ಕರ್ನಾಟಕದ ಪ್ರಮುಖ ಹಕ್ಕಿತಾಣಗಳು
ಕರ್ನಾಟಕದ ಪ್ರಮುಖ ಹಕ್ಕಿತಾಣಗಳು
[ಬದಲಾಯಿಸಿ]೧೯೯೯-೨೦೦೪ರ ಅವಧಿಯಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಬರ್ಡ್ ಲೈಫ್ ಇಂಟರ್ ನ್ಯಾಷನಲ್ ಸಂಸ್ಥೆಗಳು, ಹಕ್ಕಿ ಮತ್ತು ಅವುಗಳ ಸ್ವಾಭಾವಿಕ ನೆಲೆಗಳ ಪ್ರಮಾಣ ಮತ್ತು ಗುಣಮಟ್ಟ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ, ಅವುಗಳನ್ನು ಗುರುತಿಸಿ ಸೂಕ್ತ ನಿರ್ವಹಣೆ ಮಾಡುವ ಉದ್ದೇಶದಿಂದ, ಕೆಲವು ಮಾನದಂಡಗಳನ್ನು ಬಳಸಿ ಆದ್ಯತೆ ಮೇರೆಗೆ ಸಂರಕ್ಷಿಸಬೇಕಿರುವ ಭಾರತದ ಪ್ರಮುಖ ಹಕ್ಕಿತಾಣಗಳನ್ನು[೧] (ಇಂಪಾರ್ಟೆಂಟ್ ಬರ್ಡ್ ಏರಿಯಾ) ಪಟ್ಟಿ ಮಾಡಿದರು. ಮಾನದಂಡಗಳ ವಿಶೇಷತೆಯೆಂದರೆ ಅವಸಾನದ ಅಂಚಿನಲ್ಲಿರುವ ಹಕ್ಕಿಗಳಿಗೆ ನೆಲೆಯಾಗಿರುವ; ಅಧಿಕ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡಿರುವ; ಅಪರೂಪದ ಹಕ್ಕಿಗಳಿಗೆ ನೆಲೆಯಾಗಿರುವ ನಿತ್ಯ, ಅರೆ ನಿತ್ಯ, ತೇವಭರಿತ ಹರಿದ್ವರ್ಣ ಕಾಡು; ಹಿಮಾಲಯ ಮುಂತಾದ ವಿಶಿಷ್ಟ ಜೀವ ವ್ಯವಸ್ಥೆ; ನಿರ್ದಿಷ್ಟ ಪ್ರದೇಶಗಳಿಗಷ್ಟೇ ಬದುಕಲು ಸೀಮಿತಗೊಂಡಿರುವ ಹಕ್ಕಿಗಳಿರುವ ಪ್ರದೇಶ ಮುಂತಾದವು. ಭಾರತದಾದ್ಯಂತ ಸಾವಿರಕ್ಕೂ ಅಧಿಕ ಹಕ್ಕಿ ವೀಕ್ಷಕರು, ವಿಷಯ ಪಂಡಿತರು, ಪರಿಸರ ಮತ್ತು ಅರಣ್ಯ ಇಲಾಖೆಗಳು ಭಾಗಿಯಾಗಿ ೪೬೫ ಪ್ರಮುಖ ಹಕ್ಕಿ ತಾಣಗಳನ್ನು ದಾಖಲಿಸಿದರು. ಇದರಲ್ಲಿ ಕರ್ನಾಟಕದ ೩೭ ತಾಣಗಳು ಒಳಗೊಂಡಿವೆ. ಮುಂದೆ, ೨೦೧೬ರಲ್ಲಿ ಪರಿಷ್ಕರಿಸಲ್ಪಟ್ಟು ಭಾರತದಲ್ಲಿ ೫೪೪ ಮತ್ತು ಕರ್ನಾಟಕದಲ್ಲಿ ೪೧ ತಾಣಗಳಾಗಿವೆ. ಈ ತಾಣಗಳ ನಿಖರ ಸ್ಥಳಗಳ ನಕಾಶೆಯಲ್ಲಿ ಈ ಲಿಂಕ್ ಮೂಲಕ ನೋಡಬಹುದಾಗಿದೆ. [೨]. ಕರ್ನಾಟಕದಲ್ಲಿನ ಪ್ರಮುಖ ಹಕ್ಕಿತಾಣಗಳು ಈ ಕೆಳಗಿನಂತಿವೆ:
- ಆದಿಚುಂಚನಗಿರಿ ವನ್ಯಜೀವಿ ಅಭಯಾರಣ್ಯ
- ಅಣಶಿ ರಾಷ್ಟ್ರೀಯ ಉದ್ಯಾನವನ
- ಬಂಡೀಪುರ ರಾಷ್ಟ್ರೀಯ ಉದ್ಯಾನವನ
- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
- ಭದ್ರಾ ಹುಲಿ ಸಂರಕ್ಷಿತ ಪ್ರದೇಶ
- ಭೀಮಘಡ ವನ್ಯಜೀವಿ ಅಭಯಾರಣ್ಯ ಮತ್ತು ಕ್ಯಾಸಲ್ ರಾಕ್
- ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ
- ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
- ಕಾವೇರಿ ವನ್ಯಜೀವಿ ಅಭಯಾರಣ್ಯ
- ದಾಂಡೇಲಿ ವನ್ಯಜೀವಿ ಅಭಯಾರಣ್ಯ
- ಗುಡವಿ ವನ್ಯಜೀವಿ ಅಭಯಾರಣ್ಯ (ಪಕ್ಷಿಧಾಮ)
- ಹಂಪಿ ಮತ್ತು ದಾರೋಜಿ ಕರಡಿ ವನ್ಯಜೀವಿ ಅಭಯಾರಣ್ಯ
- ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯ
- ಕಾರಂಜಿ ಕೆರೆ
- ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್ ಗಿರಿಶ್ರೇಣಿಗಳು
- ಕೆಂಪುಹೊಳೆ ಮೀಸಲು ಅರಣ್ಯ
- ಕೊಕ್ಕರೆ ಬೆಳ್ಳೂರು ಸಂರಕ್ಷಣಾ ಮೀಸಲು ಪ್ರದೇಶ
- ಕೃಷ್ಣರಾಜಸಾಗರ ಜಲಾಶಯ
- ಕುದುರೆಮುಖ ರಾಷ್ಟ್ರೀಯ ಉದ್ಯಾನವನ
- ಕುಕ್ಕರಹಳ್ಳಿ ಕೆರೆ
- ಕುಂತೂರು-ಕಲ್ಲೂರು ಕೆರೆಗಳು
- ಲಿಂಗಾಂಬುಧಿ ಕೆರೆ
- ಮಾಗಡಿ ಮತ್ತು ಶೆಟ್ಟಿಕೆರೆ ಜೌಗುಪ್ರದೇಶ ಮಾಗಡಿ_ಪಕ್ಷಿಧಾಮ
- ಮೇಲುಕೋಟೆ ವನ್ಯಜೀವಿ ಅಭಯಾರಣ್ಯ
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
- ನಂದಿ ಬೆಟ್ಟ
- ನರಸಾಂಬುಧಿ ಕೆರೆ
- ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ
- ರಾಮನಗರ (ರಾಮದೇವರ ಬೆಟ್ಟ) ರಣಹದ್ದು ಸಂರಕ್ಷಣಾ ಮೀಸಲು ಪ್ರದೇಶ
- ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ
- ರಂಗನತಿಟ್ಟು ಪಕ್ಷಿಧಾಮ
- ಶರಾವತಿ ಕಣಿವೆ ವನ್ಯಜೀವಿ ಅಭಯಾರಣ್ಯ
- ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
- ಸೂಳೆಕೆರೆ, ಮಂಡ್ಯ
- ತಲಕಾವೇರಿ ವನ್ಯಜೀವಿ ಅಭಯಾರಣ್ಯ
- ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯ
- ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ
- ಹೆಸರಘಟ್ಟ ಕೆರೆ
- ಹೊಸಕೋಟೆ ಕೆರೆ
- ತಿಪ್ಪಗೊಂಡನಹಳ್ಳಿ ಜಲಾಶಯ
- ತುಂಗಭದ್ರ ಜಲಾಶಯ