ವಿಷಯಕ್ಕೆ ಹೋಗು

ಕಲಬೆರಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲಬೆರಕೆ ಎಂದರೆ ಕಾನೂನಾತ್ಮಕ ಅಥವಾ ಇತರ ಕಾರಣಗಳಿಗಾಗಿ ಸೇರಿಸಲು ಅನುಮತಿ ಇಲ್ಲದಿದ್ದರೂ ಆಹಾರ, ಇಂಧನಗಳು ಅಥವಾ ರಾಸಯನಿಕಗಳಂತಹ ಪದಾರ್ಥಗಳೊಳಗೆ ಇತರ ಪದಾರ್ಥಗಳನ್ನು ಸೇರಿಸುವುದು. ಕಲಬೆರಕೆ ಪದಾರ್ಥಗಳು ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ವಿವರಣೆ ಅಥವಾ ಪದಾರ್ಥದ ಘೋಷಿತ ಒಳವಸ್ತುಗಳಲ್ಲಿ ಇರುವುದಿಲ್ಲ, ಮತ್ತು ಅವುಗಳಿಗೆ ಕಾನೂನಾತ್ಮಕವಾಗಿ ಅನುಮತಿ ಇಲ್ಲದಿರಬಹುದು. ಕಲಬೆರಕೆಗೆ ಅತ್ಯಂತ ಸಾಮಾನ್ಯ ಕಾರಣವೆಂದರೆ ತಯಾರಕರಿಂದ ಸರಿಯಾದ ಮತ್ತು ಅಘೋಷಿತ ವಸ್ತುಗಳಿಗಿಂತ ಹೆಚ್ಚು ಅಗ್ಗವಿರುವ ಅಘೋಷಿತ ವಸ್ತುಗಳ ಬಳಕೆ. ಕಲಬೆರಕೆ ಪದಾರ್ಥಗಳು ಹಾನಿಕಾರಕವಾಗಿರಬಹುದು, ಅಥವಾ ಉತ್ಪನ್ನದ ಶಕ್ತಿ ಸಾಮರ್ಥ್ಯವನ್ನು ಕಡಿಮೆಮಾಡಬಹುದು, ಅಥವಾ ಅವು ನಿರುಪದ್ರವಿಯಾಗಿರಬಹುದು.

ಯಾವುದೇ ಉದ್ದೇಶದ ಬದಲಾಗಿ ಆಕಸ್ಮಿಕ ಅಥವಾ ನಿರ್ಲಕ್ಷ್ಯದಿಂದ ಅನಗತ್ಯ ಪದಾರ್ಥಗಳ ಸೇರಿಸುವಿಕೆಗೆ, ಮತ್ತು ಜೊತೆಗೆ ಉತ್ಪನ್ನವನ್ನು ತಯಾರಿಸಿದ ಮೇಲೆ ಅನಗತ್ಯ ಪದಾರ್ಥಗಳ ಪ್ರವೇಶಿಸುವಿಕೆಗೆ "ಕಶ್ಮಲೀಕರಣ" ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಹಾಗಾಗಿ, ಆರಂಭಿಕ ತಯಾರಿಕಾ ಪ್ರಕ್ರಿಯೆಯಲ್ಲಿ ಕಲಬೆರಕೆ ಪದಾರ್ಥವನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿತ್ತು ಎಂದು, ಅಥವಾ ಕೆಲವೊಮ್ಮೆ ಅದು ಕಚ್ಚಾವಸ್ತುಗಳಲ್ಲಿ ಉಪಸ್ಥಿತವಿತ್ತು ಮತ್ತು ಅದನ್ನು ತೆಗೆಯಬೇಕಾಗಿತ್ತು, ಆದರೆ ತೆಗೆದಿರಲಿಲ್ಲ ಎಂದು ಕಲಬೆರಕೆಯು ಸೂಚಿಸುತ್ತದೆ.

ಕಲಬೆರಕೆ ಪದಾರ್ಥವು (ಉದಾಹರಣೆಗೆ) ಅನುಮತಿಸಲಾದ ಆಹಾರ ಸಂಯೋಜನೀಯಗಳಿಂದ ಭಿನ್ನವಾಗಿದೆ. ಕಲಬೆರಕೆ ಪದಾರ್ಥ ಮತ್ತು ಸಂಯೋಜನೀಯದ ನಡುವೆ ಅತ್ಯಲ್ಪ ವ್ಯತ್ಯಾಸವಿರಬಹುದು; ವೆಚ್ಚವನ್ನು ಕಡಿಮೆಮಾಡಲು ಅಥವಾ ಅಪೇಕ್ಷಿತ ರುಚಿಯನ್ನು ಸಾಧಿಸಲು ಕಾಫಿಗೆ ಚಿಕೋರಿಯನ್ನು ಸೇರಿಸಬಹುದು—ಘೋಷಿಸದಿದ್ದರೆ ಇದು ಕಲಬೆರಕೆಯಾಗುತ್ತದೆ, ಆದರೆ ಗುರುತು ಪಟ್ಟಿ ಮೇಲೆ ಹೇಳಬಹುದು. ಬ್ರೆಡ್ ಕಣಕಕ್ಕೆ ಹಲವುವೇಳೆ ಸೀಮೆಸುಣ್ಣವನ್ನು ಸೇರಿಸಲಾಗುತ್ತಿತ್ತು; ಇದು ವೆಚ್ಚವನ್ನು ಕಡಿಮೆಮಾಡಿ ಬಿಳುಪನ್ನು ಹೆಚ್ಚಿಸುತ್ತದೆ, ಆದರೆ ಕ್ಯಾಲ್ಷಿಯಂ ವಾಸ್ತವವಾಗಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ, ಮತ್ತು ಈ ಕಾರಣಕ್ಕಾಗಿ ಆಧುನಿಕ ಬ್ರೆಡ್‍ನಲ್ಲಿ ಸ್ವಲ್ಪ ಸೀಮೆಸುಣ್ಣವನ್ನು ಸಂಯೋಜನೀಯವಾಗಿ ಸೇರಿಸಬಹುದು.

ಯುದ್ಧಕಾಲದಲ್ಲಿ, ಆಹಾರ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸಲು ಮತ್ತು ಅಭಾವವನ್ನು ತಡೆಯಲು ಕಲಬೆರಕೆ ಪದಾರ್ಥಗಳನ್ನು ಸೇರಿಸಲಾಗಿದೆ. ಅಂತಹ ಕಲಬೆರಕೆಯನ್ನು ಮನೋಸ್ಥೈರ್ಯದ ಹಾನಿಯನ್ನು ತಡೆಯಲು ಮತ್ತು ಪ್ರಚಾರದ ಕಾರಣಗಳಿಗಾಗಿ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಜನರಿಂದ ರಹಸ್ಯವಾಗಿಡಲಾಗುತ್ತಿತ್ತು. ಕಮ್ಯುನಿಸ್ಟ್ ಬಣದಲ್ಲಿ ಐಷಾರಾಮಿ ಎಂದು ಪರಿಗಣಿಸಲಾದ ಕಾಫ಼ಿಯಂತಹ ಕೆಲವು ಸರಕುಗಳನ್ನು ಸಾಮಾನ್ಯ ಜನರಿಗೆ ಕೈಗೆಟಕುವಂತೆ ಮಾಡಲು ಕಲಬೆರಕೆ ಮಾಡಲಾಗುತ್ತಿತ್ತು.

"https://kn.wikipedia.org/w/index.php?title=ಕಲಬೆರಕೆ&oldid=938500" ಇಂದ ಪಡೆಯಲ್ಪಟ್ಟಿದೆ