ಕರ್ಣ (ಗುಹಿಲ)

ವಿಕಿಪೀಡಿಯ ಇಂದ
Jump to navigation Jump to search

ಕರ್ಣ (ಗುಹಿಲ): ೧೨ನೆಯ ಶತಮಾನದಲ್ಲಿ ಮೇವಾಡ ಅಥವಾ ಮೆದಪಾಟ ವನ್ನಾಳುತ್ತಿದ್ದ ಗುಹಿಲ ಮನೆತನದ ಒಬ್ಬ ದೊರೆ. ರಣಸಿಂಹ ಎಂಬುದು ಇವನ ಇನ್ನೊಂದು ಹೆಸರು. ಕರ್ಣನಿಗೆ ಮಹಾನ, ಕ್ಷೇಮಸಿಂಹ ಮತ್ತು ರಾಹಪ ಎಂಬ ಮೂವರು ಮಕ್ಕಳಿದ್ದರು. ಕ್ಷೇಮಸಿಂಹನ ವಂಶದವರು ರಾವಲ ಅಥವಾ ರಾಜಕುಲರೆಂದೂ ರಾಹಪನ ವಂಶಜರು ರಾವಲರ ಅಧೀನರಾಗಿ ಆಳುತ್ತಿದ್ದು, ರಾಣಾಗಳೆಂದೂ ಹೆಸರಾಂತರು. ಕರ್ಣನ ಅನಂತರ ಸಿಂಹಾಸನವನ್ನೇರಿದವ ಕ್ಷೇಮಸಿಂಹ. ಇವನ ಮಗ ಸಾಮಂತಸಿಂಹ 1171ರಲ್ಲಿ ಮೇವಾಡವನ್ನಾಳುತ್ತಿದ್ದನೆಂದು ತಿಳಿದುಬಂದಿದೆ. *