ಕರಣಹಸಿಗೆ

ವಿಕಿಪೀಡಿಯ ಇಂದ
Jump to navigation Jump to search

ಕರಣಹಸಿಗೆ : ತತ್ತ್ವಗಳನ್ನು (ಕರಣ) ವಿಭಾಗಿಸಿ ತೋರುವುದು (ಹಸಿಗೆ) ಎಂಬ ಅರ್ಥದಲ್ಲಿ ಈ ಪದ ವೀರಶೈವ ಧರ್ಮ ಶಾಸ್ತ್ರದಲ್ಲಿ ಪ್ರಯೋಗವಾಗಿದೆ. ಈ ಹೆಸರಿನ ಗ್ರಂಥಗಳಲ್ಲಿ ಚನ್ನಬಸವಣ್ಣನದು (ಸು. 1150) ಮುಖ್ಯವಾದುದು. ಇದರಲ್ಲಿ ಮೂರು ವಿಭಾಗಗಳಿವೆ. ಮೊದಲನೆಯದು ದೇಹಜ್ಞಾನಕ್ಕೆ ಸಂಬಂಧಿಸಿದ್ದು. ಮಾನವದೇಹರಚನೆ, ಅದರಲ್ಲಡಗಿರುವ ಶಕ್ತಿಗಳು, ಅವುಗಳ ವ್ಯವಹರಣೆ - ಇತ್ಯಾದಿ ವಿಷಯಗಳಿವೆ. ಎರಡನೆಯ ಭಾಗದಲ್ಲಿ ದೈವದತ್ತವಾದ ಆ ಶಕ್ತಿಗಳನ್ನು ಸದುಪಯೋಗ ಮಾಡಿಕೊಳ್ಳುವ ಬಗೆ, ದುರಪಯೋಗದಿಂದ ಆಗುವ ಅನರ್ಥಗಳು ಇತ್ಯಾದಿ ವಿಷಯಗಳಿವೆ. ಮೂರನೆಯ ವಿಭಾಗದಲ್ಲಿ ಲಿಂಗಾಂಗ ಸಾಮರಸ್ಯವನ್ನು ಪಡೆಯುವ ಕ್ರಮ ವರ್ಣಿತವಾಗಿದೆ. ಷಟ್ಸ್ಥಲ ಸಿದ್ಧಾಂತಕ್ಕೆ ಕರಣಹಸಿಗೆ ಪುರಕವಾಗಿದೆಯೆನ್ನಬಹುದು. ಕರಣಹಸಿಗೆ 16ನೆಯ ಶತಮಾನದಲ್ಲಿ ಶಾಂತಲಿಂಗ ದೇಶಿಕನಿಂದ ಮರಾಠಿಗೆ ಅನುವಾದವಾಗಿದೆ.