ವಿಷಯಕ್ಕೆ ಹೋಗು

ಕಲಾಸಿಪಾಳ್ಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಅತ್ಯಂತ ಅವಿಶ್ರಾಂತ ಕಾರ್ಯಚಟುವಟಿಕೆಯ ವ್ಯಾಪಾರ ಸ್ಥಳಗಳಲ್ಲೊಂದು. ೧೯೪೦ ರಲ್ಲಿ ಆಗಿನ ಮೈಸೂರಿನ ದಿನಾನರಾಗಿದ್ದ, 'ಸರ್, ಮಿರ್ಜಾ ಇಸ್ ಮೈಲ್' ರವರು ಇದನ್ನು ಸ್ಥಾಪಿಸಿದ್ದರು. ಇದು ದಕ್ಷಿಣ-ಪಶ್ಚಿಮ ಬೆಂಗಳೂರಿನಲ್ಲಿದೆ. ಇದು 'ಸಿಟಿ ಕೃಷ್ಣರಾಜೇಂದ್ರ ಮಾರುಕಟ್ಟೆ' ಗೆ ಹತ್ತಿರ. ಮೊದಲು, ದೊಡ್ಡಣ್ಣ ಹಾಲ್ ಇಲ್ಲೇ ಇತ್ತು. 'ಕೋಟೆ ವೆಂಕಟಾರಮಣಸ್ವಾಮಿ ದೇವಸ್ಥಾನ,' ಹತ್ತಿರದಲ್ಲೇ ಇದೆ. 'ಟಿಪ್ಪೂಸ್ತುಲ್ತಾನನ ಬೇಸಿಗೆ-ಅರಮನೆ, ಹಾಗೂ ಶಸ್ತ್ರಾಗಾರ, ಬೆಂಗಳೂರು ಕೋಟೆ ಮತ್ತು 'ಜಲಕಂಟೇಶ್ವರ ದೇವಸ್ಥಾನ', ಗಳೂ ಇದರ ಬಳಿಯೇ ಇವೆ.

ಬಹಳ ವರ್ಷಗಳವರೆಗೆ, ಇದೇ ಬೆಂಗಳೂರಿನ 'ಪ್ರಮುಖ ಬಸ್ ನಿಲ್ದಾಣ',ವಾಗಿತ್ತು[ಬದಲಾಯಿಸಿ]

ಇಲ್ಲಿರುವ ಬಸ್ ನಿಲ್ದಾಣ ಅತಿ ಹಳೆಯದು. ಅನೇಕ ಹೊರಊರುಗಳಿಗೆ ಹಾಗೂ ರಾಜ್ಯದ ಒಳನಾಡಿಗೆ ಸಾರಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ. ರಾಜ್ಯಸರ್ಕಾರದ ಸಾರಿಗೆ ಬಸ್ಸಿನವ್ಯವಸ್ಥೆ, ಹಾಗೂ ಖಾಸಗಿ ಬಸ್ಸುಗಳೂ ಇಲ್ಲಿಂದ ಹೊರಡುತ್ತವೆ. 'ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ,' ಮತ್ತು 'ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ,' ಗಳಿಗೆ ಇಲ್ಲಿಂದ ಬಸ್ಸು, ಹಾಗೂ ಬೇರೆ ವಾಹನಗಳ ಸಂಪರ್ಕವನ್ನು ಕಲ್ಪಿಸಲಾಗಿದೆ.

'ಕಲಾಸಿಪಾಳ್ಯಂ,' ಗೆ ಹತ್ತಿರದಲ್ಲಿರುವ ಅತ್ಯಂತ ಮಹತ್ವದ ಸ್ಥಳಗಳು[ಬದಲಾಯಿಸಿ]