ವಿಷಯಕ್ಕೆ ಹೋಗು

ಕಲಾನಿಧಿ ಮಾರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಾನಿಧಿ ಮಾರನ್
ಶಿಕ್ಷಣ ಸಂಸ್ಥೆಲೊಯೋಲಾ ಕಾಲೇಜ್, ಚೆನ್ನೈ
ಯೂನಿವರ್ಸಿಟಿ ಆಫ್ ಸ್ಕಾಂಟನ್
ವೃತ್ತಿಮಾಧ್ಯಮ ಮಾಲೀಕ
ಗಮನಾರ್ಹ ಕೆಲಸಗಳುಸನ್ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷ
ಸಂಗಾತಿಕಾವೇರಿ ಕಲಾನಿಧಿ
ಮಕ್ಕಳು೧ (ಕಾವ್ಯಾ ಮಾರನ್)
ಪೋಷಕ
  • ಮುರಸೋಲಿ ಮಾರನ್ (father)
ಸಂಬಂಧಿಕರುದಯಾನಿಧಿ ಮಾರನ್ (ಸಹೋದರ)

ಕಲಾನಿಧಿ ಮಾರನ್ ಅವರು ಸನ್ ಗ್ರೂಪ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕರು. ಇವರು ಭಾರತೀಯ ಮಾಧ್ಯಮ ಮಾಲೀಕರಾಗಿದ್ದಾರೆ.[][][] ಅವರು ದೂರದರ್ಶನ ಚಾನೆಲ್‌ಗಳು, ಪತ್ರಿಕೆಗಳು, ವಾರಪತ್ರಿಕೆಗಳು, ಎಫ್. ಎಂ ರೇಡಿಯೋ ಕೇಂದ್ರಗಳು, ಡಿಟಿಎಚ್ ಸೇವೆಗಳು, ಕ್ರಿಕೆಟ್ ತಂಡ ( ಸನ್‌ರೈಸರ್ಸ್ ಹೈದರಾಬಾದ್ ) ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.[] ಅವರು ೨೦೧೦ ರಿಂದ ೨೦೧೫ ರವರೆಗೆ ಭಾರತೀಯ ವಿಮಾನಯಾನ ಸ್ಪೈಸ್ ಜೆಟ್‌ನಲ್ಲಿ ಪ್ರಮುಖ ಪಾಲನ್ನು ಹೊಂದಿದ್ದರು.[][][]

ವೃತ್ತಿ

[ಬದಲಾಯಿಸಿ]

೧೯೯೦ ರಲ್ಲಿ, ಮಾರನ್ ತಮಿಳಿನಲ್ಲಿ ಪೂಮಾಲೈ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ೧೪ ಏಪ್ರಿಲ್ ೧೯೯೩ ರಂದು ಅವರು ಸನ್ ಟಿವಿಯನ್ನು ಸ್ಥಾಪಿಸಿದರು.[][][೧೦] ಸನ್ ಟಿವಿಯು $೧೩೩ ಮಿಲಿಯನ್‌ಗೆ ೧೦% ಷೇರು ಬಂಡವಾಳ ಸಂಗ್ರಹಿಸಿದ್ದರಿಂದ, ೨೪ ಏಪ್ರಿಲ್ ೨೦೦೬ ರಂದು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬಿಲಿಯನೇರ್ ಪಟ್ಟಿಯಲ್ಲಿ ಸೇರಿಸಲಾಯಿತು. ಆ ಸಂಧರ್ಭದಲ್ಲಿ ಭೇಟಿ ನೀಡಿದ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರೊಂದಿಗೆ ದುಂಡುಮೇಜಿನ ಸಭೆಯಲ್ಲಿ ಮಾರನ್ ಅವರೂ ಒಬ್ಬ ಪ್ರತಿನಿಧಿಯಾಗಿದ್ದರು.[೧೧][೧೨]

೨೦೨೩ ರ ಹೊತ್ತಿಗೆ, ಅವರು ಯುಎಸ್$೩ ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ೭೭ ನೇ ಶ್ರೀಮಂತ ಭಾರತೀಯರಾಗಿದ್ದರು.[೧೩] ಇವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ. ಮಾರನ್ ಮತ್ತು ಅವರ ಪತ್ನಿ ಕಾವೇರಿ ಅವರು ಭಾರತೀಯ ಕಾರ್ಯನಿರ್ವಾಹಕ ವೇತನ ಪಟ್ಟಿಯಲ್ಲಿ ತಲಾ ರೂ.೬೨ ಕೋಟಿ (ಯುಎಸ್$೭.೮ ಮಿಲಿಯನ್) ಪ್ಯಾಕೇಜ್‌ನೊಂದಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಾಪಾರ ಕಾರ್ಯನಿರ್ವಾಹಕರಾಗಿ ಸ್ಥಾನ ಪಡೆದಿದ್ದಾರೆ.[೧೪]

ಅವರು ಸಿ‌ಎನ್‌ಬಿ‌ಸಿ ಮತ್ತು ಅರ್ನ್ಸ್ಟ್ & ಯಂಗ್ ನಿಂದ ಯುವ ಉದ್ಯಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೧೫] ಫೋರ್ಬ್ಸ್ ನಿಯತಕಾಲಿಕವು ಅವರನ್ನು "ದಕ್ಷಿಣ ಭಾರತದ ದೂರದರ್ಶನ ರಾಜ" ಎಂದು ಹೆಸರಿಸಿದೆ.[೧೬]

ವೈಯಕ್ತಿಕ ಜೀವನ

[ಬದಲಾಯಿಸಿ]

ಕಲಾನಿಧಿ ಮಾರನ್ ಅವರು ಭಾರತದ ಮಾಜಿ ಕೇಂದ್ರ ಸಚಿವ ಮುರಸೋಲಿ ಮಾರನ್ ಅವರ ಪುತ್ರ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗ. ಅವರ ಕಿರಿಯ ಸಹೋದರ ದಯಾನಿಧಿ ಮಾರನ್ ಕೂಡ ಮಾಜಿ ಸಚಿವರಾಗಿದ್ದರು.[೧೭] ಕಲಾನಿಧಿ ಮಾರನ್ ಕೊಡಗು ಮೂಲದ ಕಾವೇರಿಯವರನ್ನು ವಿವಾಹವಾದರು. ದಂಪತಿಗೆ ಕವಿಯಾ ಕಲಾನಿಧಿ ಮಾರನ್ ಎಂಬ ಮಗಳಿದ್ದಾಳೆ (ಜನನ ನವೆಂಬರ್ ೩, ೧೯೯೧). [೧೮] ಅವರು ಡಾನ್ ಬಾಸ್ಕೋ, ಎಗ್ಮೋರ್ , ಚೆನ್ನೈನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರು ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಅವರು ಸ್ಕ್ರ್ಯಾಂಟನ್ ವಿಶ್ವವಿದ್ಯಾಲಯದಿಂದ ತಮ್ಮ ಎಂಬಿಎ ಮಾಡಿದರು. ೨೦೨೩ ರ ಹೊತ್ತಿಗೆ, ಅವರ ನಿವ್ವಳ ಮೌಲ್ಯ ಯುಎಸ್$೩ ಬಿಲಿಯನ್ ಆಗಿದೆ.[೧೯]

ಉಲ್ಲೇಖಗಳು

[ಬದಲಾಯಿಸಿ]
  1. "From cable TV to aviation biz, Maran's march continues". The Financial Express. 13 July 2010. Archived from the original on 9 September 2010. Retrieved 8 August 2010.
  2. "Sun, Zee remain top on profitability charts". Rediff.com. 31 December 2004. Archived from the original on 15 November 2010. Retrieved 8 August 2010.
  3. Srikar Muthyala (29 September 2015). "The List of Great Entrepreneurs of India in 2015". MyBTechLife. Archived from the original on 14 January 2016.
  4. Mishra, Aditya (2021-04-06). "IPL Team Owners. List Of All IPL 2021 Team Owners". Voice of Indian Sports - KreedOn (in ಬ್ರಿಟಿಷ್ ಇಂಗ್ಲಿಷ್). Archived from the original on 29 May 2021. Retrieved 2021-06-29.
  5. "Strategic investor crucial for global foray". The Times of India. 6 April 2010. Archived from the original on 3 June 2016. Retrieved 13 September 2010.
  6. "New deal to take SpiceJet higher". Business Standard. 15 June 2010. Archived from the original on 7 June 2011. Retrieved 8 August 2010.
  7. "Kalanidhi Maran buys 37.7 p.c. stake in SpiceJet". The Hindu. Chennai, India. 13 June 2010. Archived from the original on 24 August 2010. Retrieved 8 August 2010.
  8. Karmali, Naazneen (30 November 2009). "Strong Signal". Forbes. Archived from the original on 29 August 2011. Retrieved 8 August 2010.
  9. "Rediff India Abroad, April 28, 2006 – Kalanithi Maran: A 'Sunshine' story, by Sanjiv Shankaran and S. Bridget Leena in New Delhi". Rediff.com. Archived from the original on 21 May 2011. Retrieved 24 January 2012.
  10. Bharatan, Shilpa (27 March 2006). "Variety.com, Monday, April 24, 2006, 6:36pm PT – Sun TV shines on Exchange". Variety. Archived from the original on 17 July 2009. Retrieved 24 January 2012.
  11. "Kalanithi Maran emerges a billionaire after maiden IPO" (PDF). Archived (PDF) from the original on 9 November 2014. Retrieved 9 November 2014.
  12. "Media Personalities – Kalanidhi Maran". Chennai Best. Archived from the original on 12 February 2012. Retrieved 24 January 2012.
  13. "#17 Kalanithi Maran". Forbes. 29 September 2010. Archived from the original on 24 January 2018. Retrieved 2 September 2017.
  14. "Newsmaker: Kalanithi Maran". Business Standard. Archived from the original on 13 December 2010. Retrieved 8 August 2010.
  15. "Welcome To Sun Network". Sunnetwork.org. Archived from the original on 1 September 2010. Retrieved 8 August 2010.
  16. "#20 Kalanithi Mar". Forbes. 18 November 2009. Archived from the original on 8 August 2010. Retrieved 8 August 2010.
  17. "MEDIA MARAN". Tehelka. 9 June 2007. Archived from the original on 19 December 2013. Retrieved 22 July 2013.
  18. "The story of Marans: Sun King and his brother". Business Standard. 30 August 2014. Archived from the original on 28 January 2018. Retrieved 28 January 2018.
  19. "Kalanithi Maran". Forbes. 30 August 2014. Retrieved 28 January 2018.