ಕಸೂತಿ ಕುಸುರಿ

ವಿಕಿಪೀಡಿಯ ಇಂದ
Jump to navigation Jump to search
ಕಸೂತಿ ಕುಸುರಿಯಿಂದ ತಯಾರಿಸಲಾದ ರವಿಕೆ
ಮಹಾಭಾರತದಲ್ಲಿ ಕೃಷ್ಣ ಅರ್ಜುನರು ರಥದಲ್ಲಿ ಕುಳಿತ ಕಸೂತಿ ಚಿತ್ರ

ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ ಸಾಂಪ್ರದಾಯಿಕ ಕಸೂತಿ ಕುಸುರಿಯನ್ನು ಜನಪದರು ತಯಾರಿಸುತ್ತಿದ್ದಾರೆ.[೧] ಅತ್ಯಂತ ಸಂಕೀರ್ಣವಾದ ಕಸೂತಿ ಕುಸುರಿ ಕೆಲಸದಲ್ಲಿ ಕೆಲವೊಮ್ಮೆ ೫೦೦೦ದಷ್ಟು ಹೊಲಿಗೆಗಳಿದ್ದು ಇಲ್‍ಕಲ್ ಸಾರಿ, ಅಂಗಿ, ರವಿಕೆ, ಕುರ್ತಗಳಿಗೆ ಬಳಸುತ್ತಿದ್ದರು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ (KTDC)ವು ಭೌಗೋಳಿಕ ಲಕ್ಷಣಗಳ(ಜಿಐ) ರಕ್ಷಣೆಯನ್ನು ಹೊಂದಿದೆ ಮತ್ತು KHDCಯನ್ನು ಆಧರಿಸಿ ಕಸೂತಿಗೆ ಬೌದ್ಧಿಕ ಆಸ್ತಿ ಹಕ್ಕು ಒದಗಿದೆ.[೨]

ಇತಿಹಾಸ[ಬದಲಾಯಿಸಿ]

ಕಸೂತಿ ಎಂಬ ಪದವು ಚಾಲುಕ್ಯರ ಕಾಲಕ್ಕೂ ಹಿಂದೆಯೇ ಇತ್ತು ಎಂಬ ಇತಿಹಾಸವಿದೆ.[೩] ಹಿಂದಿನಇತಿಹಾಸ. ಹೆಸರು Kasuti ಪದಗಳನ್ನು ಪಡೆಯಲಾಗಿದೆ ಕೈ (ಕೈ ಅರ್ಥ) ಮತ್ತು Suti (ಹತ್ತಿ ಅರ್ಥ), ಹತ್ತಿ ಮತ್ತು ಕೈಗಳನ್ನು ಬಳಸಿ ಮಾಡಲಾಗುತ್ತದೆ ಎಂದು ಒಂದು ಚಟುವಟಿಕೆ ಸೂಚಿಸುತ್ತದೆ. ಕಸೂತಿ ಎಂಬ ಪದವು ಕೈ+ ಸೂತಿಗಳನ್ನು ಬಳಸಿ ತಯಾರಿಸಲಾದ ವಸ್ತು ಎಂಬ ಅರ್ಥವನ್ನು ಹೊಂದಿದೆ. ಕೈ ಎಂಬುದು ಎಲ್ಲರಿಗೂ ಗೊತ್ತಿರುವ ಪದ. ಸೂತಿ ಎಂದರೆ ಹತ್ತಿ ಎಂಬ ಅರ್ಥವನ್ನು ಹೊಂದಿದೆ. ೧೭ನೆಯ ಶತಮಾನದಲ್ಲಿ ಮೈಸೂರಿನ ಅರಸು ಮನೆತನದವರು ಮಹಿಳೆಯರು ತಯಾರಿಸುವು ೬೪ ಕೆಲಗಳಲ್ಲಿ ಕಸೂತಿ ಕುಸುರಿಯೂ ಸೇರಿತ್ತು.[೪]

ವೇಷಭೂಷಣಗಳಲ್ಲಿ ಲಂಬಾಣಿ ಮಹಿಳೆಯರು[ಬದಲಾಯಿಸಿ]

ವೇಷಭೂಷಣಗಳಲ್ಲಿ ಲಂಬಾಣಿ ಮಹಿಳೆಯರು ಇತರರಿಗಿಂತ ಪ್ರತ್ಯೇಕವಾಗಿಯೇ ನಿಲ್ಲುತ್ತಾರೆ. ಕೆಂಪು ಬಣ್ಣದ ಲಂಗ (ಪೇಟಿಯಾ), ಅದರ ಮೇಲೆ ಮತ್ತು ಅಂಚಿನಲ್ಲಿ ಸೊಗಸಾದ ಕಸೂತಿ ಕೆಲಸ. ಲಂಗದ ಒಡಲಿನಲ್ಲಿ ಸೇರಿಸಿ ಹೊಲಿದಿರುವ ಗಾಜಿನ ಬಿಲ್ಲೆಗಳು, ಬಟ್ಟೆಯ ತುಂಡುಗಳನ್ನು ಕಲಾತ್ಮಕವಾಗಿ ಹೊಂದಿಸಿ ಕಸೂತಿ ಹಾಕಿದ ಕುಪ್ಪಸ (ಕಾಂಚೋಳಿ), ತಲೆಯ ಮೇಲಿಂದ ಮೇಲು ಸೆರಗಿನಂತೆ ಇಳಿಬಿಟ್ಟ (ರುಂಡ ಮತ್ತು ಮುಂಡದ ಹಿಂಭಾಗವನ್ನು ಆವರಿಸುವ) ರಂಗು ರಂಗಿನ ಮೇಲುವಸ್ತ್ರ (ಚಾಂಟ್ಯ). ಈ ಮೇಲು ವಸ್ತ್ರಕ್ಕೂ ಗಾಜಿನ ಬಿಲ್ಲೆಗಳು ಹಾಗೂ ಕುಸುರಿ ಕೆಲಸದ ಅಲಂಕಾರದ ಜೊತೆಗೆ ಅದರ ಅಂಚಿನಲ್ಲಿ ಚಿಕ್ಕ ಬೆಳ್ಳಿ ಗೆಜ್ಜೆಗಳ ಸರ ಜೋಡಿಸಿಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಕೆಂಪು ಅಥವಾ ನೀಲಿ ಇವರ ಬಟ್ಟೆಯ ಬಣ್ಣ.

ಪ್ರಸ್ತುತ ಸನ್ನಿವೇಶ[ಬದಲಾಯಿಸಿ]

ಕಸೂತಿ ಸಂಪ್ರದಾಯವು ತನ್ನ ವ್ಯಾಪ್ತಿಯನ್ನು ಮೀರಿ ಈಗ ಮೈಸೂರು ಸ್ಯಾರಿಗಳಲ್ಲೂ ಬಳಕೆಯಾಗುತ್ತಿದೆ.

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://www.thehindu.com/todays-paper/tp-features/tp-metroplus/article2242136.ece
  2. http://www.thehindu.com/todays-paper/tp-national/tp-karnataka/article3066635.ece
  3. History of Kasuti is mentioned by Govind D. Belgaumkar and Anil Kumar Sastry (2006-10-27).http:// www.thehindu.com/todays-paper/tp-national/tp-karnataka/article3066635.ece
  4. The origin of Kasuti is discussed by Shyam Subbalakshmi B M. http://web.archive.org/web/20070404094343/http://www.deccanherald.com/deccanherald/nov23/sh1.asp