ಕರುಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Central Anatolia during the karum-period

ಕರುಂ: ಅಸ್ಸೀರಿಯಕ್ಕೂ ಆನಟೋಲಿಯದ ನಗರಗಳಿಗೂ ನಡುವಣ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ವಾಣಿಜ್ಯ ಸಂಸ್ಥೆ. ಸರಕುಗಳ ಸಾಗಣೆ, ಹಾದಿಯಲ್ಲಿ ಅವುಗಳ ರಕ್ಷಣೆ, ವರ್ತಕರಿಗೆ ಬರಬೇಕಾದ ಬಾಕಿಗಳ ಮೇಲ್ವಿಚಾರಣೆ-ಇವು ಈ ಸಂಸ್ಥೆಯ ಮುಖ್ಯ ಹೊಣೆಗಳಾಗಿದ್ದುವು. ನಗದು ಹಣ ರವಾನೆಯ ಅಪಾಯಗಳನ್ನು ತಪ್ಪಿಸಲು ಉದ್ದರಿ ಪತ್ರದ ಸರಳ ವ್ಯವಸ್ಥೆಯೊಂದನ್ನೂ ಇದು ನಿರ್ವಹಿಸುತ್ತಿತ್ತು. ಬೆಲೆಗಳ ನಿಗದಿ, ವ್ಯಾಪಾರ ಸಂಬಂಧವಾದ ವ್ಯಾಜ್ಯಗಳ ತೀರ್ಮಾನ-ಇವು ಸಹ ಇದರ ಪರಿಮಿತಿಗೊಳಪಟ್ಟಿತ್ತು. ಸಾಲಕ್ಕೆ ಅಗತ್ಯವಾದ ಆಧಾರಗಳನ್ನು ದೊರಕಿಸಿ ಕೊಡುವ, ಸಾಲ ತೀರಿಸಲು ಋಣಿಗೆ ಶಕ್ತಿಯುಂಟೇ ಎಂಬುದನ್ನು ಪರಿಶೀಲಿಸುವ ಹೊಣೆಯೂ ಈ ಸಂಸ್ಥೆಯದಾಗಿತ್ತು.

Letter from Assyria to karum Kanesh concerning the trade in precious metals. 1850–1700 BC. Walters Museum (click on image for more info)

ಸಂಘಟನೆ[ಬದಲಾಯಿಸಿ]

Trade patterns of karū

ಈ ಸಂಸ್ಥೆಯ ಮುಖ್ಯಾಧಿಕಾರಿಗೆ ಲಿಮ್ಮು ಎಂದು ಹೆಸರು. ಅವನ ಅಧಿಕಾರಾವಧಿ ಒಂದು ವರ್ಷ. ಪ್ರತಿಯೊಬ್ಬ ಲಿಮ್ಮುವೂ ಯಾವ ವರ್ಷ ಅಧಿಕಾರದಲ್ಲಿದ್ದನೋ ಆ ವರ್ಷಕ್ಕೆ ಅನಂತರ ಆತನ ಹೆಸರನ್ನೇ ಇಡುವುದು ಅಸ್ಸೀರಿಯದ ಸಂಪ್ರದಾಯವಾಗಿತ್ತು. ಆನಟೋಲಿಯದ ಒಂದು ನಗರದಲ್ಲಿ ಲಿಮ್ಮುವಾಗಿ ಅಧಿಕಾರ ನಡೆಸಿದವರ ಪೈಕಿ 80 ರಿಂದ 100ರ ವರೆಗೆ ಹೆಸರುಗಳನ್ನು ಗುರುತಿಸುವುದು ಸಾಧ್ಯವಾಗಿದೆ. ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಐಹೊಳೆಯಿಂದ ‘ಅಯ್ಯಾವೊಳೆ ಐನೂರ್ವರು’ ಎಂಬ ವೃತ್ತಿ ಸಂಘ ಈ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಇಲ್ಲಿ ನೆನೆಯಬಹುದು.

"https://kn.wikipedia.org/w/index.php?title=ಕರುಂ&oldid=636750" ಇಂದ ಪಡೆಯಲ್ಪಟ್ಟಿದೆ