ವಿಷಯಕ್ಕೆ ಹೋಗು

ಕರ್ನಾಟಕ ಸರ್ಕಾರದ ಮುಂಗಡ ಪತ್ರ (ಬಜೆಟ್) ೨೦೧೭-೧೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಜೆಟ್ ೨೦೧೭-೧೮[ಬದಲಾಯಿಸಿ]

 • 15 Mar, 2017;
24 ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 2017-18 ಸಾಲಿನ ಬಜೆಟ್‍ನ್ನು ೧೫-೩-೨೦೧೭ರ ಬೆಳಿಗ್ಗೆ 11:33ಮಂಡನೆ ಮಾಡಿದರು. ಅವರು ಬಜೆಟ್‍ನ್ನು ಮಂಡನೆ ಮಾಡುವಾಗ ನಮ್ಮದು ಸರ್ವರನ್ನು ಒಳಗೊಂಡ ಸರ್ವೋದಯ ಅಭಿವೃದ್ಧಿ ಮಾದರಿ ಸರ್ಕಾರ. ಅಭಿವೃದ್ಧಿಯ ಪಥವೇ ಸರ್ಕಾರದ ಸಾಧನೆಯಾಗಿದೆ ಎಂದರು.
 • ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 12ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿದೆ. ಹೆಗಡೆ ಅವರು ದಿವಂಗತ ಎಸ್ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ವೇಳೆ ಆರು ಬಾರಿ ಮತ್ತು ತಾವೇ ಮುಖ್ಯಮಂತ್ರಿಯಾಗಿದ್ದಾಗ 7 ಬಾರಿ ಬಜೆಟ್ ಮಂಡಿಸಿದ್ದು ಒಟ್ಟಾರೆ 13 ಬಾರಿ ಬಜೆಟ್ ಮಂಡಿಸಿದ್ದಾರೆ. ಇನ್ನು ಎಂ.ವೈ ಘೋರ್ಪಡೆ ಅವರು ಏಳು ಬಾರಿ ಬಜೆಟ್ ಮಂಡಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆರು ಬಾರಿ ಬಜೆಟ್ ಮಂಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. [೧][೨]

ಬಜೆಟ್ ಸಾರಾಶ[ಬದಲಾಯಿಸಿ]

 • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಮಂಡಲದ ಅಧಿವೇಶನದಲ್ಲಿ 2017-18ನೇ ಸಾಲಿನ 1,86, 561 ಕೋಟಿ ರೂ. ಗಾತ್ರದ "ಜನಪ್ರಿಯ" ಬಜೆಟ್ (ಸಿದ್ದು ಲೆಕ್ಕಾಚಾರ;ಬಜೆಟ್ ಹೈಲೈಟ್ಸ್) ಮಂಡಿಸಿದ್ದಾರೆ. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಘಟನೆಯ ನಡುವೆಯೂ ಈ ಬಾರಿಯೂ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡದೆ ಶೂನ್ಯ ಬಡ್ಡಿದರದಲ್ಲಿ ಶೇ.3 ಲಕ್ಷದವರೆಗೆ ಸಾಲ ಸೌಲಭ್ಯ ಮುಂದುವರಿಸಲಾಗಿದೆ. ಬೆಂಗಳೂರಿನಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ನಮ್ಮ ಕ್ಯಾಂಟೀನ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಮೆಟ್ರೋ, ಬಿಬಿಎಂಪಿ ರಸ್ತೆಗಳಿಗೆ ಬಂಪರ್ ಕೊಡುಗೆ. ಬೆಂಗಳೂರಿನ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ, ಬೆಂಗಳೂರು ವನ್ ಮಾದರಿಯಲ್ಲಿ ಕರ್ನಾಟಕ ವನ್ ಜಾರಿ, 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಘೋಷಿಸಲಾಗಿದೆ. ಜನಪ್ರತಿನಿಧಿಗಳ ಗೌರವ ಧನ ಹೆಚ್ಚಳ, ಕೃಷಿ, ವಿದ್ಯುತ್, ನೀರಾವರಿ, ಶಿಕ್ಷಣ,ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಕನ್ನಡ ಚಿತ್ರರಂಗ, ಮೀನುಗಾರಿಕೆ, ಮಹಿಳೆಯರು, ವೃದ್ಧರಿಗೆ ಬಜೆಟ್ ನಲ್ಲಿ ಆದ್ಯತೆ ಕೊಡಲಾಗಿದೆ. ರಾಯಚೂರಿನಲ್ಲಿ ವಿವಿ ಸ್ಥಾಪನೆ...ಹೀಗೆ ಹತ್ತು ಹಲವು ಯೋಜನೆಗಳ ಕೊಡುಗೆ ನೀಡಿರುವ ಸಿದ್ದರಾಮಯ್ಯ ಇದು ಅಭಿವೃದ್ಧಿ ಪರ ಬಜೆಟ್ ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ ಬಿಜೆಪಿ ಇದು ರೈತ ವಿರೋಧಿ ಬಜೆಟ್ ಎಂದು ಟೀಕಿಸಿದೆ. ಏತನ್ಮಧ್ಯೆ ರೈತರ ಸಾಲ ಮನ್ನಾ ಕುರಿತಂತೆ ಮೊದಲು ಕೇಂದ್ರ ರೈತರ ಸಾಲ ಮನ್ನಾ ಮಾಡಲಿ, ಈ ಬಗ್ಗೆ ರಾಜ್ಯ ಬಿಜೆಪಿ ಮುಖಂಡರು ದೆಹಲಿಯಲ್ಲಿ ಧರಣಿ ನಡೆಸಿ ಒತ್ತಡ ಹೇರಲಿ ಎಂದು ಸಿಎಂ ತಿರುಗೇಟು ನೀಡಿದ್ದಾರೆ.[೩]

ರಾಜ್ಯ ಬಜೆಟ್‌ನಲ್ಲಿ ಇಲಾಖೆಗಳಿಗೆ ಮೀಸಲಿಟ್ಟ ಹಣದ ವಿವರ[ಬದಲಾಯಿಸಿ]

 • 15 Mar, 2017;
 • ಒಟ್ಟು ಬಜೆಟ್‌ ಗಾತ್ರ ರೂ.1,86,561 ಕೋಟಿ.
ಕ್ರ.ಸಂ ಇಲಾಖೆ ಹಣ/ ಕೋಟಿ ರೂ. ♦♦♦ ಕ್ರ.ಸಂ . ಇಲಾಖೆ ಹಣ/ಕೋಟಿ ರೂ.
1 ಕೃಷಿ ಇಲಾಖೆ 5,080 ♦♦♦ 22 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ: 285
2 ತೋಟಗಾರಿಕಾ ಇಲಾಖೆ 1,091 ಕೋಟಿ ♦♦♦ 23 ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: 3,636
3 ಪಶುಸಂಗೋಪನಾ ಇಲಾಖೆ 2,245 ಕೋಟಿ ♦♦♦ 24 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ: 14,061
4 ರೇಷ್ಮೆ ಇಲಾಖೆ 429 ಕೋಟಿ ♦♦♦ 25 ಯೋಜನೆ ಮತ್ತು ಪ್ರದೇಶಾಭಿವೃದ್ಧಿ ಇಲಾಖೆ 1,828
5 ಮೀನುಗಾರಿಕೆ ಇಲಾಖೆ 337 ಕೋಟಿ ♦♦♦ 26 ನಗರಾಭಿವೃದ್ಧಿ ಇಲಾಖೆ 18,127
6 ಸಹಕಾರ ಇಲಾಖೆ 1,663 ಕೋಟಿ ♦♦♦ 27 ಕಂದಾಯ ಇಲಾಖೆ 5,900
7 ಜಲಸಂಪನ್ಮೂಲ ಇಲಾಖೆ 15,929 ಕೋಟಿ ♦♦♦ 28 ಇಂಧನ ಇಲಾಖೆ 14,094
8 ಸಣ್ಣ ನೀರಾವರಿ ಇಲಾಖೆ 2,099 ಕೋಟಿ ♦♦♦ 29 ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 8,559
9 ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ 1,732 ♦♦♦ 30 ಮೂಲಸೌಕರ್ಯ ಅಭಿವೃದ್ಧಿ ಇಲಾಖೆ 790
10 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 14,266 ♦♦♦ 31 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 2,250
11 ಉನ್ನತ ಶಿಕ್ಷಣ ಇಲಾಖೆ 4,401 ♦♦♦ 32 ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 229
12 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 5,118 ♦♦♦ 33 ಇ–ಆಡಳಿತ ಇಲಾಖೆ 189
13 ವೈದ್ಯಕೀಯ ಶಿಕ್ಷಣ ಇಲಾಖೆ : 2,004 ♦♦♦ 34 ಪ್ರವಾಸೋದ್ಯಮ ಇಲಾಖೆ 572
14 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 4,926 ♦♦♦ 35 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 283
15 ಸಮಾಜ ಕಲ್ಯಾಣ ಇಲಾಖೆ 6,363 ♦♦♦ 36 ಒಳಾಡಳಿತ ಇಲಾಖೆ: 4,938
16 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 3,154 ♦♦♦ 37 ಸಾರಿಗೆ ಇಲಾಖೆ 2,354
17 ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್‌ ಇಲಾಖೆ 2,200 ♦♦♦ 38 ಕಾನೂನು ಇಲಾಖೆ 731
18 ವಸತಿ ಇಲಾಖೆ 4,708 ♦♦♦ 39 ಸಂಸದೀಯ ವ್ಯವಹಾರಗಳ ಇಲಾಖೆ 256
19 ಕಾರ್ಮಿಕ ಇಲಾಖೆ 469 ♦♦♦ 40 ಸಾರ್ವಜನಿಕ ಉದ್ದಿಮೆಗಳ ಇಲಾಖೆ 250
20 ಕೌಶಲ ಅಭಿವೃದ್ಧಿ ಇಲಾಖೆ 1,332 ♦♦♦
21 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 424 ♦♦♦

[೪]

ಬಜೆಟ್ಟನ ವಿವರ[ಬದಲಾಯಿಸಿ]

ತೆರಿಗೆ ಪ್ರಸ್ತಾವನೆಗಳು[ಬದಲಾಯಿಸಿ]

 • ಸಿರಿಧಾನ್ಯಗಳಾದ ನವಣೆ, ಸಾಮೆ ಹಿಟ್ಟುಗಳಿಗೆ ತೆರಿಗೆ ವಿನಾಯಿತಿ;

ಸರಕು ಮತ್ತು ಸೇವಾ ತೆರಿಗೆ[ಬದಲಾಯಿಸಿ]

 • ಸರಕು ಮತ್ತು ಸೇವಾ ತೆರಿಗೆಯನ್ನು 01ನೇ ಜುಲೈ 2017 ರಿಂದ ದೇಶದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
 • ಕರ್ನಾಟಕವು ಸರಕು ಮತ್ತು ಸೇವಾ ತೆರಿಗೆಯಲ್ಲಿ ದೇಶದಲ್ಲಿಯೇ ಅತೀ ಹೆಚ್ಚಿನ ಮಟ್ಟದ ಸ್ಥಿತ್ಯಂತರದ ಪ್ರಗತಿಯನ್ನು ಸಾಧಿಸಿದೆ.
 • ಸರಕು ಮತ್ತು ಸೇವಾ ತೆರಿಗೆಯ ಕುರಿತು ಅರಿವು ಮೂಡಿಸಲು ಕರದಾತರು ಹಾಗೂ ವೃತ್ತಿನಿರತರೊಂದಿಗೆ ಸಂಹವನಕ್ಕಾಗಿ 100 ಕ್ಕೂಹೆಚ್ಚು ಕಾರ್ಯಾಗಾರಗಳ ಹಾಗೂ ರೋಡ್ ಶೋಗಳ ಮೂಲಕ ಬೃಹತ್ ಪ್ರಮಾಣದ ಸಂಪರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
 • ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಾಕಷ್ಟು ಸಾಮರ್ಥ್ಯ ಸಂವರ್ಧನೆಗಾಗಿ ಇಲಾಖೆಯ 3000ಕ್ಕೂ ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ.

ಮೌಲ್ಯವರ್ಧಿತ ತೆರಿಗೆ[ಬದಲಾಯಿಸಿ]

 • ಪರಿಹಾರಗಳು ಮತ್ತು ಸುಧಾರಣಾ ಕ್ರಮಗಳು
 • ಭತ್ತ, ಅಕ್ಕಿ, ಗೋಧಿ, ಬೇಳೆ ಕಾಳುಗಳು ಹಾಗೂ ಅಕ್ಕಿ, ರಾಗಿರೈಸ್ (ಸಂಸ್ಕರಿಸಿದ ರಾಗಿ) ಮತ್ತು ಗೋಧಿ ಪದಾರ್ಥಗಳ ಮೇಲಿನ ತೆರಿಗೆಯ ವಿನಾಯಿತಿಗೊಳಿಸಲಾಗಿದೆ.
 • ಸಿರಿಧಾನ್ಯಗಳಾದ ನವಣೆ, ಸಾಮೆ, ಆರಕ ಮತ್ತು ಬರಗು ಇವುಗಳ ಹಿಟ್ಟುಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ.
 • ದ್ವಿದಳ ಧಾನ್ಯಗಳು ಮತ್ತು ತೆಂಗಿನಕಾಯಿಯ ಸಿಪ್ಪೆಯ ಮೇಲಿನ ತೆರಿಗೆಯನ್ನು ವಿನಾಯಿತಿಗೊಳಿಸಲಾಗಿದೆ.

ಆಡಳಿತಾತ್ಮಕ ಕ್ರಮಗಳು[ಬದಲಾಯಿಸಿ]

 • 2003ರ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆಯ ಪ್ರಕರಣ 40ಕ್ಕೆ ತಿದ್ದುಪಡಿ ಮಾಡುವ ಮೂಲಕ 2012-13 ಹಾಗೂ 2013-14ರ ತೆರಿಗೆ ಅವಧಿಗಳಿಗೆ ಸಂಬಂಧಿಸಿದ ಕರನಿರ್ಧರಣೆ ಅಥವಾ ಮರುಕರ ನಿರ್ಧರಣೆಗಳನ್ನು ಅಂತಿಮಗೊಳಿಸಲು ಇದ್ದ ಟಡೆರತಯುಇಉಯತರೆಡೆಒಂದು ವರ್ಷ ವಿಸ್ತರಿಸಲಾಗಿದೆ.
 • ಪ್ರಕರಣ 40 ಕ್ಕೆ ತಿದ್ದುಪಡಿ ಮಾಡುವ ಮೂಲಕ ಕರನಿರ್ಧರಣೆ ಅಥವಾ ಮರುಕರನಿರ್ಧರಣೆಗೆ ಕಾಲಮಿತಿಯನ್ನು ಪರಿಗಣಿಸುವಾಗ ಮರುಪರಿಶೀಲನಾ ನಡಾವಳಿಗಳನ್ನು ವಿಲೇ ಮಾಡಲು ತೆಗೆದುಕೊಳ್ಳುವ ಅವಧಿಯನ್ನು ಹೊರತುಪಡಿಸಲಾಗಿದೆ.
 • ಬಾಕಿ ಇರುವ ಪೂರ್ಣ ತೆರಿಗೆ ಮತ್ತು ಬಾಕಿ ಇರುವ ಬಡ್ಡಿ ಮತ್ತು ದಂಡದ ಶೇಕಡಾ 10ರಷ್ಟನ್ನು 31ನೇ ಮೇ 2017 ರ ಒಳಗೆ ಪಾವತಿಸಿದಲ್ಲಿ, ಇನ್ನುಳಿದ ಶೇಕಡಾ 90 ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಅನುಕೂಲವಾಗುವಂತೆ ಕರಸಮಾಧಾನ ಯೋಜನೆಯನ್ನು ಜಾರಿಗೆ ತರಲಾಗಿದೆ.[೫]

ಬಜೆಟ್ ಪ್ರಸ್ತಾವನೆಗಳ ವಿವರ[ಬದಲಾಯಿಸಿ]

 1. . ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ಘೋಷಣೆ
 2. .ಅಮ್ಯಾ ಕ್ಯಾಂಟೀನ್ ಮಾದರಿಯಲ್ಲೇ ಬೆಂಗಳೂರಿನ ಪ್ರತೀ ವಾರ್ಡ್ ತಲಾ ಒಂದರಂತೆ 198 ನಮ್ಮ ಕ್ಯಾಂಟೀನ್ ಸ್ಥಾಪನೆ. 5 ರುಪಾಯಿಗೆ ತಿಂಡಿ, 10 ರುಪಾಯಿಗೆ ಊಟ..ಇದು ನಮ್ಮ ಕ್ಯಾಂಟೀನ್ ವಿಶೇಷತೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್.
 3. . 12 ಲಕ್ಷ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ. ಹೊಸ ತಾಲೂಕು ಪಂಚಾಯಿತಿ ಕಚೇರಿ ನಿರ್ಮಾಣಕ್ಕೆ 300 ಕೋಟಿ ಅನುದಾನ.
 4. . ರೈತರ ಸಾಲ ಮನ್ನಾ ಇಲ್ಲ. ಸಾಲ ಮರುಪಾವತಿ ಅವಧಿ ವಿಸ್ತರಣೆ. ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ ಮುಂದುವರಿಕೆ. 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ
 5. . ಅಪಘಾತದಲ್ಲಿ ಹಸು, ಎತ್ತು ಸಾವನ್ನಪ್ಪಿದರೆ 10 ಸಾವಿರ ರೂಪಾಯಿ ಪರಿಹಾರ.
 6. . ಉಡುಪಿ ಜಿಲ್ಲೆಯ ಬೈಂದೂರು , ಬ್ರಹ್ಮಾವರ,ಕಾಪು ಹೊಸ ತಾಲೂಕುಗಳಾಗಿ ಘೋಷಣೆ
 7. . ಅನ್ನಭಾಗ್ಯ ಅಕ್ಕಿ 5ಕೆಜಿಯಿಂದ 7ಕೆಜಿಗೆ ಏರಿಕೆ. ಅನ್ನಭಾಗ್ಯದ ಅಕ್ಕಿ ಕುಟಂಬಕ್ಕೆ 35ಕೆಜಿಗೆ ಏರಿಕೆ.
 8. . ಚಿತ್ರದುರ್ಗ, ಬಾಗಲಕೋಟೆ, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ. ದಾವಣಗೆರೆ, ತುಮಕೂರು, ವಿಜಯಪುರ, ಕೋಲಾರ, ರಾಮನಗರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ತಲಾ 4 ಕೋಟಿ ರೂ. ವೆಚ್ಚದಲ್ಲಿ 25 ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ
 9. .2017-18ನೇ ಸಾಲಿನಲ್ಲಿ 1,86, 561 ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡನೆ. 25 ಲಕ್ಷ ರೈತರಿಗೆ 13, 500 ಕೋಟಿ ರುಪಾಯಿ ಕೃಷಿ ಸಾಲ ನೀಡುವ ಗುರಿ.
 10. . ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5ದಿನ ಮಕ್ಕಳಿಗೆ ಹಾಲು ವಿತರಣೆ
 11. . ಕೆರೆ ಸಂಜೀವಿನಿ ಯೋಜನೆ. 3 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆ. 42 ಕೋಟಿ ರೂಪಾಯಿ ವೆಚ್ಚದಲ್ಲಿ 10 ಕೆರೆಗಳ ಅಭಿವೃದ್ಧಿ. ಕೊಳಚೆ ಪ್ರದೇಶದ ನಿವಾಸಿಗಳಿಗೆ ಉಚಿತ ಕುಡಿಯುವ ನೀರಿನ ಯೋಜನೆ. ತಿಂಗಳಿಗೆ 10 ಸಾವಿರ ಲೀಟರ್ ಉಚಿತ ಕುಡಿಯುವ ನೀರು ವಿತರಣೆ
 12. .ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ.
 13. . ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗಾಗಿ 145 ಚಿಕಿತ್ಸಾ ಘಟಕ ಸ್ಥಾಪನೆ.
 14. . ಬೆಳೆಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ. ಭತ್ತ, ಅಕ್ಕಿ, ಗೋಧಿ, ಕಾಳುಗಳ ಮೇಲೆ ತೆರಿಗೆ ವಿನಾಯ್ತಿ.
 15. . ತುಂತುರು ನೀರಾವರಿ ಯೋಜನೆಗೆ 375 ಕೋಟಿ ಅನುದಾನ. ಕೃಷಿ ಇಲಾಖೆಗೆ 5080 ಕೋಟಿ ರೂಪಾಯಿ ಅನುದಾನ.
 16. .ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್.
 17. . ಖಾಸಗಿ ಸಂಸ್ಥೆಗಳಲ್ಲಿ ಎಸ್ ಸಿ, ಎಸ್ ಟಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಆಶಾದೀಪ ಯೋಜನೆ. ಪರಿಶಿಷ್ಟ, ಜಾತಿ ಮತ್ತು ಪಂಗಡಗಳ ನಿರುದ್ಯೋಗಿಗಳಿಗೆ 3 ಲಕ್ಷ ಅನುದಾನ.
 18. . ಶ್ರವಣಬೆಳಗೊಳ ಮಹಾಮಸ್ತಾಕಾಭಿಷೇಕಕ್ಕೆ 175 ಕೋಟಿ.
 19. . 1 ಲಕ್ಷ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಹೆಚ್ಚಳ.
 20. . ಮಲ್ಟಿಪ್ಲೆಕ್ಸ್ ಗಳಲ್ಲಿನ ಚಿತ್ರಮಂದಿರದ ಟಿಕೆಟ್ ದರ 200ಕ್ಕೆ ನಿಗದಿ. ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಮೈಸೂರಿನ ಹಿಮ್ಮಾವು ಎಂಬಲ್ಲಿ ಚಿತ್ರನಗರಿ ನಿರ್ಮಾಣ.
 21. . ಎಪಿಎಂಪಿಸಿಯಲ್ಲಿ ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ವ್ಯವಸ್ಥೆಗೆ 10 ಕೋಟಿ ಮೀಸಲು
 22. .ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ. ಬಿಯರ್, ಫೆನ್ನಿ, ಲಿಕ್ಕರ್, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು. ಅಬಕಾರಿ ಶುಲ್ಕದಲ್ಲಿ ಹೆಚ್ಚಳ. ರಾಜ್ಯದಲ್ಲಿ ನೀರಾ ನೀತಿ ಜಾರಿ. ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ.
 23. . 2,200 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕ. ಕೆರೆ ಸಂಜೀವಿನಿ ಯೋಜನೆಗೆ 100 ಕೋಟಿ ರೂಪಾಯಿ. 200 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ಯೋಜನೆ.
 24. .
 25. ಸ್ವಾತಂತ್ರ್ಯ ಯೋಧರ ಮಾಸಾಶನ 8,000 ರೂಗಳಿಂದ 10,000 ರೂಗಳಿಗೆ ಮತ್ತು ಗೋವಾ ವಿಮೋಚನಾ ಹೋರಾಟಗಾರರ ಮಾಸಾಶನ 3,000 ರೂಗಳಿಂದ 4,000 ರೂಗಳಿಗೆ ಹೆಚ್ಚಳ.
 26. •ಬೆಂಗಳೂರನ್ನು ವಿದ್ಯೂತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿ ರೂಪಿಸಲು ಚಿಂತನೆ. ಬೆಂಗಳೂರಿನ ಐಐಐಟಿಯಲ್ಲಿ ರೋಬೋಟಿಕ್ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ.
 27. •ಖಾದಿ, ಗ್ರಾಮೋದ್ಯಮ ಉತ್ತೇಜಿಸಲು 4 ಕೋಟಿ ರೂ. ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯದ ಎರಡು ಕಡೆ ಖಾದಿ ಪ್ಲಾಜಾ ಸ್ಥಾಪಿಸಲು ನಿರ್ಧಾರ
 28. ರಾಜ್ಯ ಸರ್ಕಾರದಿಂದ 50 ‘ಸಾಲು ಮರದ ತಿಮ್ಮಕ್ಕ’ ವೃಕ್ಷ ಪಾರ್ಕ್ ಅಭಿವೃದ್ಧಿ
 29. •ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ವಿುನಲ್ ನಿರ್ವಣಕ್ಕೆ ಕ್ರಮ
 30. •ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ವಿುನಲ್ ನಿರ್ವಣಕ್ಕೆ ಕ್ರಮ.
 31. •‘ಜನೌಷಧಿ ಜೆನರಿಕ್ ಔಷಧಿ ಮಳಿಗೆ’ ಯೋಜನೆ ಅಡಿಯಲ್ಲಿ 200 ಜೆನರಿಕ್ ಮೆಡಿಕಲ್ ಸ್ಟೋರ್ಗಳ ಸ್ಥಾಪನೆ.
 32. •ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ. ಭಾರತ ಭಾಗ್ಯವಿದಾತ ಧ್ವನಿ ಬೆಳಕು ಯೋಜನೆ. ಗೇರು ಅಭಿವೃದ್ಧಿ ಮಂಡಳಿ ಸ್ಥಾಪನೆ.
 33. •ಕೆಎಸ್ ಆರ್ ಟಿಸಿಗೆ 3,250 ಹೊಸ ಬಸ್ ಸೇರ್ಪಡೆ. ಬೆಂಗಳೂರು ನಗರಕ್ಕೆ 150 ಎಲೆಕ್ಟ್ರಿಕ್ ಬಸ್.
 34. ಸಣ್ಣ ನೀರಾವರಿ 2099, ಪಶುಸಂಗೋಪನೆ 2245 ಕೋಟಿ, ಅರಣ್ಯ, ಪರಿಸರ ಮತ್ತು ಸಂರಕ್ಷಣೆ 1732 ಕೋಟಿ , ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 3154 ಕೋಟಿ ಅನುದಾನ.
 35. ಐಟಿ, ಬಿಟಿ ವಿ‍ಜ್ಞಾನ ತಂತ್ರಜ್ಞಾನಕ್ಕೆ 299 ಕೋಟಿ, ಕಾನೂನು, ಕ್ರೀಡಾ ಮತ್ತು ಯುವಜನ 285 ಕೋಟಿ, ನ್ಯಾಯಾಲಯಕ್ಕೆ 731 ಕೋಟಿ ಅನುದಾನ
 36. ಉನ್ನತ ಶಿಕ್ಷಣಕ್ಕೆ 4401 ಕೋಟಿ, ವೈದ್ಯಕೀಯ ಶಿಕ್ಷಣಕ್ಕೆ 2004 ಕೋಟಿ, ಸಮಾಜ ಕಲ್ಯಾಣಕ್ಕೆ 6363 ಕೋಟಿ, ವಸತಿ 4708 ಕೋಟಿ, ಮೀನುಗಾರಿಕೆಗೆ 337 ಕೋಟಿ ಅನುದಾನ.
 37. "ಕೆ' ಶಿಪ್ 3 ಯೋಜನೆಯಡಿ 418.5 ಕಿಮೀ ರಸ್ತೆ ಅಭಿವೃದ್ದಿ. 5310 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಬೆಂಗಳೂರು ನಗರದ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ. ಬೆಂಗಳೂರು, ಮಾಗಡಿ 50 ಕಿಮೀ ರಸ್ತೆ ಅಭಿವೃದ್ದಿ. 1455 ಕೋಟಿ ವೆಚ್ಚದಲ್ಲಿ 150 ಕಿಮೀ ರಸ್ತೆ ಅಭಿವೃದ್ದಿ.
 38. •ಶಬರಿಮಲೆಯಲ್ಲಿ ಕರ್ನಾಟಕದ ಉಪ ಕಚೇರಿ ಆರಂಭಿಸಲಾಗುವುದು. ರಾಜ್ಯದ 50ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈ ಯೋಜನೆ. ಕಚೇರಿಯಲ್ಲಿ ವೈದ್ಯಕೀಯ ಸೌಲಭ್ಯ, ಸಹಾಯವಾಣಿ ಮತ್ತು ರಕ್ಷಣೆಗಾಗಿ ಕ್ರಮ.
 39. •ಜೈಲುಗಳಲ್ಲಿ ಕೈದಿಗಳ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್. ಬಾಲಕಾರ್ಮಿಕ ಮುಕ್ತ ರಾಜ್ಯವಾಗಿಸಲು ಯೋಜನೆ.
 40. •ಉತ್ತರಕರ್ನಾಟಕಕ್ಕೆ ಪ್ರತ್ಯೇಕ ಬಯಲಾಟ ಅಕಾಡೆಮಿ. ಬನವಾಸಿ ಹಾಗೂ ಸರ್ವಜ್ಞ ಪೀಠ ಅಭಿವೃದ್ಧಿಗೆ 5 ಕೋಟಿ ಮೀಸಲು.
 41. •ಕೃಷಿಯಲ್ಲಿ ತಾಂತ್ರಿಕ ಬಳಕೆಗೆ ಪ್ರೋತ್ಸಾಹ. ಬೇಸಾಯದಲ್ಲಿ ತಾಂತ್ರಿಕತೆ ಬಳಸುವ ರೈತರಿಗೆ ಸಹಾಯಧನ.
 42. •16, 500 ನರ್ಸ್ ಗಳಿಗೆ ಕಂಪ್ಯೂಟರ್ ಟ್ಯಾಬ್ ನೀಡಲಾಗುವುದು. ಆರೋಗ್ಯಕರ, ಪರಿಸರ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಲು ಬಾಡಿಗೆ ಸೈಕಲ್ ಒದಗಿಸುವ ಯೋಜನೆ ಜಾರಿ. ಎಲ್ಲಾ ಇಎಸ್ಐ ಆಸ್ಪತ್ರೆಗಳಲ್ಲಿ ಆಯೂಷ್ ವಿಭಾಗ ಆರಂಭ.
 43. •ಭಾಗ್ಯಜ್ಯೋತಿ ಯೋಜನೆಯಡಿ ನೀಡುವ ಉಚಿತ ವಿದ್ಯುತ್ 18 ಯೂನಿಟ್ ನಿಂದ 40 ಯೂನಿಟ್ ಗೆ ಏರಿಕೆ.
 44. •ಒಲಿಂಪಿಕ್ಸ್ ಪದಕ ವಿಜೇತರಿಗೆ ಎ ದರ್ಜೆ ಹುದ್ದೆ. ಏಷ್ಯನ್ ಮತ್ತು ಕಾಮನ್ ವೆಲ್ತ್ ಪದಕ ವಿಜೇತರಿಗೆ ಬಿ ದರ್ಜೆ ಹುದ್ದೆ. ಒಲಿಂಪಿಕ್ ಸ್ವರ್ಣ ವಿಜೇತರಿಗೆ 5 ಕೋಟಿ ಬಹುಮಾನ, ರಜತ ಪದಕ ವಿಜೇತರಿಗೆ 3 ಕೋಟಿ, ಕಂಚು ವಿಜೇತರಿಗೆ 2 ಕೋಟಿ
 45. •ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ವಿಶೇಷ App.
 46. •ವೃದ್ಧಾಪ್ಯ ವೇತನ 200 ರಿಂದ 500 ರುಪಾಯಿಗೆ ಹೆಚ್ಚಳ. 60ರಿಂದ 64 ವಯಸ್ಸಿನ ವೃದ್ಧರಿಗೆ ಈ ಯೋಜನೆ ಲಾಭ
 47. •ವಿಶ್ವಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ಅನುದಾನ. 60 ವರ್ಷಗಳ ಏಕೀಕರಣ ಸವಿನೆನಪಿಗಾಗಿ ವಿಶ್ವಕನ್ನಡ ಸಮ್ಮೇಳನ.
 48. •ಶೌಚಾಲಯಕ್ಕಾಗಿ ಸಮರ ಎಂಬ ಹೆಸರಿನಲ್ಲಿ ಯೋಜನೆ. 28 ಲಕ್ಷ ಶೌಚಾಲಯ ನಿರ್ಮಾಣಕ್ಕೆ ಕ್ರಮ.
 49. •ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂಪಾಯಿ ವಿಶೇಷ ಗೌರವಧನ.
 50. •ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ 2 ಸಾವಿರ ರೂಪಾಯಿ ಪಿಂಚಣಿ. ಗ್ರಾಮಗಳಲ್ಲಿ ಸಮುದಾಯ ದನದ ಕೊಟ್ಟಿಗೆ ನಿರ್ಮಾಣ. "ನಮ್ಮ ಹೊಲ, ನಮ್ಮ ದಾರಿ ಯೋಜನೆಯಡಿ ಮಣ್ಣಿನ ರಸ್ತೆ. 25 ಕಿ.ಮೀ. ಉದ್ದದ ಹೊಲಗಳಿಗೆ ಹೋಗುವ ಮಣ್ಣಿನ ರಸ್ತೆ.
 51. •ಬೆಂಗಳೂರಿನಲ್ಲಿ ಉಪನಗರ ಯೋಜನೆ. ರಾಜ್ಯದಲ್ಲಿ ಹೊಸದಾಗಿ 460 ಗ್ರಾಮ ಪಂಚಾಯ್ತಿಗಳ ಆರಂಭ.
 52. •ಕರಾವಳಿ ವ್ಯಾಪ್ತಿಯಲ್ಲಿ ಪಶ್ಚಿಮ ವಾಹಿನಿ ಯೋಜನೆ. ಚಿಕ್ಕಮಗಳೂರು, ಹಾಸನದಲ್ಲಿ ಚೆಕ್ ಡ್ಯಾಂ ನಿರ್ಮಾಣ.
 53. •ಜನಪ್ರತಿನಿಧಿಗಳ ಗೌರವಧನ ಹೆಚ್ಚಳ. ತಾಪಂ ಅಧ್ಯಕ್ಷರ ಗೌರವಧನ 4.5ರಿಂದ 6 ಸಾವಿರಕ್ಕೆ ಏರಿಕೆ. ಜಿಪಂ ಸದಸ್ಯರ ಗೌರವಧನ 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ. ತಾಲೂಕು ಪಂಚಾಯ್ತಿ ಸದಸ್ಯರ ಗೌರವಧನ 3 ಸಾವಿರ ಮತ್ತು ಗ್ರಾ.ಪಂ ಸದಸ್ಯರ ಗೌರವಧನ 1 ಸಾವಿರಕ್ಕೆ ಏರಿಕೆ.
 54. •ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ.
 55. •ಮಾತೃಪೂರ್ಣ ಯೋಜನೆಗೆ 302 ಕೋಟಿ ಅನುದಾನ, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ. ಪೌಷ್ಠಿಕಾಂಶ ಕೊರತೆ ನಿವಾರಣೆಗೆ ಮಾತೃಪೂರ್ಣ ಯೋಜನೆ ಜಾರಿ.
 56. •ಹೆಬ್ಬಾಳ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಾಣ. ಮೇಲ್ಸೆತುವೆ ಅಗಲಿಕರಣಕ್ಕೆ 88 ಕೋಟಿ ಅನುದಾನ. 690 ಕೋಟಿ ವೆಚ್ಚದಲ್ಲಿ ರಸ್ತೆಗಳ ಮೇಲ್ದರ್ಜೆಗೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 43 ಪ್ರಮುಖ ರಸ್ತೆಗಳ ಅಭಿವೃದ್ಧಿ. ಟೆಂಡರ್ ಶ್ಯೂರ್ ಮಾದರಿಯಲ್ಲಿ 25 ಕಿ.ಮೀ ರಸ್ತೆ ಅಭಿವೃದ್ದಿ.
 57. •ಕೃಷಿ ಕ್ಷೇತ್ರಕ್ಕೆ 5080 ಕೋಟಿ ರೂಪಾಯಿ ಮೀಸಲು, ಮಾವು ಬೆಳೆಗಾರರ ಉತ್ತೇಜನಕ್ಕೆ 88 ಕೋಟಿ ಮೀಸಲು.
 58. •ರಾಜ್ಯದ 16 ಪ್ರವಾಸಿ ಕೇಂದ್ರಗಳು ವಿಶ್ವದರ್ಜೆಗೆ
 59. •ನಮ್ಮ ಮೆಟ್ರೋ ಹೆಚ್ಚುವರಿ ಮಾರ್ಗ ನಿರ್ಮಾಣ. ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರಂ ಜಂಕ್ಷನ್ ವರೆಗೆ ಮಾರ್ಗ. ಡಯಲ್ 100 ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆ.
 60. •ನಿವೃತ್ತ ಪತ್ರಕರ್ತರ ಮಾಸಾಶನ 8 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳ. ಜಿಲ್ಲಾ ಕೇಂದ್ರಗಳಲ್ಲಿನ ಪತ್ರಕರ್ತರಿಗೆ ಉಚಿತ ಬಸ್ ಪಾಸ್.
 61. •ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆ. ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆಗೆ 10 ಕೋಟಿ ಅನುದಾನ.
 62. •2 ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ. 4 ಸ್ಟ್ರೋಕ್ ಎಲ್ ಪಿಜಿ 10 ಸಾವಿರ ಆಟೋಗಳಿಗೆ 30 ಸಾವಿರ ರೂ. ಸಹಾಯಧನ.
 63. •ಚಿಂತಾಮಣಿ, ರಾಣೆಬೆನ್ನೂರು, ಬಂಟ್ವಾಳದಲ್ಲಿ ಆರ್ ಟಿ ಒ ಸ್ಥಾಪನೆ.
 64. 2 ಹಂತಗಳಲ್ಲಿ 1191 ಪಿಯು ಉಪನ್ಯಾಸಕರ ನೇಮಕ. ರಾಯಚೂರಿನಲ್ಲಿ ಹೊಸ ವಿವಿ ಸ್ಥಾಪನೆ. 1626 ಪ್ರೌಢಶಿಕ್ಷಕರ ನೇಮಕ. ಪ್ರೌಢಶಿಕ್ಷಣ ಇಲಾಖೆಗೆ 18, 266 ಕೋಟಿ ರೂಪಾಯಿ ಮೀಸಲು.
 65. •ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ,ಕಾಪು ಹೊಸ ತಾಲೂಕುಗಳಾಗಿ ಘೋಷಣೆ. ರಾಯಚೂದು ಜಿಲ್ಲೆಯ ಮಸ್ಕಿ, ಸಿರವಾರ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಕಡಬ ಹೊಸ ತಾಲೂಕುಗಳಾಗಿ ಘೋಷಣೆ.
 66. •ಬೆಂಗಳೂರಿನಲ್ಲಿ ವಾಯು, ಶಬ್ದ ಮಾಲಿನ್ಯ ತಡೆಗೆ ಕ್ರಮ. ಬೆಂಗಳೂರಿನ ಸಬ್ ಅರ್ಬನ್ ರೈಲ್ವೆ ಯೋಜನೆಗೆ 345 ಕೋಟಿ.
 67. •ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ 10 ಕೋಟಿ ರುಪಾಯಿ ಅನುದಾನ. ತೋಟಗಾರಿಕೆ ಇಲಾಖೆಗೆ 1091 ಕೋಟಿ ಅನುದಾನ.ದುಬಾರಿ ದ್ವಿಚಕ್ರ ವಾಹನ ಕೊಳ್ಳುವವರಿಗೆ ಬರೆ.
 68. •ಮಡಿಕೇರಿ, ಕಾರವಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏರ್ ಸ್ಟ್ರಿಪ್ ನಿರ್ಮಾಣ. 10 ಸಾವಿರ ಉತ್ಕೃಷ್ಟ ಟಗರು ಉತ್ಪಾದನಾ ಘಟಕ. ರಾಜ್ಯದ ಪ್ರತೀ ಮಾಂಸದಂಗಡಿಗೆ 1.25 ಲಕ್ಷ ರೂ. ಅನುದಾನ
 69. •ಉನ್ನತ ಶಿಕ್ಷಣ ಇಲಾಖೆಗೆ ಒಟ್ಟು 4,401 ಕೋಟಿ ರೂಪಾಯಿ ಅನುದಾನ. ಶಾಲಾ ನಿರ್ವಹಣೆ, ಸುಧಾರಣೆಗೆ ಶಿಕ್ಷಣ ಕಿರಣ ಯೋಜನೆ ಜಾರಿ. ಹಂಪಿ ಕನ್ನಡ ವಿವಿಗೆ 25 ಕೋಟಿ ಯೋಜನೆ. ಗ್ರಾಮೀಣ ಪ್ರದೇಶದಲ್ಲಿ 25 ಪಾಲಿಟೆಕ್ನಿಕ್ ಕಾಲೇಜು ಆರಂಭ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 23 ಹೊಸ ಮಹಿಳಾ ಹಾಸ್ಟೆಲ್ ನಿರ್ಮಾಣ
 70. ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವೈಫೈ ಯೋಜನೆ. ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆ.
 71. •ಬೆಂಗಳೂರು ವನ್ ಮಾದರಿಯಲ್ಲಿ ಕರ್ನಾಟಕ ವನ್. ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ವನ್ ಕೇಂದ್ರ ಸ್ಥಾಪನೆ.

[೬]

ರಚನೆಯಾಗುವ ಹೊಸ ತಾಲ್ಲೂಕುಗಳು[ಬದಲಾಯಿಸಿ]

 • ೨೦೧೭ ೧೮ ರಲ್ಲಿ;
 • ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಘೋಷಿಸಿದ್ದಾರೆ. ಹೊಸ ತಾಲೂಕುಗಳ ವಿವರ:

 • ಈ ಊರುಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ರಾಜ್ಯ ಸರ್ಕಾರ ಘೋಷಿಸಿದೆ.

[೭]

ದುಬಾರಿ ಮತ್ತು ಅಗ್ಗ[ಬದಲಾಯಿಸಿ]

 • ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸುತ್ತಿರುವ ಬಜೆಟ್ ನಲ್ಲಿ ಕೆಲ ತೆರಿಗೆ ವಿನಾಯ್ತಿಗಳನ್ನು ಮುಂದುವರೆಸಿದ್ದಾರೆ.
 • ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಸಲು ತೀರ್ಮಾನ.
 • ಬಿಯರ್, ಫೆನ್ನಿ, ಲಿಕ್ಕರ್, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು.
 • ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ. ಅಬಕಾರಿ ಶುಲ್ಕದಲ್ಲಿ ಹೆಚ್ಚಳ.
 • ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ.
 • ರಾಜ್ಯದಲ್ಲಿ ನೀರಾ ನೀತಿ ಜಾರಿ.
 • [೮]
ಇವು ದುಬಾರಿ
 • 1 ಲಕ್ಷ ರೂ.ಗಿಂತ ಮೇಲ್ಪಟ್ಟ ದ್ವಿಚಕ್ರ ವಾಹನ
 • ದ್ವಿಚಕ್ರ ವಾಹನಗಳ ಮೇಲಿನ ಶೇ.12ರಷ್ಟು ತೆರಿಗೆ ಶೇ.18ಕ್ಕೆ ಹೆಚ್ಚಳ
 • ಮದ್ಯ ಮಾರಾಟ ಲೈಸೆನ್ಸ್ ಶುಲ್ಕದಲ್ಲಿ ಶೇ.25ರಷ್ಟು ಹೆಚ್ಚಳ
ಇವು ಅಗ್ಗ
 • ಬಿಯರ್, ಫೆನ್ನಿ, ವೈನ್ ಮೇಲಿನ ಮೌಲ್ಯ ವರ್ಧಿತ ತೆರಿಗೆ ರದ್ದು
 • ಭತ್ತ, ಅಕ್ಕಿ, ಗೋಧಿ ಕಾಳು ಮೇಲೆ ತೆರಿಗೆ ವಿನಾಯ್ತಿ
 • ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 200ರೂ. ನಿಗದಿ
 • ಏಪ್ರಿಲ್ 1ರಿಂದ ವ್ಯಾಟ್ ತೆರಿಗೆ ಇಲ್ಲದೆಯೇ ಮದ್ಯಮಾರಾಟ ನಡೆಯಲಿದೆ

[೯]

ರಾಜ್ಯ ಆದಾಯಕ್ಕೆ ಭಾರಿ ಹೊಡೆತ[ಬದಲಾಯಿಸಿ]

 • ಹಿಂದಿನ ವರ್ಷದಲ್ಲಿ ನಡೆದ ಸ್ಥಿರಾಸ್ತಿಗಳ ಮಾರಾಟ ಮತ್ತು ನೋಂದಣಿ ಸಂಖ್ಯೆಗಳನ್ನು ಆಧರಿಸಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಮುಂದಿನ ವರ್ಷಕ್ಕೆ ಆಸ್ತಿ ಮಾರಾಟ ಮತ್ತು ಶುಲ್ಕ ಸಂಗ್ರಹ ಗುರಿ ನಿಗದಿ ಮಾಡುವುದು ವಾಡಿಕೆ. ಅದರಂತೆ, ನೋಟು ರದ್ದಾದ ಮೂರು ತಿಂಗಳ ನಂತರದಲ್ಲಿ ಕನಿಷ್ಠ 4,65,108 (ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ನೋಂದಣಿಯಾಗಿದ್ದ ಆಸ್ತಿಗಳ ಸಂಖ್ಯೆ) ಸ್ಥಿರಾಸ್ತಿಗಳ ಮಾರಾಟ ಆಗುತ್ತದೆ ಎಂದು ಇಲಾಖೆ ಅಂದಾಜಿಸಿತ್ತು. ಆದರೆ, ಈ ಅವಧಿಯಲ್ಲಿ ನೋಂದಣಿಯಾದ ಆಸ್ತಿಗಳ ಸಂಖ್ಯೆ 3,52,377 ಎನ್ನುತ್ತವೆ ಇಲಾಖೆಯಲ್ಲಿನ ಅಂಕಿ-ಅಂಶ.
 • ಇಲಾಖೆಯು ಮುದ್ರಾಂಕ ಮತ್ತು ನೋಂದಣಿ ಶುಲ್ಕ ರೂಪದಲ್ಲಿ ರೂ.2,444 ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಆದರೆ, ಸಂಗ್ರಹವಾದ ಮೊತ್ತ ರೂ. 1,835.23 ಕೋಟಿ. ಇದೇ ರೀತಿ ನಗರದ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಇದೇ ಅವಧಿ (2016 ನವೆಂಬರ್‌ನಿಂದ 2017 ಜನವರಿ)ಯಲ್ಲಿ ಬೆಂಗಳೂರಿನಲ್ಲಿ ಕನಿಷ್ಠ 95,679 ಆಸ್ತಿಗಳ ನೋಂದಣಿಯ ನಿರೀಕ್ಷೆ ಹಾಕಿಕೊಳ್ಳಲಾಗಿತ್ತು. ಆದರೆ, ಕೇವಲ 82,640 ಆಸ್ತಿಗಳು ನೋಂದಣಿಯಾದವು. ಬೆಂಗಳೂರಿನಲ್ಲಿ ಇಲಾಖೆಯು ಈ ಅವಧಿಯಲ್ಲಿ ರೂ.1,611.43 ಕೋಟಿ ಆದಾಯ ಸಂಗ್ರಹ ಗುರಿ ಹಾಕಿಕೊಂಡಿತ್ತು. ಆದರೆ, ಸಂಗ್ರಹವಾದ ಮೊತ್ತ ರೂ.1,317.53 ಕೋಟಿ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
 • ಈ ಮೂರು ತಿಂಗಳಲ್ಲಿ ನೋಂದಣಿಯಾದ ಆಸ್ತಿಗಳಲ್ಲಿ ಬಹುತೇಕ ನೋಟು ರದ್ಧತಿಗೂ ಮೊದಲೇ ಒಪ್ಪಂದ ಆಗಿದ್ದ ಆಸ್ತಿಗಳಾಗಿದ್ದವು.
 • ‘ಮಾರ್ಚ್ ಬಳಿಕ ಆಸ್ತಿಗಳ ಮಾರಾಟ ಮತ್ತಷ್ಟು ಪ್ರಮಾಣದಲ್ಲಿ ಕುಸಿಯಲಿದ್ದು, ರಾಜ್ಯ ಸರ್ಕಾರಕ್ಕೆ ಈ ವರ್ಷಾಂತ್ಯದಲ್ಲಿ ಕನಿಷ್ಠ ರೂ.3000 ಕೋಟಿ ಆದಾಯ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ಹೆಸರು ಬಹಿರಂಗ ಪಡಿಸಿಕೊಳ್ಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ಅಪಾರ್ಟ್‌ಮೆಂಟ್ ಕೊಳ್ಳುವವರಿಲ್ಲ: ಇನ್ನು ಕನಿಷ್ಠ ಎರಡು ವರ್ಷ ವಸತಿ ನಿವೇಶನಗಳು, ಕೃಷಿ ಭೂಮಿ ಮತ್ತು ಅಪಾರ್ಟ್‌ಮೆಂಟ್‌ಗಳ ಮಾರಾಟ ಮತ್ತು ಮರುಮಾರಾಟ ಪ್ರಕ್ರಿಯೆ ಚೇತರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಅವರು.

ಕಳೆದ ವರ್ಷದ (ರಾಜ್ಯ)ಅಂಕಿ ಅಂಶ ನವೆಂಬರ್ 2015 ರಿಂದ ಫೆ. 6, 2016ವರೆಗೆ[ಬದಲಾಯಿಸಿ]

14 Mar, 2017 2016-17ರಲ್ಲಿ 2017 ಫೆ. 17ರ ವರೆಗೆ ರಾಜ್ಯದಲ್ಲಿ ನೋದಣಿಯಾದ ಆಸ್ತಿ ಮತ್ತು ಸಂಗ್ರಹಿತ ಶುಲ್ಕ

 • 5,07,625 ನೋಂದಣಿಯಾದ ಆಸ್ತಿ ಸಂಖ್ಯೆ
 • ರೂ.1,959 ಕೋಟಿ ಸಂಗ್ರಹಿತ ಶುಲ್ಕ
2017,ಫೆ. 17ರ ವರೆಗೆ ನೊಂದಣಿಯಾದ ಆಸ್ತಿ ಸಂಖ್ಯೆ ತರೆಗೆ ಸಂಗ್ರಹ ಗುರಿ ತೆರಿಗೆ ಸಂಗ್ರಹ ನಷ್ಟ
ರಾಜ್ಯದಲ್ಲಿ ಅಂಕಿ ಅಂಶ
ಒಟ್ಟು 3,83.409 2444.01 1835.26 608.78
ಬೆಂಗಳೂರು ನಗರ ಅಂಕಿ ಅಂಶ
ಒಟ್ಟು 82640 1611.43 1317.53 29*8.9

[೧೦]

ಬಜೆಟ್ ಸಾರಾಂಶ[ಬದಲಾಯಿಸಿ]

 • ರೂ.1,86,561 ಕೋಟಿ ಮೊತ್ತದ ಬಜೆಟ್‌ನಲ್ಲಿ ಯೋಜನೆ ಮತ್ತು ಯೋಜನೇತರ ಎಂಬ ಪ್ರತ್ಯೇಕ ವಿಭಜನೆ ಮಾಡಿಲ್ಲ. ಕಳೆದ ಬಜೆಟ್‌ಗೆ ಹೋಲಿಸಿದರೆ ಬಜೆಟ್‌ ಅಂದಾಜು ಮೊತ್ತ ಶೇ 14.16ರಷ್ಟು ಹೆಚ್ಚಳವಾಗಿದೆ.
 • ವಿವಿಧ ಮೂಲಗಳಿಂದ ರೂ.1,44,892 ಕೋಟಿ ರಾಜಸ್ವ ಜಮೆಯನ್ನು ನಿರೀಕ್ಷಿಸಲಾಗಿದೆ.
ಆದಾಯ ಮೂಲ 2017-18 ಆದಾಯ:ಕೋಟಿರೂ.ಗಳಲ್ಲಿ 2016-17 ಆದಾಯ:ಕೋಟಿರೂ.ಗಳಲ್ಲಿ
ವಾಣಿಜ್ಯ ತೆರಿಗೆ 55000 51338
ರಾಜ್ಯ ಅಬಕಾರಿ 18,050 19,510
ಮುದ್ರಾಂಕ ಶುಲ್ಕ 9,000 9100
ವಾಹನ ತೆರಿಗೆ 6,006 5160
ಇತರೆ 1,901 1756
 • ರಾಜ್ಯ ಸರ್ಕಾರದ ಸಾಲ: 2016–17ರ ಅಂತ್ಯಕ್ಕೆ ರೂ.2.08 ಲಕ್ಷ ಕೋಟಿ * 2017–18ರ ಅಂತ್ಯಕ್ಕೆ ರೂ.2.42 ಲಕ್ಷ ಕೋಟಿ

ಆದಾಯ[ಬದಲಾಯಿಸಿ]

ವಿವರ ಕೋಟಿ ರೂ.ಗಳು
ಬಜೆಟ್ ಗಾತ್ರ 1,86,561
ವಿತ್ತೀಯ ಕೊರತೆ 33,359
ಸಾಲ 37,092
ಬಡ್ಡಿ ಪಾವತಿಗೆ 8,176

ಮುಖ್ಯ ಹಂಚಿಕೆಗಳು[ಬದಲಾಯಿಸಿ]

ಬಾಬುವಾರು ರೂ. ಕೋಟಿಗಳಲ್ಲಿ
ಶಿಕ್ಷಣ 22667
ನಗರಾಭಿವೃದ್ಧಿ 18127
ಜಲಸಂಪನ್ಮೂಲ 18028
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ 14061
ಆ್ಸಮಾಜ ಕಲ್ಯಾಣ 11717
ಲೋಕೋಪಯೋಗಿ 8559
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 7122
ಕೃಷಿ - ತೋಟಗಾರಿಕೆ 6601
ಆಹಾರ ಮತ್ತು ನಾಗರಿಕ ಸರಬರಾಜು 3636
ಮಹಿಳಾ ಮತ್ತು ಮಕ್ಕಳ ಕಲ್ಯಾಣ 4926

[೧೧]

ರಾಜ್ಯ ಜಿಡಿಪಿ ಶೇ 6.9ಕ್ಕೆ ಕುಸಿತ[ಬದಲಾಯಿಸಿ]

 • ಪ್ರಜಾವಾಣಿ;16 Mar, 2017
 • ಬರ, ನೋಟು ರದ್ದತಿ ಪರಿಣಾಮ * ಕೈಗಾರಿಕೆ, ಸೇವಾ ವಲಯದ ಪ್ರಗತಿ ಕುಂಠಿತ.
 • ಎರಡು ವರ್ಷಗಳಿಂದ ನಿರಂತರ ಬರಗಾಲ ಮತ್ತು ನೋಟು ರದ್ದತಿಯ ಪರಿಣಾಮ 2016–17ನೇ ಸಾಲಿನ ರಾಜ್ಯದ ಆರ್ಥಿಕ ಪ್ರಗತಿ ಶೇ 0.4ರಷ್ಟು ಕುಸಿಯಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.
 • 2015–16ರಲ್ಲಿ ಶೇ 7.3ರಷ್ಟಿದ್ದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) 2016–17ರಲ್ಲಿ ಶೇ 6.9ಕ್ಕೆ ಕುಸಿಯುವ ಮೂಲಕ ₹8,71,995 ಕೋಟಿಗೆ ತಲುಪುವ ಮುನ್ಸೂಚನೆ ಇದೆ. ಕೈಗಾರಿಕಾ ಮತ್ತು ಸೇವಾ ವಲಯದ ಬೆಳವಣಿಗೆ ಕುಂಠಿತಗೊಂಡಿರುವುದೇ  ಇದಕ್ಕೆ ಮುಖ್ಯ ಕಾರಣ ಎಂದು ಸಮೀಕ್ಷೆ ಹೇಳಿದೆ.
 • ನೋಟು ರದ್ದತಿಯಿಂದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿದ್ದು ಆರ್ಥಿಕ ಶಿಸ್ತು, ಸಂಪನ್ಮೂಲ ಸಂಗ್ರಹದಿಂದ ನಷ್ಟ ತುಂಬಿಕೊಳ್ಳಲಾಗಿದೆ. ಆ ಮೂಲಕ ರಾಜ್ಯದ ಆರ್ಥಿಕ ವ್ಯವಸ್ಥೆ ಹಳಿ ತಪ್ಪದಂತೆ ಎಚ್ಚರ ವಹಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.
 • ವಿತ್ತೀಯ ಕೊರತೆಯ ನಿಯಂತ್ರಣ: ಸದ್ಯಕ್ಕೆ ರಾಜ್ಯದ ಆರ್ಥಿಕ ಸ್ಥಿತಿ ಬಲಿಷ್ಠ ಮತ್ತು ಸ್ಥಿರವಾಗಿದ್ದು ವಿತ್ತೀಯ ನಿರ್ವಹಣೆ ಸಮರ್ಪಕವಾಗಿದೆ. ವಿತ್ತೀಯ ಕೊರತೆ ಶೇ 2.79 ರಿಂದ ಶೇ 2.12ಕ್ಕೆ ಇಳಿಯಲಿದೆ. ತೆರಿಗೆ ಸಂಗ್ರಹ ವಿಷಯದಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದೆ ಎಂದು ಸಮೀಕ್ಷೆ ಹೇಳಿದೆ.
 • ಕಳೆದ ಸಾಲಿನಲ್ಲಿ ಶೇ 4.9ರಷ್ಟಿದ್ದ ಕೈಗಾರಿಕಾ ಪ್ರಗತಿಯು ಪ್ರಸಕ್ತ ವರ್ಷ ಶೇ 2.2ಕ್ಕೆ ಮತ್ತು ಅದೇ ರೀತಿ ಸೇವಾ ವಲಯ ಶೇ 10.4 ರಿಂದ ಶೇ 8.5ಕ್ಕೂ ಕುಸಿಯುವ ನಿರೀಕ್ಷೆ ಇದೆ. ಗಣಿಗಾರಿಕೆ, ನಿರ್ಮಾಣ, ವಿದ್ಯುತ್‌, ಅನಿಲ, ತಯಾರಿಕಾ ವಲಯದ ಬೆಳವಣಿಗೆ ದರ ಶೇ 2.2ಕ್ಕೆ ಇಳಿಯಲಿದೆ.

ಆಹಾರಧಾನ್ಯ ಉತ್ಪಾದನೆ ಕುಂಠಿತ[ಬದಲಾಯಿಸಿ]

 • ಈ ವರ್ಷವೂ ರಾಜ್ಯದಲ್ಲಿ ಬರಗಾಲ ಛಾಯೆ ಆವರಿಸಿದ್ದು, ಆಹಾರಧಾನ್ಯಗಳ ಉತ್ಪಾದನೆ 96.44 ಲಕ್ಷ ಟನ್‌ಗಳಿಂದ 91.54 ಲಕ್ಷ ಟನ್‌ಗಳಿಗೆ ಇಳಿಯುವ ಸಾಧ್ಯತೆ ಇದೆ. ಆದರೆ, ಕೃಷಿ ವಲಯ ಶೇ 1.5ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದ್ದು, ತೊಗರಿ, ತರಕಾರಿ ಮತ್ತು ಹಣ್ಣುಗಳ ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ.

ಎಫ್.ಡಿ.ಎ.[ಬದಲಾಯಿಸಿ]

 • 2015–16ರಲ್ಲಿ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಶೇ 10.30ರಷ್ಟು ಬಂಡವಾಳ ಪಡೆದುಕೊಳ್ಳಲು ಸಫಲವಾಗಿದೆ. 2015–16ರಲ್ಲಿ ಸಾಫ್ಟ್‌ವೇರ್ ಸೇವಾ ವಲಯದಲ್ಲಿ ಒಟ್ಟು ರೂ.3,25,414 ಕೋಟಿ ರಫ್ತು ಮಾಡುವ ಮೂಲಕ ಕರ್ನಾಟಕ (ಶೇ 36.96) ಅಗ್ರ ಸ್ಥಾನದಲ್ಲಿದೆ.
 • ರಫ್ತು ವಹಿವಾಟಿಗೆ ಕರ್ನಾಟಕ ರೂ.2.20ಲಕ್ಷ ಕೋಟಿ ಕೊಡುಗೆ ನೀಡಿದೆ. ರಾಜ್ಯದ ಒಟ್ಟು ಜಿಡಿಪಿಗೆ ಸಾಫ್ಟ್‌ವೇರ್‌ ಉದ್ಯಮ ಶೇ 25ಕ್ಕೂ ಹೆಚ್ಚಿನ ಕೊಡುಗೆ ನೀಡುತ್ತಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) (ಕೋಟಿ ರೂ.ಗಳಲ್ಲಿ)[ಬದಲಾಯಿಸಿ]

ಆರ್ಥಿಕ ಸಮೀಕ್ಷೆ
 • ಅರ್ಥ ವ್ಯವಸ್ಥೆಯ ವಿವಿಧ  ವಲಯಗಳಲ್ಲಿನ ಸಮಗ್ರ ಪ್ರಗತಿಯನ್ನು ಅಳೆಯುವ ಮತ್ತು ಮೌಲ್ಯಮಾಪನ ಮಾಡುವ ವರದಿಯೇ ಆರ್ಥಿಕ ಸಮೀಕ್ಷೆ.
 • ಅರ್ಥ ವ್ಯವಸ್ಥೆಯ ಸ್ಥೂಲ ಚಿತ್ರಣ, ಆರ್ಥಿಕ ನೀತಿ ಮತ್ತು ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಕ್ರಮಗಳ ಸಮಗ್ರ ದತ್ತಾಂಶ ಮತ್ತು ಮಾಹಿತಿಯನ್ನು ಈ ಆರ್ಥಿಕ ಸಮೀಕ್ಷೆ ಒಳಗೊಂಡಿರುತ್ತದೆ. ಈ ಬಾರಿಯ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಹೊಸದಾಗಿ ಕ್ಷಿಪ್ರ ಚಿತ್ರಣ ನೀಡಲು ‘ಸಂಕ್ಷಿಪ್ತ ನೋಟ’ ಎಂಬ ಪ್ರತ್ಯೇಕ ವಿಭಾಗ ಸೇರಿಸಲಾಗಿದೆ. ಬೆರಳತುದಿಯಲ್ಲಿ ಅಂಕಿ, ಅಂಶ ಬಯಸುವರಿಗೆ ಇದು ಉಪಯುಕ್ತವಾಗಿದ್ದು ಪಕ್ಷಿನೋಟ ನೀಡುತ್ತದೆ.
ಹೂಡಿಕೆದಾರರು, ನೀತಿ ನಿರೂಪಕರು, ಉದ್ಯಮಿಗಳು, ಸಂಶೋಧಕರು, ಆರ್ಥಿಕ ತಜ್ಞರು, ಸಂಶೋಧಕರಿಗೆ ಆರ್ಥಿಕ ಸಮೀಕ್ಷೆಯು ಮಾಹಿತಿಯ ಕಣಜದಂತೆ ಕೆಲಸ ಮಾಡುತ್ತದೆ..
 • 6.9 % 2016–17ರಲ್ಲಿ ರಾಜ್ಯದ ಜಿಡಿಪಿ ಅಂದಾಜು
 • 0.4%ರಷ್ಟು ಕುಸಿತ
 • 7.3% 2014–15ರಲ್ಲಿನ ರಾಜ್ಯದ ಜಿಡಿಪಿ

ಕೈಗಾರಿಕಾ ಸೂಚ್ಯಂಕ[ಬದಲಾಯಿಸಿ]

 • 185.79 2015–16ರಲ್ಲಿ ಕೈಗಾರಿಕಾ ಪ್ರಗತಿ
 • 182.46 2014–15ರಲ್ಲಿ ಕೈಗಾರಿಕಾ ಪ್ರಗತಿ

ರಾಜ್ಯದ ಚಿತ್ರಣ[ಬದಲಾಯಿಸಿ]

 • ಶೇ 14.91 ರಾಜ್ಯದಲ್ಲಿ ಮಹಿಳಾ ಪ್ರಧಾನ ಕುಟುಂಬ
 • 0–6ವರ್ಷದ ವಯಸ್ಸಿನ ಮಕ್ಕಳ ಸಂಖ್ಯೆ ಶೇ 2.30ರಷ್ಟು ಕಡಿಮೆ
 • ಉದ್ಯೋಗ ಸೃಷ್ಟಿ ಮುಂಚೂಣಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ
 • 10 ಲಕ್ಷ ಜನರಿಗೆ ನೇರ ಮತ್ತು 30 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ
 • ರಾಷ್ಟ್ರದ ಸರಾಸರಿಗಿಂತ ರಾಜ್ಯದ ಸಾಕ್ಷರತಾ ಪ್ರಮಾಣದಲ್ಲಿ ಹೆಚ್ಚಳ
 • ನಿರುದ್ಯೋಗ ದರ ಶೇ 1.4. ದೇಶದ ಸರಾಸರಿಗಿಂತಲೂ ಕಡಿಮೆ
 • ಸಾಕ್ಷರತೆ ಪಟ್ಟಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನ[೧೨]

ಸರ್ಕಾರದ ಆಎಳಿತ ವೆಚ್ಚ ಲೇಖಾನುದಾನಕ್ಕೆ ಸದನದ ಒಪ್ಪಿಗೆ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. "ರಾಜ್ಯ ಬಜೆಟ್ 2017-18ರ ಮುಖ್ಯಾಂಶಗಳು;15 Mar 2017 11:09 AM IST;15 Mar 2017 05:54 PM IST". Archived from the original on 15 ಮಾರ್ಚ್ 2017. Retrieved 15 ಮಾರ್ಚ್ 2017.
 2. Karnataka Budget 2017: Everything You Need to Know
 3. ಇದು ಚುನಾವಣಾ ಬಜೆಟ್, ರೈತರಿಗಿಲ್ಲ ರಿಲೀಫ್
 4. ರಾಜ್ಯ ಬಜೆಟ್‌;ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ?;ಪ್ರಜಾವಾಣಿ ವಾರ್ತೆ;15 Mar, 2017
 5. http://www.prajavani.net/news/article/2017/03/15/478047.html ರಾಜ್ಯ ಬಜೆಟ್ 2017;ತೆರಿಗೆ ಪ್ರಸ್ತಾವನೆಗಳು: ಸಿರಿಧಾನ್ಯಗಳಾದ ನವಣೆ, ಸಾಮೆ ಹಿಟ್ಟುಗಳಿಗೆ ತೆರಿಗೆ ವಿನಾಯಿತಿ;ಪ್ರಜಾವಾಣಿ ವಾರ್ತೆ;15 Mar, 2017]
 6. ಬಜೆಟ್ ಹೈಲೈಟ್ಸ್; ಸಿದ್ದು ಬಜೆಟ್ ಲೆಕ್ಕಾಚಾರ, ರೈತರ ಸಾಲ ಮನ್ನಾ ಇಲ್ಲ ;ಉದಯವಾಣಿ, Mar 15, 2017, 10:45 AM IST
 7. ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಿಸಿದ 49 ಹೊಸ ತಾಲೂಕುಗಳ ಪಟ್ಟಿ; 15 Mar 2017 01:28 PM IST[ಶಾಶ್ವತವಾಗಿ ಮಡಿದ ಕೊಂಡಿ]
 8. ಯಾವುದಕ್ಕೆ ಹೆಚ್ಚುವರಿ ತೆರಿಗೆ, ಯಾವುದಕ್ಕೆ ತೆರಿಗೆ ವಿನಾಯ್ತಿ ಇಲ್ಲಿದೆ ವಿವರ!; 15 Mar 2017 01:30 PM IST;15 Mar 2017 01:37 PM IST[ಶಾಶ್ವತವಾಗಿ ಮಡಿದ ಕೊಂಡಿ]
 9. ಸಿದ್ದು ಬಜೆಟ್ ಲೆಕ್ಕಚಾರ; ಯಾವುದು ದುಬಾರಿ, ಯಾವುದು ಅಗ್ಗ?;ಉದಯವಾಣಿ, Mar 15, 2017, 4:29 PM IST
 10. ರಾಜ್ಯದ ಆದಾಯ ನುಂಗಿದ ನೋಟು ರದ್ದು;ನಿಸರ್ಗ ಎಂ.ಎನ್‌;14 Mar, 2017
 11. "ಚುನಾವಣೆ ತಪ: ಅಹಿಂದ ಜಪ;ಪ್ರಜಾವಾಣಿ ವಾರ್ತೆ16 Mar, 2017". Archived from the original on 2017-03-16. Retrieved 2017-03-16.
 12. ರಾಜ್ಯ ಜಿಡಿಪಿ ಶೇ 6.9ಕ್ಕೆ ಕುಸಿತ;16 Mar, 2017