ಕರತೆಪೆ

ವಿಕಿಪೀಡಿಯ ಇಂದ
Jump to navigation Jump to search

ಕರತೆಪೆ : ಅನಟೋಲಿಯದ ಅಡನಾ ಪ್ರಾಂತ್ಯಕ್ಕೆ ಸೇರಿದ ಕರತೆಪೆಯಲ್ಲಿ ಹಿಟ್ಟೈಟರ ಸಂಸ್ಕೃತಿಗೆ ಸೇರಿದ ಬಹಳ ಮುಖ್ಯವಾದ ಕೆಲವು ಅವಶೇಷಗಳು ಬೆಳಕಿಗೆ ಬಂದಿವೆ. ಈ ಅವಶೇಷಗಳನ್ನು ತಾತ್ಕಾಲಿಕವಾಗಿ ಪ್ರ.ಶ.ಪು. 8ನೆಯ ಶತಮಾನಕ್ಕೆ ನಿರ್ದೇಶಿಸಬಹುದಾಗಿದೆ. 1945ರ ವಸಂತದಲ್ಲಿ ಇಸ್ತಾನ್ ಬುಲ್ ವಿಶ್ವವಿದ್ಯಾಲಯದ ಬಾಸ್ಸರ್ಟ್ ಮತ್ತು ಕ್ಯಾಂಬಲ್ರವರು ಕಡಿರ್ಲಿಯ ಉಪಾಧ್ಯಾಯನೊಬ್ಬನ ನಿರ್ದೇಶನದ ಮೇರೆಗೆ ಈ ನೆಲೆಯಲ್ಲಿನ ಅವಶೇಷಗಳನ್ನು ದರ್ಶಿಸಿ 1947ರ ಅನಂತರ ದೀರ್ಘಕಾಲದವರೆಗೂ ಇಲ್ಲಿನ ಅವಶೇಷಗಳನ್ನು ಸಂಶೋಧಿಸಿದರು. ಪ್ರ.ಶ್ರ.ಪು. 8ನೆಯ ಶತಮಾನದಲ್ಲಿ ಇಲ್ಲಿನ ಬೆಟ್ಟದ ಸುತ್ತ 5 ಪಾಶರ್ವ್‌ಗಳಿದ್ದ ಮತ್ತು 28 ಆಯಾಕಾರದ ಕೊತ್ತಳಗಳನ್ನು ಹೊಂದಿದ್ದ ಕೋಟೆಯನ್ನು ನಿರ್ಮಿಸಲಾಗಿತ್ತು. ಈ ಕೋಟೆಗೆ ಒಂದು ಮೇಲಿನ ಮತ್ತೊಂದು ಕೆಳಗಣ ಪ್ರದೇಶ ದ್ವಾರಗಳಿದ್ದವು. ಈ ಪ್ರವೇಶದ್ವಾರಗಳ ಎರಡೂ ಪಾಶರ್ವ್‌ಗಳಲ್ಲೂ ಮೂರ್ತಿಶಿಲ್ಪಗಳಿದ್ದ ಮತ್ತು ಶಾಸನಗಳಿದ್ದ ಕಲ್ಲು ಚಪ್ಪಡಿಗಳನ್ನು ಉಪಯೋಗಿಸಲಾಗಿತ್ತು. ಈ ಕೆತ್ತನೆಗಳು ಸಾಂಕೇತಿಕತೆಯಿಂದ ಕೂಡಿದ್ದ ವಿಕಟ ಚಿತ್ರಗಳಾಗಿದ್ದು ಕಲಾದೃಷ್ಟಿಯಿಂದಲೂ ಕೆಳಮಟ್ಟದವುಗಳಾಗಿದ್ದರೂ ಜನಜೀವನದ ನೈಜ ಚಿತ್ರವನ್ನೊದಗಿಸುವುದರಿಂದ ಮತ್ತು ಮತೀಯ ಧಾರ್ಮಿಕ ದೃಶ್ಯಗಳನ್ನೊಳಗೊಂಡಿರುವುದರಿಂದ ಐತಿಹಾಸಿಕವಾಗಿ ಬಹಳ ಮಹತ್ತ್ವವನ್ನು ಪಡೆದಿವೆ. ಮುಳುಗುತ್ತಿರುವ ನಾವಿಕರನ್ನು ತೋರಿಸುವ ನೌಕಾಯುದ್ಧ ದೃಶ್ಯ, ವಿವಿಧ ರೀತಿಯ ಕ್ರೀಡೆಗಳು, ಸಂಗೀತಗಾರರ ಒಂದು ಸಮೂಹ ಮತ್ತು ಸಾಮಾನ್ಯ ಜೀವನದ ಅನೇಕ ಇತರ ದೃಶ್ಯಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಈಜಿಪ್ಟಿನ ಮತ್ತು ಮೆಸಪೊಟೇಮಿಯದ ಕಲೆಗಳೊಂದಿಗೆ ಅನೇಕ ಸಾಮ್ಯಗಳನ್ನು ಕಾಣಬಹುದಾಗಿದ್ದು, ಕಲ್ಲಿನ ಕೆಲಸದ ತಂತ್ರಗಳನ್ನು ಇಲ್ಲಿ ಅಭ್ಯಸಿಸಬಹುದಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಕಲ್ಲು ಚಪ್ಪಡಿಗಳ ಮೇಲೆ ಕಡೆದಿರುವ ಶಾಸನಗಳು ಚಾರಿತ್ರಿಕ ಮಹತ್ತ್ವವನ್ನು ಪಡೆದಿವೆ. ದ್ವಾರದ ಒಂದು ಪಾಶರ್ವ್‌ದಲ್ಲಿ ಹಿಟ್ಟೈಟ್ರ ಹಿರೋಗ್ಲಿಫಿಕ್ ಲಿಪಿಯಲ್ಲೂ ಮತ್ತೊಂದು ಪಾಶರ್ವ್‌ದಲ್ಲಿ ಫಿನಿಷಿಯನ್ ಭಾಷೆಯಲ್ಲೂ ಈ ಶಾಸನಗಳನ್ನು ಕಡೆಯಲಾಗಿದೆ. ಮೂಲತಃ ಹಿಟ್ಟೈಟ್ ಭಾಷೆಯಲ್ಲಿದ್ದ ಈ ಶಾಸನಗಳನ್ನು ನಿರಂತರವಾಗಿ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗಳ ಅನುಕೂಲಕ್ಕಾಗಿ ದೊರೆಯೇ ಫಿನಿಷಿಯನ್ ಭಾಷೆಗೆ ತರ್ಜುಮೆ ಮಾಡಿಸಿದಂತೆ ತಿಳಿದುಬರುತ್ತದೆ. ಈ ರೀತಿಯ ದ್ವಿಭಾಷಾಶಾಸನಗಳು ದೊರಕಿದುದರಿಂದ ಹಿಟ್ಟೈಟ್ ಹಿರೋಗ್ಲಿಫಿಕ್ ಭಾಷೆಯನ್ನು ಓದಲು ಬಹಳ ಅನುಕೂಲವಾಯಿತು. ಈ ಶಾಸನಗಳ ಮುಖ್ಯಾಂಶಗಳು ಹೀಗಿವೆ. ಅಲ್ಲಿನ ದೊರೆ ಹಿಟ್ಟೈಟ್ ಜನಾಂಗದ ಅಸಿತವಾದ್, ಆತನು ಕರತೆಪೆಯ ಕೋಟೆಯನ್ನು ಕಟ್ಟಿಸಿ ಸಿಲಿಷಿಯಾದ ದೊರೆ ಅವರಿಕುಸ್ನ ಆಶ್ರಯದಲ್ಲಿ ಆಳುತ್ತಿದ್ದನು. ಇದಲ್ಲದೆ ಹಲವಾರು ದೇವತೆಗಳ ಹೆಸರುಗಳೂ ಕಂಡುಬರುತ್ತವೆ. ಕೋಟೆಯ ಒಳಭಾಗದಲ್ಲಿ ಹಿಟ್ಟೈಟ್ ವಾಸ್ತುಕಲೆಯ ಪ್ರಮುಖಲಕ್ಷಣವಾದ ಹಿಲಾನಿ ರೀತಿಯ ಮುಖ ಮಂಟಪ (ಪೋರ್ಟಿಕೋ) ದಿಂದೊಡಗೂಡಿರುವ ಅರಮನೆಯಾಗಿದ್ದಿರಬಹುದಾದ ಕಟ್ಟಡದ ಅವಶೇಷಗಳು ಕಂಡುಬಂದಿವೆ. ನದಿಯ ಇನ್ನೊಂದು ಪಾಶರ್ವ್‌ದಲ್ಲಿರುವ ದೊಮುeóïತೆಪೆಯಲ್ಲಿ ಇದಕ್ಕೂ ಸ್ವಲ್ಪ ಮೊದಲಿನ ಕಾಲಕ್ಕೆ ಸೇರಿದ ಕಟ್ಟಡಗಳ ಅವಶೇಷಗಳನ್ನು ಶಿಲ್ಪಗಳನ್ನು ಬೆಳಕಿಗೆ ತರಲಾಗಿದೆ.

"https://kn.wikipedia.org/w/index.php?title=ಕರತೆಪೆ&oldid=639329" ಇಂದ ಪಡೆಯಲ್ಪಟ್ಟಿದೆ