ಕಲ್ಲಿನ ಶವಪೆಟ್ಟಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಲ್ಲಿನ ಶವಪೆಟ್ಟಿಗೆ : ಯುರೋಪಿನ ನವಶಿಲಾ ಮತ್ತು ತಾಮ್ರ ಶಿಲಾಯುಗಗಳಲ್ಲೂ ಭಾರತದಲ್ಲಿ ಕಬ್ಬಿಣ ಯುಗದಲ್ಲೂ ತಳ ಮತ್ತು ನಾಲ್ಕು ಪಕ್ಕಗಳನ್ನು ಒಂದೊಂದು ಕಲ್ಲುಚಪ್ಪಡಿಯಿಂದ ನಿರ್ಮಿಸಿ ಸತ್ತವರ ಶವವನ್ನೂ ಶವಸಂಸ್ಕಾರಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ಇಟ್ಟು ಮತ್ತೊಂದು ಚಪ್ಪಡಿಯಿಂದ ಮುಚ್ಚಿ ಹೂಳಲು ಉಪಯೋಗಿಸುತ್ತಿದ್ದ ಸಂಪುಟ. ಬ್ರಿಟನ್ ಭಾರತ ಮುಂತಾದೆಡೆಗಳಲ್ಲಿ ಕೆಲವು ಸಲ ಚಪ್ಪಡಿಗಳ ಬದಲು ಒರಟಾದ ಕಲ್ಲುಬಂಡೆಗಳಿಂದಲೂ ಶವಪೆಟ್ಟಿಗೆಗಳನ್ನು ರಚಿಸುತ್ತಿದ್ದರು. ದಕ್ಷಿಣಭಾರತದ ಕಬ್ಬಿಣಯುಗದಲ್ಲಿ ಬೃಹತ್ಶಿಲಾ ಸಮಾಧಿ ಸಂಸ್ಕೃತಿಯ ಶವಸಂಸ್ಕಾರ ವಿಧಾನಗಳಲ್ಲಿ ಇದೊಂದು ರೀತಿ. ಈ ಶವಪೆಟ್ಟಿಗೆಗಳನ್ನು ಸಾಮಾನ್ಯವಾಗಿ ಭೂಮಿಯಲ್ಲಿ ಗುಂಡಿ ತೋಡಿ ಹುಗಿಯುತ್ತಿದ್ದರು (ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮುಂತಾದೆಡೆಗಳಲ್ಲಿ). ಇನ್ನು ಹಲವೆಡೆಗಳಲ್ಲಿ ಶವಪೆಟ್ಟಿಗೆಯನ್ನು ಅರ್ಧ ಹೂಳಿ ಅಥವಾ ಇಡೀ ಪೆಟ್ಟಿಗೆಯನ್ನು ನೆಲದ ಮೇಲೇ ಇಟ್ಟು, ಅದನ್ನು ಜಲ್ಲಿಕಲ್ಲಿನ ರಾಶಿಯಿಂದ ಮುಚ್ಚುತ್ತಿದ್ದುದ್ದೂ ಉಂಟು. ಚೆಂಗಲ್ಪೆಟ್ ಜಿಲ್ಲೆಯ ಹಲವೆಡೆಗಳಲ್ಲಿ, ಪುದುಕೋಟೆ ಪ್ರಾಂತ್ಯ ಮುಂತಾದ ಕಡೆಗಳಲ್ಲಿ ಈ ಪದ್ಧತಿ ರೂಢಿಯಲ್ಲಿತ್ತು. (ಬಿ.ಕೆ.ಜಿ.)