ಕರ್ನಾಟಕದ ಹಕ್ಕಿಗಳ ಪರಿಶೀಲನಾ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಹಕ್ಕಿಗಳ ಪರಿಶೀಲನಾ ಪಟ್ಟಿ[ಬದಲಾಯಿಸಿ]

ತುಮಕೂರಿನ ಅಮೀನ್‌ ಅಹ್ಮದ್‌ ಇಡೀ ರಾಜ್ಯದ ಹಕ್ಕಿಗಳ ಮೊದಲ ಪರಿಶೀಲನಾ ಪಟ್ಟಿಯನ್ನು 2000 ರಲ್ಲಿ ಪ್ರಕಟಿಸಿದರು, ನಂತರ ಪರಿಷ್ಕರಿಸಿ ಉದಯವೀರ್ ಸಿಂಗ್‌ ಅವರೊಂದಿಗೆ 2004 ಮತ್ತು 2007ರಲ್ಲಿ 561 ಹಕ್ಕಿಗಳ ಪಟ್ಟಿಯನ್ನು ಪ್ರಕಟಿಸಿದರು. 2015ರಲ್ಲಿ ಅರಣ್ಯ ಇಲಾಖೆಗೆಂದು ನಾಡಿನ ಹಕ್ಕಿಗಳ ಪಟ್ಟಿಯನ್ನು ಪ್ರವೀಣ್‌. ಜೆ, ಸುಬ್ರಹ್ಮಣ್ಯ. ಎಸ್‌, ಮತ್ತು ವಿಜಯಮೋಹನ್‌ ರಾಜ್ ಪರಿಷ್ಕರಿಸಿದರು. ಕಟ್ಟುನಿಟ್ಟಾದ ಪರಿಶೀಲನೆಗೆ ಒಳಗಾಗದ ಲೇಖನಗಳಲ್ಲಿರುವ ಹಕ್ಕಿಗಳು, ನೋಡಿ ಅಥವಾ ಧ್ವನಿಯನ್ನು ಕೇಳಿ ಹಕ್ಕಿಯನ್ನು ಗುರುತಿಸುವಲ್ಲಿ ಆಗಿರಬಹುದಾದ ನ್ಯೂನತೆ, ಸರಿಯಾದ ವಿವರಣೆ ಇಲ್ಲದೆ ದಾಖಲಾದ ಹಕ್ಕಿಗಳನ್ನು ಹೊರತು ಪಡಿಸಿ ಮಿಕ್ಕವುಗಳನ್ನು ಒಟ್ಟುಮಾಡಿ 524 ಹಕ್ಕಿಗಳ ಪಟ್ಟಿಯನ್ನು ತಯಾರಿಸಿದರು[೧]. ಮುಂದಿನ ವರುಷ, 2016ರಲ್ಲಿ ಮರುಪರಿಷ್ಕರಿಸಿ 531 ಹಕ್ಕಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು[೨]. ಕರ್ನಾಟಕ ಕಂಡ 531 ಪ್ರಭೇದದ ಹಕ್ಕಿಗಳ ಪಟ್ಟಿಯನ್ನು ನವೆಂಬರ್ 2016ರಲ್ಲಿ ಇಂಡಿಯನ್‌ ಬರ್ಡ್ಸ್‌ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಆರು ವರುಷಗಳ ನಂತರ ಈ ಪಟ್ಟಿ 549 ನ್ನು ತಲುಪಿದೆ (ಅಗಸ್ಟ್ 2022)[೩]. ಹೆಚ್ಚಿನ ಮಾಹಿತಿಗೆ ನೋಡಿ: ಕರ್ನಾಟಕದ ಹಕ್ಕಿ ಅಧ್ಯಯನ. ಪ್ರಚಲಿತವಿದ್ದ ಹಕ್ಕಿಗಳ ವಿವಿಧ ಕನ್ನಡದ ಹೆಸರುಗಳಲ್ಲಿ ಯೋಗ್ಯವೆಂದು ಕಂಡುಬಂದವುಗಳನ್ನು ಕನ್ನಡಪಂಡಿತರೊಂದಿಗೆ ಹಾಗೂ ಹಕ್ಕಿವೀಕ್ಷಕರೊಂದಿಗೆ ಸಮಾಲೋಚಿಸಿ, ಪರಿಷ್ಕರಿಸಿ 2004ರಲ್ಲಿ ಮೊದಲಬಾರಿಗೆ ಕೊಡವ ಮತ್ತು ಕನ್ನಡದಲ್ಲಿ ಹೆಸರಿಸುವ ಪ್ರಕ್ರಿಯೆಯನ್ನು ಡಾ. ಎಸ್ ವಿ ನರಸಿಂಹನ್ ಅವರು ʼಕೊಡಗಿನ ಖಗರತ್ನಗಳುʼ ಹೊತ್ತಿಗೆಯಲ್ಲಿ ಆರಂಭಿಸಿದ್ದಾರೆ. ಅವುಗಳನ್ನೇ ಇಲ್ಲಿ ಬಳಸಲಾಗಿದೆ [೪]. ಜಾಲತಾಣ ʼಇ ಬರ್ಡನಲ್ಲಿʼ ಹಕ್ಕಿಗಳ ಇಂಗ್ಲಿಷ್‌ ಹೆಸರುಗಳೊಡನೆ ಕನ್ನಡದ ಹೆಸರುಗಳನ್ನು ಬಳಸಲು ಪ್ರಯತ್ನಗಳು ನಡೆದಿವೆ.

Grebes ಗುಳುಮುಳುಕಗಳು[ಬದಲಾಯಿಸಿ]

Order: Podicipediformes   Family: Podicipedidae

ಗುಳುಮುಳುಕಗಳು ಸಣ್ಣದರಿಂದ ಮಧ್ಯಮ ಗಾತ್ರವಿರುವ, ಬಾಲವಿಲ್ಲದ ಮುಳುಗು ಹಕ್ಕಿಗಳು. ಬೆರಳುಗಳು ದೋಣಿ ನಡೆಸುವವರ ಹುಟ್ಟುವಿನಂತೆ ಅಗಲವಿದ್ದು, ನೀರಿನಲ್ಲಿ ಈಜಲು ಹಾಗೂ ಮುಳುಗಳು ಸಹಾಯಕ. ದೇಹದ ಹಿಂಭಾಗದಲ್ಲಿ ಕಾಲುಗಳಿದ್ದು ನೆಲೆದ ಮೇಲೆ ಸಮತೋಲನವಿಲ್ಲದಂತೆ ಕಾಣುತ್ತದೆ.

  • Little Grebe , Tachybaptus ruficollis ಗುಳುಮುಳುಕ

Shearwaters and Petrels ಸಾಗರದಕ್ಕಿಗಳು[ಬದಲಾಯಿಸಿ]

Order: Procellariiformes   Family: Procellariidae

ಕಿರಿದಾದ ಕುತ್ತಿಗೆ, ಚಿಕ್ಕ ಕಾಲುಗಳ, ಉದ್ದನೆಯ ರೆಕ್ಕೆ ಹಾಗೂ ಉದ್ದನೆಯ, ಸಪೂರ ಕೊಕ್ಕಿನ ಸಾಗರಜೀವಿ.

  • Persian Shearwater, Puffinus persicus ಬಿಳಿಹೊಟ್ಟೆಯ ಸಾಗರದಕ್ಕಿ

Northern Storm-Petrels ಬಡಗು ಕಡಲ ಹದ್ದುಗಳು[ಬದಲಾಯಿಸಿ]

Order: Procellariiformes   Family: Hydrobatidae

ಸಣ್ಣ ಗಾತ್ರದ, ಯಾವಾಗಲೂ ರೆಕ್ಕೆ ಬಡಿಯುತ್ತಾ, ಅನಿಯಮಿತವಾಗಿ ಚಲಿಸುತ್ತಾ, ನೀರ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಾ ಸಮುದ್ರದ ಮೇಲ್ಮೈ ನಿಂದ ಆಹಾರವನ್ನು ಹೆಕ್ಕುತ್ತಿರುತ್ತವೆ.

Austral Storm-Petrels ತೆಂಕಣ ಕಡಲ ಹದ್ದುಗಳು[ಬದಲಾಯಿಸಿ]

Order: Procellariiformes   Family: Oceanitidae

ಸಣ್ಣ ಗಾತ್ರದ, ಯಾವಾಗಲೂ ರೆಕ್ಕೆ ಬಡಿಯುತ್ತಾ, ಅನಿಯಮಿತವಾಗಿ ಚಲಿಸುತ್ತಾ, ನೀರ ಮೇಲೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಾ ಸಮುದ್ರದ ಮೇಲ್ಮೈ ನಿಂದ ಆಹಾರವನ್ನು ಹೆಕ್ಕುತ್ತಿರುತ್ತವೆ.

Tropicbirds ಕಡಲು ಕಾಗೆಗಳು[ಬದಲಾಯಿಸಿ]

Order: Pelecaniformes   Family: Phaethontidae

ಹೆಚ್ಚಿನಂಶ ಬಿಳಿಯ ಬಣ್ಣದ, ಮಧ್ಯಮ ಗಾತ್ರದ, ಆಯುಧ- ಬಾಕುವಿನಂತೆ ಕೊಕ್ಕಿರುವ ಸಾಗರದ ಹಕ್ಕಿಗಳು. ವಯಸ್ಕ ಹಕ್ಕಿಗಳಿಗೆ ಉದ್ದನೆಯ ತೆಳು ಬಾಲವಿರುತ್ತದೆ.

Pelicans ಹೆಜ್ಜಾರ್ಲೆಗಳು[ಬದಲಾಯಿಸಿ]

Order: Pelecaniformes   Family: Pelecanidae

ಅತಿ ದೊಡ್ಡ ಗಾತ್ರದ, ಉದ್ದನೆಯ ಕುತ್ತಿಗೆ ಹಾಗೂ ಕೊಕ್ಕು, ಪುಟ್ಟ ಕಾಲು, ತುಂಡು ಬಾಲ, ವಿಶಾಲ ರೆಕ್ಕೆಯ ನೀರ್ಹಕ್ಕಿ. ಕೆಳ ಕೊಕ್ಕಿಗೆ ಹಿಗ್ಗುವ ಚರ್ಮದ ಚೀಲ ಮೀನನ್ನು ನೀರಿನಿಂದ ಹೆಕ್ಕಲು ಉಪಯೋಗ. ಅವಕಾಶವಿದ್ದಲ್ಲಿ ಗುಂಪಿನಲ್ಲಿ ಮೀನನ್ನು ಬೇಟೆಯಾಡುವ ವಿಶಿಷ್ಟ ಗುಣ.

Boobies and Gannets ಕಡಲಬಾತುಗಳು[ಬದಲಾಯಿಸಿ]

Order: Pelecaniformes   Family: Sulidae

ದೊಡ್ಡ ಗಾತ್ರದ, ಉದ್ದನೆಯ ದೇಹದ; ಉದ್ದನೆಯ- ಕಿರಿದಾದ - ಚೂಪಾದ ರೆಕ್ಕೆಗಳು, ಮೊನಚಾದ ಬಾಲ, ದಪ್ಪ ಹಾಗೂ ಮೊನಚಾದ ಕೊಕ್ಕುಗಳುಳ್ಳ ಸಾಗರದ ಹಕ್ಕಿಗಳು.

  • Red-footed Booby, Sula sula ಕೆಂಪು ಪಾದದ ಕಡಲಬಾತು
  • Masked Booby, Sula dactylatra ಕಪ್ಪು ರೆಕ್ಕೆಯ ಕಡಲಬಾತು
  • Brown Booby, Sula leucogaster ಕಂದು ಕಡಲಬಾತು

Cormorants ನೀರುಕಾಗೆಗಳು[ಬದಲಾಯಿಸಿ]

Order: Pelecaniformes   Family: Phalacrocoracidae

ದೊಡ್ಡ ಗಾತ್ರದಿಂದ ಸಣ್ಣ ಗಾತ್ರದವರೆಗಿನ ಕಪ್ಪು ಬಣ್ಣದ; ಉದ್ದನೆಯ ದೇಹ ಮತ್ತು ಕೊರಳನ್ನು ಹೊಂದಿರುವ, ಸಣ್ಣ ತಲೆ -ಕೊಂಡಿಯಾಕಾರದ ಕೊಕ್ಕುಳ್ಳ ನೀರ್ಹಕ್ಕಿಗಳು.

  • Indian Cormorant, Phalacrocorax fuscicollis ನೀರುಕಾಗೆ
  • Great Cormorant, Phalacrocorax carbo ಉದ್ದಕೊಕ್ಕಿನ ನೀರುಕಾಗೆ
  • Little Cormorant, Microcorbo niger ಪುಟ್ಟ ನೀರುಕಾಗೆ

Darters ಹಾವಕ್ಕಿಗಳು[ಬದಲಾಯಿಸಿ]

Order: Pelecaniformes   Family: Anhingidae

ದೊಡ್ಡ ಗಾತ್ರದ, ನೀರುಕಾಗೆಯಂತಹ ಆದರೆ ಚೂಪಾದ ಭರ್ಜಿಯಂತಹ ಕೊಕ್ಕುಳ್ಳ, ಸಣ್ಣ ತಲೆಯ, ಉದ್ದನೆಯ ಬಾಲದ ನೀರ್ಹಕ್ಕಿಗಳು.

Frigatebirds ಕಡಲಗಿಡುಗಗಳು[ಬದಲಾಯಿಸಿ]

Order: Pelecaniformes   Family: Fregatidae

ಅತಿ ಉದ್ದದಾದ, ಚೂಪಾದ ರೆಕ್ಕೆಗಳು; ಉದ್ದನೆಯ ಕವಲೊಡೆದ ಬಾಲ, ಸಣ್ಣ ಪಾದ, ಉದ್ದನೆಯ ಕೊಕ್ಕೆಯಾಕಾರದ ಕೊಕ್ಕು. ಅಧಿಕ ಉದ್ದ -ಅಗಲದ ಆದರೆ ಸಣ್ಣ ದೇಹದ ಸಾಗರದ ಹಕ್ಕಿ.

Bitterns, Herons and Egrets ಗುಪ್ಪಿಗಳು, ಬಕಗಳು ಮತ್ತು ಬೆಳ್ಳಕ್ಕಿಗಳು[ಬದಲಾಯಿಸಿ]

Order: Pelecaniformes   Family: Ardeidae

ಗುಪ್ಪಿಗಳು: ಸಣ್ಣ ಗಾತ್ರದಿಂದ ದೊಡ್ಡ ಗಾತ್ರದ ನೀರ್ಹಕ್ಕಿಗಳು. ಸಾಮಾನ್ಯ ಕಂದು ಬಣ್ಣ, ಕಡಿಮೆ ಎತ್ತರದ ಕಾಲುಗಳು. ಹೆಣ್ಣು ಮತ್ತು ಅವಯಸ್ಕ ಹಕ್ಕಿಗಳ ಕೊರಳಲ್ಲಿ ಅಗಲ ಗೆರೆಗಳಿರುತ್ತವೆ. ಕೊಳದ ಬಕದಂತೆ ಕೊರಳಲ್ಲಿ ಬಿಳಿ ಇರುವುದಿಲ್ಲ.

ಬಕಗಳು:ಅತಿ ದೊಡ್ಡ ಗಾತ್ರದ, ಸಾಮಾನ್ಯವಾಗಿ ಬೂದು ಬಣ್ಣದ ಅಲ್ಲಲ್ಲಿ ಕೆಂಗಂದು ಬಣ್ಣವಿರು ಉದ್ದನೆಯ ದೇಹ- ಕೊರಳು- ಉದ್ದನೆಯ ಬಲವಾದ ಕೊಕ್ಕನ್ನು ಹೊಂದಿರುತ್ತವೆ.

ಬೆಳ್ಳಕ್ಕಿಗಳು: ಬಿಳಿ ಅಥವಾ ದ್ವಿರೂಪವಿರುವ (ಬಿಳಿ/ಬೂದು) ಸಣ್ಣ ಗಾತ್ರದಿಂದ ಅತಿ ದೊಡ್ಡ ಗಾತ್ರವಿರುವ ನೀರ್ಹಕ್ಕಿಗಳು. ಉದ್ದನೆಯ ದೇಹ- ಕೊರಳು- ಉದ್ದನೆಯ ಬಲವಾದ ಕೊಕ್ಕನ್ನು ಹೊಂದಿರುವ. ಹಾರಾಟದ ಸಮಯದಲ್ಲಿ ಕೊರಳನ್ನು ಒಳಕ್ಕೆಳೆದುಕೊಂಡಿರುತ್ತವೆ. ವಂಶಾಭಿವೃದ್ಧಿಯ ಸಮಯದಲ್ಲಿ ಹೊರ ರೂಪದಲ್ಲಾದ ಬದಲಾವಣೆ ಗುರುತಿಸಲು ಗೊಂದಲವನ್ನುಂಟು ಮಾಡುತ್ತದೆ.

ಈ ಎಲ್ಲವೂ ಆಹಾರಕ್ಕಾಗಿ ಜಲಚರವನ್ನೇ ಅವಲಂಬಿಸಿರುವ ನೀರ್ಹಕ್ಕಿಗಳು.

Storks ಕೊಕ್ಕರೆಗಳು[ಬದಲಾಯಿಸಿ]

Order: Ciconiiformes   Family: Ciconiidae

ಅತಿ ದೊಡ್ಡ ಗಾತ್ರದ ನೀರ್ನಡಿಗೆ ಹಕ್ಕಿಗಳಿವು. ಇವು ಸಾಮಾನ್ಯವಾಗಿ ಆಕಾರದಲ್ಲಿ, ತೂಕದಲ್ಲಿ ಹಾಗೂ ಕೊಕ್ಕುಗಳ ಗಾತ್ರದಲ್ಲಿ ಬಕಗಳಿಗಿಂತ ದೊಡ್ಡವು. ಹಾರಾಟದ ಸಮಯದಲ್ಲಿ ಚಾಚಿದ ಪೂರ್ಣ ಕೊರಳನ್ನು ಕಾಣಬಹುದು(ಸಿಪಾಯಿ ಕೊಕ್ಕರೆಯನ್ನು ಹೊರತುಪಡಿಸಿ), ಬಕಗಳಂತೆ ಒಳಕ್ಕೆ ಎಳೆದುಕೊಂಡಿರುವುದಿಲ್ಲ. ಬಲವಾದ, ಗಾತ್ರದಲ್ಲಿ ದೊಡ್ಡದಾದ ಹಾಗೂ ಚೂಪಾದ ಕೊಕ್ಕನ್ನು ಹೊಂದಿರುತ್ತದೆ. ಮೊದಲ ಮೂರು ಹಕ್ಕಿಗಳು ಕರ್ನಾಟಕದ ಸ್ಥಳೀಯ ಹಕ್ಕಿಗಳಾದರೆ, ಕೊನೆಯ ಮೂರು ಚಳಿಗಾಲದಲ್ಲಿ ವಲಸೆ ಬರುವಂತಹವು; ಸಿಪಾಯಿ ಕೊಕ್ಕರೆ ಮಾತ್ರ ಅಸ್ಸಾಂ ಹಾಗೂ ಆಗ್ನೇಯ ಏಷಿಯಾದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಮಿಕ್ಕೆರೆಡು ಕ್ರಮವಾಗಿ ಯೂರೋಪ-ಏಷ್ಯಾ ಉತ್ತರಭಾಗ ಹಾಗೂ ಮಧ್ಯ ಏಷ್ಯಾದಿಂದ ಬರುತ್ತವೆ.

Ibises and Spoonbills ಕೆಂಬರಲುಗಳು ಮತ್ತು ಚಮಚ ಕೊಕ್ಕುಗಳು[ಬದಲಾಯಿಸಿ]

Order: Ciconiiformes   Family: Threskiornithidae

ಮಧ್ಯಮ ಗಾತ್ರದ ನೀರ್ನಡಿಗೆ ಹಕ್ಕಿಗಳಿವು. ಆದರೆ ಕೊಕ್ಕರೆ-ಕ್ರೌಂಚಗಳಂತೆ ನೀಳವಾಗಿಲ್ಲ. ಇವುಗಳ ವಿಶೇಷ ಆಕಾರದ ಕೊಕ್ಕುಗಳು ಆಕರ್ಷಣೀಯ. ಮಿಂಚು ಕೆಂಬರಲು ಹಕ್ಕಿಯನ್ನು ಹೊರತುಪಡಿಸಿ, ಆಹಾರಕ್ಕಾಗಿ ಜಲಚರವನ್ನೇ ಅವಲಂಬಿಸಿರುವ ನೀರ್ಹಕ್ಕಿಗಳು.

Flamingos ರಾಜಹಂಸಗಳು[ಬದಲಾಯಿಸಿ]

Order: Phoenicopteriformes   Family: Phoenicopteridae

ಸಪೂರ-ನೀಳ- ಎತ್ತರದ ನೀರ್ನಡಿಗೆ ಹಕ್ಕಿಗಳಿವು. ವಯಸ್ಕ ಹಕ್ಕಿಗಳು ಗುಲಾಬಿ ಬಣ್ಣ ಹೊಂದಿದ್ದರೆ ಅವಯಸ್ಕ ಹಕ್ಕಿಗಳದು ಕಂದು ಛಾಯೆ. ನೀರಿನಲ್ಲಿರುವ ಸೂಕ್ಷ್ಮ ಪಾಚಿಯನ್ನು ಶೋಧಿಸಲು ಜಾಲರಿಯಂತಿರುವ ಬಾಗಿದ ಕೊಕ್ಕನ್ನು ಹೊಂದಿದೆ.

Ducks, Geese and Swans ಬಾತುಗಳು ಮತ್ತು ಹೆಬ್ಬಾತುಗಳು[ಬದಲಾಯಿಸಿ]

Order: Anseriformes   Family: Anatidae

ಬಾತುಗಳು : ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದವರೆಗಿನ ಹೆಚ್ಚಿನಂಶ ಸಿಹಿನೀರಿನ ದ್ವಿರೂಪದ (ಹೆಣ್ಣು ಮತ್ತು ಗಂಡು ಬೇರೆ ರೂಪದಲ್ಲಿ, ಸಿಳ್ಳೆ ಬಾತು ಮತ್ತು ಕಂದು ಬಾತುಗಳನ್ನು ಹೊರತುಪಡಿಸಿ) ನೀರ್ಹಕ್ಕಿಗಳು.

ಹೆಬ್ಬಾತುಗಳು: ದೊಡ್ಡ ಗಾತ್ರ-ತೂಕದ, ಉದ್ದನೆಯ ಕೊರಳಿನ, ಸಾಮಾನ್ಯವಾಗಿ ಬೂದು ಬಣ್ಣದ ನೀರ್ಹಕ್ಕಿಗಳು.

Hawks, Kites and Eagles ರಣಹದ್ದುಗಳು, ಸೆಳೆವಗಳು, ಮೀನುಗಿಡುಗಗಳು, ಗಿಡುಗಗಳು, ಬಿಜ್ಜುಗಳು, ಹದ್ದುಗಳು[ಬದಲಾಯಿಸಿ]

Order: Accipitriformes   Family: Accipitridae

ರಣಹದ್ದುಗಳು: ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದವರೆಗಿನ, ತೆಳು ಕಂದು ಬಣ್ಣದ, ಯಾವುದೇ ರೀತಿಯ ಹೊರರೂಪದಲ್ಲಿ ವಿಶೇಷವಿರದ(ಕೆಲವು ಹೊರತು), ಸತ್ತ-ಕೊಳೆತ ಪ್ರಾಣಿಗಳನ್ನು ಭಕ್ಷಿಸುವವು

ಸೆಳೆವಗಳು: ಸಣ್ಣ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾದ, ಉದ್ದನೆ ಬಾಲ-ರೆಕ್ಕೆಯ ಬಯಲು ಪ್ರದೇಶದ, ಸಪೂರ ದೇಹದ ಬೇಟೆಗಾರ ಹಕ್ಕಿ.

ಮೀನುಗಿಡುಗಗಳು: ಬೂದುಗಿಡುಗಗಳ ಹೊಟ್ಟೆ ಬಿಳಿ, ಪೇಲವ ತಲೆ, ಗಾಢ ಬಣ್ಣದ ವಿಶಾಲ ರೆಕ್ಕೆ. ತೊಡೆಯ ಮೇಲೆ ಅತಿ ಸಣ್ಣ ಗರಿಗಳು. ಮೀನನ್ನೇ ಪ್ರಮುಖ ಆಹಾರವನ್ನಾಗಿಸಿಕೊಂಡಿರುವವು. ಹೆಚ್ಚಿನಂಶ ಸಮುದ್ರವಾಸಿ ಬಿಳಿಹೊಟ್ಟೆ ಮೀನುಗಿಡುಗದ ತೊಡೆ ಹೆಚ್ಚಿನ ಗರಿಗಳಿಂದ ಆವೃತ್ತ. ಬೇಟೆಗಾರ ಹಕ್ಕಿ.

ಗಿಡುಗಗಳು(Accipiter): ಉದ್ದ ಬಾಲ, ಚಿಕ್ಕ ರೆಕ್ಕೆಯ, ಅರಣ್ಯವಾಸಿ (ಕೆಲವು ಹೊರತು). (Buteo): ಅಗಲವಾದ ರೆಕ್ಕೆ-ಬಾಲ, ಕಂದು ಬಣ್ಣದ ಬೇಟೆಗಾರ ಹಕ್ಕಿ.

ಮೇಲಿನ ಎಲ್ಲವೂ ದ್ವಿರೂಪ (ಹೆಣ್ಣು ಮತ್ತು ಗಂಡು ಬೇರೆ ರೂಪದಲ್ಲಿ), ಹೆಣ್ಣು ಗಾತ್ರದಲ್ಲಿ ದೊಡ್ಡದು.

Osprey ಡೇಗೆಗಳು[ಬದಲಾಯಿಸಿ]

Order: Accipitriformes   Family: Pandionidae

ದೊಡ್ಡ ಗಾತ್ರದ ಮೀನನ್ನೇ ಪ್ರಮುಖ ಆಹಾರವನ್ನಾಗಿಸಿಕೊಂಡಿರುವ ಬೇಟೆಗಾರ ಹಕ್ಕಿ.

  • Osprey, Pandion haliaetus ಡೇಗೆ

Falcons ಚಾಣಗಳು[ಬದಲಾಯಿಸಿ]

Order: Falconiformes   Family: Falconidae

ಉದ್ದನೆಯ ಚೂಪಾದ ರೆಕ್ಕೆ, ಕಿರಿಯಗಲದ ನೀಳವಾದ ಬಾಲ, ಇಳಿಬಿದ್ದ ಮೀಸೆಯಂತಹ ಗುರುತು. ನೇರ ಹಾರಾಟ. ಮಿಕವನ್ನು ಹುಡುಕಲು ನಿಂತಲ್ಲೇ ಹಾರಾಡುವ ಸಾಮರ್ಥ್ಯವಿರುವ ಬೇಟೆಗಾರ ಹಕ್ಕಿ.

Pheasants and Partridges ಕೋಳಿಗಳು, ಗೌಜಲಕ್ಕಿಗಳು, ಲಾವುಗೆಗಳು, ಮತ್ತು ನವಿಲುಗಳು[ಬದಲಾಯಿಸಿ]

Order: Galliformes   Family: Phasianidae

ಕೋಳಿಗಳು: ನೆಲದಲ್ಲಿ ಆಹಾರ ಹುಡುಕುವ ಕಾಡುಹಕ್ಕಿಗಳು ಗಂಡು-ಹೆಣ್ಣು ಬೇರೆ ರೂಪದಲ್ಲಿರುತ್ತವೆ. ಹುಂಜ - ಕಿರೀಟದಂತಹ ಎತ್ತರದ ಮಾಂಸಭರಿತ ಕುಚ್ಚು, ಕಪೋಲ-ಗದ್ದದಲ್ಲೂ ಸಹ. ಕೊರಳನ್ನು ಮುಚ್ಚಿರುವ ಉದ್ದನೆಯ ಇಳಿಬಿದ್ದ ಸುಂದರ ಗರಿಗಳು, ಚಪ್ಪಟ್ಟೆ ಬಾಲದ ಮೇಲೂ ಇಳಿಬಿದ್ದ ಸುಂದರ ಅಗಲದ ಗರಿಗಳು; ನೋಡಲು ಧೀಮಂತ. ಹೇಂಟೆ ಚಿಕ್ಕದು. ನೆಲವನ್ನು ಕೆದಕಿ ಆಹಾರ ಸಂಪಾದಿಸಲು ಅಗತ್ಯವಾದ ಕೊಕ್ಕು, ಪಾದ ಹಾಗೂ ಕಾಲುಗಳು.

ಗೌಜಲಕ್ಕಿಗಳು: ಮಧ್ಯಮ ಗಾತ್ರದ ಬಯಲು – ಕುರಚಲು- ಒಣಬೇಸಾಯ ಪ್ರದೇಶಗಳಲ್ಲಿ ಜೀವಿಸುವ ನೆಲವಾಸಿ ಹಕ್ಕಿಗಳು.

ಲಾವುಗೆಗಳು: ಸಣ್ಣ ಗಾತ್ರದ ತುಂಡು ಬಾಲದ, ತುಂಡು ಕೊಕ್ಕಿನ ಆವಾಸದ ಹಿನ್ನೆಲೆಗೆ ಹೊಂದಿಕೊಂಡು ಸುಲಭವಾಗಿ ಕಾಣಸಿಗದಂತಹ ಮೈ ಬಣ್ಣ ಹೊಂದಿರುವ, ಬಯಲು – ಕುರಚಲು- ಒಣಬೇಸಾಯ ಪ್ರದೇಶಗಳಲ್ಲಿ ಜೀವಿಸುವ ನೆಲವಾಸಿ ಹಕ್ಕಿಗಳು.

ನವಿಲುಗಳು: ಪ್ರಪಂಚದ ಅತಿ ಸುಂದರ ಹಕ್ಕಿಗಳಲ್ಲಿ ಒಂದು. ಅತಿದೊಡ್ಡದಾದ, ಅತಿ ಉದ್ದದ ಬಾಲದ, ಅತಿ ಉದ್ದ ಕಾಲಿನ, ಉದ್ದ ಕೊರಳಿನ, ಗರಿಗಳ ಕಿರೀಟಗುಚ್ಛಹೊಂದಿದ ಆಹಾರಕ್ಕಾಗಿ ನೆಲವನ್ನರಸುವ ಹಕ್ಕಿ.

Buttonquails ಗುಡುಗಾಡು ಹಕ್ಕಿಗಳು[ಬದಲಾಯಿಸಿ]

Order: Charadriiformes   Family: Turnicidae

ಲಾವುಗೆಗಳಿಗಿಂತ ಸಣ್ಣ ನೆಲವಾಸಿ ಹಕ್ಕಿಗಳು. ನೆಲವನ್ನು ಕೆದಕಿ ಆಹಾರ ಸಂಪಾದಿಸಲು ಅಗತ್ಯವಾದ ಕೊಕ್ಕು, ಪಾದ ಹಾಗೂ ಕಾಲುಗಳು. ಆದರೆ ಕೊಕ್ಕು ಸ್ವಲ್ಪ ಉದ್ದ. ಬಿಳಿ ಕಣ್ಣು, ಗಂಡು-ಹೆಣ್ಣು ಬೇರೆ ರೂಪದಲ್ಲಿರುತ್ತವೆ. ಆವಾಸದ ಹಿನ್ನೆಲೆಗೆ ಹೊಂದಿಕೊಂಡು ಸುಲಭವಾಗಿ ಕಾಣಸಿಗದಂತಹ ಮೈ ಬಣ್ಣ ಹೊಂದಿರುವ, ಬಯಲು – ಕುರಚಲು- ಒಣಬೇಸಾಯ ಪ್ರದೇಶಗಳಲ್ಲಿ ಜೀವಿಸುವ ಹಕ್ಕಿಗಳು.

Cranes ಕ್ರೌಂಚಗಳು[ಬದಲಾಯಿಸಿ]

Order: Gruiformes    Family: Gruidae

ನೀಳ ಕಾಲು-ಕತ್ತುಗಳುಳ್ಳ; ಉದ್ದನೆಯ ದಡಿ ಕೊಕ್ಕು, ಬಾಲದ ಮೇಲೆ ಇಳಿಬಿದ್ದ ಅಗಲದ ಗರಿಗಳುಳ್ಳ ನೀರ್ನಡಿಗೆ ಹಕ್ಕಿ ಹಾರಾಟದಲ್ಲಿ ಕೊರಳನ್ನು ಚಾಚಿರುತ್ತದೆ.

  • Demoiselle Crane,Grus virgo ಬೂದುಮೈ ಕ್ರೌಂಚ
  • Common Crane,Grus grus ಕೆಂಪುನೆತ್ತಿಯ ಕ್ರೌಂಚ

Rails, Crakes, Gallinules and Coots ಜೌಗುಕೋಳಿಗಳು ಮತ್ತು ಜಂಬು ಕೋಳಿಗಳು[ಬದಲಾಯಿಸಿ]

Order: Gruiformes   Family: Rallidae

ಅತಿಸಣ್ಣದರಿಂದ ಮಧ್ಯಮ ಗಾತ್ರಕ್ಕಿಂತ ಕಡಿಮೆಯ ನೀರ್ಹಕ್ಕಿಗಳು. ಗಂಡು-ಹೆಣ್ಣುಗಳ ರೂಪದಲ್ಲಿ ಅಲ್ಪ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಕೆಂಗಂದು ಬಣ್ಣವಿದ್ದು, ತೊಡೆಯ ಮೇಲ್ಬಾಗದ ದೇಹದಲ್ಲಿ ಪಟ್ಟಿಗಳಿರುತ್ತವೆ.

Bustards ಎರ್ಲಡ್ಡುಗಳು ಮತ್ತು ನವಿಲುಹಕ್ಕಿಗಳು[ಬದಲಾಯಿಸಿ]

Order: Otidiformes    Family: Otididae

ಎರ್ಲಡ್ಡುಗಳು: ಅತಿ ದೊಡ್ಡ ಗಾತ್ರದ ಹಾಗು ತೂಕದ ನೆಲವಾಸಿ ಹಕ್ಕಿ. ಗಂಡು ಹಕ್ಕಿಗಳು ಹೆಣ್ಣುಹಕ್ಕಿಗಿಂತ ಬಹು ದೊಡ್ಡವು. ಚಿಕ್ಕದಾದ ಆದರೆ ಗಡುಸಾದ ಕೊಕ್ಕು. ಉದ್ದನೆಯ ಕಾಲು ಮತ್ತು ಕೊರಳು.

ನವಿಲುಹಕ್ಕಿಗಳು: ಹೆಣ್ಣುಗಳು ಗಂಡಿಗಿಂತ ಗಾತ್ರದಲ್ಲಿ ದೊಡ್ಡವು. ಸಂತಾನ ಸಮಯದ ಹೊರತು ಗಂಡು ಹೆಣ್ಣುಗಳು ಗಾಢ ಚುಕ್ಕೆಯಾವೃತ್ತ ಕಂದು ಬಣ್ಣದ್ದಾಗಿರುತ್ತವೆ. ಸಂತಾನ ಸಮಯದಲ್ಲಿ ಗಂಡುಗಳ ತಲೆ, ಎದೆ, ಮತ್ತು ಹೊಟ್ಟೆ ಹೊಳೆವ ಕಪ್ಪು.

Jacanas ದೇವನಕ್ಕಿಗಳು[ಬದಲಾಯಿಸಿ]

Order: Charadriiformes    Family: Jacanidae

ಮಧ್ಯಮ ಗಾತ್ರಕ್ಕಿಂತ ಕಡಿಮೆಯ, ಹಾಗೂ ಸಣ್ಣ ಸುಂದರ ನೀರ್ಹಕ್ಕಿಗಳು. ತೇಲುವ ಸಸ್ಯಗಳ ಮೇಲೆ ನಡೆದಾಡಲು ಅನುಕೂಲವಾಗುವಂತಹ ಉದ್ದನೆಯ ಬೆರಳುಗಳು.

Oystercatchers ಸಿಂಪಿಬಾಕಗಳು[ಬದಲಾಯಿಸಿ]

Order: Charadriiformes   Family: Haematopodidae

ಮಧ್ಯಮ ಗಾತ್ರದ, ಮೈತುಂಬಿದಂತಿರುವ, ಕಂದುಗಪ್ಪು ಬಿಳುಪಿನ, ಸಮುದ್ರ ದಂಡೆಯಲ್ಲಿ ಆಹಾರವನ್ನರಸುವ ವಲಸೆ ಹಕ್ಕಿ. ಹೆಣ್ಣು-ಗಂಡುಗಳಲ್ಲಿ ಗಾತ್ರದಲ್ಲಿ ಮಾತ್ರ ವ್ಯತ್ಯಾಸ.

Painted Snipe ಉಲ್ಲಂಕಿಗಳು[ಬದಲಾಯಿಸಿ]

Order: Charadriiformes   Family: Rostratulidae ಸಣ್ಣ ಕಾಲಿನಿಂದಾಗಿ ಕುಬ್ಜ ದೇಹದಂತೆ ಕಾಣುವ ಆದರೆ ಅತಿ ಉದ್ದನೆಯ ಕೊಕ್ಕು ಹೊಂದಿದ್ದು ಮುಸ್ಸಂಜೆ ಹಾಗು ಮುಂಜಾನೆಯ ಆಹಾರವನ್ನರಸುವ ನೀರ್ನಡಿಗೆ ಹಕ್ಕಿ. ಹೆಣ್ಣು ಗಾತ್ರದಲ್ಲಿ ದೊಡ್ಡದು ಹಾಗೂ ಬಣ್ಣದಲ್ಲಿ ಗಂಡಿಗಿಂತ ಸುಂದರವಾಗಿದೆ.

Stilts and Avocets ಮೆಟ್ಟುಗಾಲು ಹಕ್ಕಿಗಳು ಮತ್ತು ವಕ್ರ ಕೊಕ್ಕುಗಳು[ಬದಲಾಯಿಸಿ]

Order: Charadriiformes    Family: Recurvirostridae

ಉದ್ದನೆಯ ಕಾಲು, ಕೊರಳು, ಕೊಕ್ಕುಗಳು; ವಿವಿಧ ಮಾದರಿ ಬಣ್ಣ ಹಾಗೂ ವಿನ್ಯಾಸದಿಂದ ಕೂಡಿದ ಹೊರರೂಪ, ವೈವಿಧ್ಯ ಕೊಕ್ಕುಗಳ ಆಕಾರವುಳ್ಳ ನೀರ್ನಡಿಗೆ ಹಕ್ಕಿಗಳು

  • Black-winged Stilt , Himantopus himantopus ಮೆಟ್ಟುಗಾಲು ಹಕ್ಕಿ
  • Pied Avocet , Recurvirostra avosetta ವಕ್ರ ಕೊಕ್ಕು

Crab Plover ಏಡಿಬಾಕಗಳು[ಬದಲಾಯಿಸಿ]

Order: Charadriiformes    Family: Dromadidae

ಪ್ರಮುಖ ಆಹಾರ ಏಡಿಯನ್ನು ತಿನ್ನಲು ಬೇಕಾದ ಮಾರ್ಪಾಡು ಹೊಂದಿದ ಗಡಸು ಕೊಕ್ಕು. ಬಿಳಿಯ ನೀರ್ನಡಿಗೆ ಹಕ್ಕಿಗಳು

Thick-knees ಕಲ್ಲು ಗೊರವಗಳು[ಬದಲಾಯಿಸಿ]

Order: Charadriiformes   Family: Burhinidae

ವಿಶಾಲ ಕಣ್ಣಿನ, ದಪ್ಪನೆಯ ಕಾಲುಗಳು, ಕಪ್ಪನೆ ಗಡುಸಾದ ಕೊಕ್ಕುಗಳು, ಹಳದಿ ಕಣ್ಣು ಮತ್ತು ಕಾಲುಗಳುಳ್ಳ ನೀರ್ನಡಿಗೆ ಹಕ್ಕಿಗಳು

Pratincoles and Coursers ಚಿಟವಗಳು[ಬದಲಾಯಿಸಿ]

Order: Charadriiformes   Family: Glareolidae

ಚೂಪಾದ ಕಪ್ಪು ರೆಕ್ಕೆತುದಿ, ಬಿಳಿ ಪೃಷ್ಠ, ಕವಲುಬಾಲದ ಬಿಳಿ ಅಂಚು, ದೇಹದ ಮೇಲ್ಭಾಗ ತೆಳು ಕಂದು ಹಾಗೆಯೇ ಕೆಳ ಭಾಗ ಬಿಲಿ. ಗುಂಪುವಾಸಿ ನೀರ್ನಡಿಗೆ ಹಕ್ಕಿಗಳು (Cursorius). ಸಪೂರ, ಉದ್ದನೆಯ ಕಾಲು, ರಭಸವಾಗಿ ಓಡುವ, ಸಣ್ಣ ಕೊಕ್ಕಿನ ಒಳನಾಡಿನ ಹಕ್ಕಿ(Cursorius)

Plovers and Lapwings ಗೊರವ ಮತ್ತು ಟಿಟ್ಟಿಭಗಳು[ಬದಲಾಯಿಸಿ]

Order: Charadriiformes   Family: Charadriidae

ಟಿಟ್ಟಿಭ: ಮಧ್ಯಮ ಗಾತ್ರದ,ವಿಶಾಲ ರೆಕ್ಕೆಯ, ದೇಹದ ಮೇಲ್ಭಾಗ ತೆಳು ಕಂದು; ಕಪ್ಪು ಹಾರುಗರಿಗಳ ನಡುವಿನ ಮೇಲಿನ ರೆಕ್ಕೆಯ ವಿನ್ಯಾಸ, ಬಿಳಿಯ ಕೆಳ ರೆಕ್ಕೆ. ಒಳನಾಡು ವಾಸಿ. ಗೊರವ: ನೀರ್ನಡಿಗೆ ಹಕ್ಕಿಗಳು; ಸಣ್ಣ ಗಾತ್ರಕ್ಕಿಂತ ಸ್ವಲ್ಪದೊಡ್ಡದಾದ ಹಕ್ಕಿ. ವಲಸೆ ಬಂದಾಗ ಮರಳು ಬಣ್ಣದ ಮಚ್ಛೆಯಂತಹ ದೇಹದ ಮೇಲ್ಭಾಗ, ಸಂತಾನ ಸಮಯದಲ್ಲಿ ಕಪ್ಪು ಕತ್ತು, ಕೆಳ ದೇಹಭಾಗ, ತಲೆಯಿಂದ ಭುಜದವರೆಗೆ ಬಿಳಿ. (Pluvialis). ಸಣ್ಣ ಗಾತ್ರದ ಹಕ್ಕಿ. ದೇಹದ ಮೇಲ್ಭಾಗ ಮರಳು ಬಣ್ಣ, ಕೆಳಭಾಗ ಬಿಳಿ. ನೆತ್ತಿ ಮತ್ತು ಎದೆಯ ಮೇಲೆ ವಿವಿಧ ವಿನ್ಯಾಸ (Charadrius).

Sandpipers and allies ಗದ್ದೆಗೊರವಗಳು ಮತ್ತು ಉಲ್ಲಂಕಿಗಳು[ಬದಲಾಯಿಸಿ]

Order: Charadriiformes   Family: Scolopacidae

ಗದ್ದೆಗೊರವಗಳು: ಕೆಳಕ್ಕೆ ಬಾಗಿದ ನೀಳ ಕೊಕ್ಕುಗಳುಳ್ಳ, ಮಚ್ಚೆಯಿರುವ ದೊಡ್ಡ ನೀರ್ನಡಿಗೆ ಹಕ್ಕಿಗಳು (Numenius). ನೇರ ನೀಳ ಕೊಕ್ಕುಗಳುಳ್ಳ ಇಲ್ಲವೇ ಸ್ವಲ್ಪ ಮೇಲೆ ಬಾಗಿದ ಮಸುಕಾದ ಮಚ್ಚೆಯಿರುವ ದೊಡ್ಡ ನೀರ್ನಡಿಗೆ ಹಕ್ಕಿಗಳು (Limosa). ಚಿಕ್ಕದರಿಂದ ದೊಡ್ಡ ಗಾತ್ರವಿರುವ ನೇರವಿರುವ ಇಲ್ಲವೇ ಅಲ್ಪ ಸ್ವಲ್ಪ ಮೇಲೆ ಕೆಳಗೆ ಬಾಗಿ, ಚಿಕ್ಕದಲ್ಲದ ತುಂಬಾ ಎತ್ತರವೂ ಅಲ್ಲದ ಕಾಲುಗಳು, ಹೆಣ್ಣು-ಗಂಡಿನ ನಡುವೆ ಅತಿ ಕಡಿಮೆ ವ್ಯತ್ಯಾಸವಿರುವ ನೀರ್ನಡಿಗೆ ಹಕ್ಕಿಗಳು (Tringa). ಗಾಢ ಬಣ್ಣದ , ಮೈತುಂಬಿದಂತಿರುವ ಸಮುದ್ರತೀರದ ನೀರ್ನಡಿಗೆ ಹಕ್ಕಿ(Arenaria). ವೈವಿಧ್ಯಮಯ ಸಣ್ಣ , ಅದಕ್ಕಿಂತ ದೊಡ್ಡದಾದ ನೀರ್ನಡಿಗೆ ಹಕ್ಕಿಗಳು (Calidrne).

ಉಲ್ಲಂಕಿಗಳು: ಉದ್ದನೆಯ ಕೊಕ್ಕಿನ, ಮೇಯುವ ಜಾಗದ ಹಿನ್ನೆಲೆಗೆ ತದ್ವತ್ತಾಗಿ ಹೊಂದಿಕೊಂಡು ಕಾಣದಂತಾಗುವ ನೀರ್ನಡಿಗೆ ಹಕ್ಕಿಗಳು

  • Whimbrel , Numenius phaeopus ಕಡಲುಗೊರವ
  • Eurasian Curlew , Numenius arquata ಹೆಗ್ಗೊರವ
  • Black-tailed Godwit , Limosa limosa ಕಪ್ಪುಬಾಲದ ಹಿನ್ನೀರು ಗೊರವ
  • Bar-tailed Godwit , Limosa lapponica ಪಟ್ಟೆಬಾಲದ ಹಿನ್ನೀರು ಗೊರವ
  • Spotted Redshank , Tringa erythropus ಚುಕ್ಕೆಯ ಕೆಂಪುಕಾಲು ಗೊರವ
  • Common Redshank , Tringa totanus ಕೆಂಪುಕಾಲಿನ ಗೊರವ
  • Marsh Sandpiper , Tringa stagnatilis ಜೌಗು ಗದ್ದೆಗೊರವ
  • Common Greenshank, Tringa nebularia ದೊಡ್ಡ ಗದ್ದೆಗೊರವ
  • Green Sandpiper , Tringa ochropus ಹಸಿರು ಗದ್ದೆಗೊರವ
  • Wood Sandpiper, Tringa glareola ಅಡವಿ ಗದ್ದೆಗೊರವ
  • Terek Sandpiper , Xenus cinereus ಗಿಡ್ಡಕಾಲಿನ ಕಡಲುಗೊರವ
  • Common Sandpiper , Actitis hypoleucos ಗದ್ದೆಗೊರವ
  • Ruddy Turnstone , Arenaria interpres ಬಿಳಿಗಲ್ಲದ ಕಡಲುಗೊರವ
  • Wood Snipe , Gallinago nemoricola ಅಡವಿ ಉಲ್ಲಂಕಿ
  • Pintail Snipe , Gallinago stenura ಸೂಜಿಬಾಲದ ಉಲ್ಲಂಕಿ
  • Swinhoe's Snipe , Gallinago megala ಗದ್ದೆ ಉಲ್ಲಂಕಿ
  • Great Snipe , Gallinago media ದೊಡ್ಡ ಉಲ್ಲಂಕಿ
  • Common Snipe , Gallinago gallinago ಬೀಸಣಿಕೆಬಾಲದ ಉಲ್ಲಂಕಿ
  • Jack Snipe , Lymnocryptes minimus ಸಣ್ಣ ಉಲ್ಕಂಕಿ
  • Eurasian Woodcock , Scolopax rusticola ಉಬ್ಬುಕೊಕ್ಕಿನ ಉಲ್ಲಂಕಿ
  • Great Knot, Calidris tenuirostris ಕಡಲು ಉಲ್ಲಂಕಿ
  • Sanderling , Calidris alba ಕರಿಭುಜದ ಕಡಲು ಉಲ್ಲಂಕಿ
  • Little Stint , Calidris minuta ಸಣ್ಣ ಕಡಲು ಉಲ್ಲಂಕಿ
  • Temminck's Stint , Calidris temminckii ಹಸಿರುಗಾಲಿನ ಕಡಲು ಉಲ್ಲಂಕಿ
  • Dunlin , Calidris alpina ಉದ್ದಕೊಕ್ಕಿನ ಕಡಲು ಉಲ್ಲಂಕಿ
  • Curlew Sandpiper , Calidris ferruginea ಹೆಗ್ಗಡಲು ಉಲ್ಲಂಕಿ
  • Broad-billed Sandpiper , Calidris falcinellus ಅಗಲಕೊಕ್ಕಿನ ಉಲ್ಲಂಕಿ
  • Ruff , Calidris pugnax ನೀಳಗತ್ತಿನ ಉಲ್ಲಂಕಿ
  • Red-necked Phalarope , Phalaropus lobatus ಕೆಂಪುಕತ್ತಿನ ಕಡಲುರೀವ

Skuas ಸಮುದ್ರದಕ್ಕಿಗಳು[ಬದಲಾಯಿಸಿ]

Order: Charadriiformes    Family: Stercorariidae

  • South Polar Skua, Stercorarius maccormicki ದಕ್ಷಿಣಧ್ರುವದ ಸಮುದ್ರದಕ್ಕಿ
  • Arctic Skua , Stercorarius parasiticus ಹಳದಿಕತ್ತಿನ ಸಮುದ್ರದಕ್ಕಿ
  • Long-tailed Skua , Stercorarius longicaudus ಉದ್ದಬಾಲದ ಸಮುದ್ರದಕ್ಕಿ
  • Pomarine Skua , Stercorarius pomarinus ಅಗಲಬಾಲದ ಸಮುದ್ರದಕ್ಕಿ

Noddies, Gulls ಕಡಲಕ್ಕಿಗಳು[ಬದಲಾಯಿಸಿ]

Order: Charadriiformes    Family: Laridae

  • Brown Noddy , Anous stolidus ಕಂದು ಬೆಣೆಬಾಲದಕಡಲಕ್ಕಿ
  • Slender-billed Gull , Chroicocephalus genei ಸಪೂರಕೊಕ್ಕಿನ ಕಡಲಕ್ಕಿ
  • Brown-headed Gull, Chroicocephalus brunnicephalus ಕಂದುತಲೆಯ ಕಡಲಕ್ಕಿ
  • Black-headed Gull , Chroicocephalus ridibundus ಕರಿತಲೆಯ ಕಡಲಕ್ಕಿ
  • White-eyed Gull , Ichthyaetus leucophthalmus ಬಿಳಿಕಣ್ಣಿನ ಕಡಲಕ್ಕಿ
  • Sooty Gull , Ichthyaetus hemprichii ಮಸಿಗಪ್ಪು ಕಡಲಕ್ಕಿ
  • Pallas's Gull , Ichthyaetus ichthyaetus ಹಿರಿಯ ಕಡಲಕ್ಕಿ
  • Black-backed Gull , Larus fuscus Lesser ಕಪ್ಪು ಬೆನ್ನಿನ ಕಡಲಕ್ಕಿ

Terns ರೀವಗಳು[ಬದಲಾಯಿಸಿ]

Order: Charadriiformes    Family: Laridae   Sub Family:: Sternidae

Skimmers ಜಾಲರಿಕೊಕ್ಕಿನ ರೀವಗಳು[ಬದಲಾಯಿಸಿ]

Order: Charadriiformes   Family: Laridae   Sub Family: Rynchopidae

  • Indian Skimmer, Rynchops albicollis ಜಾಲರಿಕೊಕ್ಕಿನ ರೀವ

Sandgrouses ಗೌಜಲಕ್ಕಿಗಳು[ಬದಲಾಯಿಸಿ]

Order: Pterocliformes    Family: Pteroclidae

Pigeons and Doves ಪಾರಿವಾಳಗಳು ಮತ್ತು ಕಪೋತಗಳು[ಬದಲಾಯಿಸಿ]

Order: Columbiformes    Family: Columbidae

Parrots and allies ಗಿಳಿಗಳು[ಬದಲಾಯಿಸಿ]

Order: Psittaciformes    Family: Psittaculidae

Cuckoos ಕೋಗಿಲೆಗಳು[ಬದಲಾಯಿಸಿ]

Order: Cuculiformes    Family: Cuculidae

Barn Owls ಕಣಜಗೂಬೆಗಳು[ಬದಲಾಯಿಸಿ]

Order: Strigiformes   Family: Tytonidae

Frogmouths ಕಪ್ಪೆಬಾಯಿಗಳು[ಬದಲಾಯಿಸಿ]

Order: Caprimulgiformes    Family: Podargidae

Nightjars ನತ್ತಿಂಗಗಳು[ಬದಲಾಯಿಸಿ]

Order: Caprimulgiformes    Family: Caprimulgidae

Swifts ಬಾನಾಡಿಗಳು[ಬದಲಾಯಿಸಿ]

Order: Caprimulgiformes   Family: Apodidae

Treeswifts ಮರ ಬಾನಾಡಿಗಳು[ಬದಲಾಯಿಸಿ]

Order: Caprimulgiformes   Family: Hemiprocnidae

Trogons ಕಾಕರಣೆ ಹಕ್ಕಿಗಳು[ಬದಲಾಯಿಸಿ]

Order: Trogoniformes   Family: Trogonidae

Kingfishers ಮಿಂಚುಳ್ಳಿಗಳು[ಬದಲಾಯಿಸಿ]

Order: Coraciiformes    Family: Alcedinidae

Bee-Eaters ಪತ್ರಂಗಗಳು[ಬದಲಾಯಿಸಿ]

Order: Coraciiformes   Family: Meropidae

ಪ್ರಮುಖ ಆಹಾರ, ಹಾರಾಡುವ ಕೀಟಗಳನ್ನು ಸುಲಲಿತವಾಗಿ ಹಿಡಿಯುವ ಚಾಣಾಕ್ಷತನ. ಎದ್ದುಕಾಣುವ ವರ್ಣ ವಿನ್ಯಾಸ. ಉದ್ದನೆಯ ತುಸುಬಾಗಿದ ಕೊಕ್ಕು. ಕಿರಿದಾದ ಚೂಪಾದ ರೆಕ್ಕೆ. ಉದ್ದನೆಯ ಬಾಲ. ಕಾಡುವಾಸಿ ಜೇನುಮಗರೆಯನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಬಯಲು ಪ್ರದೇಶವಾಸಿ.

Typical Rollers ನೀಲಕಂಠ[ಬದಲಾಯಿಸಿ]

Order: Coraciiformes    Family: Coraciidae

Hoopoes ಚಂದ್ರಮಕುಟಗಳು[ಬದಲಾಯಿಸಿ]

Order: Bucerotiformes    Family: Upupidae

Hornbills ಮಂಗಟ್ಟೆಗಳು[ಬದಲಾಯಿಸಿ]

Order: Bucerotiformes    Family: Bucerotidae

ಹಣ್ಣುಗಳನ್ನೇ ಪ್ರಮುಖ ಆಹಾರನ್ನಾಗಿಸಿಕೊಂಡಿರುವ, ಸಮೂಹವಾಸಿ ದೊಡ್ಡ ಗಾತ್ರದ ಮಂಗಟ್ಟೆಗಳು ದೇಹಕ್ಕೆ ಅನುಪಾತವಾಗಿ ದೊಡ್ಡ ಗಾತ್ರದ ಕೊಕ್ಕನ್ನು ಹೊಂದಿವೆ. ಮೇಲು ಕೊಕ್ಕಿನ ಮೇಲೊಂದು ಕೊಕ್ಕನ ತರಹದ ಉಬ್ಬು ಇವುಗಳ ವೈಶಿಷ್ಟ.

Barbets ಕುಟ್ರು ಹಕ್ಕಿಗಳು[ಬದಲಾಯಿಸಿ]

Order: Piciformes    Family: Megalaimidae

ಮರವಾಸಿಹಕ್ಕಿ. ತನ್ನ ಹಸಿರು ಬಣ್ಣದಿಂದಾಗಿ ಮರದ ಹಸಿರು ಎಲೆಗಳ ನಡುವೆ ಅದೃಶ್ಯವಾದಂತಿರುತ್ತದೆ. ಮರೆಯಲ್ಲಿದ್ದರೂ ಮಾಡುವ ಸದ್ದಲದಿಂದಾಗಿ ಇಡೀ ಪ್ರದೇಶವೇ ಪ್ರತಿಧ್ವನಿಸುತ್ತಿರುತ್ತದೆ.

Woodpeckers and allies ಮರಕುಟಿಕಗಳು[ಬದಲಾಯಿಸಿ]

Order: Piciformes    Family: Picidae

ಮರ ಕುಕ್ಕಿ ಕೊರೆದು, ತೊಗಟೆ ಹಿಗ್ಗಲಿಸಲು ಸಾಧ್ಯವಾಗುವಂತಹ ಉಳಿಯಂತಹ ಕೊಕ್ಕು; ಮರಗಳಲ್ಲಿನ ಹುಳು-ಹುಪ್ಪಟ್ಟೆಗಳನ್ನು ಹೊರತೆಗೆಯಲು ಅನುಕೂಲವಾಗುವಂತಹ ನಾಲಿಗೆ. ಎರಡೆರಡು ಕಾಲ್ಬೆರುಳುಗಳು ಹಿಂದೆ ಮುಂದೆ ಇದ್ದು, ಜೊತೆಗೆ ಒಗ್ಗೂಡಿಸಿ ಬಾಲ ಕಾಂಡಗಳ ಮೇಲೆ ಆಧಾರವನ್ನು ನೀಡುತ್ತದೆ.

Pittas ನವರಂಗಗಳು[ಬದಲಾಯಿಸಿ]

ಗಂಡು ದೇಹದ, ಸಣ್ಣ ಬಾಲದ, ಉದ್ದನೆ ಕಾಲಿನ ನೆಲವಾಸಿ ಹಕ್ಕಿ. ಹೊರರೂಪ ಹಲವಾರು ಹೊಳೆವ ಬಣ್ಣಗಳ ಸಂಗಮ.


Order: Passeriformes    Family: [[Pittidae]

Larks ನೆಲಗುಬ್ಬಿಗಳು[ಬದಲಾಯಿಸಿ]

Order: Passeriformes    Family: [[Alaudidae]


Swallows and Martins ಕವಲುತೋಕೆಗಳು ಮತ್ತು ಕಿರುತೋಕೆಗಳು[ಬದಲಾಯಿಸಿ]

Order: Passeriformes    Family: Hirundinidae


Shrikes ಕಲಿಂಗಗಳು[ಬದಲಾಯಿಸಿ]

Order: Passeriformes    Family: Laniidae


Old World Orioles ಹೊನ್ನಕ್ಕಿಗಳು[ಬದಲಾಯಿಸಿ]

Order: Passeriformes    Family: Oriolidae

Drongos ಕಾಜಾಣಗಳು[ಬದಲಾಯಿಸಿ]

Order: Passeriformes    Family: Dicruridae

WoodSwallows ಅಂಬರ ಕೀಚುಗಗಳು[ಬದಲಾಯಿಸಿ]

Order: Passeriformes    Family: Artamidae


Starlings ಕಬ್ಬಕ್ಕಿಗಳು[ಬದಲಾಯಿಸಿ]

Order: Passeriformes    Family: Sturnidae

Crows, Jays, Ravens and Magpies ಮಟಪಕ್ಷಿಗಳು ಮತ್ತು ಕಾಗೆಗಳು[ಬದಲಾಯಿಸಿ]

Order: Passeriformes    Family: Corvidae

Cuckoo-Shrikes ಕೋಗಿಲೆ ಕೀಚುಗಗಳು[ಬದಲಾಯಿಸಿ]

Order: Passeriformes    Family: Campephagidae

WoodShrikes ಅಡವಿಕೀಚುಗಗಳು[ಬದಲಾಯಿಸಿ]

Order: Passeriformes    Family: Vangidae

Ioras ಮಧುರಕಂಠಗಳು[ಬದಲಾಯಿಸಿ]

Order: Passeriformes    Family: Aegithinidae

Leafbirds ಎಲೆಹಕ್ಕಿಗಳು[ಬದಲಾಯಿಸಿ]

Fairy-Bluebirds ನೀಲಿ ಸಿಳ್ಳಾರಗಳು[ಬದಲಾಯಿಸಿ]

Order: Passeriformes    Family: Irenidae


Bulbuls ಪಿಕಳಾರಗಳು[ಬದಲಾಯಿಸಿ]

Order: Passeriformes    Family: Pycnonotidae

Babblers ಹರಟೆಮಲ್ಲಗಳು[ಬದಲಾಯಿಸಿ]

Order: Passeriformes    Family: Timaliidae

Yellow-eyed Babbler ಹಳದಿಕಣ್ಣಿನ ಹರಟೆಮಲ್ಲಗಳು[ಬದಲಾಯಿಸಿ]

Order: Passeriformes    Family: Paradoxornithidae

Puff-throated babbler ಚುಕ್ಕಿ ಹರಟೆಮಲ್ಲಗಳು[ಬದಲಾಯಿಸಿ]

Order: Passeriformes    Family: Pellorneidae

Laughingthrushes ಹರಟೆಮಲ್ಲ ಮತ್ತು ನಗೆಮಲ್ಲಗಳು[ಬದಲಾಯಿಸಿ]

Order: Passeriformes    Family: Leiothrichidae


Old World Flycatchers ನೊಣಹಿಡುಕಗಳು[ಬದಲಾಯಿಸಿ]

Order: Passeriformes    Family: Muscicapidae

Canary-Flycatchers ನೊಣಹಿಡುಕಗಳು[ಬದಲಾಯಿಸಿ]

Order: Passeriformes    Family: Stenostiridae

Fantails ಬೀಸಣಿಗೆ ನೊಣಹಿಡುಕಗಳು[ಬದಲಾಯಿಸಿ]

Order: Passeriformes    Family: Rhipiduridae

  • White-browed Fantail, Rhipidura aureola ಬಿಳಿಹುಬ್ಬಿನ ಬೀಸಣಿಗೆ ನೊಣಹಿಡುಕ
  • White-spotted Fantail , Rhipidura albogularis ಬಿಳಿಚುಕ್ಕೆಯ ಬೀಸಣಿಗೆ ನೊಣಹಿಡುಕ

Monarch Flycatchers ರಾಜಹಕ್ಕಿಗಳು[ಬದಲಾಯಿಸಿ]

Order: Passeriformes    Family: Monarchidae

Cisticolas and allies ಉಲಿಯಕ್ಕಿಗಳು[ಬದಲಾಯಿಸಿ]

Order: Passeriformes    Family: Cisticolidae

Grassbirds ಉಲಿಯಕ್ಕಿಗಳು[ಬದಲಾಯಿಸಿ]

Order: Passeriformes    Family: Locustellidae

Reed Warblers ಉಲಿಯಕ್ಕಿಗಳು[ಬದಲಾಯಿಸಿ]

Order: Passeriformes    Family: Acrocephalidae

Leaf Warblers ಎಲೆಉಲಿಯಕ್ಕಿಗಳು[ಬದಲಾಯಿಸಿ]

Order: Passeriformes    Family: Phylloscopidae

Sylvian Warblers ಉಲಿಯಕ್ಕಿಗಳು[ಬದಲಾಯಿಸಿ]

Order: Passeriformes    Family: Sylviidae

Thrushes and allies ನೆಲಸಿಳ್ಳಾರಗಳು[ಬದಲಾಯಿಸಿ]

Order: Passeriformes    Family: Turdidae

Titmice ಚೇಕಡಿಗಳು[ಬದಲಾಯಿಸಿ]

Order: Passeriformes    Family: Paridae

Nuthatches ಮರಗುಬ್ಬಿಗಳು[ಬದಲಾಯಿಸಿ]

Order: Passeriformes    Family: Sittidae

Wagtails and Pipits ಸಿಪಿಲೆಗಳು ಮತ್ತು ಪಿಪಿಳೀಕಗಳು[ಬದಲಾಯಿಸಿ]

Order: Passeriformes    Family: Motacillidae

Flowerpeckers ಬದನಿಕೆಗಳು[ಬದಲಾಯಿಸಿ]

Order: Passeriformes    Family: Dicaeidae

Sunbirds and Spiderhunters ಸೂರಕ್ಕಿಗಳು ಮತ್ತು ಬಾಳೆಗುಬ್ಬಿಗಳು[ಬದಲಾಯಿಸಿ]

Order: Passeriformes    Family: Nectariniidae

White-eyes ಬೆಳ್ಗಣ್ಣಗಳು[ಬದಲಾಯಿಸಿ]

Order: Passeriformes    Family: Zosteropidae

Sparrows ಗುಬ್ಬಚ್ಚಿಗಳು[ಬದಲಾಯಿಸಿ]

Order: Passeriformes    Family: Passeridae

Weavers and allies ಗೀಜಗಗಳು[ಬದಲಾಯಿಸಿ]

Order: Passeriformes    Family: Ploceidae

Waxbills and allies ರಾಟವಾಳಗಳು[ಬದಲಾಯಿಸಿ]

Order: Passeriformes    Family: Estrildidae

Siskins, Crossbills and allies ಗುಲಾಬಿಗುಬ್ಬಿಗಳು[ಬದಲಾಯಿಸಿ]

Order: Passeriformes    Family: Fringillidae

ಪರ್ವತವಾಸಿ. ಚಳಿಗಾಲದಲ್ಲಿ ವಲಸೆ ಬರುತ್ತದೆ. ಗಂಡು ಗುಲಾಬಿ ಅಥವ ಕೆಂಪು ಬಣ್ಣದ್ದು. ಹೆಣ್ಣು, ಅವಯಸ್ಕ ಹಕ್ಕಿಗಳು ಕಂದು ಮತ್ತು ಗೆರೆಗಳಿಂದಾವೃತ್ತ.

Buntings ಕಾಳುಗುಬ್ಬಿಗಳು[ಬದಲಾಯಿಸಿ]

Order: Passeriformes    Family: Emberizidae

ವಲಸೆ ಹಕ್ಕಿಗಳು. ಇವುಗಳಲ್ಲಿ ಮೂರು ಮಾತ್ರ ಪ್ರತಿವರುಷವೂ ಕರ್ನಾಟಕದಲ್ಲಿ ಚಳಿಗಾಲದಲ್ಲಿ ಕಾಣಸಿಗುತ್ತವೆ. ಆದರೆ ಮಿಕ್ಕವು ಅತಿ ಅಪರೂಪ. ಸಂತಾನ ಸಮಯದಲ್ಲಿ ಗಂಡುಗಳ ಮುಖದಲ್ಲಿನ ಗುರುತುಗಳು ಎದ್ದು ಕಾಣುತ್ತವೆ. ಹೆಣ್ಣು, ಅವಯಸ್ಕ ಮತ್ತು ಚಳಿಗಾಲದಲ್ಲಿ ಗಂಡು ಮಾಸಲು ಬಣ್ಣದ್ದಾಗಿದ್ದು ಗುರುತಿಸುವುದು ಕಠಿಣ.ಸಾಮಾನ್ಯವಾಗಿ ಒಣಬಯಲು ಪ್ರದೇಶದಲ್ಲಿ ಕಾಣಸಿಗುತ್ತದೆ.

  1. https://indianbirds.in/pdfs/IB_12_4_5_PraveenETAL_KarnatakaChecklist.pdf
  2. https://indianbirds.in/pdfs/IB_14_4_PraveenETAL_KarnatakaChecklistCorrections.pdf
  3. Praveen, J, Subramanya, S., Raj, V. M., 2022. A checklist of the birds of Karnataka, India (v4.0). Website: http://www.indianbirds.in/indian-states/ [Date of publication: 20 August 2022]
  4. ಡಾ. ಎಸ್ ವಿ ನರಸಿಂಹನ್.೨೦೦೮.ಕೊಡಗಿನ ಖಗರತ್ನಗಳು. ಪರಿಷ್ಕರಿಸಿದ ಹಕ್ಕಿಗಳ ಪರಿಶೀಲನಾ ಪಟ್ಟಿ ೨೦೨೨