರು ಸಸ್ಯಗಳನ್ನು, ಕೀಟಗಳನ್ನು ಕೂಡಾ ಭಕ್ಷಿಸುತ್ತವೆ[೧] .ಕೆನ್ನೆಯ ಪಕ್ಕ ಇರುವ ಚೀಲಗಳಲ್ಲಿ ಕಾಳುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ Howard, V.W. 1994. Prevention and Control of Wildlife Damage. S.E. Hygynstrom, R.M. Timm and G.E. Larson. New Mexico, (Cooperative Extension Division, Institute of Agriculture and Natural Resources, University of Nebraska- Lincoln, United States Department of Agriculture, Animal and Plant Health Inspection Service: Animal Damage Control, Great Plains Agricultural Council: Wildlife Committee). B101-B104.
  2. "Merriam's Kangaroo Rat Dipodomys merriami". U. S. Bureau of Land Management web site. Bureau of Land Management. Retrieved 2014-03-26.
  3. Merlin, P. (2014). "Heteromyidae: Kangaroo Rats & Pocket Mice". Arizona-Sonora Desert Museum web site. Arizona-Sonora Desert Museum. Retrieved 2014-03-26.
  4. ೪.೦ ೪.೧ "Animal Guide: Giant Kangaroo Rat". Nature on PBS web site. Public Broadcasting System. 2014. Retrieved 2014-03-26.
  5. Schroder, G. D. (August 1979). "Foraging Behavior and Home Range Utilization of the Bannertail Kangaroo Rat". Ecology. Ecological Society of America. 60 (4): 657–665. JSTOR 1936601.
  6. Reynolds, H.G. 1958. " The Ecology of the Merriam Kangaroo Rat ( Dipodomys merriami Mearns) on the Grazing Lands of Southern Arizona." Ecological Monographs (28):2 111–127.
  7. Morgan, K.R. and M.V. Price. 1992. "Foraging in Heteromyid Rodents: The Energy Cost of Scratch-Digging." Ecology (73):6 2260–2272.