ವಿಷಯಕ್ಕೆ ಹೋಗು

ಕವಾಟ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕವಾಟ ಯಂತ್ರ:ಯಂತ್ರದ ಕವಾಟಗಳ ಚಲನೆಯನ್ನು ನಿಯಂತ್ರಿಸುವ ಸಾಧನ (ವಾಲ್ವ್‌ ಗಿಯರ್). ನಾಲ್ಕು ಘಾತಗಳ ಒಂದು ಎಂಜಿನ್ (ಫೋರ್ ಸ್ಟ್ರೋಕ್ ಎಂಜಿನ್) ಕ್ರಿಯೆ ಎಸಗುತ್ತಿದೆ ಎಂದು ಭಾವಿಸೋಣ. ಪ್ರತಿಯೊಂದು ಆವರ್ತದಲ್ಲೂ (ಸೈಕಲ್) ಅದು ಅನುಕ್ರಮವಾಗಿ ನಡೆಸುವ ಕ್ರಿಯೆಗಳು ನಾಲ್ಕು-ಚೂಷನ (ಸಕ್ಷನ್), ಸಂಪೀಡನ (ಕಂಪ್ರೆಶನ್), ವಿಕಸನ (ಎಕ್ಸ್‌ ಪಾನ್ಯನ್), ನಿಷ್ಕಾಸ (ಎಗ್ಸ್ಹಾಸ್ಟ್‌). ಇವು ಅನೂಚಾನಾಗಿ ನಡೆಯಲು ಒಂದೊಂದು ಹಂತದಲ್ಲೂ ಇಂಧನ ಮತ್ತು ಅದರ ರೂಪಾಂತರಗಳನ್ನು ಯುಕ್ತವಾಗಿ ನಿಯಂತ್ರಿಸುವ ಕವಾಟಗಳು ಅತ್ಯಾವಶ್ಯಕ.

ಕವಾಟಗಳ ಕಾರ್ಯ

[ಬದಲಾಯಿಸಿ]

ಇವೆಲ್ಲ ಕವಾಟಗಳ ಕಾರ್ಯವನ್ನು ನಿಯಂತ್ರಿಸುವ ಯಂತ್ರವಿನ್ಯಾಸವೇ (ಮೆಕಾನಿಸಂ) ಕವಾಟಯಂತ್ರ. ನಡೆಸಬೇಕಾಗಿರುವ ಕಾರ್ಯವನ್ನು ಹೊಂದಿ ಯಂತ್ರವಿದೆ (ರೈಲು ಬಂಡಿ, ಲಾರಿ, ಉಳುಮೆಯಂತ್ರ, ಮಗ್ಗ, ವಿಮಾನ ಇತ್ಯಾದಿ). ಇದನ್ನು ಅನುಸರಿಸಿ ಕವಾಟಗಳನ್ನು. ಅವನ್ನು ಹೊಂದಿ ಯುಕ್ತ ಕವಾಟ ಯಂತ್ರಗಳನ್ನು ತಯಾರಿಸುತ್ತಾರೆ.ಅಂತರ್ದಹನ ಯಂತ್ರದಲ್ಲಿ ಉಪಯೋಗಿಸುವ ಕವಾಟಯಂತ್ರ: ಚಿತ್ರ ೧ ರಲ್ಲಿ ವಕ್ರತಟ್ಟೆ (ಕ್ಯಾಮ್) ತಿರುಗಿದಾಗ ಅಗ್ರ (ನೋಸ್) ಅನುಯಾಯಿಯನ್ನು (ಫಾಲೋವರ್) ತಾಕಿ ಅವನ್ನು ಮೇಲಕ್ಕೆ ಎತ್ತುತ್ತದೆ. ಇದರಿಂದ ಕವಾಟ ದಂಡವೂ (ವಾಲ್ವ್‌ ರಾಡ್) ಎತ್ತಲ್ಪಟ್ಟು ಕವಾಟ ತೆರೆಯುತ್ತದೆ. ಇಚ್ಛಿತಕಾಲದಲ್ಲಿ ಕವಾಟ ಚಲಿಸುವಂತೆ ವಕ್ರತಟ್ಟೆಯ ಆಕಾರ ಮತ್ತು ವೇಗಗಳನ್ನು ಮುಂಚೆಯೇ ನಿಯೋಜಿಸಿರಬೇಕು.ಎಂಜಿನ್ನಿನ ಸಿಲಿಂಡರಿನೊಳಗೆ ಜಾರು ಸಂಪರ್ಕದಲ್ಲಿರುವ ಹಾಗೂ ದ್ವಾರಗಳುಳ್ಳ ಜಾರುಭ್ರಮಣ ಕವಾಟವೆಂಬ (ಸ್ಲೀವ್ ವಾಲ್ವ್‌) ಸಾಧನ ಸಹ ಉಪಯೋಗದಲ್ಲಿದೆ. ಸಿಲಿಂಡರಿನ ದ್ವಾರ ಮತ್ತು ಈ ಸಾಧನದ ದ್ವಾರಗಳು ಒಟ್ಟಿಗೆ ಸೇರಿದಾಗ ಚೂಷಣ ಅಥವಾ ನಿಷ್ಕಾಸ ಆಗುತ್ತದೆ. ಈ ರೀತಿ ದ್ವಾರಗಳೆರಡು ಒಟ್ಟಿಗೆ ಸೇರಲು ಕವಾಟ ಪ್ರತ್ಯಾಗಾಮಿ (ರೆಸಿಪ್ರೊಕೇಟಿಂಗ್) ಚಲನೆ ಮತ್ತು ಭಾಗಶಃ ಪರಿಭ್ರಮಣ ಚಲನೆಯನ್ನು (ದೀರ್ಘವೃತ್ತೀಯ-ಎಲಿಪ್ಟಿಕಲ್) ಮಾಡಬೇಕು. ಈ ಚಲನೆಯನ್ನು ಕವಾಟದ ಚಾಚಿನಲ್ಲಿರುವ ಗೋಳಾಕೃತಿಯ ಜಾರುವ ಬ್ಯಾರಿಂಗಿನಿಂದ ಪಡೆಯಬಹುದು.ಪರಿಭ್ರಮಣ ಕವಾಟವೆಂಬ ಇನ್ನೊಂದು ರೀತಿಯಲ್ಲಿ ಒಂದೊಂದು ಕವಾಟಕ್ಕೂ ರಂಧ್ರವುಳ್ಳ ಚಕ್ರಗಳನ್ನು ಜೋಡಿಸಿರುತ್ತಾರೆ. ಇವು ತಿರುಗಿ ರಂಧ್ರ ಮತ್ತು ಸಿಲಿಂಡರಿನ ದ್ವಾರಗಳು ಕೂಡಿದಾಗ ಚೂಷಣ ಅಥವಾ ನಿಷ್ಕಾಸ ಆಗುತ್ತದೆ.[]

ಆವಿ ಎಂಜಿನ್ನುಗಳ ಕವಾಟ ಯಂತ್ರ

[ಬದಲಾಯಿಸಿ]

ಇದರಲ್ಲಿ ಮೂರು ವಿಧಗಳಿವೆ_ (೧) ವಿಕಸನ ಕವಾಟ ಯಂತ್ರ, (೨) ಕೊಂಡಿಚಲನೆ (ಲಿಂಕ್ ಮೋಷನ್), (೩) ಆರೆ ಕವಾಟಯಂತ್ರ (ರೇಡಿಯಲ್ ವಾಲ್ವ್‌ ಗಿಯರ್). ಎಂಜಿನ್ನಿನ ದಕ್ಷತೆಯನ್ನು ಹೆಚ್ಚಿಸಲು ಅಥವಾ ವೇಗವನ್ನು ತಗ್ಗಿಸಲು ಆವಿಯ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಇದು ಛೇದನ (ಕಟ್ ಆಫ್). ವಿಕಸನ ಕವಾಟ ಯಂತ್ರವು ಕವಾಟಕ್ಕೆ ಛೇದನವನ್ನು ನಿಯಂತ್ರಿಸುವ ಚಲನೆಯನ್ನು ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಸಿಲಿಂಡರನ್ನು ಆವಿ ಪ್ರವೇಶಿಸಬೇಕಾದರೆ ಅ ಅಡ್ಡವಾಗಿರದಾಗ ಂ ಮತ್ತು ಃ ದ್ವಾರಗಳು ಒಟ್ಟಿಗೆ ಇರಬೇಕು(ಚಿತ್ರ ೩). ಆ ಚಕ್ರವನ್ನು ತಿರುಗಿಸಿ ಅಯ ಸ್ಥಾನವನ್ನು ಬದಲಾಯಿಸಬಹುದು.ಈ ಚಲನೆಗಳನ್ನು ನಿಯಂತ್ರಿಸಲು ಚಿತ್ರದಲ್ಲಿರುವಂತೆ ಜೋಡಣೆಯಿದೆ. ಉತ್ಕೇಂದ್ರಕ (ಎಕ್ಸೆಂಟ್ರಿಕ್) ವಕ್ರಕಾಂಡದ ಪರಿಭ್ರಮಣವನ್ನು ಪ್ರತ್ಯಾಗಾಮಿ ಚಲನೆಯನ್ನಾಗಿ ಮಾರ್ಪಡಿಸಿ ಪಟ್ಟಿ ಉತ್ಕೇಂದ್ರ ದಂಡ ಮುಂತಾದುವುಗಳ ಮೂಲಕ ಚಲನೆಯನ್ನು ಕವಾಟಕ್ಕೆ ರವಾನಿಸುತ್ತದೆ. ಕೊಂಡಿ ಚಲನೆಯಿಂದ ಎಂಜಿನ್ನಿನ ಚಲನೆಯ ದಿಕ್ಕನ್ನು ಬದಲಾಯಿಸಬಹುದು. ಆದರೆ ಸಾಮಾನ್ಯವಾಗಿ ರೈಲುಗಾಡಿಯಲ್ಲಿ ಚಲನೆಯ ದಿಕ್ಕನ್ನು ಬದಲಾಯಿಸಲು ಆರೆ ಕವಾಟ ಯಂತ್ರವನ್ನು ಬಳಸುತ್ತಾರೆ. ಕೊಂತದ ಚಲನೆಯ ಪ್ರಾರಂಭದಲ್ಲಿ ಕೊಂತದ ಬಲಗಡೆಯಿಂದ ಆವಿ ಪ್ರವೇಶಿಸುವ ಬದಲು ಎಡಗಡೆಯಿಂದ ಪ್ರವೇಶಿಸಿದರೆ ಕೊಂತ ವಿರುದ್ಧೆ ದಿಕ್ಕಿನಲ್ಲಿ ಚಲಿಸಿ ಚಕ್ರಗಳನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸುತ್ತದೆ. ಚಿತ್ರ ೪ ರಲ್ಲಿ ತೋರಿಸಿರುವ ಕೊಂಡಿಗಳ ಜೋಡಣೆಯಿಂದ ಆವಿ ಪ್ರವೇಶಿಸುವ ದಿಕ್ಕನ್ನು ಬದಲಾಯಿಸಬಹುದು. ಈಗ ಎ ಸನ್ನೆಕೋಲನ್ನು ಮೀಟಿದರೆ ಈ ಯಂತ್ರವಿನ್ಯಾಸದ ಎಲ್ಲ ಕೊಂಡಿಗಳ ಸ್ಥಾನಪಲ್ಲಟವಾಗಿ ಕವಾಟ ಚಲಿಸುತ್ತದೆ. ಇದರಿಂದ ಎ ಸನ್ನೆಕೋಲನ್ನು ಮೀಟಿ ಆವಿಯನ್ನು ಬೇಕಾದಾಗ ಯಾವುದೇ ಕವಾಟದ್ವಾರದಿಂದಲಾದರೂ ಸಿಲಿಂಡರನ್ನು ಪ್ರವೇಶಿಸುವಂತೆ ಮಾಡಬಹುದು. ಹೀಗೆ ಬದಲಾಯಿಸಿದರೆ ಎಂಜಿನ್ನು ಚಲಿಸುವ ದಿಕ್ಕು ಬದಲಾಗುತ್ತದೆ.[]

ಪಂಪಿನ ಕವಾಟಯಂತ್ರ

[ಬದಲಾಯಿಸಿ]

ಇದರಲ್ಲಿ (ಚಿತ್ರ ೫) ಪರಿಭ್ರಮಣ ಚಲನೆಯಿಲ್ಲದಿರುವುದರಿಂದ ಉತ್ಕೇಂದ್ರಕವನ್ನು ಉಪಯೋಗಿಸುವಂತಿಲ್ಲ. ಈಗ ೦ ಎಂಬ ಕೊಳವೆಯಿಂದ ಆವಿ ಃ ದ್ವಾರದ ಮೂಲಕ ಸಿಲಿಂಡರನ್ನು ಪ್ರವೇಶಿಸಿ ಕೊಂತವನ್ನು ಎಡಗಡೆಗೆ ದಬ್ಬುತ್ತದೆ. ಕೊಂತದಂಡ ಎಡಗಡೆಗೆ ಚಲಿಸಿ ಅ ಗುಚ್ಛಕ್ಕೆ ಜೋಡಿಸಿರುವ ಆ ಸನ್ನೆಕೋಲನ್ನು ಇ ಸನ್ನೆಯ ಮೇಲೆ ಆಂದೋಳನವನ್ನು ನಡೆಸುವಂತೆ ಮಾಡುತ್ತದೆ. ಇದರಿಂದ ಸನ್ನೆ ಕೋಲಿನೊಂದಿಗೆ ಈ ಮೂಲಕ ಸಂಪರ್ಕದಲ್ಲಿರುವ ಉ ಅಡ್ಡಗುಚ್ಛ ಬಲಗಡೆಗೆ ಚಲಿಸಿ ಕವಾಟ ಂಯನ್ನು ನೂಕುತ್ತದೆ. ಇದರಿಂದ ಎ ದ್ವಾರ ಮುಕ್ತವಾಗಿ ಅದರ ಮೂಲಕ ಪ್ರವೇಶಿಸುವ ಆವಿ ಈಗಾಗಲೆ ತನ್ನ ಘಾತದ ಕೊನೆಯಲ್ಲಿ ಕೊಂತವನ್ನು ಮತ್ತೆ ಬಲಗಡೆಗೆ ದಬ್ಬುತ್ತದೆ. ಈ ರೀತಿ ಕವಾಟಯಂತ್ರ ಕೆಲಸವನ್ನು ಮುಂದುವರಿಸುವುದು.

ಯಂತ್ರಾಯುಧಗಳಲ್ಲಿ (ಮಷೀನ್ ಟೂಲ್ಸ್‌) ಉಪಯೋಗಿಸುವ ಕವಾಟಯಂತ್ರ

[ಬದಲಾಯಿಸಿ]

ಇದನ್ನು (ಚಿತ್ರ ೬) ಯಂತ್ರಾಯುಧಗಳಲ್ಲಿ ಪ್ರತ್ಯಾಗಾಮಿ ಚಲನೆಯನ್ನು ಪಡೆಯಲು ಉಪಯೋಗಿಸುತ್ತಾರೆ. ತೈಲ ಂ ಕೋಳವೆಯ ಮೂಲಕ ಇ ವಿಭಾಗವನ್ನು ಪ್ರವೇಶಿಸುತ್ತದೆ. ಆದರೆ ಆ ಕವಾಟವು ದ್ವಾರಕ್ಕೆ ಅಡ್ಡವಾಗಿರುವುದರಿಂದ ತೈಲ ಕೆಲಸದ ಸಿಲಿಂಡರನ್ನು ನೇರವಾಗಿ ಪ್ರವೇಶಿಸಲಾರದು. ಂಯಲ್ಲಿರುವ ತೈಲ ಃ ಮತ್ತು ಉಪರೋಧಕ ಕವಾಟ (ಥ್ರಾಟ್ಲಿಂಗ್ ವಾಲ್ವ್‌) ಅಯ ಮೂಲಕ ಆ ಕೊಂತದ ಎಡಭಾಗವನ್ನು ಪ್ರವೇಶಿಸಿ ಅದನ್ನು ದಬ್ಬುತ್ತದೆ. ಇದರಿಂದ ಆ ಚಲಿಸಿ P ದ್ವಾರವನ್ನು ತೆರೆಯುತ್ತದೆ.ಈಗ ತೈಲ P ಮೂಲಕ ಕೆಲಸದ ಸಿಲಿಂಡರಿನ ಎಡಭಾಗವನ್ನು ಪ್ರವೇಶಿಸಿ ಕೊಂತವನ್ನು ಚಲಿಸುತ್ತದೆ. ಕೊಂತದಂಡಕ್ಕೆ ಸೂಕ್ತರೀತಿಯಲ್ಲಿ ಜೋಡಿಸಿರುವ ಯಂತ್ರದ ತಳ (ಬೆಡ್) ಪ್ರತ್ಯಾಗಾಮಿ ಚಲನೆಯನ್ನು ಮಾಡುತ್ತದೆ. ಕೊಂತ ಬಲಗಡೆಗೆ ಚಲಿಸುವಾಗ ಸಂಕ್ಷೇಪಿಸಿದ ಒತ್ತಡದ ತೈಲ ಸ್ಪ್ರಿಂಗಿನ ಹೊರೆಯಿಂದಿರುವ ಕವಾಟವನ್ನು ತಳ್ಳಿ ಎ ದ್ವಾರ ಮತ್ತು ಐಗಳ ಮೂಲಕ ಒಕೊಳವೆಯನ್ನು ತಲುಪುತ್ತದೆ. ಕೊಂತ ಬಲತುದಿಗೆ ಬಂದಾಗ ಓ ತನ್ನ ಸ್ಥಾನಬದಲಾವಣೆಯಿಂದ ತೈಲ ಂ ಕಡೆಯಿಂದ ಒ ಕಡೆಗೆ ಹರಿಯಲು ಅನುಮಾಡಿಕೊಡುತ್ತದೆ. ಈಗ ಮೇಲೆ ಹೇಳಿದ ಎಲ್ಲ ಕ್ರಿಯೆಗಳೂ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. http://ecowoman.ru/kannada/articles.php?id=28366[permanent dead link]
  2. "ಆರ್ಕೈವ್ ನಕಲು". Archived from the original on 2017-09-30. Retrieved 2016-10-25.