ಕಲಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲಾಡಿ ಜಮ್ಮು ಕಾಶ್ಮೀರ ರಾಜ್ಯದ ಜಮ್ಮು ಪ್ರಾಂತ್ಯದ ರಾಜೌರಿ, ಪೂಂಛ್ ಹಾಗೂ ಉಧಮ್‍ಪುರ್‌ಗೆ ಸ್ಥಳೀಯವಾದ ಸಾಂಪ್ರದಾಯಿಕ ಹದವಾಗಿಸಿದ ಗಿಣ್ಣು ಉತ್ಪನ್ನವಾಗಿದೆ.[೧] ಇದು ಬಹಳ ಸಾಂದ್ರವಾದ ಗಿಣ್ಣಾಗಿದೆ. ಇದನ್ನು ಸಾಮಾನ್ಯವಾಗಿ ಇದರದೇ ಕೊಬ್ಬಿನಲ್ಲಿ ಸಾಟೆ ಮಾಡಿ ಉಪ್ಪು ಸೇರಿಸಿ ಬಡಿಸಲಾಗುತ್ತದೆ. ಕಲಾಡಿಯನ್ನು ಸಾಮಾನ್ಯವಾಗಿ ಹಸು ಅಥವಾ ಎಮ್ಮೆಯ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ ಬಿಳಿಯ ಬಣ್ಣವನ್ನು ಹೊಂದಿರುವ, ಮೇಕೆಯ ಹಾಲಿನಿಂದ ತಯಾರಿಸಲಾದ ಕಲಾಡಿ ಕೂಡ ಲಭ್ಯವಾಗಿದೆ.[೨] ಸಾಂಪ್ರದಾಯಿಕವಾಗಿ ಕಲಾಡಿಯನ್ನು ಹುಳಿಯಾಗಿಸಿದ ಹಾಲಿನಿಂದ ಕಚ್ಚಾ (ಬೇಯಿಸದಿರದ) ಪೂರ್ಣ ಕೊಬ್ಬನ್ನು ಬೇರ್ಪಡಿಸಿ ತಯಾರಿಸಲಾಗುತ್ತದೆ. ಘನೀಕೃತ ಭಾಗವನ್ನು ದೂನಾಗಳಲ್ಲಿ (ಎಲೆಗಳಿಂದ ಮಾಡಲಾದ ಸಣ್ಣ ಬಟ್ಟಲುಗಳು) ಕಟ್ಟಿ ಸೂರ್ಯನ ಬೆಳಕಿನಲ್ಲಿ ಒಣಗಿಸಲಾಗುತ್ತದೆ. ಹೆಚ್ಚುವರಿ ದ್ರವವು ಅರೆ ರಂಧ್ರಯುಕ್ತ ದೂನಾಗಳಿಂದ ಸೋರಿ ಉಳಿದ ತೇವಾಂಶವು ಸೂರ್ಯನ ಬೆಳಕಿನಲ್ಲಿ ಒಣಗುವುದರಿಂದ ಹೋಗುತ್ತದೆ. ಕಲಾಡಿ ಹೊರಗಿನಿಂದ ಶುಷ್ಕವಾಗಿದ್ದು ಆದರೆ ಒಳಗಡೆ ತೇವಾಂಶವನ್ನು ಉಳಿಸಿಕೊಂಡಿರುತ್ತದೆ. ಕೆಲವೊಮ್ಮೆ ಇದರ ಮೇಲೆ ಶಿಲೀಂಧ್ರ ಬೆಳೆದು ಇದಕ್ಕೆ ಅನನ್ಯವಾದ ರುಚಿಯನ್ನು ಕೊಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Regional Research Laboratory, Jammu, Jammu-Kashmir, Annual report, Council of Scientific & Industrial Research (India), 1985, ... 'Kalari' a traditional milk-based ripened cheese product is a cherished snack food among Dogra people in J&K state ...{{citation}}: CS1 maint: multiple names: authors list (link)
  2. Krishna Gopal Dubey, The Indian Cuisine, PHI Learning Pvt. Ltd., ISBN 978-81-203-4170-8, ... Kaladi, a homemade cheese made from goat's or cow's raw milk forms the delicacy of the Kashmiris ...
"https://kn.wikipedia.org/w/index.php?title=ಕಲಾಡಿ&oldid=995944" ಇಂದ ಪಡೆಯಲ್ಪಟ್ಟಿದೆ