ಕಲ್ಪೇಶ್ವರ
Kalpeshwar Temple | |
---|---|
![]() | |
ಹೆಸರು: | Kalpeshwar Temple |
ನಿರ್ಮಾತೃ: | Pandavas |
ಕಟ್ಟಿದ ದಿನ/ವರ್ಷ: | Unknown |
ಪ್ರಮುಖ ದೇವತೆ: | Shiva |
ವಾಸ್ತುಶಿಲ್ಪ: | North Indian architecture |
ಕಲ್ಪೇಶ್ವರ ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಒಂದು ಪವಿತ್ರ ಕ್ಷೇತ್ರ. ಕಲ್ಪೇಶ್ವರ ಪಂಚ ಕೇದಾರಗಳ ಪೈಕಿ ಒಂದು. ರಿಷಿಕೇಶ ದಿಂದ ಬದರಿನಾಥಕ್ಕೆ ಹೋಗುವ ಹೆದ್ದಾರಿಯಲ್ಲಿ ಹೇಲಾಂಗ್ ಗ್ರಾಮದಿಂದ ೧೧ ಕಿ.ಮೀ. ಗಳಷ್ಟು ಏರುದಾರಿಯನ್ನು ಕಾಲ್ನಡೆಯಲ್ಲಿ ಕ್ರಮಿಸಿ ಕಲ್ಪೇಶ್ವರ ಮಂದಿರವನ್ನು ತಲುಪಬಹುದು. ಇಲ್ಲಿ ಶಿವನನ್ನು ಕಲ್ಪೇಶ್ವರ ಅಥವಾ ಕಲ್ಪನಾಥ ಎಂಬ ಹೆಸರಿನಿಂದ ಆರಾಧಿಸಲಾಗುತ್ತದೆ. ಹಿಮಾಲಯದ ಸುಂದರ ಪ್ರಕೃತಿಯ ಮಡಿಲಲ್ಲಿ ಇರುವ ಕಲ್ಪೇಶ್ವರ ಒಂದು ರಮ್ಯ ಮತ್ತು ಪವಿತ್ರ ತಾಣವಾಗಿದೆ.