ಕವ್ನೈ ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಕವ್ನೈ
ಕವ್ನೈ ಕೋಟೆ
ನಾಸಿಕ್ ಜಿಲ್ಲೆ, ಮಹಾರಾಷ್ಟ್ರ
ಕವ್ನೈ ಕೋಲ್‌ನಿಂದ ಕೋಟೆ ನೋಟ
ನಿರ್ದೇಶಾಂಕಗಳು19°46′23.1″N 73°37′09.8″E / 19.773083°N 73.619389°E / 19.773083; 73.619389
ಶೈಲಿಬೆಟ್ಟದ ಕೋಟೆ
ಸ್ಥಳದ ಮಾಹಿತಿ
ಒಡೆಯಭಾರತ ಸರಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಅವಶೇಷ
ಸ್ಥಳದ ಇತಿಹಾಸ
ಸಾಮಗ್ರಿಗಳುಕಲ್ಲು

ಕವ್ನೈ ಕೋಟೆಯು ಭಾರತದ ಮಹಾರಾಷ್ಟ್ರದ, ನಾಸಿಕ್ ಜಿಲ್ಲೆಯ, ಇಗತ್ಪುರಿ ತಾಲೂಕಿನ, ಕವ್ನೈ ಗ್ರಾಮದ, ಉತ್ತರದಲ್ಲಿರುವ ಬೆಟ್ಟದಲ್ಲಿದೆ. ಇಲ್ಲಿ ಸದ್ಯಕ್ಕೆ ಉಳಿದಿರುವ ರಚನೆಗಳು ಎಂದರೆ ಮುಖ್ಯ ದ್ವಾರ ಮತ್ತು ಸಣ್ಣ ಕೊಳ ಮಾತ್ರ.

ಭೂಗೋಳಶಾಸ್ತ್ರ[ಬದಲಾಯಿಸಿ]

ಕವ್ನೈ ಗ್ರಾಮವು ಇಗತ್ಪುರಿಗೆ ರಸ್ತೆಯ ಮೂಲಕ ಸಂಪರ್ಕ ಹೊಂದಿದ್ದು, ಇಗತ್ಪುರಿ ೧೮ ಕಿಲೋಮೀಟರ್ ದೂರದಲ್ಲಿದೆ. ಕಪಿಲತೀರ್ಥವು ಸಹ ಕವ್ನೈ ಗ್ರಾಮದ ಸಮೀಪದಲ್ಲಿದೆ.

ಕೋಟೆಯು ಆರೋಹಣವು ಪರ್ವತಗಳನ್ನು ಹತ್ತುವ ಮೂಲಕ ಪ್ರಾರಂಭವಾಗುತ್ತದೆ. ಅಂತಿಮ ಆರೋಹಣವು ಲಂಬವಾಗಿದ್ದು, ಕಳಪೆ ಶಿಲೆಯ ಮೆಟ್ಟಿಲುಗಳನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

ಈ ಕೋಟೆಯನ್ನು ಮೊಘಲರು ನಿರ್ಮಿಸಿದರು. ಉದ್ಗೀರ್ ಕದನದ ನಂತರ (೧೭೬೦) ಒಪ್ಪಂದದ ನಿಯಮಗಳ ಅಡಿಯಲ್ಲಿ ಇದನ್ನು ನಿಜಾಮರು ಪೇಶ್ವೆಗಳಿಗೆ ಬಿಟ್ಟುಕೊಟ್ಟರು. ಈ ಕೋಟೆ, ತ್ರಿಂಗಲ್ವಾಡಿ ಮತ್ತು ಇತರ ಹದಿನೈದು ಕೋಟೆಗಳನ್ನು ಕರ್ನಲ್ ಬ್ರಿಗ್ಸ್ ನೇತೃತ್ವದಲ್ಲಿ ಬ್ರಿಟಿಷ್ ಸೇನೆಯು ವಶಪಡಿಸಿಕೊಂಡಿತು. [೧]

ನೋಟ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Nashik Gazetteer".