ಕಲ್ಬಾಸು
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕಲ್ಬಾಸು : ಲೇಬಿಯೊ ಜಾತಿಯ ಮೀನು. ಕಾಟ್ಲ, ರೋಹು, ಮೃಗಾಲ್ ಮುಂತಾದ ಪ್ರಮುಖ ಬಗೆಯ ಮೀನುಗಳ ಗುಂಪಿಗೆ ಸೇರಿದೆ. ಕಮ್ಮಚ್ಚಲು, ಕೆಮ್ಮೀನು, ಕದ್ದೊಳ್ಳು ಪರ್ಯಾಯ ನಾಮಗಳು. ಭಾರತದ ಎಲ್ಲ ಕಡೆಯೂ ಸಾಮಾನ್ಯವಾಗಿ ಕಾಣಬರುವ ಮೀನಿದು. ಮೈಸೂರಿನ ಕಾವೇರಿ ಮತ್ತು ಶಿಂಷಾ ನದಿಗಳಲ್ಲಿ ಇದೆ. ಇದು ಸುಮಾರು ೪" ಉದ್ದ ಬೆಳೆಯುವುದು. ದೇಹದ ಬಣ್ಣ ಕಪ್ಪೂ. ಕಪ್ಪನೆಯ ಈಜುರೆಕ್ಕೆಗಳು, ಮೊನಚಾದ ತಲೆ, ದೇಹದ ಮುಂತುದಿಯಲ್ಲಿ ಕೊಂಚ ಕೆಳಕ್ಕಿರುವ ಬಾಯಿ, ದೃಢವಾದ ತುಟಿಗಳು, ಚೆನ್ನಾಗಿ ಎದ್ದುಕಾಣುವ ಎರಡು ಜೊತೆ ಕಪ್ಪುಮೀಸೆಗಳು, ಪಾಶರ್ವ್‌ದ ರೇಖೆಯ ಮೇಲೆ ಹರಡಿಕೊಂಡಂತಿರುವ ೪೦-೪೪ ಹುರುಪೆಗಳು-ಇವು ಈ ಮೀನಿನ ಪ್ರಧಾನ ಲಕ್ಷಣಗಳು. ನೀರಿನಲ್ಲಿ ವಾಸಿಸುವ ಬಸವನ ಹುಳು, ಇತರ ಹುಳುಗಳು ಹಾಗೂ ಪಾಚಿ ಮುಂತಾದ ಸಸ್ಯಗಳು ಇದರ ಮುಖ್ಯ ಆಹಾರ.
ಕಾಟ್ಲ ಮುಂತಾದ ಮೀನುಗಳಂತೆಯೆ ಕಲ್ಬಾಸು ಕೂಡ ಮುಂಗಾರು ಮಳೆಯ ಕಾಲದಲ್ಲಿ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಡುವ ವಿಧಾನ, ಮೊಟ್ಟೆಗಳ ಗೊಂಚಲಿಗೆ ಸಂಗ್ರಹಣೆ ಎಲ್ಲ ಕಾಟ್ಲಗಳಲ್ಲಿದ್ದಂತೆಯೆ. ಇದರ ಮರಿಗಳು ತಮ್ಮ ಶೀಘ್ರ ಬೆಳೆವಣಿಗೆಗೆ ಹೆಸರಾಗಿವೆ. ಒಂದು ವರ್ಷದಲ್ಲಿ ಸುಮಾರು ೧೦"-೧೨" ಉದ್ದ ಬೆಳೆಯುತ್ತವೆ. ಎರಡು ವರ್ಷಕ್ಕೆ ಮರಿಗಳು ಪ್ರಬುದ್ಧಾವಸ್ಥೆಗೆ ಬರುತ್ತವೆ. ಈ ಮೀನು ಕೆರೆಗಳಲ್ಲೂ ಚೆನ್ನಾಗಿ ಬೆಳೆಯುವುದರಿಂದ ಹೆಸರಘಟ್ಟ, ಬೇತಮಂಗಲ, ರಾಮನಗರ ಕೆರೆಗಳಲ್ಲಿ ಇದನ್ನು ಬೆಳೆಸಿ ಸಾಕುತ್ತಿದ್ದಾರೆ. (ಬಿ.ಎನ್.)