ಕರೆಂಟ್ ಅಕೌಂಟ್ ಡೆಫಿಸಿಟ್ (ಚಾಲ್ತಿ ಲೆಕ್ಕದ ಕೊರತೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found.

IMF ಡಾಟಾವನ್ನು ಆಧರಿಸಿದ ಕ್ಯುಮ್ಯುಲೇಟಿವ್ ಕರೆಂಟ್ ಅಕೌಂಟ್ ಬ್ಯಾಲೆನ್ಸ್ 1980-2008 (US$ ಶತಕೋಟಿಗಳು)

ಅರ್ಥಶಾಸ್ತ್ರ ದಲ್ಲಿ, ಚಾಲ್ತಿ ಲೆಕ್ಕ ವನ್ನು ಪಾವತಿಗಳ ಅಂತರ ದ ಎರಡು ಮುಖ್ಯ ಅಂಶಗಳಲ್ಲಿ ಒಂದೆಂದು, ಮತ್ತೊಂದು ಬಂಡವಾಳ ಖಾತೆ ಎಂದು ಪರಿಗಣಿಸಲಾಗಿದೆ. ಇದು ಆಮದು ರಫ್ತುಗಳ ಅಂತರ(ವಸ್ತುಗಳು ಹಾಗು ಸೇವೆಗಳ ರಫ್ತುಗಳಲ್ಲಿ ಆಮದನ್ನು ಕಳೆಯುವುದು), ನಿವ್ವಳ ಉತ್ಪಾದನಾ ಅಂಶಗಳ ಆದಾಯ (ಉದಾಹರಣೆಗೆ ಬಡ್ಡಿ ಹಾಗು ಲಾಭಾಂಶ) ಹಾಗು ನಿವ್ವಳ ವರ್ಗಾವಣೆ ಪಾವತಿಗಳು(ಉದಾಹರಣೆಗೆ ವಿದೇಶಿ ನೆರವು) ದ ಒಟ್ಟಾರೆ ಮೊತ್ತವೆಂದು ಹೇಳಬಹುದು.

ಚಾಲ್ತಿ ಲೆಕ್ಕ= ಆಮದು-ರಫ್ತುಗಳ ಅಂತರ + ವಿದೇಶದಿಂದ ಬಂದ ನಿವ್ವಳ ಉತ್ಪಾದನಾ ಅಂಶಗಳ ಆದಾಯ + ವಿದೇಶದಿಂದ ನಿವ್ವಳ ಏಕಪಕ್ಷೀಯ ವರ್ಗಾವಣೆಗಳು

ಒಂದು ರಾಷ್ಟ್ರದ ವಿದೇಶಿ ವ್ಯಾಪಾರದ ಸ್ವರೂಪದ ಎರಡು ಪ್ರಮುಖ ಮಾನದಂಡಗಳಲ್ಲಿ ಚಾಲ್ತಿ ಲೆಕ್ಕದ ಅಂತರವು ಒಂದಾಗಿದೆ (ಮತ್ತೊಂದು ನಿವ್ವಳ ಬಂಡವಾಳದ ಹೊರಹರಿವು).

ಒಂದು ಅನುಗುಣವಾದ ಮೊತ್ತದೊಂದಿಗೆ ಚಾಲ್ತಿ ಲೆಕ್ಕದ ಹೆಚ್ಚುವರಿ ಹಣವು ರಾಷ್ಟ್ರದ ನಿವ್ವಳ ವಿದೇಶಿ ಆಸ್ತಿಗಳನ್ನು ಹೆಚ್ಚಿಸಿದರೆ ಒಂದು ಚಾಲ್ತಿ ಲೆಕ್ಕದ ಕೊರತೆಯು ಈ ಸ್ಥಿತಿಯನ್ನು ವಿರುದ್ಧವಾಗಿಸುತ್ತದೆ. ಈ ಲೆಕ್ಕ ಗಣತಿಯಲ್ಲಿ ಸರಕಾರ ಹಾಗು ಖಾಸಗಿ ಹಣ ಪಾವತಿಗಳು ಎರಡೂ ಸಹ ಸೇರಿಕೊಂಡಿವೆ. ಇದನ್ನು ಚಾಲ್ತಿ ಲೆಕ್ಕವೆಂದು ಕರೆಯಲಾಗುತ್ತದೆ, ಏಕೆಂದರೆ ವಸ್ತುಗಳು ಹಾಗು ಸೇವೆಗಳನ್ನು ಸಾಮಾನ್ಯವಾಗಿ ಚಾಲ್ತಿಯ ಅವಧಿಯಲ್ಲಿ ಬಳಸಿಕೊಳ್ಳಲಾಗುತ್ತದೆ.[೧]

ಆಮದು-ರಫ್ತುಗಳ ಅಂತರವೆಂದರೆ, ರಾಷ್ಟ್ರದಿಂದ ರಫ್ತು ಮಾಡಲಾದ ಸರಕುಗಳು ಮತ್ತು ಸೇವೆಗಳು ಹಾಗು ಆಮದು ಮಾಡಿಕೊಳ್ಳಲಾದ ಸರಕುಗಳು ಹಾಗು ಸೇವೆಗಳ ನಡುವಿನ ಅಂತರ. ಇದರಲ್ಲಿ ಎಲ್ಲ ಹಣದ ವರ್ಗಾವಣೆಗಳು, ಬಂಡವಾಳ ಹೂಡಿಕೆಗಳು ಹಾಗು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಒಂದು ರಾಷ್ಟ್ರವು ರಫ್ತಿಗಿಂತ ಹೆಚ್ಚಾಗಿ ಆಮದನ್ನು ಮಾಡಿಕೊಳ್ಳುತ್ತಿದ್ದರೆ ಅಂತಹ ರಾಷ್ಟ್ರವು ವ್ಯಾಪಾರದಲ್ಲಿ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಬಹುದಾಗಿದೆ.

ಧನಾತ್ಮಕ ನಿವ್ವಳ ವಿದೇಶಿ ವ್ಯಾಪಾರವು ಸಾಧಾರಣವಾಗಿ ಚಾಲ್ತಿ ಲೆಕ್ಕದ ಹೆಚ್ಚುವರಿ ಗೆ ಕೊಡುಗೆ ನೀಡುತ್ತದೆ; ಋಣಾತ್ಮಕ ವಿದೇಶಿ ನಿವ್ವಳ ವ್ಯಾಪಾರವು ಸಾಮಾನ್ಯವಾಗಿ ಚಾಲ್ತಿ ಲೆಕ್ಕದ ಕೊರತೆ ಯನ್ನು ಉಂಟುಮಾಡುತ್ತದೆ. ಏಕೆಂದರೆ ರಫ್ತು, ಧನಾತ್ಮಕ ನಿವ್ವಳ ವ್ಯಾಪಾರವನ್ನು ಹುಟ್ಟುಹಾಕುತ್ತದೆ, ಹಾಗು ವ್ಯಾಪಾರದ ಅಂತರವು ವಿಶಿಷ್ಟವಾಗಿ ಚಾಲ್ತಿ ಲೆಕ್ಕದ ಅತ್ಯಂತ ದೊಡ್ಡ ಭಾಗವಾದ ಕಾರಣ, ಚಾಲ್ತಿ ಲೆಕ್ಕದ ಹೆಚ್ಚುವರಿಯು ಸಾಮಾನ್ಯವಾಗಿ ಧನಾತ್ಮಕ ನಿವ್ವಳ ರಫ್ತಿಗೆ ಸಂಬಂಧಿಸಿದೆ. ಈ ರೀತಿಯಾದ ಪರಿಸ್ಥಿತಿಗಳು ಮುಕ್ತ ಆರ್ಥಿಕ ನೀತಿಯನ್ನು ಹೊಂದಿರುವ ಆಸ್ಟ್ರೇಲಿಯದಂತಹ ರಾಷ್ಟ್ರಗಳಲ್ಲಿ ಸರಿಹೊಂದುವುದಿಲ್ಲ. ಏಕೆಂದರೆ ಇಲ್ಲಿ ರಾಷ್ಟ್ರದ ವ್ಯಾಪಾರ ಕೊರತೆಗಿಂತ ಆದಾಯದ ಕೊರತೆಯು ಅಧಿಕವಾಗಿದೆ[೨].

ನಿವ್ವಳ ಉತ್ಪಾದನಾ ಆದಾಯ ಅಥವಾ ಆದಾಯದ ಲೆಕ್ಕ, ಚಾಲ್ತಿ ಲೆಕ್ಕದ ಒಂದು ಉಪ-ಲೆಕ್ಕವನ್ನು, ಇದರಲ್ಲಿ ಸಾಮಾನ್ಯವಾಗಿ ಆದಾಯ ಪಾವತಿಗಳು(/೧) ಹೊರಹರಿವುಗಳಾಗಿ, ಹಾಗು {1}ಆದಾಯ ರಿಸೀಟ್ (ಸ್ವೀಕೃತಿಯಾದ ಹಣ)ಗಳನ್ನು ಒಳಹರಿವುಗಳ ಶೀರ್ಷಿಕೆಯಡಿಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಆದಾಯವೆಂಬುದು ವಿದೇಶದಲ್ಲಿ ಬಂಡವಾಳ ಹೂಡಿಕೆಯಿಂದ ಸ್ವೀಕೃತವಾದ ಹಣವನ್ನು ಸೂಚಿಸುತ್ತದೆ ಮಾತ್ರವಲ್ಲದೇ (ಗಮನಿಸಿ: ಹಣ ಹೂಡಿಕೆಯನ್ನು ಬಂಡವಾಳ ಖಾತೆಯಲ್ಲಿ ದಾಖಲಿಸಿದರೆ ಹಣ ಹೂಡಿಕೆಯಿಂದ ಬಂದ ಆದಾಯವನ್ನು ಚಾಲ್ತಿ ಲೆಕ್ಕದಲ್ಲಿ ದಾಖಲಿಸಲಾಗುತ್ತದೆ) ಇದು ವಿದೇಶದಲ್ಲಿ ಕೆಲಸದಲ್ಲಿರುವ ವ್ಯಕ್ತಿಗಳು ಸ್ವದೇಶದಲ್ಲಿರುವ ತಮ್ಮ ತಮ್ಮ ಕುಟುಂಬಗಳಿಗೆ ಕಳಿಸುವ ಹಣ ರಿಮಿಟನ್ಸ್‌ಎಂದು ಹೆಸರಾದ ಹಣದ ರವಾನೆಯನ್ನು ಕೂಡ ಸೂಚಿಸುತ್ತದೆ.

ಆದಾಯದ ಖಾತೆಯು ಋಣಾತ್ಮಕವಾಗಿದ್ದರೆ, ರಾಷ್ಟ್ರವು ಬಡ್ಡಿ, ಲಾಭಾಂಶ ಮುಂತಾದವುಗಳಿಗಿಂತ ತೆಗೆದುಕೊಳ್ಳುವ ಹಣಕ್ಕಿಂತ ಅಧಿಕವಾಗಿ ಪಾವತಿ ಮಾಡುತ್ತಿರುತ್ತದೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ ನಿವ್ವಳ ಆದಾಯವು ತ್ವರಿತವಾಗಿ ಕ್ಷೀಣಿಸುತ್ತಿದೆ. ಇದು ಯುನೈಟೆಡ್ ಸ್ಟೇಟ್ಸ್ ಡಾಲರ್ ನ ಬೆಲೆಯನ್ನು ಇತರ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಆದಾಯ ಪಾವತಿಗಳು ಹಾಗು ಸ್ವೀಕೃತಿಗಳು ಸ್ಥೂಲವಾಗಿ ಸಮನಾಗಿರುವ ಹಂತದಲ್ಲಿ ಮಾರುಕಟ್ಟೆಯು ನಿರ್ಧರಿಸಲು ಅವಕಾಶ ಕಲ್ಪಿಸಿರುವ ಕಾರಣದಿಂದ ಉಂಟಾಗಿದೆ.[ಸೂಕ್ತ ಉಲ್ಲೇಖನ ಬೇಕು] ಕೆನಡಾದ ಆದಾಯ ಪಾವತಿಗಳು ಹಾಗು ಸ್ವೀಕೃತಿಗಳ ಅಂತರವೂ ಸಹ ತ್ವರಿತವಾಗಿ ಕ್ಷೀಣಿಸುತ್ತಿದೆ, ಏಕೆಂದರೆ ೧೯೯೮ರಲ್ಲಿ ಅದರ ಕೇಂದ್ರ ಬ್ಯಾಂಕ್ ಕೆನಡಿಯನ್ ಡಾಲರ್ ನ ವಿದೇಶಿ ವಿನಿಮಯದಲ್ಲಿ ಮಧ್ಯ ಪ್ರವೇಶಿಸದಂತಹ ಕಟ್ಟುನಿಟ್ಟಿನ ನೀತಿಯನ್ನು ಆರಂಭಿಸಿತು.[೩] ಆದಾಯದ ಖಾತೆಯ ವಿವಿಧ ಉಪವರ್ಗಗಳು ಬಂಡವಾಳ ಖಾತೆಯ ನಿರ್ದಿಷ್ಟ ಆಯಾ ಉಪವರ್ಗಗಳ ಜೊತೆಗೆ ಸಂಬಂಧವನ್ನು ಹೊಂದಿದೆ.ಏಕೆಂದರೆ ಆದಾಯವು ಸಾಮಾನ್ಯವಾಗಿ ಬಂಡವಾಳ ಒಡೆತನ(ಆಸ್ತಿಗಳು)ದ ಉತ್ಪಾದನಾ ಅಂಶಗಳ ಪಾವತಿಗಳಿಂದ ಅಥವಾ ವಿದೇಶದ ಋಣಾತ್ಮಕ ಬಂಡವಾಳ(ಸಾಲಗಳು)ದಿಂದ ರಚಿತವಾಗಿದೆ. ಬಂಡವಾಳ ಖಾತೆಯಿಂದ, ಅರ್ಥಶಾಸ್ತ್ರಜ್ಞರು ಹಾಗು ಕೇಂದ್ರ ಬ್ಯಾಂಕ್‌ಗಳು ಬಂಡವಾಳದ ವಿವಿಧ ವಿಧಗಳ ಬಂಡವಾಳದಿಂದ ಸೂಚಿತ ದರಗಳ ಲಾಭಗಳನ್ನು ನಿರ್ಧರಿಸುತ್ತವೆ. ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್, ಅದರ ಬಂಡವಾಳದ ಒಡೆತನವನ್ನು ಹೊಂದಿರುವ ವಿದೇಶಿಗರಿಗಿಂತ ಗಮನಾರ್ಹವಾಗಿ ವಿದೇಶಿ ಬಂಡವಾಳದಿಂದ ದೊಡ್ಡ ಪ್ರಮಾಣದ ಲಾಭದ ದರವನ್ನು ಸಂಗ್ರಹಿಸುತ್ತವೆ.

ಪಾವತಿಗಳ ಅಂತರದ ಸಾಂಪ್ರದಾಯಿಕ ಕರಣಿಕಶಾಸ್ತ್ರದಲ್ಲಿ, ಚಾಲ್ತಿ ಲೆಕ್ಕವು ನಿವ್ವಳ ವಿದೇಶ ಆಸ್ತಿಗಳ ಬದಲಾವಣೆಗೆ ಸಮನಾಗಿದೆ. ಒಂದು ಚಾಲ್ತಿ ಲೆಕ್ಕದ ಕೊರತೆಯು ನಿವ್ವಳ ವಿದೇಶಿ ಸಂಪತ್ತಿನ ಒಂದು ಸಮಾನಾಂತರ ಇಳಿಕೆಯನ್ನು ಸೂಚಿಸುತ್ತದೆ.

ಚಾಲ್ತಿ ಲೆಕ್ಕ = ನಿವ್ವಳ ವಿದೇಶಿ ಆಸ್ತಿಗಳಲ್ಲಿ ಮಾರ್ಪಾಡು

ಚಾಲ್ತಿ ಲೆಕ್ಕದ ಕೊರತೆಗಳನ್ನು ತಗ್ಗಿಸುವುದು[ಬದಲಾಯಿಸಿ]

ಒಂದು ಗಣನೀಯ ಪ್ರಮಾಣದ ಚಾಲ್ತಿ ಲೆಕ್ಕದ ಕೊರತೆಯನ್ನು ತಗ್ಗಿಸುವ ಕ್ರಮವು ಸಾಮಾನ್ಯವಾಗಿ ಅಧಿಕ ರಫ್ತು (ಸರಕುಗಳು ದೇಶದಿಂದ ಆಚೆಗೆ ಅಂದರೆ ವಿದೇಶಿ ರಾಷ್ಟ್ರಗ ಳಿಗೆ ಪ್ರವೇಶಿಸುವುದು) ಅಥವಾ ಆಮದಿನಲ್ಲಿ ಇಳಿಕೆ(ಒಂದು ರಾಷ್ಟ್ರಕ್ಕೆ ಮತ್ತೊಂದು ರಾಷ್ಟ್ರದಿಂದ ಸರಕುಗಳು ಬರುವುದು)ಯನ್ನು ಒಳಗೊಂಡಿರುತ್ತದೆ. ಇದನ್ನು ಸಾಧಾರಣವಾಗಿ ಆಮದಿನ ನೇರ ನಿರ್ಬಂಧಗಳು,ಕೋಟಾಗಳು, ಅಥವಾ ಸುಂಕಗಳ ಮೂಲಕ(ಆದಾಗ್ಯೂ ಇವುಗಳು ಸಹ ಪರೋಕ್ಷವಾಗಿ ರಫ್ತನ್ನು ಸೀಮಿತಗೊಳಿಸಬಹುದು), ಅಥವಾ ಸಹಾಯಧನ ರಫ್ತುಗಳ ಮೂಲಕ ಸಾಧಿಸಬಹುದಾಗಿದೆ. ವಿದೇಶಿ ಖರೀದಿದಾರರಿಗೆ ರಫ್ತುಗಳನ್ನು ಅಗ್ಗವಾಗಿಸಲು ವಿನಿಮಯ ದರದ ಮೇಲೆ ಪ್ರಭಾವ ಬೀರಿದರೆ, ಅದು ಪರೋಕ್ಷವಾಗಿ ಪಾವತಿಗಳ ಅಂತರವನ್ನು ಹೆಚ್ಚಿಸುತ್ತದೆ. ಇದನ್ನು ಮುಖ್ಯವಾಗಿ ದೇಶೀಯ ಕರೆನ್ಸಿಯ ಮೌಲ್ಯವನ್ನು ತಗ್ಗಿಸುವ ಮೂಲಕ ಸಾಧಿಸಲಾಗುತ್ತದೆ. ದೇಶಿಯ ಸರಬರಾಜುದಾರರಿಗೆ ನೆರವು ನೀಡುವ ನಿಟ್ಟಿನಲ್ಲಿ ಸರಕಾರಿ ವೆಚ್ಚವನ್ನು ಸರಿಹೊಂದಿಸುವುದು ಸಹ ಪರಿಣಾಮಕಾರಿ ವಿಧಾನವಾಗಿದೆ.

ಒಂದು ಚಾಲ್ತಿ ಲೆಕ್ಕದ ಕೊರತೆಯನ್ನು ಕಡಿಮೆ ಮಾಡಲು ಕಡಿಮೆ ಸ್ಪಷ್ಟತೆಯನ್ನು ಹೊಂದಿರುವ, ಆದರೆ ಹೆಚ್ಚಿನ ಪರಿಣಾಮಕಾರಿ ವಿಧಾನಗಳಲ್ಲಿ, ದೇಶಿಯ ಉಳಿತಾಯಗಳನ್ನು ಹೆಚ್ಚಿಸುವ ಕ್ರಮಗಳು(ಅಥವಾ ತಗ್ಗಿದ ದೇಶಿಯ ಸಾಲ), ಕೇಂದ್ರ ಸರ್ಕಾರದ ಸಾಲ ಪಡೆಯುವ ನೀತಿಯಲ್ಲಿ ಇಳಿಕೆಯು ಸೇರಿದೆ.

ಪಿಚ್ಫೋರ್ಡ್ ಸಿದ್ಧಾಂತ[ಬದಲಾಯಿಸಿ]

ಚಾಲ್ತಿ ಲೆಕ್ಕದ ಕೊರತೆಯು ಸದಾ ಕಾಲದ ಒಂದು ಸಮಸ್ಯೆಯಲ್ಲ ಎಂಬುದನ್ನು ಗಮನಿಸಬೇಕು. ಪಿಚ್ಫೋರ್ಡ್ ಸಿದ್ದಾಂತವು, ಒಂದು ಚಾಲ್ತಿ ಲೆಕ್ಕದ ಕೊರತೆಯು ಖಾಸಗಿ ಕ್ಷೇತ್ರದಿಂದ ಪ್ರೇರಣೆ ಹೊಂದಿದ್ದರೆ ಅದು ಹೆಚ್ಚಿನ ಪರಿಗಣನೆಗೆ ಒಳಪಡುವುದಿಲ್ಲ ಎಂದು ಉಲ್ಲೇಖಿಸುತ್ತದೆ. ಕೆಲವರು, ಈ ಸಿದ್ಧಾಂತವು ಆಸ್ಟ್ರೇಲಿಯದ ಆರ್ಥಿಕ ನೀತಿಗೆ ಸರಿಹೊಂದುತ್ತದೆಂದು ಅಭಿಪ್ರಾಯಪಡುತ್ತಾರೆ. ಈ ರಾಷ್ಟ್ರವು ಸತತವಾದ ಒಂದು ಚಾಲ್ತಿ ಲೆಕ್ಕದ ಕೊರತೆಯನ್ನು ಅನುಭವಿಸುತ್ತಿದ್ದರೂ ಸಹ ಕಳೆದ ೧೮ ವರ್ಷಗಳಿಂದ ಆರ್ಥಿಕ ಅಭಿವೃದ್ಧಿಯನ್ನು ಕಂಡಿದೆ(೧೯೯೧-೨೦೦೯). ಇದು ವಿದೇಶಿ ಹೂಡಿಕೆಯನ್ನು ಸತತವಾಗಿ ಸೆಳೆದುಕೊಂಡ ಪರಿಣಾಮವಾಗಿದೆ(ಸುಮಾರು ೬೦%ನಷ್ಟು ಸಾಲ ಭದ್ರತಾಪತ್ರಗಳ ರೂಪದಲ್ಲಿದೆ), ಇದು ಒಂದು ಗಮನಾರ್ಹವಾದ ಆದಾಯ ಕೊರತೆಯ ಹುಟ್ಟಿಗೆ ಕಾರಣವಾಗುತ್ತದೆ. ಮತ್ತೆ ಕೆಲವರು ಆಸ್ಟ್ರೇಲಿಯ ಒಂದು ಗಣನೀಯ ಪ್ರಮಾಣದಲ್ಲಿ ವಿದೇಶಿ ಸಾಲವನ್ನು ಸಂಗ್ರಹಿಸುತ್ತಿದೆ. ಇದು ವಿಶೇಷವಾಗಿ ಬಡ್ಡಿ ದರವು ಅಧಿಕಗೊಂಡರೆ ಇದು ಸಮಸ್ಯೆಗೆ ದಾರಿ ಮಾಡಿಕೊಡಬಹುದು ಎಂದು ವಾದಿಸುತ್ತಾರೆ. ಚಾಲ್ತಿ ಲೆಕ್ಕದಲ್ಲಿ ಒಂದು ಕೊರತೆಯು, ರಾಷ್ಟ್ರವು ನಿವ್ವಳ ಬಂಡವಾಳದ ಆಮದುಗಾರ ಎಂಬುದನ್ನು ಸಹ ಸೂಚಿಸುತ್ತದೆ. ವಿದೇಶಿ ನೆರವು, ಚಾಲ್ತಿ ಲೆಕ್ಕದ ಒಂದು ಭಾಗವಾಗಿದೆ.

ಪಾವತಿ ಅಂತರಗಳ ಪರಸ್ಪರ ಸಂಬಂಧಗಳು[ಬದಲಾಯಿಸಿ]

ಅಧಿಕೃತ ಮೀಸಲುಗಳಲ್ಲಿ ಬದಲಾವಣೆಗಳಿಲ್ಲದೇ, ಚಾಲ್ತಿ ಲೆಕ್ಕವು ಬಂಡವಾಳದ ಹಾಗು ಹಣಕಾಸಿನ ಲೆಕ್ಕಗಳ ಒಟ್ಟು ಮೊತ್ತದ ಪ್ರತಿಬಿಂಬವಾಗಿದೆ. ಇದಕ್ಕೆ ಒಬ್ಬ ವ್ಯಕ್ತಿಈ ರೀತಿಯಾಗಿ ಪ್ರಶ್ನಿಸಬಹುದು: ಚಾಲ್ತಿ ಲೆಕ್ಕವು ಬಂಡವಾಳ ಹಾಗು ಹಣಕಾಸಿನ ಲೆಕ್ಕದಿಂದ ಪ್ರೇರಿತವಾಗಿದೆಯೇ ಅಥವಾ ಅದಕ್ಕೆ ವಿರುದ್ಧವಾಗಿದೆಯೇ? ಒಂದು ಸಾಂಪ್ರದಾಯಿಕ ಪ್ರತಿಕ್ರಿಯೆಯಲ್ಲಿ, ಚಾಲ್ತಿ ಲೆಕ್ಕವು ಒಂದು ಪ್ರಮುಖವಾದ ಸಾಂದರ್ಭಿಕ ಅಂಶ. ಇದರಲ್ಲಿ ಬಂಡವಾಳ ಹಾಗು ಹಣಕಾಸಿನ ಲೆಕ್ಕಗಳು ಕೇವಲ ಕೋತಾಗೆ ಹಣಕಾಸು ಪೂರೈಕೆ ಮಾಡುವುದು ಅಥವಾ ಹೆಚ್ಚುವರಿ ಫಲವಾಗಿ ಉದ್ಭವಿಸಿದ ಬಂಡವಾಳಗಳ ಹೂಡಿಕೆ ಎಂದು ಸರಳವಾಗಿ ಬಿಂಬಿಸುತ್ತದೆ. ಆದಾಗ್ಯೂ, ಇತ್ತೀಚೆಗೆ ಕೆಲವು ವೀಕ್ಷಕರು, ಕೆಲವು ಪರಿಸ್ಥಿತಿಗಳಲ್ಲಿ, ವಿರುದ್ಧವಾದ ಸಾಂದರ್ಭಿಕ ಸಂಬಂಧಗಳು ಪ್ರಾಮುಖ್ಯತೆ ಪಡೆಯುತ್ತದೆಂದು ಸೂಚಿಸುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಯುನೈಟೆಡ್ ಸ್ಟೇಟ್ಸ್ ನ ಚಾಲ್ತಿ ಲೆಕ್ಕದ ಕೊರತೆಯು, U.S. ಆಸ್ತಿಗಳನ್ನು ಗಳಿಸಿಕೊಳ್ಳುವ ಉದ್ದೇಶದಿಂದ ಅಂತಾರಾಷ್ಟ್ರೀಯ ಹೂಡಿಕೆದಾರರ ಇಚ್ಛೆಯಿಂದ ಪ್ರೇರಿತವಾಗಿದೆಯೆಂದು ವಿವಾದಾಸ್ಪದವಾಗಿ ಸೂಚಿಸಲಾಗಿದೆ (ಕೆಳಗೆ ನೀಡಲಾದ ಕೊಂಡಿಗಳಲ್ಲಿ ಬೆನ್ ಬೇರ್ನಂಕೆ, ವಿಲ್ಲಿಯಮ್ ಪೂಲೇಯನ್ನು ನೋಡಿ). ಆದಾಗ್ಯೂ, ಚಾಲ್ತಿ ಲೆಕ್ಕವು ಒಂದು ಪರಿಣಾಮ ಉಂಟು ಮಾಡುವ ಅಂಶವೆಂಬ ಪ್ರಮುಖ ದೃಷ್ಟಿಕೋನವು ನಿಸ್ಸಂಶಯವಾಗಿ ಉಳಿಯುತ್ತದೆ ಹಾಗು ಧನಾತ್ಮಕ ಹಣಕಾಸಿನ ಲೆಕ್ಕವು, ರಾಷ್ಟ್ರದ ಚಾಲ್ತಿ ಲೆಕ್ಕದ ಕೊರತೆಗೆ ಹಣ ಹೂಡಿಕೆಯ ಅಗತ್ಯತೆಯನ್ನು ಪ್ರತಿಬಿಂಬಿಸುತ್ತದೆ.

U.S. ಲೆಕ್ಕದ ಕೊರತೆಗಳು[ಬದಲಾಯಿಸಿ]

ಕಳೆದ ೧೯೮೯ರಿಂದೀಚೆಗೆ, ಯುನೈಟೆಡ್ ಸ್ಟೇಟ್ಸ್ ನಲ್ಲಿನ ಚಾಲ್ತಿ ಲೆಕ್ಕದ ಕೊರತೆಯು ದೊಡ್ಡ ಮಟ್ಟದಲ್ಲಿ ಅಧಿಕಗೊಳ್ಳುವುದರ ಜೊತೆಗೆ ೨೦೦೬ರಲ್ಲಿ GDPಯ ೭%ನಷ್ಟು ಸಮೀಪಕ್ಕೆ ಮುಟ್ಟಿತ್ತು. ಇದು ಶೈಕ್ಷಣಿಕ ಹಾಗು ಯೋಜನಾ ವಲಯದಲ್ಲಿ ಹೆಚ್ಚಿನ ಕಾಳಜಿಗೆ ದಾರಿ ಮಾಡಿಕೊಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಆದಾಗ್ಯೂ, ಹೊಸ ಸಾಕ್ಷ್ಯಾಧಾರಗಳು, U.S. ಚಾಲ್ತಿ ಲೆಕ್ಕದ ಕೊರತೆಗಳನ್ನು ಧನಾತ್ಮಕ ಮೌಲ್ಯಮಾಪನ ಪರಿಣಾಮಗಳು ತಗ್ಗಿಸುತ್ತವೆ ಎಂದು ಸೂಚಿಸುತ್ತದೆ.[೪] ಅದೆಂದರೆ, ವಿದೇಶಿ ಹೂಡಿಕೆದಾರರ ದೇಶಿಯ ಆಸ್ತಿಗಳಿಗೆ ಹೋಲಿಸಿದರೆ ವಿದೇಶದಲ್ಲಿ U.S. ಆಸ್ತಿಗಳು ಹೆಚ್ಚಿನ ಮೌಲ್ಯವನ್ನು ಗಳಿಸುತ್ತಿದೆ. ಹೀಗಾಗಿ U.S.ನ ನಿವ್ವಳ ವಿದೇಶಿ ಆಸ್ತಿಗಳು, ಚಾಲ್ತಿ ಲೆಕ್ಕದ ಕೊರತೆಗೆ ಹೋಲಿಸಿದರೆ ಕ್ಷೀಣಿಸುತ್ತಿಲ್ಲ. ಈ ರೀತಿಯಾದ ಧನಾತ್ಮಕ ಮೌಲ್ಯಮಾಪನ ಪರಿಣಾಮವನ್ನು ಇತ್ತೀಚಿನ ಒಂದು ಅನುಭವವು ಮಾರ್ಪಡಿಸಿತು, ಆದಾಗ್ಯೂ, ೨೦೦೮ರಲ್ಲಿ USನ ನಿವ್ವಳ ವಿದೇಶಿ ಆಸ್ತಿಪಾಸ್ತಿಯ ಸ್ಥಿತಿಯು ಎರಡು ಸಾವಿರ ಕೋಟಿ ಡಾಲರ್‌ಗಳಿಗೂ ಹೆಚ್ಚು ಕುಂದುಂಟಾಯಿತು.[೫] ಇದಕ್ಕೆ ಮುಖ್ಯ ಕಾರಣವೆಂದರೆ, ದೇಶಿಯ ಆಸ್ತಿಗಳ ವಿದೇಶಿ ಒಡೆತನಕ್ಕೆ(ದೊಡ್ಡ ಪ್ರಮಾಣದ US ಭದ್ರತಾಪತ್ರಗಳು ಹಾಗು ಸಾಲಪತ್ರಗಳು) ಹೋಲಿಸಿದರೆ ವಿದೇಶಿ ಆಸ್ತಿಗಳ ದೇಶಿಯ ಒಡೆತನದ ಕಡಿಮೆ ಮಟ್ಟದ ಪ್ರದರ್ಶನ(ದೊಡ್ಡ ಪ್ರಮಾಣದ ವಿದೇಶಿ ಈಕ್ವಿಟಿಗಳು).

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಇಕಲಾಜಿಕಲ್ ಇಕನಾಮಿಕ್ಸ್: ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್ಸ್; ಹೆರ್ಮನ್ E. ಡಾಲಿ, ಜೋಶುವ ಫಾರ್ಲೆಯ್; ಐಲ್ಯಾಂಡ್ ಪ್ರೆಸ್, ೨೦೦೩
  2. "Trade deficit the key to avoiding debt trap". Sydney Morning Herald. 4 June 2005. Retrieved 24 May 2010.
  3. "ಬ್ಯಾಂಕ್ ಆಫ್ ಕೆನಡಾ - ಇಂಟರ್ವೆಂಶನ್ ಇನ್ ದಿ ಎಕ್ಸ್ಚೇಂಜ್ ಮಾರ್ಕೆಟ್". Archived from the original on 2010-10-30. Retrieved 2010-07-30.
  4. ಕರೆಂಟ್ ಅಕೌಂಟ್ ಸಸ್ಟೈನಬಿಲಿಟಿ ಅಂಡ್ ರಿಲೇಟಿವ್ ರಿಲಯಬಿಲಿಟಿ
  5. "US ನೆಟ್ ಫಾರಿನ್ ಅಸ್ಸೆಟ್ಸ್". Archived from the original on 2012-02-24. Retrieved 2021-08-09.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. REDIRECT Template:International trade

'