ವಿಷಯಕ್ಕೆ ಹೋಗು

ಕಲೋಡಿಯನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಲೋಡಿಯನ್ : ಮದ್ಯಸಾರ, ಈಥರುಗಳಲ್ಲಿ (೧ : ೭) ನೈಟ್ರೊಸೆಲ್ಲುಲೋಸನ್ನು ಕರಗಿಸಿದ ದ್ರಾವಣ. ಮದ್ಯಸಾರ, ಈಥರುಗಳು ಆರಿಹೋದಾಗ, ಚರ್ಮಕ್ಕೆ ಹಚ್ಚಿದ್ದು ತೆಳು ಪದರವಾಗಿ ಉಳಿಯುತ್ತವೆ. ಚರ್ಮಕ್ಕೆ ಹಚ್ಚಿದ ಕಡೆ ಧೂಳು, ಗಾಳಿ ಸೋಕದಂತೆ ಮುಚ್ಚಿರುವುದು. ಚರ್ಮದ ಮೇಲಿನ ಪ್ರಭಾವಕ್ಕಾಗಿ ಇದರಲ್ಲೇ ಹಲವು ಮದ್ದುಗಳನ್ನು ಹಾಕುವುದುಂಟು. ಆದರೆ ಅವು ಈ ಪದರದೊಳಗೇ ಇದ್ದು ಚರ್ಮಕ್ಕೆ ತಾಕದಿರುವುದರಿಂದ ಕೆಲಸಕ್ಕೆ ಬಾರದಾಗುತ್ತವೆ. (ಡಿ.ಎಸ್.ಎಸ್.)