ಕವಣೆ

ವಿಕಿಪೀಡಿಯ ಇಂದ
Jump to navigation Jump to search
ಕವಣೆ

ಕವಣೆ ಕಲ್ಲು, ಕೂರಂಬು ಮುಂತಾದ ಆಯುಧಗಳನ್ನು ಗುರಿಯೆಡೆಗೆ ಬಲಸಹಿತ ಹೊಡೆಯಲು ಉಪಯೋಗಿಸುವ ಸಾಧನ (ಕ್ಯಾಟಪುಲ್ಟ್‌). ಭಾರವಾದ ಒಂದು ಮರದ ಚೌಕಟ್ಟು, ಅದರೊಳಗೆ ಹಾಯ್ದಾಡುವಂಥ ಹಲಗೆ, ಆ ಹಲಗೆಯ ನಡುವೆ ಶಸ್ತ್ರವನ್ನು ಚಿಮ್ಮಿಸುವಂತೆ ಮಾಡುವ ಯಂತ್ರ ಸಜ್ಜಿಕೆ, ಅದರ ನಡುವೆ ಬಿಲ್ಲಿನ ಹೆದೆಯಂತಿರುವ ದಾರ-ಇವಿಷ್ಟು ಯಂತ್ರದ ಸ್ಥೂಲ ವಿವರಣೆ. ಪ್ರಯೋಗ ಕಾಲದಲ್ಲಿ, ಬೇಕಾಗಿರುವ ದಿಕ್ಕಿಗೆ ಬೇಕಾದಷ್ಟು ಎತ್ತರಕ್ಕೆ ಈ ಮರದ ಚೌಕಟ್ಟನ್ನು ಇರಿಸುತ್ತಿದ್ದರು.

ಬಂಡೆಗಳನ್ನು ಎಸೆಯುವ ಯಂತ್ರ ದೊಡ್ಡದಾಗಿತ್ತು. ಎಸೆತದ ದೂರ ಮಿಕ್ಕುದರಂತೆ ಇದರಲ್ಲೂ ಸುಮಾರು ೪೦೦ ಗಜಗಳಷ್ಟು; ಎಸೆವ ವಸ್ತು ಮಾತ್ರ ಹೆಚ್ಚು ತೂಕವುಳ್ಳದ್ದು. ಬಿರುಸಾಗಿ ಎಸೆಯುವ ಕವಣೆಯಂತ್ರ ಅಥವಾ ಬಹಳ ಉದ್ದವಾದ ಯಂತ್ರ ಸಾಗಣೆಯ ದೃಷ್ಟಿಯಿಂದ ತುಂಬ ತೊಂದರೆಯದಾಗಿತ್ತು. ಇಂದು ಎರಡು ವಿಧದ ಚಿಕ್ಕ ಕವಣೆಗಳು ಪ್ರಚಾರದಲ್ಲಿವೆ. ಮೊದಲನೆಯದರಲ್ಲಿ ಒಂದು ಕವಲು ಕೋಲು ಇದೆ. ಅದರ ಎರಡು ಕೊನೆಗಳಿಗೆ ಒಂದು ಹಿಗ್ಗುದಾರವನ್ನು ಬಿಗಿದು ಕಟ್ಟಿರುತ್ತಾರೆ. ಇದರ ನಡುವೆ ಒಂದು ಸಣ್ಣ ಕಲ್ಲನ್ನಿಟ್ಟು ಅದನ್ನು ಹಿಂದಕ್ಕೆ ಜಗ್ಗಿ ಕೈಬಿಡುತ್ತಾರೆ. ಎರಡನೆಯದು ಒಂದು ಬಿಲ್ಲು. ಅದರ ಸಿಂಜಿನಿಯನ್ನು ಸಾಮಾನ್ಯವಾಗಿ ಎರಡು ದಾರಗಳಿಂದ ಮಾಡಿರುತ್ತಾರೆ. ಸಿಂಜಿನಿಯ ನಡುವಿನಲ್ಲಿ ಅವೆರಡನ್ನೂ ಜೋಡಿಸಿ ಹಿಡಿದಿರುವ ಒಂದು ತೆಳುಪಟ್ಟಿ ಇದೆ. ಇಲ್ಲಿ ಕಲ್ಲನಿಟ್ಟು ಬಿಲ್ಲನ್ನು ಹೂಡಿ ಗುರಿಯೆಡೆಗೆ ಎಸೆಯುತ್ತಾರೆ. ಕವಣೆಯಿಂದ ಎಸೆದ ಕಲ್ಲಿಗೆ ಕವಣೆಕಲ್ಲು ಎಂದು ಹೆಸರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕವಣೆ&oldid=522435" ಇಂದ ಪಡೆಯಲ್ಪಟ್ಟಿದೆ